Connect with us

FILM

ಮಾರ್ಚ್‌ನಲ್ಲಿ ದರ್ಶನ್‌ ಬಿಡುಗಡೆ ವಿಚಾರ; ರಚಿತಾ ರಾಮ್‌ ಪ್ರತಿಕ್ರಿಯೆ!

Published

on

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಲಾಗಿರುವ ನಟ ದರ್ಶನ್‌ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ನಟಿ ರಚಿತಾ ರಾಮ್‌ ಪ್ರತಿಕ್ರಿಯೆ ನೀಡಿದ್ದಾರೆ.


ಹೌದು, ನಟ ದರ್ಶನ್‌ ಜೈಲಿನಲ್ಲಿದ್ದರು ಒಂದಲ್ಲ ಒಂದು ವಿಷಯದ ಕುರಿತು ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ದರ್ಶನ್‌ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದ್ದಾರೆ ಎಂಬ ವಿಚಾರ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ನೆಚ್ಚಿನ ನಟ ಬಿಡುಗಡೆಯಾಗಲಿದ್ದಾರೆ ಎಂಬ ವಿಚಾರ ಹಬ್ಬುತ್ತಿದ್ದಂತೆ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ. ಇದೀಗ ಈ ವಿಚಾರದ ಕುರಿತು ನಟಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೂಡ ಈ ವಿಚಾರವನ್ನು ಈಗಷ್ಟೇ ಕೇಳಿಪಟ್ಟೆ. ದರ್ಶನ್‌ ಸರ್‌ ಮಾರ್ಚ್‌ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ ಎಂಬ ಸುದ್ದಿ ನಾನು ಎಲ್ಲರಿಗಿಂತ ಹೆಚ್ಚು ಖುಷಿಪಡುತ್ತೇನೆ. ಅವರ ಬರುವಿಕೆಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತುಳುನಾಡಿನ ದೈವವನ್ನು ʼಹೆಣ್ಣು ದೆವ್ವʼ ಎಂದಿದ್ದ ರಣವೀರ್‌ ಸಿಂಗ್‌ಗೆ ಬಿಗ್‌ ಶಾಕ್!

ತೆರೆ ಹಂಚಿಕೊಳ್ಳುವ ಆಸೆ ನನಗಿದೆ!
ದರ್ಶನ್ ಮತ್ತು ರಚಿತಾ ರಾಮ್ ಕೆಮಿಸ್ಟ್ರಿ ‘ಬುಲ್ ಬುಲ್’ ಸಿನಿಮಾ ಕಾಲದಿಂದಲೂ ಪ್ರೇಕ್ಷಕರಿಗೆ ನೆಚ್ಚಿನದ್ದು. “ನಾವು ಭೇಟಿಯಾದಾಗಲೆಲ್ಲಾ ಹೆಚ್ಚಾಗಿ ಸಿನಿಮಾಗಳ ಬಗ್ಗೆಯೇ ಚರ್ಚೆ ಮಾಡುತ್ತಿದ್ದೆವು. ಅವರ ದೊಡ್ಡ ಗುಣವೇ ಅದು. ಮುಂದಿನ ದಿನಗಳಲ್ಲಿ ಮತ್ತೆ ಅವರ ಜೊತೆ ತೆರೆ ಹಂಚಿಕೊಳ್ಳುವ ಆಸೆ ನನಗಿದೆ” ಎಂದು ರಚಿತಾ ರಾಮ್ ಭರವಸೆ ವ್ಯಕ್ತಪಡಿಸಿದ್ದಾರೆ.

FILM

ದಳಪತಿ ವಿಜಯ್ ಪತ್ನಿ ಸಂಗೀತಾರಿಂದ ಕೋರ್ಟ್‌ಗೆ ಹೊಸ ಅರ್ಜಿ!

Published

on

ತಮಿಳು ನಟ ಮತ್ತು ಟಿ.ವಿ.ಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ, ತಮ್ಮ ನಡೆಯುತ್ತಿರುವ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೊಸ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ.


ಚೆನ್ನೈನ ನೀಲಂಕರೈನಲ್ಲಿರುವ ತಮ್ಮ ವೈವಾಹಿಕ ಮನೆಯಲ್ಲಿ ವಾಸಿಸುವ ಹಕ್ಕನ್ನು ನೀಡುವಂತೆ ಮತ್ತು ಪ್ರಕರಣ ಇತ್ಯರ್ಥವಾಗುವವರೆಗೆ ಅಲ್ಲಿಂದ ತಮ್ಮನ್ನು ಹೊರಹಾಕದಂತೆ ರಕ್ಷಣೆ ನೀಡಲು ಸಂಗೀತಾ ಅವರು ಮಧ್ಯಂತರ ಆದೇಶವನ್ನು ಕೋರಿದ್ದಾರೆ.

