Connect with us

ಭಾರತದಲ್ಲಿ ಕೊರೊನಾ ರಣಕೇಕೆ: ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ ಐದು ಸಾವಿರದ ಗಡಿಯತ್ತ.!!

Published

on

ಭಾರತದಲ್ಲಿ ಕೊರೊನಾ ರಣಕೇಕೆ: ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ ಐದು ಸಾವಿರದ ಗಡಿಯತ್ತ.!!

ನವದೆಹಲಿ: ಭಾರತದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ ಐದು ಸಾವಿರದ ಗಡಿ ದಾಟಿದೆ.

ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 90,813 ಗಡಿ ದಾಟಿದೆ.

ಇನ್ನು ಶನಿವಾರ ಒಂದೇ ದಿನ ದೇಶದಲ್ಲಿ 120 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಕೂಡ 2,875ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ನಿನ್ನೆ ಒಂದೇ ದಿನ ದಿನ 5 ಸಾವಿರಕ್ಕೂ ಮಿಕ್ಕಿದ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 90,927ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ನಿರಂತರವಾಗಿ ವ್ಯಾಪಿಸುತ್ತಲೇ ಇದ್ದು, ಸೋಂಕಿತರ ಪ್ರಕರಣಗಳ ಸಂಖ್ಯೆ 30, 706 ಸಾವಿರ ದಾಟಿದೆ.

ಶನಿವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 1,606 ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ 1135 ಮಂದಿ ಸಾವಿಗೀಡಾಗಿದ್ದಾರೆ.

ಇದೇ ವೇಳೆ ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಬಳಿಕ ಗುಜರಾತಿನಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಡಿದೆ.

ಶನಿವಾರ 709 ಪ್ರಕರಣಗಳು ದಾಖಲಾಗಿವೆ. ಇನ್ನು ಕರ್ನಾಟಕ 15ನೇ ಸ್ಥಾನದಲ್ಲಿದೆ.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ನಾಳೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಧರ್ಮ ಚಾವಡಿ ತುಳು ಸಿನಿಮಾ

Published

on

ಮಂಗಳೂರು:  ಕೃಷ್ಣವಾಣಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಜಗದೀಶ್ ಅಮೀನ್ ನಿರ್ಮಾಣದ ಧರ್ಮ ಚಾವಡಿ ತುಳು ಸಿನಿಮಾ ಕಳೆದ ವರ್ಷ ಕರಾವಳಿಯಾದ್ಯಂತ ಬಿಡುಗಡೆಗೊಂಡು ಜನಮನ್ನಣೆ ಪಡೆದು ಯಶಸ್ವಿ ಚಿತ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ. ಇದೀಗ ಈ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಿ ಜಗತ್ತಿನಾದ್ಯಂತ ಇರುವ ತುಳು ಸಿನಿಮಾ ಪ್ರೇಕ್ಷಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲು ಚಿತ್ರ ತಂಡ ನಿರ್ಧರಿಸಿದೆ.

ಚಿತ್ರದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಅವರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ನಾಳೆ  ಅಂದರೆ ಮಾರ್ಚ್ 6 ರಂದು ಧರ್ಮ ಚಾವಡಿ ಸಿನಿಮಾ ಟಾಕೀಸ್ ಆ್ಯಪ್ ಒಟಿಟಿ ಮೂಲಕ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಮುಂಬಯಿಯಲ್ಲಿ ಧರ್ಮ ಚಾವಡಿ ಚಿತ್ರದ ಯಶಸ್ವೀ 14 ಶೋ ನೀಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ನೆರೆಯ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಮತ್ತು ಕಾಸರಗೋಡಿನಲ್ಲಿಯೂ ಚಿತ್ರ ಯಶಸ್ವೀ  ಪ್ರದರ್ಶನ ಕಂಡಿದೆ.

