Connect with us

LATEST NEWS

ಬೈಂದೂರು: ಪೇಂಟ್ ಮಾಡುವ ಯಂತ್ರದಲ್ಲಿ ವಿದ್ಯುತ್ ಪ್ರವಹಿಸಿ ಪೈಂಟರ್ ಮೃ*ತ್ಯು

Published

on

ಬೈಂದೂರು: ಲಾರಿ ಚಾಸಿಸ್ ಪೇಂಟ್ ಮಾಡುವ ವೇಳೆ ವಿದ್ಯುತ್ ಆಘಾ*ತದಿಂದ ಪೈಂಟರೊಬ್ಬರು ಮೃ*ತಪಟ್ಟ ಘಟನೆ ನಾವುಂದ ಎಂಬಲ್ಲಿ ಶುಕ್ರವಾರ ನಡೆದಿದೆ.

ಮೃ*ತರನ್ನು ಗಂಗೊಳ್ಳಿ ನಿವಾಸಿ ಸಂದೀಪ್ (40) ಎಂದು ಗುರುತಿಸಲಾಗಿದೆ. ಇವರು ಟ್ರಾನ್ಸ್ಪೋರ್ಟ್ ಸಂಸ್ಥೆಯೊಂದರ ಲಾರಿಗಳ ಪೇಂಟಿಂಗ್ ಮಾಡಲು ಆಗಮಿಸಿದ್ದು, ಈ ವೇಳೆ ಪೇಂಟಿಂಗ್ ಕಂಪ್ರೆಸರ್ ಯಂತ್ರದಲ್ಲಿ ವಿದ್ಯುತ್ ಹರಿದ ಪರಿಣಾಮ ವಿದ್ಯುತ್ ಶಾ*ಕ್‌ಗೆ ಒಳಗಾದ ಇವರು ತೀವ್ರವಾಗಿ ಅಸ್ವಸ್ಥಗೊಂಡು ಸ್ಥಳದಲ್ಲಿಯೇ ಮೃ*ತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

DAKSHINA KANNADA

ಬರ್ಟ್ರಾಂಡ್ ರಸ್ಸೆಲ್ ಆಂಗ್ಲಮಾಧ್ಯಮ ಶಾಲೆ ಬೈಕಂಪಾಡಿ : ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

Published

on

ಮಂಗಳೂರು : ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾಕಾರಂಜಿ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಬೈಕಂಪಾಡಿಯ ಬರ್ಟ್ರಾಂಡ್ ರಸ್ಸೆಲ್ ಆಂಗ್ಲಮಾಧ್ಯಮ ಶಾಲೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.

ಈ ಸ್ಪರ್ಧೆಯು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ನಡೆಸಿದ ಪ್ರತಿಷ್ಟಿತ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತೀ ಜಿಲ್ಲೆಯಿಂದ ಪ್ರಥಮ ಸ್ಥಾನ ಪಡೆದ ತಂಡಗಳು ತಮ್ಮ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿದವು.

ಇದನ್ನೂ ಓದಿ : ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾದ ‘ಶತಸ್ಮರಣ’

ಬರ್ಟ್ರಾಂಡ್ ರಸ್ಸೆಲ್ ಶಾಲೆಯ ನೃತ್ಯ ತಂಡವು, ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಈ ಗಮನಾರ್ಹ ಸಾಧನೆಯು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು  ನೃತ್ಯ ತಂಡದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರ ಸಮರ್ಪಣೆ, ಕಠಿನ ಪರಿಶ್ರಮ ಮತ್ತು ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಈ ವಿದ್ಯಾರ್ಥಿಗಳ ಅತ್ಯುತ್ತಮ ಪ್ರದರ್ಶನ ಮತ್ತು ಅಛಲ ಬದ್ದತೆಗಾಗಿ ಶಾಲಾ ಆಡಳಿತ ಮಂಡಳಿ, ಶಿಕ್ಷಕವೃಂದ ಹಾಗೂ ಪೋಷಕರು ಅಭಿನಂದಿಸಿದ್ದಾರೆ.

 

Continue Reading

DAKSHINA KANNADA

ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾದ ‘ಶತಸ್ಮರಣ’

Published

on

ಮಂಗಳೂರು : ಕಾಶೀಮಠದ 20ನೇ ಯತಿಗಳಾ ಶ್ರೀಮದ್ ಸುದೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಇತ್ತೀಚೆಗೆ ಮಂಗಳೂರು ರಥಬೀದಿಯಲ್ಲಿ ನಡೆದಿತ್ತು.

