Connect with us

DAKSHINA KANNADA

ಸುರತ್ಕಲ್: ಲೈಟ್‌ ಹೌಸ್‌ ಬೀಚ್‌ನಲ್ಲಿ ನೀರುಪಾಲಾಗಿದ್ದ ಯುವಕನ ಶವ ಪತ್ತೆ

Published

on

ಸುರತ್ಕಲ್ : ಮಂಗಳೂರು ಹೊರ ವಲಯದ ಸುರತ್ಕಲ್ ಬಳಿಯ ಲೈಟ್ ಹೌಸ್ ಬೀಚ್‌ನಲ್ಲಿ ಶನಿವಾರ ಸಂಜೆ ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾದ ಯುವಕನ ಮೃತದೇಹ ಜನವರಿ 1 ರಂದು ಭಾನುವಾರ ಪತ್ತೆಯಾಗಿದೆ.

ಕಾನ ನಿವಾಸಿ ಸುರೇಶ್ ಪ್ರಸಾದ್ ಯಾದವ್ ಎಂಬವರ ಪುತ್ರ ಸತ್ಯಂ (18) ಮೃತ ದುರ್ದೈವಿ.


ಲೈಟ್ ಹೌಸ್ ಬೀಚ್ ನಿಂದ 1.5 ಕಿಮೀ ದೂರದಲ್ಲಿರುವ ರೆಡ್ ರಾಕ್ ಬೀಚ್ ನಲ್ಲಿ ಇವನು ಮತ್ತು ಆತನ ಸ್ನೇಹಿತ ಶನಿವಾರ ಸಮುದ್ರದಲ್ಲಿ ಈಜಲು ಹೋಗಿದ್ದರು.


ಇಬ್ಬರೂ ಸಮುದ್ರದ ಪ್ರವಾಹದಲ್ಲಿ ಸಿಲುಕಿಕೊಂಡಾಗ, ಸತ್ಯಂನ ಸ್ನೇಹಿತ ಸುರಕ್ಷಿತವಾಗಿ ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಸತ್ಯಂ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದರು. ಸತ್ಯಂ ನಗರದ ಕೆಪಿಟಿಯಲ್ಲಿ ಡಿಪ್ಲೊಮಾ ಓದುತ್ತಿದ್ದರು.

ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

DAKSHINA KANNADA

ಮಂಗಳೂರು : ಬಡ ಕುಟುಂಬದ ಜೋಡಿಗೆ ಸಾಮೂಹಿಕ ಸರಳ ವಿವಾಹ

Published

on

ಮಂಗಳೂರು : ಶ್ರೀ ಕ್ಷೇತ್ರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವೇದಮೂರ್ತಿ ಶ್ರೀ ವಿವೇಕಾನಂದ ನೀಗ್ಲೆಯವರ ಮುಂದಾಳತ್ವದಲ್ಲಿ ಬಡ ಕುಟುಂಬದ ಜೋಡಿಗೆ ಸರಳ ವಿವಾಹ ಕಾರ್ಯಕ್ರಮ ಜರುಗಿತು. ಮಂಗಳೂರಿನ ಬಿಕರ್ನಕಟ್ಟೆ ಪದವು ಬಳಿ ಇರುವ ಉತ್ಸಾಹಿ ಯುವಕ ವೃಂದದ 37ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಭಾನುವಾರದಂದು ಬಿಕರ್ನಕಟ್ಟೆಯಲ್ಲಿ ನೆರವೇರಿದೆ.

ಶಾಸಕ ವೇದವ್ಯಾಸ ಕಾಮತ್‌ ಆಗಮಿಸಿ ಸಾಮೂಹಿಕ ವಿವಾಹದಲ್ಲಿ ಸಪ್ತಪದಿ ತುಳಿದ ಜೋಡಿಗೆ ಶುಭ ಹಾರೈಸಿದರು. ಬಳಿಕ ಉತ್ಸಾಹಿ ಯುವ ಸಂಘದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. “ಇಂತಹ ಕಾರ್ಯಕ್ರಮಗಳ ಮೂಲಕ ಸಂಘವು ಜನಪ್ರೀತಿಯನ್ನು ಗಳಿಸುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉತ್ಸಾಹಿ ಯುವಕ ವೃಂದದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Continue Reading

DAKSHINA KANNADA

21ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಕೂಟದ ಫಲಿತಾಂಶ

Published

on

ಕಾರ್ಕಳ: 21ನೇ ವರ್ಷದ ಮಿಯ್ಯಾರು “ಲವ-ಕುಶ” ಜೋಡುಕೆರೆ ಕಂಬಳ ಕೂಟದ ಫಲಿತಾಂಶ ಪ್ರಕಟಗೊಂಡಿದೆ.


