Connect with us

MANGALORE

ಇನ್ನೂ ಉಳಿದಿರುವರಿಗೆ ಲಸಿಕೆ ಹಾಕಿಸುವುದು ಸವಾಲಿನ ಕೆಲಸ: ಡಾ.ಕೆ.ವಿ.ರಾಜೇಂದ್ರ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಲಾದ ಕೋವಿಡ್ 19 ಲಸಿಕಾ ಅಭಿಯಾನನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರರವರು ಉದ್ಘಾಟಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಶೇ.80ರಷ್ಟು ಮಂದಿಗೆ ಲಸಿಕೆ ಹಾಕಿಸಲಾಗಿದೆ. ಆದರೆ ಬಾಕಿ ಉಳಿದವರಿಗೆ ಲಸಿಕೆ ಹಾಕಿಸುವುದು ತುಂಬಾ ಸವಾಲಿನ ಕೆಲಸ ಆಗಲಿದೆ.

ಅದಕ್ಕಾಗಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು ಇಂದಿನ ಲಸಿಕಾ ಅಭಿಯಾನವನ್ನು ಮಾಡುತ್ತಿದ್ದೇವೆ. ಕಳೆದ ವಾರ ಲಕ್ಷ ಮಂದಿಗೆ ಲಸಿಕೆ ಹಾಕಿಸುವ ಗುರಿ ಇಟ್ಟುಕೊಂಡು ಅಭಿಯಾನ ನಡೆಸಿದ್ದೆವು.

ಆದರೆ ಪೂರ್ವ ಸಿದ್ಧತೆಗಳಿಲ್ಲದ ಕಾರಣಕ್ಕೆ ನಿರೀಕ್ಷಿತ ಪ್ರಗತಿ ಕಾಣಲು ಸಾಧ್ಯವಾಗಿರಲಿಲ್ಲ. ಈ ಬಾರಿಯ ಅಭಿಯಾನದಲ್ಲಿ 1.50 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಇಟ್ಟು ಅಭಿಯಾನ ನಡೆಸುತ್ತಿದ್ದೇವೆ.

ಆದರೆ ಈ ಬಾರಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು ಸುಮಾರು 600ಕ್ಕೂ ಹೆಚ್ಚು ಕೇಂದ್ರಗಳನ್ನು ನಿಗದಿಪಡಿಸಿ ಬೆಳಗ್ಗೆ 11.30 ರ ವರೆಗೆ 13000 ಜನರಿಗೆ ಲಸಿಕೆ ಹಾಕಲಾಯಿತು ಎಂದು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಕೆಐಒಸಿಎಲ್ ಸಿಎಂಡಿ ಟಿ ಸಾಮಿನಾಥನ್, ಮಹಾ ಪ್ರಭಂದಕ ರಾಮಕೃಷ್ಣ ರಾವ್, ಹಿರಿಯ ಅಧಿಕಾರಿಗಳಾದ ಮುರಳೀಧರ, ಮುರುಗೇಶ್, ಮುಂತಾದವರು ಉಪಸ್ಥಿತರಿದ್ದರು .

BELTHANGADY

ಮಂಗಳೂರು: 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Published

on

ಮಂಗಳೂರು: ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ಚಿತ್ರಶೇಖರ ಎಂಬವರಿಗೆ 2013 ರಲ್ಲಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಬೆಳ್ತಂಗಡಿಯ ಪಾರೆಂಕಿ ಗ್ರಾಮದ 53 ವರ್ಷ ಪ್ರಾಯದ ಆಲ್ವಿನ್ ರೊಡ್ರಿಗಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.


ಚಿತ್ರಶೇಖರ ಎಂಬವರಿಗೆ ಹಲ್ಲೆ ನಡೆಸಿದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ನಮ್ಮ ಕುಟುಂಬದ ಮಕ್ಕಳನ್ನ ನಾವೇ ಸರಿಯಾಗಿ ಗಮನಿಸಬೇಕು: ಲವ್ ಜಿಹಾದ್ ಕುರಿತು ಶಾಸಕ ಯತ್ನಾಳ್ ಹೇಳಿಕೆ

ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 13 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಆಲ್ವಿನ್ ರೊಡ್ರಿಗಸ್‌ನನ್ನು ಬೆಂಗಳೂರು ನಗರ ವ್ಯಾಪ್ತಿಯ ಸಂಪಿಗೆ ರಾಮನಗರ ಎಂಬಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Continue Reading