ಈ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಸುದೀಂದ್ರ ತೀರ್ಥ ಶತನಮ – ಶತಸ್ಮರಣೆ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಜನವರಿ 26 ರಂದು ನಡೆದಿದ್ದ ಈ ಕಾರ್ಯಕ್ರಮ ಲಂಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಕಾಪು ಶ್ರೀ ಹೊಸ ಮಾರಿಗುಡಿ ಕ್ಷೇತ್ರ; ಸಂಭ್ರಮದಿಂದ ನಡೆದ ಮೆರವಣಿಗೆ

ರಥಬೀದಿಯಲ್ಲಿ ನಿರ್ಮಿಸಿದ್ದ ಭವ್ಯವೇದಿಕೆಯಲ್ಲಿ ಖ್ಯಾತ ಗಾಯಕರುಗಳಿಂದ ಏಕಕಂಠದಲ್ಲಿ ಹತ್ತು ಭಜನಾ ಹಾಡುಗಳನ್ನು ಹಾಡಲಾಗಿತತು. ನೂರಾರು ಜನ ಗಾಯಕ ಗಾಯಕಿಯರು ಭಾಗವಹಸಿದ್ದ ಈ ಕಾರ್ಯಕ್ರಮವನ್ನು ಯೂತ್ ಆಫ್ ಜಿಎಸ್ ಬಿ ವಹಿಸಿಕೊಂಡಿತ್ತು.

ಪ್ರತಿಯೊಂದು ಭಜನೆಯನ್ನು ಅದರ ಸಾಹಿತ್ಯ, ಸಂಗೀತ, ಹಿನ್ನಲೆ, ಮಹತ್ವ ಮತ್ತೂ ಸೂಕ್ಷ್ಮಾರ್ಥವನ್ನು ವಿವರಿಸುವ ಮೂಲಕ ಜನರಿಗೆ ಪರಿಚಯಿಸಲಾಗಿತ್ತು. ಇದೀಗ ಈ ಯಶಸ್ವಿ ಕಾರ್ಯಕ್ರಮ ಲಂಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗುವ ಮೂಲಕ ಗಮನ ಸೆಳೆದಿದೆ.

Continue Reading

LATEST NEWS

ಅಕ್ರಮ ಎಮ್ಮೆ ಸಾಗಾಟದ ಟೆಂಪೋ ಪಲ್ಟಿ ಪ್ರಕರಣ: ಆರೋಪಿಗಳಿಬ್ಬರಿಗೆ ಗಾಯ, ಓರ್ವ ಪರಾರಿ

Published

on

ಉಡುಪಿ: ಎಮ್ಮೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟೆಂಪೊವೊಂದು ಮಗುಚಿ ಬಿದ್ದ ಪರಿಣಾಮ ಎರಡು ಎಮ್ಮೆಗಳು ಗಾಯಗೊಡಿದ್ದು, ಇದೀಗ ಗಾಯಗೊಂಡಿರುವ ಆರೋಪಿಗಳಿಬ್ಬರನ್ನು ಅಂಬಾಗಿಲು ಜಂಕ್ಷನ್ ಬಳಿ ಫೆ.9 ರ ಬೆಳಗಿನ ಜಾವ ನಡೆದಿತ್ತು.

ಗಾಯಗೊಂಡ ಆರೋಪಿಗಳನ್ನು ಶೀತಲ್ ಗಣಪತಿ ಬಾಗಣ್ಣರ ಹಾಗೂ ಯಮನಪ್ಪ ರಮೇಶ್ ಅರ್ಜುನ ವಾಡ ಎಂದು ಗುರುತಿಸಲಾಗಿದೆ. ಪರಶು ಎಂಬ ಮತ್ತೋರ್ವ ಆರೋಪಿ ಓಡಿ ಪರಾರಿಯಾಗಿದ್ದಾನೆ. ಟೆಂಪೋದಲ್ಲಿದ್ಞ ಎರಡು ಎಮ್ಮೆಗಳು ತೀವ್ರ ಗಾಯಗೊಂಡಿವೆ.

ಇದನ್ನೂ ಓದಿ : ಉಡುಪಿ: ಅಕ್ರಮ ಕೋಣ ಸಾಗಾಟ ಮಾಡುತ್ತಿದ್ದ ವಾಹನ ಅಪಘಾತ

ಅಕ್ರಮವಾಗಿ ಎಮ್ಮೆಗಳನ್ನು ಸಂಕೇಶ್ವರದಿಂದ ಮಂಗಳೂರಿಗೆ ಸಾಗಿಸುತ್ತಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಟೆಂಪೊ ರಸ್ತೆಯಲ್ಲಿ ಮಗುಚಿ ಬಿದ್ದಿದೆ. ಗಾಯಾಳು ಆರೋಪಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page