Connect with us

DAKSHINA KANNADA

ದಕ್ಷಿಣ ಕನ್ನಡ ಜಿಲ್ಲೆ ಬ್ರಾಂಡ್‌ ಮಂಗಳೂರು ಆಗಿ ಹೆಸರಾಗಬೇಕು: ಐವನ್ ಡಿಸೋಜಾ

Published

on

ಮಂಗಳೂರು: ಕರ್ನಾಟಕದ ಸಚಿವ ಸಂಪುಟದ ಸಭೆಗಳು ನಂದಿಹಿಲ್ಸ್ ಗುಲ್ಬಗ್ಬಾ ಮತ್ತು ಚಾಮರಾಜನಗರ ಹೀಗೆ ರಾಜ್ಯದಿಂದ ಹೊರಭಾಗದಲ್ಲಿ ನಡೆದಿದೆ. ಮತ್ತೆ ವಿಜಯಪುರದಲ್ಲಿ ಮಾಡಬೇಕೆಂದು ತೀರ್ಮಾನ ಆಗಿದೆ. ಆದ್ದರಿಂದ ನಾನು ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡುತ್ತೇನೆ ಕರಾವಳಿ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ಮಾಡಬೇಕೆಂದು ಆಗ್ರಹಿಸುವುದಾಗಿ ಎಂಎಲ್‌ಸಿ ಐವನ್ ಡಿ ಸೋಜಾ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಐವನ್‌, ಇದನ್ನು ಕರಾವಳಿ ಭಾಗದಲ್ಲಿ ಆಯೋಜನೆ ಮಾಡುವುದರಿಂದ ಪ್ರವಾಸೋದ್ಯಮ, ಮೀನುಗಾರಿಕೆ, ಕೃಷಿ, ಕೈಗಾರಿಕೆ, ವಾಣಿಜ್ಯ ವಿಚಾರಗಳು ಸಹಿತ ಹಲವು ವಿಚಾರಗಳಿಗೆ ಸಂಬಂಧಿಸಿ ಈ ಭಾಗಕ್ಕೆ ಸಾಕಷ್ಟು ಪ್ರಯೋಜನ ಆಗುತ್ತದೆ. ಇಲ್ಲಿನ ಅಭಿವೃದ್ಧಿ ವಿಚಾರಗಳ ಬಗ್ಗೆ ಸಂಪುಟದ ಸರ್ವ ಸದಸ್ಯರಿಗೆ ವಿಚಾರ ಗೊತ್ತಾಗುತ್ತಿದೆ. ಮುಂದೆ ವಿಜಯಪುರ ಆದ ಬಳಿಕ ಕರಾವಳಿ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು ಎಂದು ಬೇಡಿಕೆ ಇಡಲಿದ್ದೇವೆ ಎಂದು ಐವನ್ ಹೇಳಿದ್ದಾರೆ.

ಇದನ್ನೂ ಓದಿ: ಮೂರು ದಿನಗಳ ಕಾಲ ಒಂದೇ ಒಳಉಡುಪು ಧರಿಸುತ್ತಿದ್ದ ಪತಿ; ವಿಚ್ಛೇದನ ಪತ್ರ ಬರೆದ ಪತ್ನಿ!

ಇನ್ನು ದಕ್ಷಿಣ ಕನ್ಡಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಘೋಷಣೆ ಮಾಡಿದರೆ ಒಳ್ಳೆಯದು ಎನ್ನುವ ಸುದ್ದಿ ಹರಿದಾಡುತ್ತಿದೆ. ಮಂಗಳೂರು ಬ್ರಾಂಡ್ ಆಗಬೇಕು ಎನ್ನುವ ಆಶಯ ತನ್ನದು. ಮಂಗಳೂರು ಎನ್ನುವ ಹೆಸರನ್ನು ಇಲ್ಲಿಗೆ ಇಡಬೇಕು. ಮಂಗಳೂರು ಎಂದೇ ಘೋಷಣೆ ಮಾಡಬೇಕು ಎನ್ನುವ ಚರ್ಚೆ ನಡೆದಿದೆ. ಇದರಿಂದ ಜನರಿಗೆ, ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೂ ಹೆಚ್ಚು ಅನುಕೂಲವಾಗುತ್ತಿದೆ.

ಸರಕಾರ ಈ ಬಗ್ಗೆ ಹೆಚ್ಚು ಒತ್ತು ಕೊಟ್ಟು ಸರಕಾರ ಚಿಂತನೆ ಮಾಡಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ಸಿನ ಹಿರಿಯ ನಾಯಕರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

DAKSHINA KANNADA

ಉಳ್ಳಾಲ: ರಕ್ತದೊತ್ತಡದಿಂದ ಕುಸಿದು ಬಿದ್ದು ನವ ವಿವಾಹಿತ ಸಾ*ವು

Published

on

ಉಳ್ಳಾಲ: ರಕ್ತದೊತ್ತಡದಿಂದ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ವಿವಾಹಿತ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾ*ವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ಮೃ*ತ ಯುವಕನನ್ನು ಉಳ್ಳಾಲ ತಾಲೂಕಿನ ಮಂಜನಾಡಿ ಪೆರಡೆ ದಿ. ವೆಂಕಪ್ಪ ಹಾಗೂ ಪಾರ್ವತಿ ದಂಪತಿಯ ಪುತ್ರ 32 ವರ್ಷದ ಭರತ್ ಎಂದು ತಿಳಿದುಬಂದಿದೆ.

