Connect with us

STATE

ಈಜಲು ಹೋದ ಯುವಕ ಸಾವು

Published

on

ಮಂಡ್ಯ: ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಾಣಾಳು ಫಾಲ್ಸ್ ನಲ್ಲಿ ನಡೆದಿದೆ.


ಬೆಂಗಳೂರು ಮೂಲದ ಯುವಕ ವಿಶಾಲ್ ವರ್ಗೀಸ್ ಜಾರ್ಜ್ (24) ಮೃತ ಯುವಕ. ವಿಶಾಲ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ತನ್ನ ನಾಲ್ವರು ಸ್ನೇಹಿತರೊಂದಿಗೆ ಮಂಡ್ಯ ಹಾಗೂ ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಪ್ರವಾಸಕ್ಕೆಂದು ಬಂದಿದ್ದಾನೆ.

ಈ ಸಂದರ್ಭದಲ್ಲಿ ಮಳವಳ್ಳಿ ಸಮೀಪದ ಗಾಣಾಳು ಫಾಲ್ಸ್‌ಗೆ ಬಂದಿದ್ದಾರೆ. ಈ ವೇಳೆ ವಿಶಾಲ್ ಹಾಗೂ ಇತರ ಸ್ನೇಹಿತರು ಈಜಲು ಮುಂದಾಗಿದ್ದಾರೆ. ಆಗ ಈಜಲು ಸಾಧ್ಯವಾಗದೆ ವಿಶಾಲ್ ನೀರಿನಲ್ಲಿ ಮುಳುಗಿದ್ದಾರೆ. ಜೊತೆಯಲ್ಲಿ ಬಂದಿದ್ದ ಸ್ನೇಹಿತರು ಕಾಪಾಡುವಷ್ಟರಲ್ಲಿ ವಿಶಾಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS

ಮದ್ಯವೆಂದು ಸ್ಪಿರಿಟ್ ಸೇವಿಸಿ ಯುವಕ ಸಾವು; ಇಬ್ಬರ ಬಂಧನ

Published

on

ಕೊಪ್ಪಳ: ಮದ್ಯವೆಂದು ಭಾವಿಸಿ ಕುಡಿಯಲು ಯೋಗ್ಯವಲ್ಲದ ಸ್ಪಿರಿಟ್ ಸೇವಿಸಿದ 25 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ. ರಮೇಶ್ ಹೊಸಳ್ಳಿ (25) ಮೃತಪಟ್ಟ ಯುವಕ.


ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಸಮಯದಲ್ಲಿ ಮದ್ಯವೆಂದು ತಿಳಿದು ಸ್ಪಿರಿಟ್ ಸೇವಿಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಫೆ. 4ರ ರಾತ್ರಿ ಸುಮಾರು 8 ಗಂಟೆಗೆ ಗ್ರಾಮದ ಸೀಮೆಯ ಬಸವರಾಜ ಶಾನಭೋಗ ಎಂಬುವವರ ಹೊಲದಲ್ಲಿ ಮೃತ ಯುವಕ ರಮೇಶ್‌ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಸಮಯದಲ್ಲಿ, ಮಾರುತಿ ರಾಮಪ್ಪ ಬಂಡಿ ಮತ್ತು ಶರಣಪ್ಪ ಪವಾಡೆಪ್ಪ ಗುರಿಕಾರ ಎಂಬುವವರು ಕುಡಿಯಲು ಯೋಗ್ಯವಲ್ಲದ ಸ್ಪಿರಿಟ್ ಅನ್ನು ಮದ್ಯ ಎಂದು ನೀಡಿ ಕುಡಿಯಲು ನೀಡಿದ್ದರೆಂದು ಆರೋಪಿಸಲಾಗಿದೆ.

ಸ್ಪಿರಿಟ್ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಶನಿವಾರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಆದರೆ ಮತ್ತೊಬ್ಬನ ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡು ಬಂದಿಲ್ಲ.

ಇದನ್ನೂ ಓದಿ: ‘ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ’ ಅಂದವನಿಗೆ ಮಂಟಪದಲ್ಲೇ ಶಾಕ್ ಕೊಟ್ಟ ಮೊದಲ ಪತ್ನಿ!

ಈ ಸಂಬಂಧ ಕುಡಿಯಲು ಸ್ಪಿರಿಟ್ ನೀಡಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.

Continue Reading

LATEST NEWS

‘ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ’ ಅಂದವನಿಗೆ ಮಂಟಪದಲ್ಲೇ ಶಾಕ್ ಕೊಟ್ಟ ಮೊದಲ ಪತ್ನಿ!

