Connect with us

LATEST NEWS

ದೆಹಲಿಯಲ್ಲಿ ಆಮ್ ಆದ್ಮಿ ಕಮಾಲ್– 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ..!

Published

on

ದೆಹಲಿ ಪಾಲಿಕೆಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಮೊದಲ ಬಾರಿಗೆ ಆಪ್‌(AAP) ಅಧಿಕಾರಕ್ಕೆ ಏರಿದೆ.

ನವದೆಹಲಿ: ದೆಹಲಿ ಪಾಲಿಕೆಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಮೊದಲ ಬಾರಿಗೆ ಆಪ್‌(AAP) ಅಧಿಕಾರಕ್ಕೆ ಏರಿದೆ.

ಈ ಮೂಲಕ 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯಗೊಂಡಿದೆ.ಮತ ಎಣಿಕೆಯ ಆರಂಭದಲ್ಲಿ ಬಿಜೆಪಿ ಮತ್ತು ಆಪ್‌ ಮಧ್ಯೆ ನೇರಾನೇರ ಸ್ಪರ್ಧೆ ಇತ್ತು. ಬಳಿಕ ಆಪ್‌ ಮುನ್ನಡೆಯನ್ನು ಕಾಯ್ದುಕೊಂಡಿತು.

ಮಧ್ಯಾಹ್ನ 1:15ರ ಟ್ರೆಂಡ್‌ ಪ್ರಕಾರ ಆಪ್‌ 132, ಬಿಜೆಪಿ 105, ಕಾಂಗ್ರೆಸ್‌ 9, ಇತರರು 4 ವಾರ್ಡ್‌ನಲ್ಲಿ ಮುನ್ನಡೆಯಲಿದ್ದಾರೆ.

ಆಪ್‌ಗೆ ತೆಕ್ಕೆಗೆ ಅಧಿಕಾರ ಬರುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮಿಸುತ್ತಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳು ಆಪ್‌ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ ಭವಿಷ್ಯ ನುಡಿದಿದ್ದವು.

ಬಿಜೆಪಿ ಮೂರಂಕಿ ದಾಟುವುದಿಲ್ಲ ಎಂದು ಹೇಳಿದ್ದವು. ಆದರೆ ಆಡಳಿತ ವಿರೋಧಿ ಅಲೆಯ ನಡುವೆಯೂ ಬಿಜೆಪಿ ಆಪ್‌ಗೆ ಪ್ರಬಲ ಸ್ಪರ್ಧೆ ನೀಡಿದೆ.

2007 ರಿಂದ ಬಿಜೆಪಿ ಪಾಲಿಕೆಯ ಅಧಿಕಾರದಲ್ಲಿದೆ. ಡಿಸೆಂಬರ್‌ 4 ರಂದು ಚುನಾವಣೆ ನಡೆದಿದ್ದು 250 ಸ್ಥಾನಗಳಿರುವ ಪಾಲಿಕೆಯಲ್ಲಿ ಬಹುಮತಕ್ಕೆ 126 ಸ್ಥಾನಗಳ ಅಗತ್ಯವಿದೆ.

LATEST NEWS

ದೆಹಲಿ ಸ್ಫೋ*ಟ : ಡಿಎನ್‌ಎ ಪರೀಕ್ಷೆಯಿಂದ ಹೊರಬಿತ್ತು ಕಾರು ಚಲಾಯಿಸುತ್ತಿದ್ದುದು ಯಾರೆಂಬ ಸತ್ಯ!

