Connect with us

ಕೊರೊನಾ ವೈರಸ್ ಎಫೆಕ್ಟ್: ಇಂದು ಮಂಗಳೂರು ಬಂದರಿಗೆ ಬರಬೇಕಿದ್ದ ಹಡಗಿಗೆ ನಿಷೇಧ

Published

on

ಕೊರೊನಾ ವೈರಸ್ ಎಫೆಕ್ಟ್: ಇಂದು ಮಂಗಳೂರು ಬಂದರಿಗೆ ಬರಬೇಕಿದ್ದ ಹಡಗಿಗೆ ನಿಷೇಧ

ಮಂಗಳೂರು: ಅತಿ ಹೆಚ್ಚು ಪ್ರವಾಸಿ ಹಡಗನ್ನು ಬರಮಾಡಿಕೊಳ್ಳುವ ಮಂಗಳೂರು ಬಂದರು ಈ ಬಾರಿ ಕರೋನಾ ಹಿನ್ನಲೆ ಪ್ರವಾಸಿ ಹಡಗಿಗೆ ಮಂಗಳೂರು ಬಂದರು ಪ್ರವೇಶಕ್ಕೆ ಕೊನೆ ಕ್ಷಣದಲ್ಲಿ ಅನುಮತಿ ನಿರಾಕರಿಸಿದೆ.

ವಿಶ್ವಪರ್ಯಟನೆ ಮಾಡುತ್ತಿರುವ ಪ್ರವಾಸಿ ಹಡಗು ಶನಿವಾರ (ಮಾರ್ಚ್ 7) ಮುಂಜಾನೆ 6 ಗಂಟೆಗೆ ಬಂದರು ಪ್ರವೇಶಿಸಬೇಕಿತ್ತು.

ಆದರೆ ಹಡಗು ಕರೋನಾ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ್ದರಿಂದ ಸರಕಾರ ಮಂಗಳೂರು ಬಂದರು ಪ್ರವೇಶಕ್ಕೆ ಅನುಮತಿ ನಿರಾಕರಿಸಿದೆ.

ಪ್ರವಾಸಿಗರಲ್ಲಿ ಕರೋನಾ ಬಾಧಿತರು ಯಾರೂ ಇಲ್ಲ ಎಂದು ಹಡಗಿನ ನಿರ್ವಹಣಾ ತಂಡ ಸಮಜಾಯಿಷಿ ನೀಡಿದರೂ ಕೂಡ ಸರಕಾರ ಒಪ್ಪಿಗೆ ನೀಡಲು ನಿರಾಕರಿಸಿದೆ.

Advertisement
Click to comment

Leave a Reply

Your email address will not be published. Required fields are marked *

FILM

ಟಾಲಿವುಡ್‌ನ 25 ಖ್ಯಾತ ನಟ, ನಟಿಯರ ಮೇಲೆ ಕೇಸ್ ದಾಖಲು

Published

on

ಮಂಗಳೂರು/ಹೈದರಾಬಾದ್: ಟಾಲಿವುಡ್‌ನ 25 ಖ್ಯಾತ ನಟ, ನಟಿಯರಿಗೆ ತೆಲಂಗಾಣ ಪೊಲೀಸರು ಶಾಕ್ ಕೊಟ್ಟಿದ್ದಾರೆ.

ವಿಜಯ್‌ ದೇವರಕೊಂಡ, ಪ್ರಕಾಶ್‌ ರಾಜ್, ರಾಣಾ ದಗ್ಗುಬಾಟಿ, ಮಂಚು ಲಕ್ಷ್ಮಿ, ನಿಧಿ ಅಗರವಾಲ್, ಕನ್ನಡದ ನಟಿ ಪ್ರಣೀತಾ ವಿರುದ್ದ ಕೇಸ್ ದಾಖಲಾಗಿದೆ.

32 ವರ್ಷದ ಉದ್ಯಮಿ ಫಣೀಂದ್ರ ಶರ್ಮಾ ಸಲ್ಲಿಸಿದ ಅರ್ಜಿಯ ಮೇರೆಗೆ ಹೈದರಾಬಾದ್‌ನ ಮಿಯಾಪುರ ಪೊಲೀಸ್ ಠಾಣೆಯಲ್ಲಿ BNS ಸೆಕ್ಷನ್ 318 (4), ಸೆಕ್ಷನ್ 112, 49ರಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಮ್ ಇಂಡಿಯಾಗೆ ಭರ್ಜರಿ ನಗದು ಬಹುಮಾನ ಘೋಷಿಸಿದ ಬಿಸಿಸಿಐ!

