Connect with us

LATEST NEWS

ಕೇರಳದಲ್ಲಿ ಮತ್ತೆ ಕೋವಿಡ್ ಹೆಚ್ಚಳ-ಮಾಸ್ಕ್ ಕಡ್ಡಾಯ ಮಾಡಿದ ಸರ್ಕಾರ

Published

on

ಕಾಸರಗೋಡು: ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.


ಉದ್ಯೋಗ ನಿರ್ವಹಿಸುವ ಸ್ಥಳಗಳನ್ನೂ ಸೇರಿಸಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ವಾಹನ ಚಲಾಯಿಸುವ ವೇಳೆ ಕೂಡಾ ಮಾಸ್ಕ್ ಧರಿಸಲೇಬೇಕೆಂಬ ನಿಯಮವನ್ನು ಆದೇಶದಲ್ಲಿ ತಿಳಿಸಲಾಗಿದೆ.

ನಿನ್ನೆ ಕೇರಳದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿತ್ತು. ಕಾಸರಗೋಡಿನಲ್ಲಿ 31 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು.

ಇನ್ನು ಮಾಸ್ಕ್ ಧರಿಸುವಿಕೆ ಕುರಿತಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದ್ದು ಮಾಸ್ಕ್‌ ಧರಿಸುವ ಆದೇಶ ಉಲ್ಲಂಘಿಸಿದಲ್ಲಿ ದಂಡ ಹಾಗೂ ಕೇಸು ದಾಖಲಿಸುವಂತೆ ಸೂಚಿಸಲಾಗಿದೆ.

LATEST NEWS

ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ

Published

on

ಬೆಂಗಳೂರು: ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿನ ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಉಂಟಾಗಿದೆ. ಇದರಿಂದಾಗಿ ಪ್ಲಾಸ್ಟಿಕ್ ಕಾರ್ಖಾನೆ ಹೊತ್ತಿ ಉರಿಯುತ್ತಿದೆ.

ಸ್ಥಳಕ್ಕೆ ಆಗಮಿಸಿರುವಂತ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿಯ ಹೊಗೆ ಸುತ್ತಮುತ್ತಲ ವ್ಯಾಪ್ತಿಗೆ ಆವರಿಸಿದ್ದು, ಜನರು ಭಯಭೀತರಾಗಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Continue Reading

LATEST NEWS

ಮಾರಣಾಂತಿಕ ಕಾಯಿಲೆಯ ಭೀತಿ; 10 ದಿನಗಳಲ್ಲಿ 25ಕ್ಕೂ ಹೆಚ್ಚು ಹಸುಗಳು ಸಾವು

Published

on

ರಾಮನಗರ: ದಿನದಿಂದ ದಿನಕ್ಕೆ ಒಂದೊಂದು ರೀತಿಯ ಮಾರಣಾಂತಿಕ ಕಾಯಿಲೆಗಳು ಬರುತ್ತಲೇ ಇವೆ. ಇದೀಗ ಹಸುಗಳಲ್ಲಿ ಮಾರಣಾಂತಿಕ ಕಾಯಿಲೆ ಕಾಡಿದೆ. ಕೇವಲ 10 ದಿನಗಳಲ್ಲಿ 25ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ರಾಮನಗರದ ಪುಣ್ಯಕೋಟಿ ಗೋಶಾಲೆಯಲ್ಲಿ ಕೇವಲ 10ದಿನಗಳಲ್ಲಿ‌ 25ಕ್ಕೂ ಹೆಚ್ಚು ಹಸುಗಳ ಸಾವನ್ನಪ್ಪಿದ್ದು. ತೀವ್ರ ಹೊಟ್ಟೆ ನೋವಿನಿಂದ ಬಳಲಿ ಕೇವಲ ಒಂದು ದಿನದಲ್ಲೇ ಜಾನುವಾರುಗಳು ಸಾವೀಗೀಡಾಗಿವೆ. ಜಾನುವಾರುಗಳ ಶವ ಪರೀಕ್ಷೆಯಲ್ಲಿ ಹೆಮಾರಾಜಿಕ್ ಬೋವೆಲ್ ಖಾಯಿಲೆಯ ಶಂಕೆ ವ್ಯಕ್ತಪಡಿಸಿದ್ದು. ತೀವ್ರ ಕರುಳಿನ ರಕ್ತಸ್ರಾವವಾಗಿ ಹಸುಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.

ಹಸುಗಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡ 24 ಗಂಟೆಗಳಲ್ಲಿ ಜಾನುವಾರುಗಳು ಸಾವನ್ನಪ್ಪುತ್ತಿದ್ದು. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕೆಂದು ಗೋಪಾಲಕರು ಮನವಿ ಮಾಡಿದ್ದಾರೆ. ಜೊತೆಗೆ ಹಸುಗಳ ಸಾವಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದು. ಸದ್ಯ ಸಾವನ್ನಪ್ಪಿದ ಹಸುಗಳ ಸ್ಯಾಂಪಲ್ಸ್ ಪ್ರಯೋಗಾಲಯಕ್ಕೆ ರವಾನಿಸಿದ್ದು. ವರದಿ ಬಂದ ಬಳಿಕ ತಜ್ಙರಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಪಶು ಸಂಗೋಪನೆ. ಇಲಾಖೆ ಉಪನಿರ್ದೇಶಕ ಮಾಹಿತಿ ನೀಡಿದ್ದಾರೆ.

Continue Reading

LATEST NEWS

ರಿಷಭ್ ಪಂತ್ ಜೀ*ವ ಉಳಿಸಿದ್ದಾತನಿಂದ ಆತ್ಮಹ*ತ್ಯೆಗೆ ಯ*ತ್ನ!

Published

on

ಮಂಗಳೂರು/ಮುಜಫರ್ನಗರ : 2022 ರಲ್ಲಿ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಅವರ ಕಾರು ಅಪ*ಘಾತಗೊಂಡಾಗ ಅವರ ಜೀ*ವ ಉಳಿಸಿದ್ದ ಯುವಕ ಆತ್ಮಹ*ತ್ಯೆಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ.

25 ವರ್ಷದ ರಜತ್ ಕುಮಾರ್ ಆತ್ಮಹ*ತ್ಯೆಗೆ ಯತ್ನಿಸಿದ ಯುವಕ. ಈತ  ಫೆಬ್ರವರಿ 9 ರಂದು ಉತ್ತರ ಪ್ರದೇಶದ ಮುಜಾಫರ್‌ ನಗರ ಜಿಲ್ಲೆಯ ಬುಚ್ಚಾ ಬಸ್ತಿ ಎಂಬ ಹಳ್ಳಿಯಲ್ಲಿ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ್ದ ಎಂದು ತಿಳಿದು ಬಂದಿದೆ.

ರಜತ್ ಕುಮಾರ್ ಮತ್ತು ಆತನ  21 ವರ್ಷದ ಗೆಳತಿ ಮನು ಕಶ್ಯಪ್ ಅವರ ಪ್ರೇಮ ಸಂಬಂಧಕ್ಕೆ ಅವರ ಕುಟುಂಬಗಳು ವಿರೋಧಿಸಿದ್ದರು ಎನ್ನಲಾಗಿದೆ. ಹೀಗಾಗಿ ಇಬ್ಬರೂ ವಿಷ ಸೇವಿಸಿದ್ದಾರೆ. ಮನು ಕಶ್ಯಪ್ ಚಿಕಿತ್ಸೆ ಫಲಿಸದೆ ಸಾ*ವನ್ನಪ್ಪಿದರೆ, ರಜತ್ ಕುಮಾರ್ ಸ್ಥಿತಿ ಗಂ*ಭೀರವಾಗಿದ್ದು, ಜೀವನ್ಮ*ರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಬ್ರೆಜಿಲ್‌ನಲ್ಲಿ ವಿಶ್ವ ದಾಖಲೆ ಬರೆದ ಆಂಧ್ರದ ಓಂಗೋಲ್ ತಳಿಯ ಹಸು!

2022ರ ಜನವರಿ 1ರಂದು ಕ್ರಿಕೆಟಿಗ ರಿಷಭ್ ಪಂತ್ ಅವರ ಕಾರು ಅಪ*ಘಾತವಾಗಿತ್ತು. ಈ ಭೀ*ಕರ ಅಪಘಾ*ತದಲ್ಲಿ ರಿಷಭ್ ಪಂತ್ ಬದುಕಿ ಉಳಿದಿದ್ದು ಪವಾಡ. ಅಪಘಾ*ತದ ವೇಳೆ ರಜತ್ ಕುಮಾರ್  ಅವರು ಮತ್ತೊಬ್ಬ ಸ್ಥಳೀಯ ನಿವಾಸಿ ನಿಶು ಕುಮಾರ್ ಅವರೊಂದಿಗೆ ರಿಷಭ್ ಪಂತ್ ಅವರನ್ನು ರಕ್ಷಿಸುವ ಮೂಲಕ ಗಮನ ಸೆಳೆದಿದ್ದ.

Continue Reading
Advertisement

Trending

Copyright © 2025 Namma Kudla News

You cannot copy content of this page