ಸಂಗೀತಾ ಅವರು ಬ್ರಿಟಿಷ್ ನಾಗರಿಕಳಾಗಿದ್ದು, ಚೆನ್ನೈನಲ್ಲಿ ತಮಗೆ ಬೇರೆ ಸ್ವಂತ ಮನೆ ಇಲ್ಲದಿರುವುದರಿಂದ ಇದೇ ಮನೆಯಲ್ಲಿ ಉಳಿಯಲು ಅನುಮತಿ ನೀಡಬೇಕೆಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ವಿಜಯ್ ಅವರ ವಕೀಲರು ಮನೆಯಿಂದ ಹೊರಹೋಗುವಂತೆ ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್‌ರ ‘ಜನ ನಾಯಗನ್’ ಚಿತ್ರಕ್ಕೆ ಮತ್ತೆ ಸಂಕಷ್ಟ

ಈ ಪ್ರಕರಣವು ಪ್ರಸ್ತುತ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿದ್ದು, ಮುಂದಿನ ವಿಚಾರಣೆಯು ಮಾರ್ಚ್ 30ರಂದು ನಡೆಯುವ ಸಾಧ್ಯತೆಯಿದೆ. ಅಂದು ನಟ ವಿಜಯ್ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ವಿಜಯ್ ಮತ್ತು ಸಂಗೀತಾ 1999 ರಲ್ಲಿ ವಿವಾಹವಾಗಿದ್ದು, 27 ವರ್ಷಗಳ ದಾಂಪತ್ಯದ ನಂತರ ಈಗ ವಿಚ್ಛೇದನದ ಹಂತಕ್ಕೆ ತಲುಪಿದ್ದಾರೆ.

Continue Reading

FILM

ಯಶ್ ಸಿನಿಮಾ ಮುಂದೂಡಿಕೆ; ‘ಲವ್ ಮಾಕ್ಟೇಲ್-3’ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ!

Published

on

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆಯಾದ ಬೆನ್ನಲ್ಲೇ, ಡಾರ್ಲಿಂಗ್ ಕೃಷ್ಣ ಅವರ ‘ಲವ್ ಮಾಕ್ಟೇಲ್-3’ ಚಿತ್ರದ ಬಿಡುಗಡೆ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದೆ.


‘ಲವ್ ಮಾಕ್ಟೇಲ್-3’ ಈಗ ಮಾರ್ಚ್ 19ರಂದು ತೆರೆಕಾಣಲಿದೆ. ಈ ಮೊದಲು ಚಿತ್ರವನ್ನು ಏಪ್ರಿಲ್ 10ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಈ ಕುರಿತು ಡಾರ್ಲಿಂಗ್ ಕೃಷ್ಣ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಿಮ್ಮನ್ನು ರಂಜಿಸೋಕೆ ಬೇಗ ಬರಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಲವ್ ಮಾಕ್ಟೇಲ್-2ರ ಮುಂದುವರಿದ ಭಾಗ ಇದಾಗಿದ್ದು, ತಂದೆ ಹಾಗೂ ಮಗಳ ನಡುವಿನ ಬಾಂಧವ್ಯ, ಭಾವನಾತ್ಮಕ ಸಂಬಂಧವನ್ನು ತೋರಿಸಲಿದೆ. ಈ ಮೊದಲು ಫೆ.23ಕ್ಕೆ ರಿಲೀಸ್ ಮಾಡಲು ನಿರ್ಧರಿಸಿತ್ತು. ಆದರೆ ಬೇರೆ ಸಿನಿಮಾ ರಿಲೀಸ್‌ಗಿದ್ದ ಕಾರಣ ಮುಂದೂಡಿತ್ತು. ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಆ ಚಿತ್ರದ ಬಿಡುಗಡೆ ಜೂನ್ 4ಕ್ಕೆ ಮುಂದೂಡಲ್ಪಟ್ಟಿದ್ದರಿಂದ, ಆ ಖಾಲಿ ಜಾಗವನ್ನು ಬಳಸಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ.

