Connect with us

ಜಾಸ್ತಿ ರೀಲ್ಸ್ ನೋಡೋದನ್ನು ಬಿಟ್ಟು ಬಿಡಿ; ಇಲ್ಲಾಂದ್ರೆ ನಿಮ್ಮನ್ನು ಆವರಿಸುತ್ತೆ ಈ ರೋಗ

Published

on

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಅಥವಾ ಶಾರ್ಟ್ಸ್‌ಗಳನ್ನು ನೊಡುತ್ತಾ ಯುವ ಸಮಾಜ ಕಾಲ ಕಳೆಯುತ್ತಿದೆ. ಊಟ ಬಿಟ್ಟು, ನಿದ್ದೆಗೆಟ್ಟು ರೀಲ್ಸ್ ನೊಡುತ್ತಾ ಸಮಯ ವ್ಯರ್ಥ ಮಾಡುತ್ತಿದೆ. ಇತ್ತಿಚಿಗೆ ನಡೆದ ಅಧ್ಯಯನದಲ್ಲಿ “ಮಲಗುವ ಸಮಯದಲ್ಲಿ ರೀಲ್ಸ್​ಗಳನ್ನು ವೀಕ್ಷಿಸುತ್ತಾ ಹೆಚ್ಚು ಸಮಯ ಮೊಬೈಲ್ ನೋಡುತ್ತಿರುವುದರಿಂದ ಯುವಕರು ಹಾಗೂ ಮಧ್ಯ ವಯಸ್ಕರಲ್ಲಿ ರಕ್ತದೊತ್ತಡ ಉಂಟಾಗುತ್ತಿದೆ” ಎಂದು ತಿಳಿದು ಬಂದಿದೆ.

ಬೆಂಗಳೂರು ಮೂಲದ ಹೃದ್ರೋಗ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ ಅವರು ಹಂಚಿಕೊಂಡ ಸಂಶೋಧನಾ ವರದಿ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮಲಗುವ ಸಮಯದಲ್ಲಿ ರೀಲ್ಸ್ ವೀಕ್ಷಿಸುವ ಸಮಯವನ್ನು ಆಧರಿಸಿ ಅಧ್ಯಯನವನ್ನು ನಡೆಸಿ, “ಮಲಗುವ ಸಮಯದಲ್ಲಿ ಮೊಬೈಲ್ ನೋಡುವುದು ಜಡ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ. ಈ ಸಮಯ ವಿಡಿಯೋಗಳನ್ನು ವೀಕ್ಷಿಸುವುದರಿಂದ ನರಮಂಡಲಗಳು ಸಕ್ರಿಯವಾಗಿಯೇ ಇರುತ್ತವೆ, ಇದರಿಂದ ನಿದ್ರಾಹೀನತೆ ಉಂಟಾಗಬಹುದು ಹಾಗೆಯೇ ರಕ್ತದೊತ್ತಡಕ್ಕೂ ಕಾರಣವಾಗಬಹುದು” ಎಂದು ಹೇಳಿದ್ದಾರೆ.

ಬಿಎಂಸಿ ಜರ್ನಲ್​ನಲ್ಲಿ ಪ್ರಕಟವಾದ ಲೇಖನದಲ್ಲಿ, “ಚೀನಾದಲ್ಲಿ 4,318 ಯುವ ಮತ್ತು ಮಧ್ಯ ವಯಸ್ಕರ ಮೇಲೆ ನಡೆಸಿದ ಅಧ್ಯಯನದಲ್ಲಿ ರೀಲ್ಸ್​ಗಳನ್ನು ಹೆಚ್ಚಾಗಿ ವೀಕ್ಷಿಸುವವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ” ಎಂಬುದು ತಿಳಿದುಬಂದಿದೆ. ಸಂಶೋಧಕರಾದ ಫೆಂಗ್ಡೆ ಲಿ, ಫಾಂಗ್‌ಫಾಂಗ್ ಮಾ, ಶಾಂಗ್ಯು ಲಿಯು, ಲೆ ವಾಂಗ್, ಲಿಶುವಾಂಗ್ ಜಿ, ಮಿಂಗ್ಕಿ ಝೆಂಗ್ ಮತ್ತು ಗ್ಯಾಂಗ್ ಲಿಯು ಹೇಳಿದಂತೆ “ಮಲಗುವ ಸಮಯದಲ್ಲಿ ಶಾರ್ಟ್​ ವಿಡಿಯೋಗಳು, ರೀಲ್ಸ್​ಗಳನ್ನು ನೋಡುವುದನ್ನು ನಿಯಂತ್ರಿಸಬೇಕು, ಇಲ್ಲವಾದಲ್ಲಿ ಇದು ಅಧಿಕ ರಕ್ತದೊತ್ತಡಕ್ಕೆ ಎಡೆ ಮಾಡಿಕೊಡುತ್ತದೆ” ಎಂದು ಹೇಳಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

