Connect with us

DAKSHINA KANNADA

ಡಿ.20ರಿಂದ ಜ.4ರವರೆಗೆ ದ.ಕ.ಜಿಲ್ಲಾ ಕರಾವಳಿ ಉತ್ಸವ: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

Published

on

ಮಂಗಳೂರು: ದ.ಕ. ಜಿಲ್ಲಾಡಳಿತವು, ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ, ಸಾಂಸ್ಕೃತಿಕ, ಕ್ರೀಡಾ ಮತ್ತು ಮನರಂಜನಾ ಚಟುವಟಿಕೆಗಳ ಸಮಾಗಮವಾದ ‘ಕರಾವಳಿ ಉತ್ಸವ 2025-26’ ಅನ್ನು ಡಿ.20ರಿಂದ ಜ.4ರವರೆಗೆ ಆಯೋಜಿಸಲು ಸಜ್ಜಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.20ರಿಂದ ಜ.4ರವರೆಗೆ ಪ್ರತೀ ಶನಿವಾರ ಮತ್ತು ರವಿವಾರ ಕರಾವಳಿ ಉತ್ಸವ ಮೈದಾನದ ವೇದಿಕೆಯಲ್ಲಿ ಕರಾವಳಿಯ ಕಲೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

ಜ.3 ಮತ್ತು 4ರಂದು ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಕಡಲತೀರಗಳಲ್ಲಿ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ಖ್ಯಾತ ಕಲಾವಿದರಿಂದ ‘ಮ್ಯೂಸಿಕಲ್ ನೈಟ್’ ಕಾರ್ಯಕ್ರಮ ನಡೆಯಲಿದೆ. ಉತ್ಸವದ ಮುಂದುವರಿದ ಭಾಗವಾಗಿ, ಜನವರಿ ಮತ್ತು ಫೆಬ್ರವರಿಯಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ನುಡಿದರು.

ಇದನ್ನೂ ಓದಿ: ಮಹಾತ್ಮ ಗಾಂಧಿ ಮತ್ತು ಶ್ರೀ ನಾರಾಯಣ ಗುರು ಸಂವಾದ ಶತಮಾನೋತ್ಸವ ಕಾರ್ಯಕ್ರಮದ ಯಶಸ್ವಿಗೆ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವಿಶೇಷ ಪ್ರಾರ್ಥನೆ

ಜ.9ರಿಂದ 11ರವರೆಗೆ ಕಲೆ ಮತ್ತು ಸಂಸ್ಕೃತಿಯ ಅಂಗವಾಗಿ ಕದ್ರಿ ಪಾರ್ಕ್ ರಸ್ತೆಯಲ್ಲಿ ಶರಧಿ ಪ್ರತಿಷ್ಠಾನದ ಸಹಯೋಗದೊಂದಿಗೆ ಚಿತ್ರ ಶಿಲ್ಪನೃತ್ಯ ಮೇಳ ‘ಕಲಾ ಪರ್ಬ’ ನಡೆಯಲಿದೆ. ಕದ್ರಿ ಪಾರ್ಕ್ (ತೋಟಗಾರಿಕೆ ಇಲಾಖೆ) ವತಿಯಿಂದ ಜ.26ರಂದು ಫಲಪುಷ್ಪಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.

ಜ.17, 18ರಂದು ತಣ್ಣೀರು ಬಾವಿ ಬೀಚ್ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಜ.23ರಿಂದ 25ರವರೆಗೆ ಪ್ರಮುಖ ಬೀಚ್ ಗಳಲ್ಲಿ ಬೀಚ್ ಉತ್ಸವ ನಡೆಯಲಿದೆ. ಜ.30 ಮತ್ತು 31ರಂದು ಕದ್ರಿ ಪಾರ್ಕ್ ರೋಡ್ ಬಳಿ ಫುಡ್ ಸ್ಟ್ರೀಟ್ ನಡೆಯಲಿದೆ. ಜನವರಿ ಕೊನೆಯ ವಾರ ನಗರದ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕ ಮೇಳ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

