Connect with us

LATEST NEWS

ಮೈಸೂರು ಸಂಸದರ ವಿರುದ್ಧ ಅವಹೇಳನಕಾರಿ ಪೋಸ್ಟ್ – ಪೊಲೀಸ್ ಕಾನ್‌ಸ್ಟೇಬಲ್ ಸಸ್ಪೆಂಡ್..!

Published

on

ಸಂಸದ ಪ್ರತಾಪ್ ಸಿಂಹ (Pratap Simha) ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿದ್ದ ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬರನ್ನು ಅಮಾನತು ಮಾಡಲಾಗಿದೆ.

ಮೈಸೂರು: ಸಂಸದ ಪ್ರತಾಪ್ ಸಿಂಹ (Pratap Simha) ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿದ್ದ ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬರನ್ನು ಅಮಾನತು ಮಾಡಲಾಗಿದೆ.

ವಿ.ವಿ. ಪುರಂ ಟ್ರಾಫಿಕ್ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೇಬಲ್ ಬಿ. ಪ್ರಕಾಶ್ ಅಮಾನತುಗೊಂಡಿದ್ದಾರೆ. ಇವರ ವಿರುದ್ಧ ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್ ಅವರ ವಾಕ್ಸಮರದ ವೀಡಿಯೋ ವೈರಲ್ ಆಗಿತ್ತು.

ಈ ವೀಡಿಯೋಗೆ ಹೆಡ್ ಕಾನ್‌ಸ್ಟೇಬಲ್ ಪ್ರಕಾಶ್ ಕಾಮೆಂಟ್ ಮಾಡಿದ್ದರು.

ಅದರಲ್ಲಿ ಸಂಸದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು.ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಸಂಸದರು ದೂರು ನೀಡಿದ್ದರು.

ಪ್ರಕಾಶ್ ಎಂಬವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಿಂದಿಸುವ ಮೂಲಕ ಅವಹೇಳನಕಾರಿಯಾಗಿ ಪೋಸ್ಟ್ಗಳನ್ನು ಮಾಡುತ್ತಿರುವ ಇವನನ್ನು ಕಾನೂನು ಪ್ರಕಾರ ವಿಚಾರಣೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ದೂರಿದ್ದರು.

ಸಂಸದರ ದೂರನ್ನು ಪರಿಗಣಿಸಿ, ಇಲಾಖೆ ವಿಚಾರಣೆ ಬಾಕಿ ಇರಿಸಿ ಪ್ರಕಾಶ್ ಅವರನ್ನು ಅಮಾನತು ಮಾಡಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ.

LATEST NEWS

ಡಿ.7ರಂದು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ ಆಂಧ್ರ ಸಿಎಂ ಪವನ್ ಕಲ್ಯಾಣ್

Published

on

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ನವೆಂಬರ್ 8ರಂದು ಮೊದಲ್ಗೊಂಡು ಡಿ.7ರವರೆಗೆ ಬೃಹತ್ ಗೀತೋತ್ಸವ ನಡೆಯುತ್ತಿದ್ದು ರವಿವಾರ ಇದರ ಸಮಾರೋಪ ಸಮಾರಂಭಕ್ಕೆ ಆಂಧ್ರಪ್ರದೇಶ ಸಿಎಂ ಪವನ್ ಕಲ್ಯಾಣ್ ಆಗಮಿಸಲಿದ್ದಾರೆ.

ಈ ಬಗ್ಗೆ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ ಡಿ.7ರಂದು ಆಂಧ್ರದ ಮುಖ್ಯಮಂತ್ರಿ ಪವನ್ ಕಲ್ಯಾಣ್ , ಸುಬ್ರಹ್ಮಣ್ಯ ಸ್ವಾಮಿಗಳು ಮತ್ತು ಗಣ್ಯರು ಅವರು ಮಠಕ್ಕೆ ಭೇಟಿ ನೀಡಲಿದ್ದಾರೆ. ಆ ದಿನ ಅನೇಕ ಕಾರ್ಯಕ್ರಮಗಳು ನಡೆಯಲಿದ್ದು ಪುತ್ತಿಗೆ ಮಠದ 38ನೇ ಘಟಿಕೋತ್ಸವ ನಡೆಯುತ್ತಿದೆ.