ಮುಂದಿನ ದಿನಗಳಲ್ಲಿ ಈ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡಿ ಕರ್ನಾಟಕದ ಇತರ ಭಾಗಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ವಿವರಿಸಿದರು. ಸುದ್ದಿಗೋಷ್ಟಿಯಲ್ಲಿ ನಟ ರಮೇಶ್ ರೈ ಕುಕ್ಕುವಳ್ಳಿ, ನಟಿ ನೇಹಾ ಕೋಟ್ಯಾನ್, ಟಾಕೀಸ್ ಆ್ಯಪ್ ಒಟಿಟಿ ಇದರ ಅಡ್ಮಿನ್ ಎಕ್ಸಿಕ್ಯೂಟಿವ್ ಚಿದಾನಂದ್ ಪೈ ಮತ್ತು ಇತರರು ಉಪಸ್ಥಿತರಿದ್ದರು.

Continue Reading

DAKSHINA KANNADA

ಸ್ಟೇಟ್ ಬ್ಯಾಂಕ್ ಮೀನು ಮಾರ್ಕೆಟ್ ಅವ್ಯವಸ್ಥೆ-ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ

Published

on

ಮಂಗಳೂರು: ನಗರದ ಕೇಂದ್ರ ಭಾಗವಾದ ಸ್ಟೇಟ್ ಬ್ಯಾಂಕ್ ಪರಿಸರದ ಮೀನು ಮಾರುಕಟ್ಟೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಇಂದು ಮಧ್ಯಾಹ್ನ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಹಸಿ ಹಾಗೂ ಒಣಮೀನು ಮಾರುಕಟ್ಟೆಯ ಪ್ರತಿ ಮೂಲೆಗೂ ಭೇಟಿ ನೀಡಿದ ಅವರು, ಅಲ್ಲಿನ ಅವ್ಯವಸ್ಥೆಗಳನ್ನು ಕಣ್ಣಾರೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ದಶಕಗಳಿಂದ ಮೀನು ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿರುವ ನೂರಾರು ಮಹಿಳೆಯರು ತಮ್ಮ ಸಮಸ್ಯೆಗಳನ್ನು  ಅವರ  ಮುಂದೆ ಹಂಚಿಕೊಂಡರು.

ಪರಿಶೀಲನೆಯ ಬಳಿಕ ಮಾತನಾಡಿದ ಡಾ. ನಾಗಲಕ್ಷ್ಮಿ ಚೌಧರಿ , ಮಾರುಕಟ್ಟೆಯಲ್ಲಿ ಸಮರ್ಪಕ ನೈರ್ಮಲ್ಯದ ಕೊರತೆಯಿಂದ ದುರ್ವಾಸನೆ ವ್ಯಾಪಿಸಿದ್ದು, ದಿನವಿಡೀ ಕೆಲಸ ಮಾಡುವ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದರು. ಮಾರುಕಟ್ಟೆ ಸ್ವಚ್ಛತೆಗೆ ಅಗತ್ಯವಾದ ನೀರಿನ ಸೌಲಭ್ಯವಿಲ್ಲದೆ ಇರುವುದೂ ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ವ್ಯಾಪಾರಕ್ಕೆ ತಕ್ಕಷ್ಟು ಸ್ಥಳಾವಕಾಶದ ಕೊರತೆ ಹಾಗೂ ಭದ್ರತಾ ವ್ಯವಸ್ಥೆಯ ಅಭಾವದಿಂದ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಮಹಿಳೆಯರು ದೂರಿದರು. ಈ ಎಲ್ಲ ವಿಚಾರಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಿದ್ದೇನೆ. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ನೂತನ ಮಾರುಕಟ್ಟೆಯಲ್ಲಿ ಅಗತ್ಯವಿರುವ ವೈಜ್ಞಾನಿಕ ಬದಲಾವಣೆಗಳನ್ನು ಮಾಡಿಸುವಂತೆ ಒತ್ತಾಯಿಸುತ್ತೇನೆ. ಮೀನು ಮಾರಾಟಗಾರ ಮಹಿಳೆಯರ ಹಿತಾಸಕ್ತಿ ಕಾಪಾಡುವುದು ನಮ್ಮ ಆದ್ಯತೆಯಾಗಿದೆ,” ಎಂದು ಡಾ. ನಾಗಲಕ್ಷ್ಮಿ ಚೌಧರಿ ಭರವಸೆ ನೀಡಿದರು.