DAKSHINA KANNADA

ಬಂಟ್ವಾಳ : ವೆಲಂಕಣಿ ಮಾತೆ ದೇವಾಲಯ ಫರ್ಲ: ವಾರ್ಷಿಕ ಮಹೋತ್ಸವ

Published

on

ಬಂಟ್ವಾಳ : ವೆಲಂಕಣಿ ಮಾತೆ ದೇವಾಲಯ ಫರ್ಲ ಇದರ ವಾರ್ಷಿಕ ಮಹೋತ್ಸವ ನಡೆಯಿತು. ದಿವ್ಯ ಬಲಿ ಪೂಜೆಯ ಪ್ರಧಾನ ಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜ, ವ್ಯಕ್ತಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಪ್ರೀತಿ, ತ್ಯಾಗ ಮತ್ತು ಏಕತೆಯೊಂದಿಗೆ ದೇವರ ಅನುಗ್ರಹವು ಬೇಕು. ಇದಕ್ಕಾಗಿ ಪ್ರತಿದಿನ ಮಾತೆ ಮರಿಯಮ್ಮನ ಜಪಮಾಲೆಯನ್ನು ಪಠಿಸುವುದರಿಂದ  ಇದನ್ನು ಗಳಿಸಬಹುದು ಎಂದರು.

ಬಂಟ್ವಾಳ ವಲಯದ ಹಾಗೂ ಪಾಲಟಾಯ್ನ್ ಸಭೆಯ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದರು.

ಇದನ್ನೂ ಓದಿ : ಕಾವ್ಯಾ ನಾಮಿನೇಟ್ ಮಾಡಿದ್ಯಾರನ್ನ ಗೊತ್ತಾ!? ರಣರಂಗವಾಯ್ತು ‘ಬಿಗ್’ ಮನೆ

ಫರ್ಲಾ ಧರ್ಮಕೇಂದ್ರದ ಧರ್ಮಗುರು ವಂದನೀಯ  ಮಾರ್ಕ್ ಅರುಣ್ ಡಿಸೋಜ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಹಾಗೂ ಹಾಗೂ ಗೌರವಾರ್ಥವಾಗಿ ಆಶೀರ್ವದಿಸಿದ ಮೇಣದ ಬತ್ತಿಯನ್ನು ವಿತರಿಸಲಾಯಿತು. ಊರ, ಪರವೂರ  ಅನೇಕ ಭಕ್ತರು ಭಾಗವಹಿಸಿದ್ದರು.

Continue Reading

DAKSHINA KANNADA

ಪುತ್ತೂರು: ನಿಲ್ಲಿಸಿದ ಲಾರಿಯಿಂದ 80 ಗೋಣಿ ಕಾಫಿ ಬೀಜ ಕಳವು; ಐವರು ಆರೋಪಿಗಳ ಅರೆಸ್ಟ್

Published

on

ಪುತ್ತೂರು: ಮೈಸೂರಿನ ಪಿರಿಯಾಪಟ್ಟಣದಿಂದ ಮಂಗಳೂರು ಬಂದರಿಗೆ ಕಾಫಿ ಬೀಜ ಸಾಗಿಸುತ್ತಿದ್ದ ಲಾರಿಯನ್ನು ಪುತ್ತೂರಿನಲ್ಲಿ ನಿಲ್ಲಿಸಿದ ಸಂದರ್ಭದಲ್ಲಿ ಲಾರಿಯಿಂದ 320 ಗೋಣಿ ಕಾಫಿ ಬೀಜಗಳ ಪೈಕಿ 21.44 ಲಕ್ಷ ರೂಪಾಯಿ ಮೌಲ್ಯದ 80 ಗೋಣಿ ಕಾಫಿ ಬೀಜ ಕಳವು ಮಾಡಿದ ಘಟನೆ ನಡೆದಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸಿ ಕಳವು ಮಾಡಿದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಪುತ್ತೂರಿನ ಪೆರ್ನಾಜೆಯ ಆಶ್ಲೇಷ ಭಟ್, ರಿಕ್ಷಾ ಚಾಲಕರಾದ ನಾರಾಯಣ್ ಶೆಟ್ಟಿಗಾರ್, ಮಿಥುನ್ ಕುಮಾ‌ರ್, ಸಹಾಯಕ ಸುಳ್ಯದ ಆಶ್ರಫ್ ಮತ್ತು ವಿಜಯ್ ಶೆಟ್ಟಿ ಬಂಧಿತ ಆರೋಪಿಗಳು.