DAKSHINA KANNADA

ಮಗಳು ಮುಸ್ಲಿಂ ಯುವಕನನ್ನು ಬಿಟ್ಟು ಬರ್ತಿಲ್ಲ, ನ್ಯಾಯಕ್ಕಾಗಿ ಕೋರ್ಟ್ ಗೆ ಹೋಗಲೂ ಸಿದ್ಧ-ಕಣ್ಣೀರಿಟ್ಟ ವೈಶಾಲಿ ಪೋಷಕರು

Published

on

ಮಂಗಳೂರು: ನಮಗೆ ನ್ಯಾಯ ಬೇಕು. ಕೇರಳ ಪೊಲೀಸರಿಂದ ನಮಗೆ ನ್ಯಾಯ ಸಿಗುವುದಿಲ್ಲ. ನಮ್ಮ ಮಗಳನ್ನು ಹುಡುಕಿಕೊಂಡು ಕೇರಳದ ವಯನಾಡಿಗೆ ಹೋದೆವು. ಆದರೆ ನಮ್ಮ ಜೊತೆಗೆ ಬರುತ್ತೇನೆ ಎಂದು ಲಿಖಿತವಾಗಿ ಬರೆದುಕೊಟ್ಟ ನಮ್ಮ ಮಗಳು ವೈಶಾಲಿ ಬಳಿಕ ವಯನಾಡು ಪೊಲೀಸರು ಮತ್ತು ಹುಡುಗನ ಕಡೆಯವರ ಮಾತುಗಳನ್ನು ಕೇಳಿ ಮನೆಗೆ ಬರಲು ನಿರಾಕರಿಸುತ್ತಿದ್ದಾಳೆ. ಇದರಲ್ಲಿ ಎಸ್‌ಡಿಪಿಐ ಅವರ ಕೈವಾಡ ಹಾಗು ಲವ್ ಜಿಹಾದ್  ಇಲ್ಲಿ ನಡೆದಿದೆ ಎಂದು ಅನ್ಯಕೋಮಿನ ಯುವಕನೊಂದಿಗೆ ಪರಾರಿ ಆಗಿರುವ ಯುವತಿ ವೈಶಾಲಿ ಹೆತ್ತವರು ಕಣ್ಣೀರಿಟ್ಟಿದ್ದಾರೆ.

ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ, ವೈಶಾಲಿ ತಂದೆ ವಿಶ್ವನಾಥ್‌ ಹಾಗೂ ತಾಯಿ ಲತಾ ಅವರು ಮಾತನಾಡಿ, ನಮ್ಮ ಜೊತೆಗೆ ಚೆನ್ನಾಗಿ ಮಾತನಾಡಿದ್ದ ಮಗಳು ಬಳಿಕ ಮನೆಗೆ ಬರಲು ನಿರಾಕರಿಸಿದ್ದಾಳೆ.

ನಮ್ಮ ಜೊತೆಗೆ ಬಾ ಅವನನ್ನು ಮದುವೆಯಾಗುವುದು ಬೇಡ ಎಂದಾಗ ಬರುತ್ತೇನೆ ಎಂದು ಹೇಳಿದವಳು ಮತ್ತೆ ಅವರ ಜೊತೆಗೆ ಮಾತನಾಡಿದ ಅವಳು ಬರುವುದಿಲ್ಲ ಎಂದು ಹೇಳಿದಳು ಎಂದರು. ಕೇರಳ ಪೊಲೀಸರು ನಮ್ಮ ಯಾವ ಮಾತನ್ನೂ ಕೇಳದೇ ಯುವಕನ ಕಡೆಯವರ ಮಾತನ್ನು ಕೇಳಿಕೊಂಡು ಆಕೆಯನ್ನು ಅವರ ಜೊತೆಗೆ ಕಳುಹಿಸಿಕೊಟ್ಟಿದ್ದಾಳೆ. ನಮಗೆ ನ್ಯಾಯ ಮರೀಚಿಕೆ ಆಗಿದೆ. ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಲೇರುತ್ತೇವೆ ಎಂದು ನೊಂದು ನುಡಿದರು.

Continue Reading

DAKSHINA KANNADA

ಲವ್ ಜಿಹಾದ್ ಗೆ ಮೂಲ ತಾಣ ಕೇರಳ, ಹಿಂದೂ ಹೆಣ್ಮಕ್ಕಳೇ ಜಿಹಾದಿಗಳ ಟಾರ್ಗೆಟ್-ನರಸಿಂಹ ಮಾಣಿ ಆಕ್ರೋಶ