BIG BOSS

ಮಾನ್ಸಿ ಜೋಶಿಯ ಅರಶಿಣ ಶಾಸ್ತ್ರದಲ್ಲಿ ಮಿಂಚಿದ ಮೋಕ್ಷಿತಾ ಪೈ

Published

on

ಪಾರು ದಾರಾವಾಹಿಯ ನಟಿ ಮೋಕ್ಷಿತಾ ಪೈ ಬಿಗ್‌ಬಾಸ್ ಸೀಸನ್ 11 ರಲ್ಲಿ ತಮ್ಮ ನಡೆ-ನುಡಿ, ಆಟದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಬಿಗ್‌ಬಾಸ್‌ನಿಂದ ಬಂದ ಬಳಿಕ ಇದೀಗ ತನ್ನ ಸ್ನೇಹಿತೆ ಮಾನ್ಸಿ ಜೋಶಿಯ ಅರಶಿಣ ಶಾಸ್ತ್ರದಲ್ಲಿ ಮಿಂಚಿದ್ದಾರೆ.

ಓಪನ್ ಹೇರ್ ಬಿಟ್ಕೊಂಡು, ಕಟ್ಟಿಗೆ ಗ್ಲಾಸ್ ಹಾಕೊಂಡು, ಹಳದಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಡಿಫ್ರೆಂಟ್ ಲುಕ್‌ನಲ್ಲಿ ಬಂದಂತಹ ಮೋಕ್ಷಿತಾಳನ್ನು ನೋಡಿ ಅಲ್ಲಿಯ ಅತಿಥಿಗಳು ಖುಷಿ ಪಟ್ಟಿದ್ದಾರೆ.

ಇನ್ನು ಮಾನ್ಸಿ ಹಾಗೂ ಮೋಕ್ಷಿತಾ ಪಾರು ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಅಂದಿನಿಂದ ಇಂದಿನವರೆಗೆ ಇವರ ನಡುವಿನ ಗೆಳೆತನ ಮುಂದುವರಿದಿದೆ. ರಾಘವ್ ಎಂಬುವವನನ್ನು ಮಾನ್ಸಿ ವಿವಾಹವಾಗಲಿದ್ದು, ಫೆಬ್ರವರಿ 16 ರಂದು ಈ ಜೋಡೆಯ ಕಲ್ಯಾಣ ನಡೆಯಲಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 11 ರಲ್ಲಿ ಸ್ಫರ್ಧಿಯಾಗಿ ಭಾಗವಹಿಸಿ, ಫಿನಾಲೆ ಸುತ್ತಿನವರೆಗೂ ಆಗಮಿಸಿದ ಮೋಕ್ಷಿತಾ, ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರಿಗೆ ಅಪಾರ ಅಭಿಮಾನಿಗಳೂ ಇದ್ದಾರೆ.

Continue Reading

LATEST NEWS

ಮುಖ್ಯಮಂತ್ರಿ ಸ್ಥಾನಕ್ಕೆ ಅತಿಶಿ ಇಂದು ರಾಜೀನಾಮೆ

Published

on

ಮಂಗಳೂರು/ಬೆಂಗಳೂರು : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಆಡಳಿತರೂಢ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಆತಿಶಿ, ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.

ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ  ಗೆಲುವು ಸಾಧಿಸುವ ಮೂಲಕ ಕಲ್ಕಾಜಿ ಕ್ಷೇತ್ರವನ್ನು ಉಳಿಸಿಕೊಂಡಿದ್ದರು.  ದೆಹಲಿ ಸಿಎಂ ಗೆಲುವು ಕಂಡಿದ್ದರೂ ಈ ಬಾರಿಯ ಸಿಎಂ ಅಭ್ಯರ್ಥಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಹೀನಾಯವಾಗಿ ಸೋಲನ್ನಪ್ಪಿದ್ದಾರೆ. ಈ ಬಾರಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದ ಆಮ್ ಆದ್ಮಿ ಪಕ್ಷವನ್ನು ದೆಹಲಿ ಮತದಾರರು ತಿರಸ್ಕರಿಸಿದ್ದಾರೆ. ಬಿಜೆಪಿಯ ರಮೇಶ್ ಬಿಧುರಿ ಎದುರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅತಿಶಿ ಗೆಲುವು ಕಂಡಿದ್ದಾರೆ. ಆದರೆ, ದೆಹಲಿಯಾದ್ಯಂತ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, 27 ವರ್ಷಗಳ ಬಳಿಕ ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಪಕ್ಷ ಅಧಿಕಾರ ಹಿಡಿಯಲಿದೆ.

ಹೀಗಾಗಿ ಅತಿಶಿ ಅವರು ಇಂದು ರಾಜಭವನಕ್ಕೆ ತೆರಳಿ ಲೆಫ್ಟಿನಂಟ್ ಗವರ್ನರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ಸಿಎಂ ಕಾರ್ಯಾಲಯದ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ಇದನ್ನೂ ಓದಿ: ಬೆಳ್ತಂಗಡಿ: ಮಾಲಾಡಿ ಮನೆಯಲ್ಲಿ ಮಾಯವಾದ ಭೂತ

ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಎಎಪಿ ಆಡಳಿತ ಕೊನೆಗೊಳ್ಳಲಿದ್ದು, ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲಿದೆ. 2015 ಹಾಗೂ 20220ರಲ್ಲಿ ಎಎಪಿ ಭರ್ಜರಿ ಗೆಲುವು ಸಾಧಿಸಿತ್ತು.