 

 

 

 

Continue Reading

INTERNATIONAL

ಇಸ್ರೇಲ್-ಇರಾನ್ ವಾರ್ ! ಬಹ್ರೈನ್ ಭಾರತೀಯರ ಪರಿಸ್ಥಿತಿ ಹೇಗಿದೆ? ಸತ್ಯ ಬಿಚ್ಚಿಟ್ಟ ಗಣೇಶ್ ಮಾಣಿಲ

Published

on

ಪ್ರೀತಿಯ ಬಂಧುಗಳೇ ಮಿತ್ರರೇ ನನ್ನ ಎಲ್ಲಾ  ಸಹಪಾಠಿಗಳಿಗೆ ಮಾಧ್ಯಮ ಸ್ನೇಹಿತರೆ!

ಕಳೆದ ಕೆಲದಿನಗಳಿಂದ ಗಲ್ಫ್ ದೇಶಗಳಾದ ಕತಾರ್, ಯುಎಇ, ಕುವೈಟ್, ಒಮಾನ್, ಬಹರೈನ್, ಸೌದಿ ಅರೇಬಿಯಾದಲ್ಲಿರುವ ನಮ್ಮಂಥ ಅನಿವಾಸಿ ಭಾರತೀಯರ ಬಗ್ಗೆ, ನಮ್ಮ ಸುರಕ್ಷತೆಯ ಬಗ್ಗೆ ಆತಂಕಗೊಂಡಿರುವ, ಚಿಂತೆಗೊಳಗಾಗಿ, ನಮ್ಮನ್ನು ಸಂಪರ್ಕಿಸಿರುವ ಎಲ್ಲರಿಗೂ ನಾನು ಹೇಳುವುದಿಷ್ಟೆ. ನಾವು ಇಲ್ಲಿ ಅತ್ಯಂತ ಸುರಕ್ಷಿತವಾಗಿದ್ದೇವೆ. ನಾವು ಎಂದಿನಂತೆ ಜೀವಿಸುತ್ತಿದ್ದೇವೆ.

ನಾನಿರುವ  ಬಹರೈನ್  ಆಗಲಿ, ಅಕ್ಕಪಕ್ಕದ , ಕುವೈಟ್  , ಯುಎಇ, ಸೌದಿ ಅರೇಬಿಯಾ ಅಥವಾ ಒಮಾನ್ ಎಲ್ಲೆಲ್ಲಿಯೂ ಇಲ್ಲಿರುವ ಜನರು, ಅವರು ಇಲ್ಲಿನ ನಾಗರಿಕರಾಗಿರಲಿ, ಇಲ್ಲ ನಮ್ಮಂಥ ನಿವಾಸಿಗಳಾಗಿರಲಿ ಇಲ್ಲ ಸ್ವಲ್ಪ ಸಮಯಕ್ಕೆ ವಿಸಿಟ್ ವೀಸಾನೋ ಇಲ್ಲ ಟೂರಿಸ್ಟ್ ವೀಸಾದಲ್ಲಿ ಇಲ್ಲಿ ಬಂದಿರುವವರು, ಎಲ್ಲರೂ ಸುರಕ್ಷಿತರಾಗಿದ್ದಾರೆ.