Published

on

ತುಮಕೂರು: ಕಲ್ಯಾಣ ಮಂಟಪದಲ್ಲಿ ತಾಳಿ ಕಟ್ಟುವ ಶುಭ ಮುಹೂರ್ತದ ವೇಳೆಯೇ ಈ ಅಚ್ಚರಿಯ ಘಟನೆ ನಡೆದಿದೆ. ತಾಳಿ ಕಟ್ಟುವ ವೇಳೆ ರಿಯಲ್‌ ವಿಲನ್‌ ಥರ ಎಂಟ್ರಿಕೊಟ್ಟ ಮೊದಲ ಪತ್ನಿ ಮದುವೆಯನ್ನು ನಿಲ್ಲಿಸಿ, ಗಂಡನಿಗೆ ಶಾಕ್‌ ನೀಡಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.


ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ, ಹರಿಪ್ರಸಾದ್ ಮತ್ತು ಲೇಪಾಕ್ಷಿ 2014ರಲ್ಲಿ ಮದುವೆಯಾಗಿದ್ದರು. ಇವರು ಎಂಟನೇ ತರಗತಿಯಿಂದಲೇ ಪ್ರೀತಿಸುತ್ತಿದ್ದರು. ದಂಪತಿಗಳ ನಡುವಿನ ಕೌಟುಂಬಿಕ ಕಲಹದಿಂದಾಗಿ ಅವರು ದೂರವಾಗಿದ್ದರು. ಆದರೆ, ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯದೇ ಹರಿಪ್ರಸಾದ್ ಎರಡನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾನೆ.


ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಪುಣ್ಯಶ್ರೀ ಎಂಬಾಕೆಯ ಜತೆ ಹರಿಪ್ರಸಾದ್ ಸಪ್ತಪದಿ ತುಳಿಯಲು ಸಿದ್ಧತೆ ಮಾಡಿಕೊಂಡಿದ್ದನು. ಎಡೆಯೂರಿನ ಎಸ್‌ಎಲ್‌ ಎನ್ ಕಲ್ಯಾಣ ಮಂಟಪದಲ್ಲಿ ಹರಿಪ್ರಸಾದ್ ಮದುವೆ ನಡೆಯುತ್ತಿತ್ತು. ಮದುವೆಯ ವಿಚಾರ ತಿಳಿದ ಲೇಪಾಕ್ಷಿ ವಕೀಲರು, ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸರು ಮತ್ತು ಸಂಬಂಧಿಕರ ಜತೆ ನೇರವಾಗಿ ಕಲ್ಯಾಣಮಂಟಪಕ್ಕೆ ನುಗ್ಗಿ, ತಾಳಿ ಕಟ್ಟುವ ಮೊದಲೇ ಮದುವೆಯನ್ನು ನಿಲ್ಲಿಸಿದ್ದಾರೆ.


ಆ ವೇಳೆ ಕಲ್ಯಾಣ ಮಂಟಪದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೆಲಕಾಲ ಮಾತಿನ ಚಕಮಕಿ ಮತ್ತು ಜಗಳವೇ ನಡೆಯಿತು. ತಮಗೆ ಡಿವೋರ್ಸ್ ನೀಡದೇ ಮದುವೆಯಾಗುತ್ತಿರುವ ವಿಷಯವನ್ನು ವಧುವಿನ ಪೋಷಕರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ವಧುವಿನ ಪೋಷಕರು ಸಹ ಮದುವೆ ನಿಲ್ಲಿಸಿದ್ದಾರೆ.

ಇದನ್ನೂ ಓದಿ: ಉಡುಪಿ : ಬಾವಿಗೆ ಹಾರಿ ವ್ಯಕ್ತಿ ಆ*ತ್ಮಹ*ತ್ಯೆ; ದೇಹದಿಂದ ಬೇರ್ಪಟ್ಟ ರುಂ*ಡ!

ಅಮೃತೂರು ಪೊಲೀಸರು ಹರಿಪ್ರಸಾದ್‌ ಮತ್ತು ಲೇಪಾಕ್ಷಿ ಜತೆ ಮದುವೆಗೆ ಸಜ್ಜಾಗಿದ್ದ ಯುವತಿಯ ಮನೆಯವರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Continue Reading

LATEST NEWS

ಉದ್ಯಮಿಗೆ ಮದುವೆ ಆಮಿಷವೊಡ್ಡಿ ಹಣ, ಆಸ್ತಿ ವಂಚಿಸಿದ ಲೇಡಿ ಡಿವೈಎಸ್ಪಿ ಅಮಾನತು!