ಪಾಡಿಗಾರ್ ವಿದ್ಯಾಪೀಠದ ಮೊದಲ ಘಟಿಕೋತ್ಸವ ಇದಾಗಿದೆ. ಸಾಯಂಕಾಲ ದೀಪೋತ್ಸವ. ವಿಶ್ವ ಶಾಂತಿ ಕಾರ್ಯಕ್ರಮ ಕೂಡಾ ಜರುಗಲಿದೆ ಎಂದು ಹೇಳಿದರು.

Continue Reading

LATEST NEWS

ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿ ಬಿದ್ದ ಕ್ರೇನ್

Published

on

ಮೂಡಬಿದಿರೆ: ಬೃಹತ್‌ ಕ್ರೇನ್‌ವೊಂದು ಕಾರಿಗೆ ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಪರಿಣಾಮ ಮನೆ ಹಾನಿಗೋಳಗಾದ ಘಟನೆ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೊರಂತಬೆಟ್ಟು ಬಳಿ ಶುಕ್ರವಾರ(ಡಿ.5) ನಡೆದಿದೆ.


ಮುಲ್ಕಿ-ಮೂಡಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಕಲ್ಲಮುಂಡ್ಕೂರಿನ ಮೊರಂತಬೆಟ್ಟುವಿನ ತಿರುವಿನಲ್ಲಿ ಅತೀವೇಗವಾಗಿ ಸಂಚರಿಸುತ್ತಿದ್ದ ಕ್ರೇನ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮನೆ ಮೇಲೆ ಉರುಳಿ ಬಿದ್ದಿದ್ದೆ. ಇದರಿಂದ ಮನೆ ಜಖಂಗೊಂಡಿದೆ.


ಇದನ್ನೂ ಓದಿ: ಅನೆಕಲ್‌: ಎಲೆಕ್ಟ್ರಾನಿಕ್‌ ಸಿಟಿ ಫ್ಲೈ ಓವರ್‌ ಮೇಲೆ ಸರಣಿ ಅಪಘಾತ; ಬೈಕ್‌ ಸವಾರನಿಗೆ ಗಂಭೀರ ಗಾಯ

ಘಟನೆ ವೇಳೆ ಮನೆಮಂದಿ ಮನೆಯ ಇನ್ನೊಂದು ಪಾರ್ಶ್ವದಲ್ಲಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಮೂಡಬಿದಿರೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Continue Reading

LATEST NEWS

ವಧು-ವರ ಇಲ್ಲದೇ ನಡೆಯಿತು ಆರತಕ್ಷತೆ; ಕಾರಣ ವಿಮಾನ!?

Published

on

ಹುಬ್ಬಳ್ಳಿ: ಮದುವೆ ಆರತಕ್ಷತೆ ಕಾರ್ಯಕ್ರಮ ಸಾಮಾನ್ಯವಾಗಿ ಬಹಳ ಅದ್ದೂರಿಯಿಂದ ನಡೆಯುತ್ತದೆ. ಮದುವೆ ಮಂಟಪ ಅಲಂಕಾರ, ವಧು-ವರನ ಶೃಂಗಾರ ಹೀಗೆ ಎಲ್ಲ ವಿಷಯದಲ್ಲೂ ಗಮನ ಸೆಳೆಯುತ್ತದೆ. ಆದರೆ ಹುಬ್ಬಳಿಯಲ್ಲಿ ವಧು-ವರ ಇಲ್ಲದೇ ಆರತಕ್ಷತೆ ನಡೆದಿದೆ.


