Connect with us

bengaluru

ಪ್ಯಾಂಟ್‌ನ ಸೊಂಟದ ಪಟ್ಟಿಯಲ್ಲಿ ಅಡಗಿಸಿಟ್ಟು ಚಿನ್ನ ಸಾಗಾಟ-35 ಲಕ್ಷ ಮೌಲ್ಯದ ಚಿನ್ನ ವಶ

Published

on

ಬೆಂಗಳೂರು: ಒಳ ಉಡುಪು, ಪ್ಯಾಂಟಿನ ಸೊಂಟದ ಪಟ್ಟಿಯಲ್ಲಿ ಮರೆಮಾಚಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.


ಆರೋಪಿಯಿಂದ ಸುಮಾರು 35 ಲಕ್ಷ ಮೌಲ್ಯದ 687 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.

ಡಿ. 12ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕನೋರ್ವ ಆತನ ಪ್ಯಾಂಟ್‌ನ ಸೊಂಟದ ಪಟ್ಟಿ, ಒಳಉಡುಪು, ಶೂ ಮತ್ತು ಪ್ಯಾಂಟ್‌ನಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಬಂದು ಸಿಕ್ಕಿಬಿದ್ದಿದ್ದಾನೆ.

ಆರೋಪಿ ಚಿನ್ನಕ್ಕೆ ಇನ್ಸುಲೇಟೆಡ್ ಟೇಪ್ ಸುತ್ತಿ ಮರೆಮಾಚಿದ್ದ ಎಂದು ತಿಳಿದುಬಂದಿದೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

bengaluru

ಪಿಜಿಯಲ್ಲಿ ಸಿಲಿಂಡರ್ ಸ್ಫೋಟ-ಓರ್ವ ಸಾವು, ಮೂವರಿಗೆ ಗಂಭೀರ ಗಾಯ

Published

on

ಬೆಂಗಳೂರು: ಪಿಜಿಯೊಂದರಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಕುಂದಲಹಳ್ಳಿಯಲ್ಲಿ ನಡೆದಿದೆ.

ಸೆವೆನ್ ಹಿಲ್ಸ್ ಕೋ‌ಲಿವಿಂಗ್ ಬಾಯ್ಸ್ ಪಿಜಿಯಲ್ಲಿ ಘಟನೆ ನಡೆದಿದ್ದು, ಬಳ್ಳಾರಿ ಮೂಲದ ಅರವಿಂದ್ ಮೃತ ಯುವಕ. ವೆಂಕಟೇಶ್ (28), ವಿಶಾಲ್ (23), ಗೋಯಲ್ (25) ಎಂಬುವವರು ಗಾಯಗೊಂಡಿದ್ದಾರೆ. ಘಟನಾ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ದೌಡಾಯಿಸಿದ್ದಾರೆ.

ಪ್ರಾಥಮಿಕ ಮೂಲಗಳ ಪ್ರಕಾರ, ಪಿಜಿಯ ಕೆಳಮಹಡಿಯಲ್ಲಿದ್ದ ಅಡುಗೆ ಕೋಣೆಯಲ್ಲಿ ಅನಿಲ ಸೋರಿಕೆಯಾಗಿ ಸಿಲಿಂಡರ್‌ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ.

ಸದ್ಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪಿಜಿಯಲ್ಲಿದ್ದ ಇತರರನ್ನ ಬೇರೆ ಬೇರೆ ಪಿಜಿಗಳಿಗೆ ಶಿಫ್ಟ್ ಮಾಡಿಸಿದ್ದಾರೆ. ಈ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಜಿಬಿಎ ಅಧಿಕಾರಿಗಳು ಹಾಗೂ ಪೋರ್ವ ನಗರಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

Continue Reading

bengaluru

ಟೆಕ್ಕಿಯನ್ನು ಸರಸಕ್ಕೆ ಕರೆದು ಇವರು ಮಾಡಿದ್ದೇನು ಗೊತ್ತಾ..? ಮಹಿಳೆಯರು ಸೇರಿ ಐವರು ಅರೆಸ್ಟ್

Published

on

ಬೆಂಗಳೂರು: ಟೆಕ್ಕಿಯೋರ್ವನನ್ನು ಸರಸಕ್ಕೆ ಕರೆದು ಆತನಲ್ಲಿ ಹಣಕ್ಕೆ ಬೇಡಿಕೆಯಿಟ್ಟು ನಂತರ ಆತನಲ್ಲಿದ್ದ ಹಣವನ್ನು ದೋಚಿ ಹಲ್ಲೆ ಮಾಡಿದ ಆರೋಪದ ಮೇಲೆ ಮಹಿಳೆಯರಿಬ್ಬರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಲತಾ ಅಲಿಯಾಸ್ ಅಂಜಲಿ, ಅನ್ನಪೂರ್ಣೇಶ್ವರಿ ನಗರದ ಹರ್ಷಿಣಿ ಅಲಿಯಾಸ್ ಸ್ವೀಟಿ, ಜಗದೀಶ್, ಲೋಕೇಶ್ ಮತ್ತು ಮಂಜುನಾಥ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