ಇದನ್ನೂ ಓದಿ: ‘ಲವ್‌ ಮೊಕ್ಟೇಲ್‌ನಲ್ಲಿ ನನಗೆ ಬಾಡಿಶೇಮಿಂಗ್‌ ಆಗಿದೆ’ ಎಂದ ಖ್ಯಾತ ನಟಿ

‘ಟಾಕ್ಸಿಕ್’ ಚಿತ್ರದ ಸಹ-ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್ ಅವರೇ ‘ಲವ್ ಮಾಕ್ಟೇಲ್-3’ ಚಿತ್ರವನ್ನು ವಿತರಿಸುತ್ತಿದ್ದಾರೆ. ಲವ್ ಮಾಕ್ಟೇಲ್ ಸರಣಿಯ ಹಿಂದಿನ ಎರಡು ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಕಂಡಿದ್ದು, ಈ ಮೂರನೇ ಭಾಗದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಇದೆ.

Continue Reading

FILM

ರಶ್ಮಿಕಾ ಮಂದಣ್ಣ ಮದ್ವೆ ಬೆನ್ನಲ್ಲೇ ಈ ಫೋಟೋ ಪೋಸ್ಟ್ ಮಾಡಿದ ನಟ ರಕ್ಷಿತ್ ಶೆಟ್ಟಿ..!

Published

on

ಕರಾವಳಿ ಮೂಲದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇದರಿಂದ ಅವರ ಅಭಿಮಾನಿಗಳು ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ. ರಿಚರ್ಡ್ ಆ್ಯಂಟನಿ’ ಸಿನಿಮಾ ಘೋಷಣೆ ಮಾಡಿ ಹಲವು ಸಮಯ ಕಳೆದರೂ ಆ ಚಿತ್ರದ ಬಗ್ಗೆ ಯಾವುದೇ ಅಪ್​​ಡೇಟ್ ಇಲ್ಲ. ಈ ಎಲ್ಲ ವಿಷಯದಲ್ಲಿ ಫ್ಯಾನ್ಸ್​ಗೆ ಬೇಸರ ಇದೆ. ಹೀಗಿರುವಾಗಲೇ ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾದ ಬೇಸರದ ಮುಖ ಭಾವವಿರುವ ಫೋಟೋನ ಪೋಸ್ಟ್ ಮಾಡಿದ್ದಾರೆ. ಈ ಫೋಟೋನ ರಕ್ಷಿತ್ ಹಂಚಿಕೊಂಡಿದ್ದೇಕೆ ಎಂಬ ಪ್ರಶ್ನೆ ಮತ್ತು ಕುತೂಹಲ ಅಭಿಮಾನಿಗಳದ್ದು.

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಇದೀಗ ನಟಿ ರಶ್ಮಿಕಾ ಮಂದಣ್ಣ ನಟ ವಿಜಯ ದೇವರಕೊಂಡ ಅವರ ಕೈ ಹಿಡಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೆಲ್ಲ ಅವರ ವಿವಾಹದ ಫೋಟೋಗಳು ಸಖತ್ ಸದ್ದು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಬೇಸರದಲ್ಲಿರೋ ಫೋಟೋನೇ ಪೋಸ್ಟ್ ಮಾಡಿದ್ದು ಅಚ್ಚರಿ ಮೂಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಇವರ ಪೋಸ್ಟ್ ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಗಳನ್ನು ಹಾಕಿದ್ದಾರೆ. ‘ಹಳೆಯದನ್ನು ಮರೆತು ಮುಂದೆ ಸಾಗಿ’ ಎಂದು ಫ್ಯಾನ್ಸ್ ಹೇಳಿದ್ದಾರೆ. ಇನ್ನೂ ಕೆಲವರು, ‘ನಿಮ್ಮ ಕಂಬ್ಯಾಕ್ ಬೇರೆಯವರಿಗೆ ಸ್ಲಿಪ್ಪರ್ ಶಾಟ್ ಆಗಬೇಕು’ ಎಂದು ಬರೆದುಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಇದ್ದಿದ್ದು ಕಡಿಮೆ. ಆದರೆ ಏಕಾಏಕಿ ಚಾರ್ಲಿ ಸಿನಿಮಾದ ಈ ಫೋಟೋ ಪೋಸ್ಟ್ ಮಾಡಿದ್ದು ಯಾಕೆ ಎಂಬ ಕ್ಯೂರಾಸಿಟಿ ಮಾತ್ರ ಜಾಸ್ತಿಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page