ಪುತ್ತೂರು ನೆಹರೂನಗರ ಶೇವಿರೆ ನಿವಾಸಿ ತೃತೇಶ್ ಎಂಬವರು ಮಂಗಳೂರು ಪಣಂಬೂರಿನ ಭವಾನಿ ಶಿಪ್ಪಿಂಗ್ ಸರ್ವಿಸ್ ಏಜೆನ್ಸಿಗೆ ಸಂಬಂಧಿಸಿ ಪಿರಿಯಾಪಟ್ಟಣದಿಂದ ಮಂಗಳೂರಿನ ಬಂದರಿಗೆ ಕಾಫಿ ಬೀಜಗಳನ್ನು ಸಾಗಿಸಲು ಬುಕ್ಕಿಂಗ್ ಪಡೆದುಕೊಂಡು ತನ್ನ ಲಾರಿಯಲ್ಲಿ ಪಿರಿಯಾಪಟ್ಟಣದ ಹೈರೇಂಜ್ ಕಾಫಿ ಕ್ಯೂರಿಂಗ್‌ ಹೌಸ್‌ ಕಂಪೆನಿಯಿಂದ ಡಿಸೆಂಬರ್ 3ರಂದು 320 ಗೋಣಿ ಕಾಫಿ ಬೀಜಗಳನ್ನು ಲೋಡ್ ಮಾಡಿಕೊಂಡು ಮಂಗಳೂರಿಗೆ ಹೊರಟಿದ್ದರು.

ದಾರಿ ಮಧ್ಯೆ ರಾತ್ರಿ ನೆಹರೂನಗರ ಬಳಿ ಲಾರಿಯನ್ನು ನಿಲ್ಲಿಸಿ ಮನೆಗೆ ಹೋಗಿದ್ದರು. ಡಿಸೆಂಬರ್ 4 ರಂದು ಬೆಳಗ್ಗೆ ಮಂಗಳೂರು ಬಂದರು ತಲುಪಿದ್ದು, ಕಂಪೆನಿಯವರು ಕ್ವಾಲಿಟಿ ಚೆಕ್‌ ಮಾಡಿದಾಗ ಲಾರಿಯ ಹಿಂಬದಿಯ ಸೀಲ್ ಲಾಕ್ ತುಂಡಾಗಿರುವುದು ಕಂಡುಬಂದಿತ್ತು. ಬಳಿಕ ಕಂಪೆನಿಯ ಮೇಲ್ವಿಚಾರಕರು ಲಾರಿಯ ಹಿಂಬದಿಯ ಬಾಗಿಲು ತೆರೆದು ನೋಡಿದಾಗ ಲಾರಿಯಲ್ಲಿದ್ದ 320 ಗೋಣಿ ಕಾಫಿ ಬೀಜಗಳ ಪೈಕಿ 21.44 ಲಕ್ಷ ರೂಪಾಯಿ ಮೌಲ್ಯದ 80 ಗೋಣಿ ಕಾಫಿ ಬೀಜ ಗಳು ಕಳವಾಗಿರುವುದು ಕಂಡುಬಂದಿತ್ತು.

ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿ ಕ್ಯಾಮರಾ ಆಧರಿಸಿ ಕಳ್ಳರ ಜಾಡು ಹಿಡಿದು ಕಳವಾಗಿದ್ದ ಕಾಫಿ ಬೀಜಗಳನ್ನು ಗೋಣಿಕೊಪ್ಪದಲ್ಲಿ ನಾಸಿರ್ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: ಎಂಡಿಎಂಎ ಮಾರಾಟ : ಮೂವರ ಬಂಧನ, ಓರ್ವ ಪರಾರಿ