Published

on

ಮಂಗಳೂರು/ನವದೆಹಲಿ :  ಕೆಂಪುಕೋಟೆ ಬಳಿ  ನ.10 ರಂದು ಸಂಭವಿಸಿದ ಸ್ಫೋ*ಟದಲ್ಲಿ 12 ಮಂದಿ ಪ್ರಾ*ಣ ಕಳೆದುಕೊಂಡಿದ್ದಾರೆ. ಸ್ಫೋಟಕ್ಕೆ ಬಳಸಲಾದ ಹೂಂಡೈ ಐ20 ಕಾರನ್ನು ಚಲಾಯಿಸುತ್ತಿದ್ದುದು ಯಾರೆಂಬುದು ಬಯಲಾಗಿದೆ. ಪುಲ್ವಾಮಾದ ವೈದ್ಯ ಉಮರ್ ನಬಿ ಎಂಬಾತನೇ ಕಾರು ಚಲಾಯಿಸುತ್ತಿದ್ದ ಎಂಬುದು ದೃಢಪಟ್ಟಿದೆ.

ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳಲ್ಲಿ ಮುಖವಾಡ ಧರಿಸಿದ್ದ ವ್ಯಕ್ತಿಯೊಬ್ಬ ಕಾರು ಚಾಲನೆ ಮಾಡಿದ್ದು ಕಂಡುಬಂದಿತ್ತು. ಕಾರನ್ನು ಚಾಲನೆ ಮಾಡಿದ ವ್ಯಕ್ತಿ ಪುಲ್ವಾಮಾದ ವೈದ್ಯ ಉಮರ್ ನಬಿ ಎಂದು ತನಿಖಾಧಿಗಳು ಗುರುತಿಸಿದ್ದು, ಡಿಎನ್‌ಎ ಪರೀಕ್ಷೆ ಮೂಲಕ  ಖಚಿತವಾಗಿದೆ.

ಸ್ಫೋಟಗೊಂಡ ಕಾರಿನಲ್ಲಿ ಶಂಕಿತನ ದೇಹದ ಭಾಗಗಳು ಪತ್ತೆಯಾಗಿದ್ದವು. ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪುಲ್ವಾಮಾದಲ್ಲಿರುವ ಡಾ. ನಬಿ ಅವರ ತಾಯಿಯಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದರು.

ಇದನ್ನೂ ಓದಿ :WATCH VIDEO : ಎಲ್ಲರೆದುರು ರಶ್ಮಿಕಾ ಮಂದಣ್ಣಗೆ  ವಿಜಯ್ ದೇವರಕೊಂಡ ಸಿಹಿಮುತ್ತು; ವೀಡಿಯೋ ವೈರಲ್

ಸ್ಫೋಟದ ಸ್ಥಳದಿಂದ ಸಂಗ್ರಹಿಸಲಾದ ಡಿಎನ್ಎ ಮಾದರಿ ಹಾಗೂ ಆತನ ತಾಯಿಯ ಡಿಎನ್ಎ ಮಾದರಿಗಳೊಂದಿಗೆ ಹೋಲಿಕೆ ಮಾಡಲಾಗಿದೆ. ಕಾರನ್ನು ಡಾ.ಉಮರ್ ನಬಿ ಚಾಲನೆ ಮಾಡುತ್ತಿದ್ದರು ಎಂಬುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ವರದಿಯಾಗಿದೆ.

Continue Reading

LATEST NEWS

ನ.16ರಂದು ಮಣ್ಣಗುಡ್ಡೆ ಗುರ್ಜಿ

Published

on

ಮಂಗಳೂರು: ಶರವು ಶ್ರೀ ಮಹಾಗಣಪತಿ ದೇವರ 156ನೇ ದೀಪಾರಾಧನೆಯ ಉತ್ಸವ ಮಣ್ಣಗುಡ್ಡೆ ಗುರ್ಜಿ ನವೆಂಬರ್ 16ರಂದು ಭಾನುವಾರ ವೈಭವದಿಂದ ಜರುಗಲಿದೆ.


ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಟ್ರಸ್ಟ್‌, ಮಣ್ಣಗುಡ್ಡ ಗುರ್ಜಿ ಸೇವಾ ಸಮಿತಿ ಮತ್ತು ಮಣ್ಣಗುಡ್ಡ ಗುರ್ಜಿ ಸೇವಾ ಸಮಿತಿ ಮಹಿಳಾ ಘಟಕದ ವತಿಯಿಂದ ಆಯೋಜಿಸಲ್ಪಡುವ ಗುರ್ಜಿ ಉತ್ಸವದಲ್ಲಿ ಗುರ್ಜಿ ಮುಂಭಾಗದಲ್ಲಿ ಭಜನಾ ಕಾರ್ಯಕ್ರಮ ನಡೆದು ಸಂಜೆ 6 ಗಂಟೆಯಿಂದ ಮಹಾಪೂಜೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದನ್ನೂ ಓದಿ: ಕುದ್ರೋಳಿ ಕ್ಷೇತ್ರದಲ್ಲಿ ಇಂದು ಭೈರವಾಷ್ಟಮಿ

ಸಂಜೆ 6.30ರಿಂದ ಸುದೀಕ್ಷ ಆರ್ ಸುರತ್ಕಲ್‌ ಇವರಿಂದ ನಾದಾರ್ಚನೆ, 8 ಗಂಟೆಗೆ ಸಭಾ ಕಾರ್ಯಕ್ರಮ, ರಾತ್ರಿ 9.30ರಿಂದ ನೃತ್ಯೋಲ್ಲಾಸ ಹಾಗೂ ಸಂಭವಾಮಿ ಯುಗೇ ಯುಗೇ (ದಶಾವತಾರ) ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

Continue Reading

FILM

WATCH VIDEO : ಎಲ್ಲರೆದುರು ರಶ್ಮಿಕಾ ಮಂದಣ್ಣಗೆ  ವಿಜಯ್ ದೇವರಕೊಂಡ ಸಿಹಿಮುತ್ತು; ವೀಡಿಯೋ ವೈರಲ್

Published

on

ಮಂಗಳೂರು/ಹೈದರಾಬಾದ್ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸಂಬಂಧದ ಬಗೆಗಿನ ಸುದ್ದಿಯೇನು ಹೊಸತಲ್ಲ.  ಇವರಿಬ್ಬರ ಪ್ರೀತಿ, ಮದುವೆ ಬಗ್ಗೆ ಆಗಾಗ ಗಾಸಿಪ್‌ಗಳು ಹರಿದಾಡುತ್ತಿರುತ್ತವೆ. ಇದೀಗ ಈ ಗಾಸಿಪ್‌ಗೆ ಪುಷ್ಠಿ ಕೊಡುವ ವೀಡಿಯೋವೊಂದು ವೈರಲ್ ಆಗುತ್ತಿದೆ.

ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್​ಫ್ರೆಂಡ್’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಹೀಗಾಗಿ ಚಿತ್ರ ತಂಡ ನವೆಂಬರ್ 12 ರಂದು ಹೈದರಾಬಾದ್​ನಲ್ಲಿ ಸಕ್ಸಸ್ ಮೀಟ್ ಇಟ್ಟುಕೊಂಡಿತ್ತು. ಕಾರ್ಯಕ್ರಮಕ್ಕೆ ವಿಜಯ್ ದೇವರಕೊಂಡ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ರಶ್ಮಿಕಾ ಕಾಣುತ್ತಿದ್ದಂತೆ ವಿಜಯ್ ದೇವರಕೊಂಡ ನಕ್ಕಿದ್ದಾರೆ. ರಶ್ಮಿಕಾ ಕೈ ಹಿಡಿದು ಕುಲುಕಿದ್ದಾರೆ. ಬಳಿಕ ಕೈಗೆ ಮುತ್ತಿಕ್ಕಿದ್ದಾರೆ. ಇದರಿಂದ ರಶ್ಮಿಕಾ ಮತ್ತಷ್ಟು ಖುಷಿಕೊಂಡರು. ಸದ್ಯ  ಈ ವೀಡಿಯೋ ವೈರಲ್ ಆಗಿದೆ.

ಇದನ್ನೂ ಓದಿ :  ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಹುಭಾಷಾ ನಟಿ ನಯನ ತಾರಾ ದಂಪತಿ ಭೇಟಿ

ಈ ವೀಡಿಯೋ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಇವರದ್ದು ಬೆಸ್ಟ್ ಜೋಡಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page