ಹೌದು, ಹುಬ್ಬಳ್ಳಿಯಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮ ಈಗ ಎಲ್ಲರ ಗಮನ ಸೆಳೆದಿದೆ. ಇಂಡಿಗೋ ವಿಮಾನ ರದ್ದಾಗಿರುವ ಕಾರಣ ವಧು-ವರರು ಇಲ್ಲದೇ ಆರತಕ್ಷತೆ ಕಾರ್ಯಕ್ರಮ ಆನ್‌ಲೈನ್ ಮೂಲಕ ಹುಬ್ಬಳ್ಳಿಯ ಗುಜರಾತ್‌ ಭವನದಲ್ಲಿ ನಡೆದಿದೆ.

ಭುವನೇಶ್ವರದಲ್ಲಿ ವಧು ಮೇಧಾ ಕ್ಷೀರಸಾಗರ ಹಾಗೂ ವರ ಸಂಗಮ ದಾಸ್ ಅವರು ನವೆಂಬರ್ 23ರಂದು ಮದುವೆಯಾಗಿದ್ದರು. ಹುಬ್ಬಳ್ಳಿಯ ಗುಜರಾತ್‌ ಭವನದಲ್ಲಿ ಬುಧವಾರ(ಡಿ.3) ನವ ಜೋಡಿಯ ಆರತಕ್ಷತೆ ಆಯೋಜಿಸಿದ್ದರು. ಮದುವೆ ಬಳಿಕ ಬೆಂಗಳೂರಿಗೆ ತೆರಳಿದ್ದ ಇವರು ಅಲ್ಲಿಂದ ಹುಬ್ಬಳ್ಳಿಗೆ ಬರಲು ಡಿ.2ಕ್ಕೆ ಭುವನೇಶ್ವರ-ಮುಂಬೈ-ಹುಬ್ಬಳ್ಳಿ ಮಾರ್ಗದಲ್ಲಿ ವಿಮಾನ ಟಿಕೆಟ್‌ ಬುಕ್‌ ಮಾಡಿದ್ದರು.

ಆದರೆ ಏಕಾಏಕಿಯಾಗಿ ಡಿಸೆಂಬರ್‌ 3ರಂದು ಇಂಡಿಗೋ ಏರ್‌ಲೈನ್‌ ರದ್ದುಗೊಂಡಿರುವ ಪರಿಣಾಮ ನೂತನ ವಧು-ವರ ಆರತಕ್ಷತೆ ಕಾರ್ಯಕ್ರಮಕ್ಕೆ ಬರಲು ಆಗದೆ ತೊಂದರೆ ಅನುಭವಿಸಿದ್ದಾರೆ. ಹುಬ್ಬಳ್ಳಿಯಲ್ಲಿ ವಧುವಿನ ತಂದೆ-ತಾಯಿಯೇ ವಧು-ವರರ ಕುರ್ಚಿಯಲ್ಲಿ ಕುಳಿತು, ಶಾಸ್ತ್ರಗಳನ್ನು ನಡೆಸಿದರು. ಅತ್ತ ವಧು-ವರ ಭುವನೇಶ್ವರದಲ್ಲೇ ಸಿದ್ಧರಾಗಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಆರತಕ್ಷತೆ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಇಂಡಿಗೋದಲ್ಲಿ ಉಂಟಾಗಿರುವ ಭಾರೀ ಅಡಚಣೆ; ಮಂಗಳೂರು ವಿಮಾನ ನಿಲ್ದಾಣದಲ್ಲೂ 17 ವಿಮಾನ ವಿಳಂಬ

ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬದಿಂದ ಅನೇಕರು ಪರದಾಡುತ್ತಿದ್ದರೆ, ಹುಬ್ಬಳ್ಳಿಯಲ್ಲಿ ನಡೆದ ಈ ಘಟನೆ ಎಲ್ಲರ ಗಮನ ಸೆಳೆದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page