ಇಬ್ಬರು ಮಹಿಳೆಯರು ಸೇರಿಕೊಂಡು ಟೆಕ್ಕಿಯನ್ನು ಸರಸಕ್ಕೆ ಕರೆದಿದ್ದಾರೆ. ಆತ ಸ್ಥಳಕ್ಕೆ ಬರುತ್ತಿದ್ದಂತೆ 40 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಟೆಕ್ಕಿ ಅದಕ್ಕೆ ಒಪ್ಪದಿದ್ದಾಗ ಸಹಚರರನ್ನು ಕರೆದು ಹಲ್ಲೆ ನಡೆಸಿ, ಮೊಬೈಲ್ ಕಸಿದುಕೊಂಡು ಬೆದರಿಕೆ ಹಾಕಿದ್ದಾರೆ.

ಕೂಡಲೇ ಅಲ್ಲಿಂದ ಓಡಿಬಂದ ಟೆಕ್ಕಿ ಸ್ಥಳೀಯರ ಸಹಾಯದಿಂದ 112ಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹೋದ ಹೊಯ್ಸಳ ಪೊಲೀಸರು ಟೆಕ್ಕಿ ಹಾಗೂ ಹಲ್ಲೆ ಮಾಡಿದ್ದ ಇಬ್ಬರು ಮಹಿಳೆಯರು ಸೇರಿ ಐವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ಇವರ ವಂಚನೆ ಬೆಳಕಿಗೆ ಬಂದಿದೆ.

ಡಿ.10ರಂದು ಟೆಲಿಗ್ರಾಂ ಮೂಲಕ ಟೆಕ್ಕಿಗೆ ಓರ್ವ ಹುಡುಗಿಯ ಪರಿಚಯವಾಗಿತ್ತು. ಆ ಹುಡುಗಿ 20,000 ರೂ. ಕೊಡಿ ಎಂದು ಕೇಳಿದ್ದು, ಟೆಕ್ಕಿ ಕೊಡುವುದಾಗಿ ಒಪ್ಪಿಕೊಂಡಿದ್ದರು. ಬಳಿಕ ಟೆಕ್ಕಿ ಮಹಿಳೆ ಮನೆಗೆ ಹೋಗಿದ್ದಾಗ ಬೆದರಿಸಿ, 20 ಸಾವಿರ ರೂ. ಕಸಿದುಕೊಂಡು ಕಳಿಸಿದ್ದರು.

ಬಳಿಕ ಅದೇ ಮಹಿಳೆ ತನ್ನ ಸ್ನೇಹಿತೆ ಸಹಾಯದಿಂದ ಅದೇ ಟೆಕ್ಕಿಯನ್ನು ಕರೆಸಿ ಮತ್ತೆ 20 ಸಾವಿರ ರೂ. ಕಸಿದುಕೊಂಡು ಹಲ್ಲೆ ನಡೆಸಿದ್ದರು. ಈ ಕುರಿತು ಟೆಕ್ಕಿ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಟೆಕ್ಕಿಯ ದೂರಿನ ಆಧಾರದ ಮೇಲೆ ಆರ್ ಆರ್ ನಗರ ಪೊಲೀಸರು ಐವರನ್ನು ಬಂಧಿಸಿದ್ದರು. ಸದ್ಯ ಕೋರ್ಟ್ ಐವರಿಗೆ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ.

 

 

 

 

Continue Reading

bengaluru

ತಲೆ ಮೇಲೆ ಹರಿದ ಟ್ರಕ್‌; ವೃದ್ಧೆ ಮೃತ್ಯು

Published

on

ಬೆಂಗಳೂರು: ಶೇಷಾದ್ರಿಪುರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಓಕಳಿಪುರ ರೈಲ್ವೆ ರಸ್ತೆಯನ್ನು ದಾಟುತ್ತಿದ್ದ ವೇಳೆ ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ(ಡಿ.12)ಸಂಜೆ ನಡೆದಿದೆ.


ಶ್ರೀರಾಂಪುರದ ನಿವಾಸಿ, ಲಲಿತಮ್ಮ (61) ಮೃತರು.

ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದ ಲಲಿತಮ್ಮ ಶುಕ್ರವಾರ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್‌ ಬರುತ್ತಿದ್ದರು. ಆ ವೇಳೆ ವೇಗವಾಗಿ ಬಂದ ಟ್ರಕ್‌ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಅವರು ಕೆಳಗೆ ಬಿದ್ದಾಗ ಅವರ ತಲೆ ಮೇಲೆಯೇ ಟ್ರಕ್‌ನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಇದನ್ನೂ ಓದಿ: ಮಂಗಳೂರು| ಆತ್ಮಹತ್ಯೆ ಮಾಡಿಕೊಂಡ ಯುವಕ

ಟ್ರಕ್‌ನ್ನು ಜಪ್ತಿ ಮಾಡಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page