ಈ ಬಾರಿ ದೆಹಲಿಯಲ್ಲಿ ಆಡಳಿತ ವಿರೋಧಿ ಅಲೆಗೆ ಸಿಲುಕಿದ ಎಎಪಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನ ಗೆದ್ದುಕೊಂಡಿದೆ. ಅಧಿಕಾರ ಕಳೆದುಕೊಂಡಿರುವ ಎಎಪಿ 22 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಕಾಂಗ್ರೆಸ್ ಸತತ ಮೂರನೇ ಸಲವೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿದಂತೆ ಎಎಪಿಯ ಘಟಾನುಘಟಿ ನಾಯಕರಿಗೆ ಹೀನಾಯ ಸೋಲು ಎದುರಾಗಿದೆ. ಬಿಜೆಪಿಯಿಂದ ಯಾರು ಸಿಎಂ ಆಗಲಿದ್ದಾರೆ ಎಂಬುದು ಕುತೂಹಲವೆನಿಸಿದೆ.

 

 

Continue Reading

BELTHANGADY

ಬೆಳ್ತಂಗಡಿ: ಮಾಲಾಡಿ ಮನೆಯಲ್ಲಿ ಮಾಯವಾದ ಭೂತ

Published

on

ಬೆಳ್ತಂಗಡಿ: ಸಾಕಷ್ಟು ಸುದ್ದಿ ಮಾಡಿರುವ ಬೆಳ್ತಂಗಡಿ ತಾಲೂಕಿನ ಮಾಲಾಡಿ ಮನೆಯಲ್ಲಿನ ಭೂತದ ಕಾಟ ನಿಂತು ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿ ಭೂತದ ಕಾಟದಿಂದ ಮನೆಯವರು ನಿದ್ದೆ ಕಳೆದುಕೊಂಡಿದ್ದರು. ಮನೆಯಲ್ಲಿ ಬಟ್ಟೆಗಳಿಗೆ ಬೆಂಕಿ ಬೀಳುವುದು, ಪಾತ್ರಗಳ ಉರುಳಿ ಬೀಳುವುದು ಹಾಗೂ ಮನೆಯಲ್ಲಿ ಯಾರೋ ಅಡ್ಡಾಡಿದಂತ ಅನುಭವದಿಂದ ಮನೆಯವರು ಭಯಭೀತರಾಗಿದ್ದರು.

ಸುದ್ದಿ ತಿಳಿದು ಈ ಮನೆಗೆ ಅನೇಕ ಮಂದಿ ಭೇಟಿ ನೀಡುತ್ತಿದ್ದ ಕಾರಣದಿಂದ ಎರಡು ದಿನಗಳ ಹಿಂದೆ ಇಡೀ ಕುಟುಂಬ ಮನೆ ಬಿಟ್ಟು ಸಂಬಂಧಿಕರ ಮನೆಗೆ ತೆರಳಿದ್ದರು. ಫೆ. 8 ರಂದು ಶನಿವಾರ ಮತ್ತೆ ಮನೆಗೆ ಆಗಮಿಸಿದ್ದು, ಮನೆಯಲ್ಲಿ ಪರಿಹಾರ ಕಾರ್ಯಗಳನ್ನು ಮಾಡಿದ್ದಾಗಿ ಮಾಹಿತಿ ಇದೆ. ಇದು ಕುಟುಂಬ ದೈವದ ತೊಂದರೆಯಿಂದ ಆಗಿದ್ದ ಸಮಸ್ಯೆ ಎಂಬ ಮಾಹಿತಿ ಲಭ್ಯವಾಗಿದ್ದು, ಮನೆಯಲ್ಲಿ ಕಳೆದು ಹೋಗಿದ್ದ ಚಿನ್ನ ಕೂಡಾ ಸಿಕ್ಕಿದೆ.

ಮನೆಯಲ್ಲಿನ ದೇವರ ಫೋಟೋದ ಹಿಂಭಾಗದಲ್ಲಿ ಚಿನ್ನಾಭರಣ ಪತ್ತೆಯಾಗಿದ್ದು, ಈ ಹಿಂದೆ ಭೂತವೇ ಚಿನ್ನವನ್ನು ಅಡಗಿಸಿಟ್ಟಿದೆ ಎನ್ನಲಾಗಿತ್ತು. ಭಾನುವಾರ ಈ ಮನೆಗೆ ಪವಾಡ ರಹಸ್ಯ ತಜ್ಞ ಹುಲಿಕಲ್ ನಟರಾಜ್ ಅವರು ಬರುವುದಾಗಿ ಹೇಳಿದ್ದು ಅವರಿಗೆ ಎಲ್ಲಾ ಸಮಸ್ಯೆ ಪರಿಹಾರ ಆಗಿದೆ ಎಂಬ ಮಾಹಿತಿಯನ್ನು ಉಮೇಶ್ ಶೆಟ್ಟಿ ಕುಟುಂಬದವರು ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page