 

ಹೌದು ಒಂದು ವಾರದ ಮೊದಲಿದ್ದ ಹಾಗೆ ಇಲ್ಲ ಪರಿಸ್ಥಿತಿ. ಆಕಾಶದ ಮೇಲೆ ದಿನಕೊಂದು ನಾಲ್ಕು ಬಾರಿ ಕ್ಷಿಪಣಿಗಳು, ಡ್ರೋನ್‌ಗಳು, ಅಪರೂಪಕ್ಕೊಮ್ಮೆ ಫೈಟರ್ ಜೆಟ್‌ಗಳು ಈ ದೇಶಗಳಲ್ಲಿರುವ ಅಮೇರಿಕನ್ ಮಿಲಿಟರಿ, ವಿಮಾನ ಬೇಸ್‌ಗಳು ಹಾಗೂ ಇತರ ಅಮೇರಿಕನ್ asset ಗಳನ್ನು ಗುರಿಯಾಗಿಸಿ ಹಾರಾಡುತ್ತಿವೆ. ಆದರೆ ಅದರಲ್ಲಿ 95% ಕ್ಷಿಪಣಿ, ಡ್ರೋನ್‌ಗಳನ್ನು ಗಾಳಿಯಲ್ಲಿ ಹೊಡೆದುರುಳಿಸಲಾಗಿದೆ. ಒಂದೆರಡು ಕ್ಷಿಪಣಿ, ಡ್ರೋನ್‌ಗಳು ಅವರ ಉದ್ದೇಶಿತ ಗುರಿಯನ್ನು ತಲುಪಿವೆ. ಆದರೆ ನಾಗರಿಕ ವಸತಿ ಪ್ರದೇಶಗಳಾಗಲಿ, ನಾಗರಿಕರಾಗಲಿ ಇದರಿಂದ ತೊಂದರೆ, ಅಪಾಯಗೀಡಾಗಿಲ್ಲ.

ಇಲ್ಲಿ ಮಾಲ್, ಹೈಪರ್, ಸೂಪರ್ ಮಾರ್ಕೆಟ್ಗಳು, ಅಂಗಡಿ-ಮುಗ್ಗಟ್ಟುಗಳು, ಹೊಟೇಲ್, ರೆಸ್ಟೋರೆಂಟ್‌ಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ. ಅದರಲ್ಲೂ ಮೊನ್ನೆಯಿಂದ ಕೆಲ ಮಾಲ್,  ಮಾರ್ಕೆಟ್ಟುಗಳು 24/7 ಕಾರ್ಯಾಚರಿಸುತ್ತಿವೆ. ಕೆಲಸಕ್ಕೆ ಹೋಗುವ ಜನರು ಕೆಲಸಕ್ಕೆ ಹೋಗುತ್ತಿದ್ದಾರೆ. Remote, online ಕೆಲಸ ಸಾಧ್ಯವಿದ್ದಲ್ಲಿ ಅದೂ ನಡೆಯುತ್ತಿದೆ. ಶಾಲೆಗಳು offline ಹೋಗಿ online ಆಗಿದ್ದರೂ ಎಂದಿನಂತೆ ಕಾರ್ಯಾಚರಿಸುತ್ತಿವೆ. ಅಂಗಡಿ, ಮಾರ್ಕೆಟುಗಳಲ್ಲಿ ದಿನನಿತ್ಯದ ಸಾಮಾನುಗಳು, ದಿನಸಿ, ಹಾಲು-ಹಣ್ಣು-ಹಂಪಲು ಎಲ್ಲವೂ ಎಂದಿನಂತೆ ಸಿಗುತ್ತಿವೆ. ಕೆಲ ದೇಶಗಳಲ್ಲಿ ಮುಂದಿನ ಒಂದು ತಿಂಗಳು ಯಾವುದೇ ದಿನಸಿ, ಸಾಮಾನಿನ ಬೆಲೆ ಹೆಚ್ಚಿಸಬಾರದೆಂದು ಸರ್ಕಾರ ಆದೇಶನೂ ಹೊರಡಿಸಿದೆ. ರಮ್ಜಾನ್ ಆಚರಿಸುತ್ತಿರುವ ಮುಸ್ಲೀಮ್ ಬಾಂಧವರಿಗೂ, ಇಲ್ಲಿರುವ ಎಲ್ಲರಿಗೂ ಯಾವುದೇ ತೊಂದರೆಯಾಗಬಾರದೆನ್ನುವ ದೃಷ್ಟಿಯಿಂದ.

