Connect with us

ಪಂಪ್ ವೆಲ್ ಸೇತುವೆ ವೀಕ್ಷಣೆ ಮಾಡಿದ ಕಾಂಗ್ರೆಸ್ ನಿಯೋಗ: ಎನ್ಐಟಿಕೆ ತಜ್ಞರಿಂದ ತನಿಖೆಗೆ ಅಗ್ರಹ

Published

on

ಪಂಪ್ವೆಲ್ಸೇತುವೆ ವೀಕ್ಷಣೆ ಮಾಡಿದ ಕಾಂಗ್ರೆಸ್ ನಿಯೋಗ: ಎನ್ಐಟಿಕೆ ತಜ್ಞರಿಂದ ತನಿಖೆಗೆ ಅಗ್ರಹ

ಮಂಗಳೂರು: ಬಿರುಕು ಬಿಟ್ಟು ಸುದ್ದಿಯಾದ ಮಂಗಳೂರಿನ ಪಂಪ್ ವೆಲ್ ಮೇಲ್ಸೇತುವೆಯನ್ನು ಇಂದು ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾ ಅವರ ನೇತ್ರತ್ವದ ಕಾಂಗ್ರೆಸ್ ನಿಯೋಗ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ವರ್ಷಗಳ ಸುದೀರ್ಘ ಸಮಯದ ಬಳಿಕ ಈ ಪಂಪ್‌ ವೆಲ್ ಮೇಲ್ಸೇತುವೆ ಕಾಮಗಾರಿ ನಡೆದು, ಲೋಕಾರ್ಪಣೆಗೊಂಡಿತ್ತು.

ಆದರೆ ಇದೀಗ ಕೆಲವೇ ದಿನಗಳಲ್ಲಿ ಇದು ಬಿರುಕು ಬಿಟ್ಟಿದೆ. ಕಾಂಗ್ರೆಸ್ ಅಂದೇ ಈ ಕಾಮಾಗಾರಿಯ ಗುಣ ಮಟ್ಟದ ಬಗ್ಗೆ ಪ್ರಶ್ನೆ ಮಾಡಿತ್ತು.

ಆದರೆ ಇದನ್ನು ಕಿವಿ ಹಾಕಿಕೊಳ್ಳದ ಜನ ಪ್ರತಿನಿಧಿಗಳು ತರಾತುರಿಯಲ್ಲಿ ಕೆಲಸ ಮುಗಿಸಿ ಬಿಟ್ಟುಕೊಟ್ಟಿದ್ದರು.

ಇದೀಗ ಬಿರುಕು ಬಿಡುವ ಮೂಲಕ ಫ್ಲೈ ಓವರ್‌ ನ ಗುಣಮಟ್ಟದ ಬಗ್ಗೆ ಸಂದೇಹ ಉಂಟಾಗಿದ್ದು ಎನ್‌ ಐಟಿಕೆ ತಜ್ಞರಿಂದ ಇದರ ಗುಣಮಟ್ಟದ ತನಿಖೆ ನಡೆಸಬೇಕು.

ಗುತ್ತಿಗೆದಾರರ ಹಣ ತಡೆಹಿಡಿದು ಅವರನ್ನು ಬ್ಲ್ಯಾಕ್‌ ಲೀಸ್ಟ್‌ಗೆ ಹಾಕಬೇಕೆಂದು ಒತ್ತಾಯಿಸಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

hasana

ಕುಡಿದ ಮತ್ತಿನಲ್ಲಿ ಜಗಳ-ಸ್ನೇಹಿತನ ಕೊಲೆ: ಭೀಕರ ಸ್ಥಿತಿಯಲ್ಲಿ ಮೃತದೇಹ ಪತ್ತೆ

Published

on

ಹಾಸನ: ಕುಡಿದ ಮತ್ತಿನಲ್ಲಿ ಗೆಳೆಯರ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿರುವ ಅಘಾತಕಾರಿ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದ ಕಬ್ಬೂರು ಗ್ರಾಮದಲ್ಲಿ ನಡೆದಿದೆ.


ಗಣೇಶ್‌(46) ಮೃತ ದುರ್ದೈವಿ. ಅಶೋಕ್‌ ಮತ್ತು ಸುಧೀರ್‌ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪಿಗಳು.

ಸೋಮವಾರ(ಜ.19)ದಂದು ಜಮೀನು ಕಾಯಲು ಹೋದ ಗಣೇಶ್‌ ತನ್ನ ಸ್ನೇಹಿತರ ಜತೆ ಎಣ್ಣೆ ಪಾರ್ಟಿ ಮಾಡಿದ್ದ. ಬಳಿಕ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿತ್ತು. ಆ ಸಂಧರ್ಭ ಸ್ನೇಹಿತರು ಗಣೇಶ್‌ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಮೃತದೇಹವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಲೇಡಿ ಫಿಟ್ನೆಸ್ ಟ್ರೈನರ್ ಮೇಲೆ ಅತಿಯಾದ ಮೋಹ; ಯುವಕ ಅರೆಸ್ಟ್‌

ಬಳಿಕ ಕರ್ತವ್ಯದಲ್ಲಿದ್ದ ಅರಣ್ಯ ಸಿಬ್ಬಂದಿ ಶವವನ್ನು ಗಮನಿಸಿದಾಗ, ಮೃತದೇಹದ ತಲೆ ಮತ್ತು ಕುತ್ತಿಗೆ ಭಾಗವನ್ನು ಕಾಡು ಪ್ರಾಣಿಗಳು ಕಚ್ಚಿ ತಿಂದಿದ್ದವು. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿ, ಹಳ್ಳಿಮೈಸೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ.