ನಗರದ ಮಾಲ್ ಒಂದರಲ್ಲಿ ಟೈಲರ್ ಕೆಲಸ ಮಾಡುತ್ತಿದ್ದ ಭರತ್ ನಾಲ್ಕು ದಿನದ ಹಿಂದೆ ರಕ್ತದೊತ್ತಡದಿಂದ ಕುಸಿದು ಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಾ*ವನ್ನಪ್ಪಿದ್ದಾರೆ.

ಇದನ್ನೂ ಓದಿ: ಸುಳ್ಯ: ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ತುಳಿದು ವ್ಯಕ್ತಿ ಸಾವು

ಕಳೆದ ಏಪ್ರಿಲ್ 22ರಂದು ಭರತ್ ವಿವಾಹ ಸಮಾರಂಭ ನಡೆದಿದ್ದು ಪತ್ನಿ ನಗರದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೃ*ತ ಯುವಕ ಭರತ್ ತಾಯಿ, ಪತ್ನಿ ಹಾಗೂ ಮೂವರು ಸೋದರಿಯರು ಅಗಲಿದ್ದಾರೆ.

Continue Reading

DAKSHINA KANNADA

ಸುಳ್ಯ: ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ತುಳಿದು ವ್ಯಕ್ತಿ ಸಾವು

Published

on

ಸುಳ್ಯ: ತುಂಡಾಗಿ ಬಿದ್ದ ವಿದ್ಯುತ್ ವಯರ್ ತುಳಿದು ಬಳಿಕ ವಿದ್ಯುತ್ ಶಾಕ್ ಆಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸುಳ್ಯದ ಕೊಡಿಯಾಲ ಗ್ರಾಮದ ಕಲ್ಲಪಣೆಯಲ್ಲಿ ನಡೆದಿದೆ.

ಕಲ್ಲಪಣೆಯ ದಿವಾಕರ ಆಚಾರ್ಯ (45) ಮೃತಪಟ್ಟವರು ಎಂದು ತಿಳಿದುಬಂದಿದೆ. ಮನೆಗೆ ಹೋಗುವ ದಾರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಅನ್ನು ತುಳಿದು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಹಸು ಮೇಯಿಸುವಾಗ ಜಮೀನಿನಲ್ಲಿ ಹೃದಯಾಘಾತವಾಗಿ ಯುವಕ ಸಾವು

ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮನೆಯವರಿಗೆ ಹಸ್ತಾಂತರ ಮಾಡಲಾಯಿತು.

Continue Reading

DAKSHINA KANNADA

ಸುಳ್ಯ: ಘನತ್ಯಾಜ್ಯ ಘಟಕಕ್ಕೆ ಬೆಂಕಿ; ನಾಲ್ಕು ಲಕ್ಷ ಮೌಲ್ಯದ ಯಂತ್ರ ಹಾನಿ

Published

on

ಸುಳ್ಯ: ಅರಂತೋಡು ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ಘಟಕಕ್ಕೆ ನಿನ್ನೆ (ಜು. 9) ಸಂಜೆಯ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಘಟಕ ಹೊತ್ತಿ ಉರಿದಿದೆ.

ಘನತ್ಯಾಜ್ಯ ಘಟಕದಲ್ಲಿ ಪೂರ್ತಿಯಾಗಿ ತ್ಯಾಜ್ಯ ಬೇರ್ಪಡಿಸಿ ತುಂಬಿಡಲಾಗಿತ್ತು. ಹೀಗಾಗಿ ಆಕಸ್ಮಿಕವಾಗಿ ಬೆಂಕಿ ತಗುಲಿ ಘಟಕವು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಕಟ್ಟಡ ಮತ್ತಿತರ ಸೇರಿ ಅಪಾರ ಹಾನಿ ಸಂಭವಿಸಿದೆ.

ಇದನ್ನೂ ಓದಿ: ಹೃದಯಾ*ಘಾತದಿಂದ 4ನೇ ತರಗತಿ ವಿದ್ಯಾರ್ಥಿ ಸಾ*ವು

ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದರು. ಅಲ್ಲದೇ ಘನತ್ಯಾಜ್ಯ ವಿಲೇವಾರಿ ಮಾಡುವ ನಾಲ್ಕು ಲಕ್ಷ ಮೌಲ್ಯದ ಯಂತ್ರ ಸೇರಿ ಇತರ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page