ಹೌದು! ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿಲ್ಲ. ಇಲ್ಲಿಂದ ಆಗಮಿಸುವ ಹಾಗೂ ನಿರ್ಗಮಿಸುವ ಹೆಚ್ಚಿನ ವಿಮಾನಗಳಿಗೆ ಇರಾನ್ ಏರ್-ಸ್ಪೇಸ್ ಮುಖ್ಯ. ಸದ್ಯ ಅಲ್ಲಿ ಪ್ರಕ್ಷುಬ್ದ ವಾತಾವರಣ ಇರುವುದರಿಂದ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಾಸ ಉಂಟಾಗಿರುವುದು ನಿಜ. ಆದರೂ ನಿನ್ನೆ-ಮೊನ್ನೆಯಿಂದ ಇಲ್ಲಿ ಸಿಲುಕಿರುವ ಟ್ರಾನ್ಸಿಟ್ ಅಥವಾ ವಿಸಿಟ್/ಟೂರಿಸ್ಟ್ ವೀಸಾಗಳಲ್ಲಿ ಬಂದಿರುವ ಜನರನ್ನು ಅವರ ದೇಶಕ್ಕೆ ತಲುಪಿಸುವ ನಿಟ್ಟಿನಲ್ಲಿ ಕೆಲ ವಿಮಾನಗಳು ಸಂಚಾರ ಆರಂಭಿಸಿವೆ.

ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿಲ್ಲವಾದರೂ, ವಿಮಾನಗಳು ಕ್ಯಾನ್ಸಲ್ ಆಗಿದ್ದರೂ, ಪ್ರಯಾಣಿಸಬೇಕಾಗಿದ್ದ ಜನರಿಗೆ, ಟ್ರಾನ್ಸಿಟ್ ವೀಸಾದಲ್ಲಿದ್ದವರಿಗೆ, ವಿಸಿಟರ್ಸ್, ಪ್ರವಾಸಿಗಳಿಗೆ ಇಲ್ಲಿನ ಸರ್ಕಾರ ಅಲ್ಲೇ ವಿಮಾನ ನಿಲ್ದಾಣಗಳಲ್ಲಿ ಬಿಟ್ಟು ಹಾಕಿಲ್ಲ. ಅವರೆಲ್ಲರನ್ನೂ ನಗರ ಭಾಗಗಳಲ್ಲಿರುವ ಅತ್ಯುತ್ತಮ ಹೊಟೇಲುಗಳಿಗೆ ಶಿಫ್ಟ್ ಮಾಡಿ ಅವರಿಗೆ ಉಚಿತ ವಸತಿ, ಊಟ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿ, ಅವರ ಸುರಕ್ಷತೆಗಾಗಿ ಎಲ್ಲವನ್ನೂ ಮಾಡಲಾಗಿದೆ. ಸರ್ಕಾರ ಟ್ರಾನ್ಸಿಟ್, ವಿಸಿಟ್ ಹಾಗೂ ಬೇರೆ ಅಲ್ಪಕಾಲದ ವೀಸಾಗಳ ಅವಧಿಯನ್ನು ವಿಸ್ತರಿಸಿದೆ, ಅದೂ ಉಚಿತವಾಗಿ.

ಇಲ್ಲಿನ ಸರ್ಕಾರಗಳು ಎಲ್ಲರ, ಅಂದರೆ ಪ್ರತಿಯೊಬ್ಬರ ರಕ್ಷಣೆ, ಸುರಕ್ಷತೆಗಾಗಿ ಹಗಲಿರುಳೂ ಶ್ರಮಿಸುತ್ತಿವೆ. ಇಲ್ಲಿ ಧರ್ಮ, ಜಾತಿ, ದೇಶ, ಬಣ್ಣ ನೋಡಿ ಜನರನ್ನು ಪ್ರತ್ಯೇಕಿಸಲ್ಲ. ಎಲ್ಲರನ್ನು ಸಮಾನವಾಗಿ ಕಂಡು, ಎಲ್ಲರ ಸುರಕ್ಷತೆಗಾಗಿ ಏನು, ಅಲ್ಲ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತಿವೆ.