ಕೆನೆಹಲಗೆ 07 ಜೊತೆ, ಅಡ್ಡ ಹಲಗೆ 07 ಜೊತೆ, ಹಗ್ಗ ಹಿರಿಯ 20 ಜೊತೆ, ನೇಗಿಲು ಹಿರಿಯ 28 ಜೊತೆ, ಹಗ್ಗ ಕಿರಿಯ 32 ಜೊತೆ, ನೇಗಿಲು ಕಿರಿಯ 129 ಜೊತೆ, ಒಟ್ಟು 223 ಜೊತೆ ಕೋಣಗಳು ಈ ಬಾರಿಯ ಕಂಬಳ ಕೂಟದಲ್ಲಿ ಭಾಗವಹಿಸಿದ್ದವು. ಇನ್ನು ಬಹುಮಾನ ವಿಜೇತರ ವಿವರ ಹೀಗಿದೆ..

ಕನೆ ಹಲಗೆ:
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ಹಲಗೆ ಮುಟ್ಟಿದವರು: ಬೈಂದೂರು ರಾಂಪಹಿತ್ತು ರಾಘವೇಂದ್ರ ಪೂಜಾರಿ

ನೇಗಿಲು ಹಿರಿಯ:
ಪ್ರಥಮ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (11.57)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಕಟೀಲು ಕೊಡೆತ್ತೂರು ಕಿನ್ನಚ್ಚಿಲ್ ಲತಾ ಪ್ರಸಾದ್‌ ಶೆಟ್ಟಿ (11.65)
ಓಡಿಸಿದವರು: ವಿಟ್ಲ ಕುಂಡಡ್ಕ ಕಿಶೋ‌ರ್ ಪೂಜಾರಿ

ನೇಗಿಲು ಕಿರಿಯ:
ಪ್ರಥಮ: ಮಿಯಾರು ಬೋರ್ಕಟ್ಟೆ ಅನುಗ್ರಹ ಪ್ರಥಮ್ ಪ್ರಭಾಕರ ಶೆಟ್ಟಿ “22”
ಓಡಿಸಿದವರು: ಸೂರಾಲ್ ಪ್ರದೀಪ್

ದ್ವಿತೀಯ: ಪೇತ್ರಿ ಕಣ್ಣಾರ್ ಮಹಾಬಲ ನಾಯ್
ಓಡಿಸಿದವರು: ಸೂರಾಲ್ ಪ್ರದೀಪ್

ಅಡ್ಡ ಹಲಗೆ:
ಪ್ರಥಮ: ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ (12.03)
ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್

ದ್ವಿತೀಯ: ಕಾಂತಾವರ ಬೇಲಾಡಿ ಬಾವ ಡಾ.ಪ್ರಜ್ಯೋತ್ ಶೆಟ್ಟಿ (12.12)
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ಹಗ್ಗ ಹಿರಿಯ:
ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ “ಬಿ” (11.41)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಮಿಜಾರು ಪ್ರಸಾದ್ ನಿಲಯ ಪ್ರಖ್ಯಾತ್ ಶಕ್ತಿ ಪ್ರಸಾದ್ ಶೆಟ್ಟಿ “ಎ” (11.50)
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ಹಗ್ಗ ಕಿರಿಯ:
ಪ್ರಥಮ: ಮಿಯಾರ್ ಹಿನಪಾಡಿ ಬ್ರಿಜೇಶ್ ಪಡಿವಾಳ್ “ಎ” (11.72)
ಓಡಿಸಿದವರು: ಮಾಳ ಆಧೀಶ್ ಪೂಜಾರಿ

ದ್ವಿತೀಯ: ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ (12.02)
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

Continue Reading

DAKSHINA KANNADA

ಕಟೀಲು ಕ್ಷೇತ್ರಕ್ಕೆ ಸಂಸದ ತೇಜಸ್ವೀಸೂರ್ಯ ದಂಪತಿ ಭೇಟಿ

Published

on

ಕಟೀಲು :  ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲಿಗೆ ಸಂಸದ ತೇಜಸ್ವೀ ಸೂರ್ಯ ದಂಪತಿ ಸಮೇತ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ದುರ್ಗೆಯ ಮುಂದೆ ತೇಜಸ್ವೀ ಸೂರ್ಯ ದುರ್ಗಾ ಸೂಕ್ತ ಪಠಿಸಿದರು. ನವದಂಪತಿಗಳಿಗೆ ಲಕ್ಷೀನಾರಾಯಣ ಆಸ್ರಣ್ಣ ದೇವರ ಶೇಷವಸ್ತ್ರ ನೀಡಿದರು. ನಂತರ ತೇಜಸ್ವೀ ಸೂರ್ಯ ದಂಪತಿ ಸಮೇತ ಕುಟುಂಬವರ್ಗದವರು ಅನ್ನಪ್ರಸಾದ ಸ್ವೀಕರಿಸಿದರು. ಮೂಲ ಕುದುರುಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಪ್ರವೀಣ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page