Continue Reading

bangalore

ಲೇಡಿ ಫಿಟ್ನೆಸ್ ಟ್ರೈನರ್ ಮೇಲೆ ಅತಿಯಾದ ಮೋಹ; ಯುವಕ ಅರೆಸ್ಟ್‌

Published

on

ಬೆಂಗಳೂರು: ಪಾಗಲ್ ಪ್ರೇಮಿಯೋರ್ವ ಲೇಡಿ ಫಿಟ್ನೆಸ್ ಇನ್‌ ಫ್ಲೂಯೆನ್ಸರ್‌ಗೆ ಅಶ್ಲೀಲವಾಗಿ ಮೆಸೇಜ್ ಮಾಡಿ, ಹಿಂಸಿಸಿದ್ದಾನೆ. ಅಷ್ಟಕ್ಕೂ ಬಿಡದೇ ಯುವತಿಯನ್ನು ಹುಡುಕಿ ಹರಿಯಾಣದಿಂದ ಕರ್ನಾಟಕಕ್ಕೆ ಬಂದು ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಹರಿಯಾಣ ಮೂಲದ ಸುಧೀರ್ ಕುಮಾರ್ ಬಂಧಿತ ಆರೋಪಿ. ಸಂತ್ರಸ್ತ ಯುವತಿ ಬೆಂಗಳೂರಲ್ಲಿ ಲೇಡಿ ಫಿಟ್ನೆಸ್, ನ್ಯೂಟ್ರೀಷಿಯನ್ ಇನ್‌ಫ್ಲೂಯೆನ್ಸರ್ ಆಗಿ ಕೆಲಸ ಮಾಡುತ್ತಿದ್ದು, ಇನ್‌ಸ್ಟಾ ಮೂಲಕ ಆತ ಲೈಂಗಿಕವಾಗಿ ಪ್ರಚೋದಿಸುವಂತೆ ಮೆಸೇಜ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಇನ್‌ಸ್ಟಾದಲ್ಲಿ ಯುವತಿಯನ್ನು ನೋಡಿ ಪೀಡಿಸಲು ಶುರುಮಾಡಿದ್ದ. ಜೊತೆಗೆ ಅಶ್ಲೀಲವಾಗಿ ಮೆಸೇಜ್ ಮಾಡಿ, ಹಿಂಸೆ ನೀಡುತ್ತಿದ್ದ. ಅದಾದ ಬಳಿಕ ವಾಟ್ಸಪ್ ನಂಬರ್ ಪಡೆದುಕೊಂಡು, ಪುನಃ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದ. ದಿನ ಕಳೆದಂತೆ ಬೆಂಬಿಡದೇ ಯುವತಿಯನ್ನು ಕಾಡಲು ಶುರುಮಾಡಿದ್ದ. ಕೊನೆಗೆ ಯುವತಿಯನ್ನು ಹುಡುಕಿಕೊಂಡು ಹರಿಯಾಣದಿಂದ ಕರ್ನಾಟಕಕ್ಕೆ ಬಂದಿದ್ದ. ಬೆಂಗಳೂರಿಗೆ ಬಂದು ಜಿಮ್ ಸಹೋದ್ಯೋಗಿಗಳ ಬಳಿ ವಿಚಾರಿಸಿದ್ದ.

ಇದನ್ನೂ ಓದಿ: 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ವಿಚಾರ ತಿಳಿಯುತ್ತಿದ್ದಂತೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ದಕ್ಷಿಣ ವಿಭಾಗ ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

Continue Reading

LATEST NEWS

10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Published

on

ಬೆಳ್ತಂಗಡಿ: ಬಯೋಗ್ಯಾಸ್ ಸಂಪರ್ಕ ಮಾಡಿಸುವುದಾಗಿ ನಂಬಿಸಿ, ಹಣ ಪಡೆದು ಮೋಸ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಬಂಧಿಸಲಾಗಿದೆ.


ಹಾಸನ ಚನ್ನರಾಯಪಟ್ಟಣ ನಿವಾಸಿ, ಎಸ್‌.ಎನ್‌.ಚಂದ್ರೆಗೌಡ ಆರೋಪಿ. ಈ ವಿಷಯದ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2009ರಲ್ಲಿ ದಾಖಲಾದ ಪ್ರಕರಣದಲ್ಲಿ ಸುಮಾರು 10 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಇದನ್ನೂ ಓದಿ: “ಸುಳ್ಳು ಆರೋಪಗಳಿಂದ ರಕ್ಷಿಸಿ”: ಕೇರಳದಲ್ಲಿ ಕಾರ್ಡ್‌ಬೋರ್ಡ್ ಧರಿಸಿ ಪುರುಷರ ವಿಭಿನ್ನ ಪ್ರತಿಭಟನೆ

ಇದೀಗ ಹಾಸನ ಚನ್ನರಾಯಪಟ್ಟಣದ ಬೆಳಗಿಹಳ್ಳಿ ಎಂಬಲ್ಲಿಂದ ದಸ್ತಗಿರಿ ಮಾಡಿ ಜನವರಿ 20 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟನೆ ತಿಳಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page