ಹೌದು, ಜನರು ಸ್ವಲ್ಭ ಹೆದರಿದ್ದಾರೆ. ಇಲ್ಲಿರುವ ಬಹುಪಾಲು ಭಾರತೀಯರಾಗಲಿ, ಬೇರೆಯವರಾಗಲಿ, ಯುದ್ದವನ್ನು ಕಂಡವರಲ್ಲ. ನಾವು ಭಾರತೀಯರಂತೂ ಯುದ್ದ ಬಿಡಿ, ಸಣ್ಣ skirmish, insurgency ಕೂಡ ಅನುಭವಿಸಿದವರಲ್ಲ. ಹಾಗಾಗಿ ಕ್ಷಿಪಣಿ, ಡ್ರೋನ್‌ಗಳ interception ಆಗಿ ದೊಡ್ಡ ಶಬ್ದ, ಗಾಳಿಯಲ್ಲಿ ಸ್ಪೋಟವಾದಾಗ ಒಮ್ಮೆ ಹೆದರುವುದು ಸಹಜ.  ಕಾಣುತ್ತಿರುವ ಹೊಗೆ, ಸ್ಪೋಟಗಳು   ಕ್ಷಿಪಣಿಗಳನ್ನು ಗಾಳಿಯಲ್ಲಿ ಹೊಡೆದುರುಳಿಸಿದಾಗ ಅದರಿಂದ ನೆಲಕ್ಕೆ ಬಿದ್ದ ಅವಶೇಷಗಳು,  ಕಿಡಿ ಬಿದ್ದು ಹೊತ್ತಿಕೊಂಡಿರುವ ಬೆಂಕಿ. ಅದರ ಹೊರತಾಗಿ ಎಲ್ಲಿ ಎಲ್ಲವೂ, ಎಲ್ಲರೂ ಸುರಕ್ಷಿತ.

ಎರಡ್ಮೂರು ದಿನಗಳ ಹಿಂದೆ ನಿಮಗೆ ಕೆಲ ಭಾರತೀಯರು ರೀಲ್ ಇಲ್ಲ ವೀಡಿಯೋ ಮಾಡಿ ನಾವಿಲ್ಲಿ ಸಿಲುಕಿಕೊಂಡಿದ್ದೇವೆ, ಹೆದರಿಕೆ ಆಗುತ್ತಿದೆಯೆನ್ನುವುದನ್ನು ನೋಡಿದಿದ್ದರೆ, ಅದೂ ಸುಳ್ಳಲ್ಲ. ಅವರೆಲ್ಲರೂ  ವಿಸಿಟ್, ಟೂರಿಸ್ಟ್ ಇಲ್ಲ ಬೇರೆ ಅಲ್ಪಕಾಲದ ವೀಸಾದ ಮೇಲೆ ಬಂದಿರುವವರು. ಮೊನ್ನೆ ದಾಳಿ ಆರಂಭವಾದ ದಿನ ಇಲ್ಲ ಅದರ ನಂತರದ ದಿನಗಳಲ್ಲಿ ವಾಪಾಸ್ಸು ಭಾರತಕ್ಕೆ ಹೋಗಿ ತಮ್ಮ ಮನೆ, ಕುಟುಂಬ ಸೇರಬೇಕಾಗಿದ್ದವರು. ಅವರಲ್ಲಿ ತುಸು ಗಾಬರಿ, ಆತಂಕವಿರುವುದು ಸಹಜ. ಅವರಿಗೆ ಇದೊಂದು ಹೊಸ ದೇಶ, ಇಲ್ಲಿನ ಜನರು ಅಪರಿಚಿತರು. ಅವರು ಇಲ್ಲಿನ ನಿವಾಸಿಗಳಲ್ಲ. ಕೆಲವರು ಅವತ್ತು ವಿಮಾನ ನಿಲ್ದಾಣದಲ್ಲಿದ್ದರು, ಕೆಲವರ ವೀಸಾ ಅವಧಿ ಮುಗಿಯಲಿತ್ತು. ಹಾಗಾಗಿ ಮುಂದೆ ಏನಾಗಬಹುದೆಂದು ಅವರಿಗೆ ಆತಂಕವಿದ್ದದ್ದು ಸಹಜ. ಆದರೆ ಇಲ್ಲಿನ ಸರ್ಕಾರಗಳು ಅವರನ್ನೂ ಬಿಟ್ಟಾಕಿಲ್ಲ. ಅವರಿಗೆ ಉಚಿತ ಊಟ, ವಸತಿ ಕಲ್ಪಿಸಿ ಅವರ ವೀಸಾ ಅವಧಿಯನ್ನೂ ಉಚಿತವಾಗಿ ವಿಸ್ತರಿಸಿದ ನಂತರ ಅವರೂ ಈಗ ನಿರಾಳವಾಗಿದ್ದಾರೆ, ತಮ್ಮ ಮನೆ, ಕುಟುಂಬಸ್ಥರೊಡನೆ ಸಂಪರ್ಕದಲ್ಲಿದ್ದಾರೆ.