Published

on

ಛತ್ತೀಸ್‌ಗಢ: ಉದ್ಯಮಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಅವರು ಕೋಟ್ಯಂತರ ರೂಪಾಯಿ ನಗದು, ಆಸ್ತಿ ಪಡೆದಿದ್ದ ಆರೋಪದ ಮೇಲೆ ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯ ಡಿವೈಎಸ್‌ಪಿ ಕಲ್ಪನಾ ವರ್ಮಾ ಅವರನ್ನು ಗುರುವಾರ(ಫೆ. 5) ಅಮಾನತುಗೊಳಿಸಲಾಗಿದೆ.


ರಾಯ್‌ಪುರ ಮೂಲದ ಉದ್ಯಮಿ ದೀಪಕ್ ಟಂಡನ್ ಅವರು ಕಲ್ಪನಾ ವರ್ಮಾ ವಿರುದ್ಧ ದೂರು ನೀಡಿದ್ದರು. ಮದುವೆಯಾಗುವುದಾಗಿ ನಂಬಿಸಿ ಸುಮಾರು 2.5 ಕೋಟಿ ರೂ. ನಗದು, ಐಷಾರಾಮಿ ಕಾರು, ವಜ್ರದ ಉಂಗುರ ಹಾಗೂ ಚಿನ್ನಾಭರಣಗಳನ್ನು ಪಡೆದಿದ್ದಾರೆ ಎಂದು ಲಿಖಿತ ದೂರು ಸಲ್ಲಿಸಿದ್ದಾರೆ. ಕಲ್ಪನಾ ವರ್ಮಾ ಅವರ ತಂದೆ ಮತ್ತು ಸಹೋದರ ಕೂಡ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಉದ್ಯಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಾಯ್‌ಪುರ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕಲ್ಪನಾ ವರ್ಮಾ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು, ಅಕ್ರಮ ಆಸ್ತಿ ಗಳಿಕೆ ಹಾಗೂ ವಾಟ್ಸಾಪ್ ಚಾಟ್‌ಗಳ ಮೂಲಕ ಪೊಲೀಸ್ ಇಲಾಖೆಯ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿರುವುದು ಪತ್ತೆಯಾಗಿದೆ. ಛತ್ತೀಸ್‌ಗಢ ನಾಗರಿಕ ಸೇವಾ ನಿಯಮಗಳು, 1965 ರ ಉಲ್ಲಂಘನೆಯ ಆಧಾರದ ಮೇಲೆ ರಾಜ್ಯ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ದಂತೇವಾಡ ಜಿಲ್ಲೆಯ ಪೊಲೀಸ್ ಉಪ ವರಿಷ್ಠಾಧಿಕಾರಿ ಶ್ರೀಮತಿ ಕಲ್ಪನಾ ವರ್ಮಾ ಅವರನ್ನು ಈ ಮೂಲಕ ಅಮಾನತುಗೊಳಿಸಿದೆ.

ಇದನ್ನೂ ಓದಿ: ಸೊಸೆಯನ್ನು ವೇಶ್ಯಾವಾಟಿಕೆಗೆ ತಳ್ಳಲು ಅತ್ತೆ ಯತ್ನ; ನೊಂದ ಗೃಹಿಣಿ ಸಾವಿಗೆ ಶರಣು

ಅಮಾನತು ಅದೇಶದಲ್ಲೇನಿದೆ?

ದಂತೇವಾಡ ಜಿಲ್ಲೆಯ ಪೊಲೀಸ್ ಉಪ ವರಿಷ್ಠಾಧಿಕಾರಿ ಶ್ರೀಮತಿ ಕಲ್ಪನಾ ವರ್ಮಾ ಅವರ ವಿರುದ್ಧ ಬಂದಿರುವ ದೂರಿನ ಪ್ರಾಥಮಿಕ ತನಿಖಾ ವರದಿಯಲ್ಲಿ, ಹಣಕಾಸಿನ ವಹಿವಾಟುಗಳು, ತನಿಖೆಯ ಸಮಯದಲ್ಲಿ ನೀಡಿದ ಹೇಳಿಕೆಗಳು ಮತ್ತು ವಾಟ್ಸಾಪ್ ಚಾಟ್ ಸಂಗತಿಗಳ ನಡುವಿನ ವಿರೋಧಾಭಾಸಗಳು, ಕರ್ತವ್ಯದ ಸಮಯದಲ್ಲಿ ಅಕ್ರಮ ಆರ್ಥಿಕ ಲಾಭಗಳನ್ನು ಪಡೆಯುವುದು, ಅವರ ಹುದ್ದೆಯ ದುರುಪಯೋಗ ಮತ್ತು ಅಕ್ರಮ ಆಸ್ತಿಗಳ ಸಂಪಾದನೆಗೆ ಸಂಬಂಧಿಸಿದ ವರದಿಗಳು ಹೊರಹೊಮ್ಮಿವೆ ಎಂದು ಕಲ್ಪನಾ ವರ್ಮಾ ಅವರ ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page