Published

on

ಮಂಗಳೂರು: ಹದಿಹರೆಯದ ಹಿಂದು ಹೆಣ್ಮಕ್ಕಳನ್ನು ಮೋಸದ ಬಲೆಗೆ ಕೆಡವಿ, ಪ್ರೀತಿ ಪ್ರೇಮದ ಹೆಸರಿನಲ್ಲಿ ಅವರನ್ನು ತಮಗೆ ಬೇಕಾದಂತೆ ಬಳಸಿ, ಮತಾಂತರ ಮಾಡಿ ಅವರ ಜೀವನದಲ್ಲಿ ಆಟವಾಡುವ ಕೆಲಸವನ್ನು ಜಿಹಾದಿ ಶಕ್ತಿಗಳು ನಡೆಸುತ್ತಿದ್ದು, ಇದೀಗ ವೈಶಾಲಿ ಎಂಬ ಹೆಣ್ಮಗು ಬಲಿಯಾಗಿರುವುದು ವಿಷಾದಕರ ಸಂಗತಿ ಎಂದು ಹಿಂದು ಜಾಗರಣ ವೇದಿಕೆ ಮಂಗಳೂರು ಘಟಕ ಆಕ್ರೋಶ ವ್ಯಕ್ತಪಡಿಸಿದೆ.

ಸುರತ್ಕಲ್‌ನ ಪಿಜಿಯಲ್ಲಿದ್ದ ವೈಶಾಲಿ ಎಂಬ ವಿದ್ಯಾರ್ಥಿನಿಯನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಬಲೆಗೆ ಕೆಡವಿ ಅನ್ಯಕೋಮಿನ ಯುವಕ ಮದುವೆ ಆಗಿರುವ ವಿಚಾರದ ಕುರಿತಂತೆ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಮುಖಂಡ ನರಸಿಂಹ ಮಾಣಿ , ಹಿಂದೂ ಸಮಾಜದಲ್ಲಿರುವ ಹೆಣ್ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ಮತಾಂತರ ಮಾಡಲಾಗುತ್ತಿದೆ. ಮತಾಂತರಕ್ಕೆ, ಲವ್ ಜಿಹಾದ್‌ಗೆ ಮೂಲ ತಾಣವೇ ಕೇರಳವಾಗಿದೆ.

ಈ ಕೃತ್ಯದಲ್ಲಿ ಎಸ್‌ಡಿಪಿಐ ನೇರ ಶಾಮೀಲಾಗಿದೆ ಎಂದರು. ಯುವತಿಯನ್ನು ಮದುವೆಯಾಗಿರುವ ಅನ್ಯಕೋಮಿನ ಯುವಕ ಮೊಹಮ್ಮದ್ ಮಿದ್ಲಾಕ್‌ ಸುರತ್ಕಲ್‌ನ ಎಸ್‌ಡಿಪಿಐ ನಾಯಕನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಆತನ ಕುಮ್ಮಕ್ಕಿನಿಂದ ಈ ಕೃತ್ಯ ಎಸಗಿದ್ದಾನೆ. ಅಲ್ಲದೆ ಕೇರಳದ ವಯನಾಡಿನ ಠಾಣೆಯಲ್ಲಿ ಪೋಷಕರ ಜೊತೆಗೆ ಮಾತುಕತೆ ನಡೆಸಿದ ಸಂದರ್ಭದಲ್ಲೂ ಹುಡುಗಿಗೆ ಬೆದರಿಕೆ ಹಾಕಿ ಆಕೆಯನ್ನು ಕಳುಹಿಸಿಕೊಟ್ಟಿಲ್ಲ ಎಂದು ದೂರಿದರು.

ಸುರತ್ಕಲ್ ಪರಿಸರದಲ್ಲಿ ಡ್ರಗ್‌ ಮಾಫಿಯಾ ಮಿತಿ ಮೀರುತ್ತಿದ್ದು ಇದಕ್ಕೂ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಮತಾಂತರ, ಗೋಕಳ್ಳತನ, ಲವ್‌ ಜಿಹಾದ್‌, ಡ್ರಗ್‌ ತಡೆಗೆ ಸೂಕ್ತ ಕಾನೂನು ಸರಕಾರ ಜಾರಿಗೆ ತರಬೇಕು. ಜೊತೆಗೆ ಸರಕಾರ ಗಂಭೀರವಾಗಿ ಈ ವಿಚಾರವನ್ನು ಪರಿಗಣಿಸಿ, ನಗರ ಪೊಲೀಸರು ಮಧ್ಯೆ ಪ್ರವೇಶಿಸಿ ಯುವತಿ ಪೋಷಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಮಿತ್‌ ಗುಂಡಳಿಕೆ, ವೈಶಾಲಿ ಪೋ಼ಷಕರು ಉಪಸ್ಥಿತರಿದ್ದರು.

 

Continue Reading
Advertisement

Trending

Copyright © 2025 Namma Kudla News

You cannot copy content of this page