ನಮ್ಮ ಸುರಕ್ಷತೆಯ ಬಗ್ಗೆ, ನಮ್ಮ ಬಗ್ಗೆ ಕಾಳಜಿ ಇರುವ ಎಲ್ಲಾ ಕುಟುಂಬಸ್ಥರು, ಮಿತ್ರರು, ಪರಿಚಯದವರಿಗೆ ಇದರ ಮೂಲಕ ಹೇಳಬಯಸುವುದೇನೆಂದರೆ, ಇಲ್ಲಿಯವರೆಗೆ ಎಲ್ಲವೂ ಸೇಫ್ ಆಂಡ್ ಸೌಂಡ್. ಮುಂದಿನ ದಿನಗಳಲ್ಲಿ ಎಲ್ಲವೂ ನಾರ್ಮಲ್ ಆಗಲಿದೆ ಎನ್ನುವ ವಿಶ್ವಾಸ ನಮಗಿದೆ.

ಇಲ್ಲಿರುವ  ಸರ್ಕಾರಕ್ಕೂ ಇಲ್ಲಿನ ರಾಯಭಾರ ಕಚೇರಿಗಳಿಗೂ ಇಲ್ಲಿರುವ ಭಾರತೀಯರು ಸೇಫಾಗಿದ್ದಾರೆ, ಅತ್ಯಂತ ಸುರಕ್ಷಿತರಾಗಿದ್ದಾರೆಂದು ತಿಳಿದಿದೆ. ಹಾಗಾಗಿ ಸರ್ಕಾರ, ವಿದೇಶಾಂಗ ಇಲಾಖೆಯವರನ್ನು ಬಿಟ್ಟು ಇನ್ನು ಯಾರೋ ಯೂಟ್ಯೂಬ್ ಚಾನಲ್‌ನಲ್ಲಿ, ನ್ಯೂಸ್ ಚಾನಲ್‌ನಲ್ಲಿ evacuation ಬಗ್ಗೆ ಮಾತಾನಾಡಿದರೆ, ನಾನು ಹೇಳುವುದು ಇಷ್ಟೆ!

ಸದ್ಯ ಶಾಂತಿ ನೆಲೆಸಬೇಕಾಗಿರುವುದು ನಮ್ಮ ನ್ಯೂಸ್ ರೂಮ್‌ಗಳಲ್ಲಿ ಕೆಲವೊಂದು   ಯುಟ್ಯೂಬ್ ಚಾನೆಲ್  ತನ್ನದೇ ಶೈಲಿಯಲ್ಲಿ  ಬಿಂಬಿಸುತ್ತಿವೆ ಮಾಧ್ಯಮದ ಕೆಲವೊಂದು ಟಿವಿ ಸರಿಯಾದ ಮಾಹಿತಿಯನ್ನು ತೋರಿಸುತ್ತಿದೆ.