ಲಾರಿಯಿಂದ ಕಳವಾದ 80 ಗೋಣಿ ಕಾಫಿ ಬೀಜ ಮತ್ತು ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು, ಎರಡು ಆಟೋ ರಿಕ್ಷಾಗಳನ್ನು ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದಿದ್ದಾರೆ. ಆಶ್ಲೇಷ್ ಭಟ್ ಪ್ರಮುಖ ಆರೋಪಿಯಾಗಿದ್ದು, ಆತ ಆಟೋ ರಿಕ್ಷಾಗಳನ್ನು ಬಾಡಿಗೆಗೆ ಗೊತ್ತುಪಡಿಸಿ ಕಾಫಿ ಬೀಜಗಳನ್ನು ಕಳವು ಮಾಡಿಸಿಕೊಂಡಿದ್ದು ನಾರಾಯಣ್ ಶೆಟ್ಟಿಗಾ‌ರ್ ಮತ್ತು ಮಿಥುನ್ ಕುಮಾ‌ರ್ ಆಟೋ ಚಾಲಕರಾಗಿ ಸಹಕರಿಸಿದ್ದರು. ಜತೆಗೆ ಪಿಕಪ್ ಜೀಪಿನಲ್ಲಿ ಬದಲಿ ಚಾಲಕನಾಗಿ ಕೆಲಸಕ್ಕೆ ಹೋಗುತ್ತಿದ್ದ ಸುಳ್ಯದ ಆಶ್ರಫ್ ಸಹಾಯಕನಾಗಿ ಬಂದಿದ್ದ ಎಂಬುದಾಗಿ ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Continue Reading

DAKSHINA KANNADA

ಪಿಕಪ್ ವಾಹನ ಉರುಳಿ ಪಾದಚಾರಿ ಸಾ*ವು

Published

on

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಉರು*ಳಿ ಪಾದಚಾರಿ ಮೃ*ತಪಟ್ಟು, ಓರ್ವ ಗಾಯಗೊಂಡಿರುವ ಘಟನೆ ಬಂಟ್ವಾಳದ ಅಜ್ಜಿಬೆಟ್ಟು ಗ್ರಾಮದ  ದೇರೊಟ್ಟು ಎಂಬಲ್ಲಿ ನಡೆದಿದೆ.

ಗೋಪಾಲ ಶೆಟ್ಟಿಗಾರ್ (60) ಮೃ*ತಪಟ್ಟ ವ್ಯಕ್ತಿ. ದೇರೊಟ್ಟು ಎಂಬಲ್ಲಿ ಸಾಮಾಗ್ರಿಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಚಡವಿನಲ್ಲಿ ವಾಹನವು ಹಿಂದಕ್ಕೆ ಚಲಿಸಿದಾಗ ವಾಹನವನ್ನು ಬ್ರೇಕ್‌ ಹಾಕಿ ನಿಯಂತ್ರಿಸಲಾಗದೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಪಿಕಪ್‌ ವಾಹನ ಹಿಂದಕ್ಕೆ ಚಲಿಸಿದಾಗ ಹಿಂದಿನಿಂದ ನಡೆದುಕೊಂಡು ಬರುತ್ತಿದ್ದ ಗೋಪಾಲ್‌ ಶೆಟ್ಟಿಗಾರ್‌ ಮೇಲೆ ಮಗುಚಿ ಬಿ*ದ್ದಿದೆ. ವಾಹನದ ಅಡಿಯಲ್ಲಿ ಸಿಲುಕಿಕೊಂಡು ಗಂ*ಭೀರ ಗಾ*ಯಗೊಂಡ ಗೋಪಾಲ ಶೆಟ್ಟಿಗಾರ್‌ರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಮೃ*ತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ : ಕಾವ್ಯಾ ನಾಮಿನೇಟ್ ಮಾಡಿದ್ಯಾರನ್ನ ಗೊತ್ತಾ!? ರಣರಂಗವಾಯ್ತು ‘ಬಿಗ್’ ಮನೆ

ಇನ್ನು ಪಿಕಪ್‌ನಿಂದ ಹಾರಿದ ಸುಂದರ್‌ ನಾಯ್ಕ ಅವರಿಗೂ ಗಂ*ಭೀರ ಗಾ*ಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಂಬಂಧ ಪುಂಜಾಲಕಟ್ಟೆ ಪೊಲೀಸ್  ಠಾಣೆಯಲ್ಲಿ ಅ.ಕ್ರ 81/2025 ಕಲಂ:106(1), 125(a)BNS-202ರಂತೆ ಪ್ರಕರಣದ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page