ನಾನಿಲ್ಲಿ 15 ವರುಷಗಳಿಂದ ಇಲ್ಲಿದ್ದೇನೆ. ಅವತ್ತಿನಿಂದ ಇವತ್ತಿನವರೆಗೆ ಒಂದು ಸೆಕೆಂಡಿಗೂ ನಾನು ಇಲ್ಲಿ ಸೇಫಾಗಿಲ್ಲವೆಂದು ನನಗೆ ಯಾವತ್ತೂ ಅನಿಸಿಲ್ಲ. ಮುಂದೆಯೂ ಹಾಗೆಯೇ. ಇದು ನನ್ನಂತ ಇಲ್ಲಿ ನೆಲೆಸಿರುವ ಎಲ್ಲರ ಅನಿಸಿಕೆಯೂ ಹೌದು! ಇಲ್ಲಿನ ಸರ್ಕಾರ ನಮ್ಮನ್ನು ಹಾಗೂ ಇಲ್ಲಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿಡಲಿದೆ ಎನ್ನುವ ನಂಬಿಕೆ ನಮಗಿದೆ. ಇದು ನಮ್ಮ ಜನ್ಮಭೂಮಿಯಲ್ಲದಿದ್ದರೂ, ನಮ್ಮ ಕರ್ಮಭೂಮಿ. ನಮ್ಮ ಜನ್ಮಭೂಮಿಯಷ್ಟೆ ಸುರಕ್ಷಿತ ನಾವಿಲ್ಲಿ ಎನ್ನುವ ಭಾವನೆ ಎಂದೆಂದಿಗೂ ನಮಗಿದೆ. ನಮಗೆ ಉದ್ಯೋಗ, ಜೀವನ, ವಸತಿ ಕಲ್ಪಿಸಿರುವ ಈ ದೇಶ, ನಮಗೆ ಭದ್ರತೆ, ಸುರಕ್ಷತೆಯನ್ನೂ ಒದಗಿಸಿದೆ, ಮುಂದೆಯೂ ಒದಗಿಸಲಿದೆ.

ನನ್ನ ನಮ್ರ ವಿನಂತಿ ನಿಮ್ಮಲ್ಲಿ ಎಲ್ಲರಲ್ಲೂ  ಇಷ್ಟೇ,ಬಹರೈನ್ ದೇಶದಲ್ಲಿ  ಯುದ್ಧದ ಕಾರ್ಮೋಡವಿಲ್ಲ ಯುದ್ಧ  ಭೂಮಿ ಎಂದು ಯಾರು ಹೇಳಬೇಡಿ, ಇರಾನ್, ಇಸ್ರೇಲ್  ಮತ್ತು ಅಮೇರಿಕ ನಡುವಿನ  ಜಂಟಿ ಹೋರಾಟದಲ್ಲಿ  ಅರಬ್ ದೇಶ   ಸಾಂದರ್ಭಿಕವಾಗಿ  ಗಟ್ಟಿ ನೆಲೆಯೂರಬೇಕಾಗಿದೆ ಅನ್ನುವುದೇ ಸತ್ಯ.  ಇರಾನ್ ದಾಳಿಗೆ ಪ್ರತಿ  ದಾಳಿಯಾಗಿ  ದೇಶದ ಅಸ್ಥಿತ್ವ ಉಳಿಸಬೇಕಿದೆ. ಮುಂದಿನ ದಿನದಲ್ಲಿ  ಆರ್ಥಿಕತೆ ಮತ್ತು  ಉದ್ಯೋಗದ ಮೇಲಾಗುವ ಪರಿಣಾಮ ಅನಿವಾಸಿಯ ಭಾರತೀಯರ  ಮೇಲೆ ಬೀರದಿರಲಿ ಅನ್ನುವುದೇ ನಮ್ಮ ಆಶಯ.. ಶಾಂತಿ ಸಂಧಾನದ ಮೂಲಕ  ನಾಂದಿ ಹಾಡಲಿ..    ..!

ಲೇಖಕ : ಗಣೇಶ್ ಮಾಣಿಲ (ಬಹರೈನ್ )

Continue Reading
Advertisement

Trending

Copyright © 2025 Namma Kudla News

You cannot copy content of this page