ಆನ್‌ಲೈನ್ ಬೆಟ್ಟಿಂಗ್ ದಂಧೆಯಿಂದ ಯುವಜನರು ಹಾಳಾಗುತ್ತಿದ್ದಾರೆ. ಸಮಾಜದಲ್ಲಿ ಸಾಕಷ್ಟು ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಬೆಟ್ಟಿಂಗ್ ಆ್ಯಪ್‌ಗಳ ಆಘಾತಕಾರಿ ವಿಚಾರ ಗೊತ್ತಿದ್ದರೂ ಖ್ಯಾತ ನಟ, ನಟಿಯರು ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ.

ಹೀಗಾಗಿ ಇದಕ್ಕೆ ಕಡಿವಾಣ ಹಾಕುವಂತೆ ದೂರು ಸಲ್ಲಿಕೆಯಾಗಿತ್ತು. ಈ ದೂರಿನ ಆಧಾರದ ಮೇಲೆ ನಟ, ನಟಿಯರ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

Continue Reading

LATEST NEWS

ಅಮೆರಿಕದಲ್ಲಿ ಭಾರತದ ಸಂಶೋಧಕ ಅರೆಸ್ಟ್; ಶೀಘ್ರವೇ ಗಡಿಪಾರು

Published

on

ಮಂಗಳೂರು/ನ್ಯೂಯಾರ್ಕ್ : ಅಮೆರಿಕದ ಜಾರ್ಜ್ ಟೌನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತ ಮೂಲದ ಸಂಶೋಧನಾ ವಿದ್ಯಾರ್ಥಿಯನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಬದರ್ ಖಾನ್ ಸೂರಿ ಬಂಧಿತ ವಿದ್ಯಾರ್ಥಿ.

ಸೂರಿ ಹಮಾಸ್ ಪರ ಪ್ರಚಾರ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಅಲ್ಲದೇ, ಶಂಕಿತ ಭಯೋತ್ಪಾದಕರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ.  ಈಗಾಗಲೇ ಅವರ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಸದ್ಯದಲ್ಲೇ ಗಡಿಪಾರು ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಸಹಾಯಕ ಕಾರ್ಯದರ್ಶಿ ಟ್ರಿಸಿಯಾ ಮೆಕ್‌ಲಾಫ್ಲಿನ್ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ಸೂರಿ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿನಿಮಯ ವಿದ್ಯಾರ್ಥಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಮಾಸ್ ಪ್ರಚಾರವನ್ನು ಸಕ್ರಿಯವಾಗಿ ಹರಡುತ್ತಿದ್ದರು ಮತ್ತು ಯೆಹೂದಿ ವಿರೋಧಿ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದರು. ಸೂರಿ ಚಟುವಟಿಕೆಗಳು INA ಸೆಕ್ಷನ್ 237(a) (4) (C) (i) ಅಡಿಯಲ್ಲಿ ಗಡಿಪಾರು ಮಾಡಲು ಅರ್ಹರೆಂದು ವಿದೇಶಾಂಗ ಕಾರ್ಯದರ್ಶಿ ಮಾರ್ಚ್ 15, 2025 ರಂದು ನಿರ್ಣಯ ಹೊರಡಿಸಿದ್ದರು ಎಂದು ತಿಳಿಸಿದ್ದಾರೆ.

ಡಾ. ಬದರ್ ಖಾನ್ ಸೂರಿ ವಾಷಿಂಗ್ಟನ್ ಡಿಸಿಯ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಎಡ್ಮಂಡ್ ಎ. ವಾಲ್ಷ್ ಸ್ಕೂಲ್ ಆಫ್ ಫಾರಿನ್ ಸರ್ವೀಸ್‌ನಲ್ಲಿರುವ ಅಲ್ವಲೀದ್ ಬಿನ್ ತಲಾಲ್ ಸೆಂಟರ್ ಫಾರ್ ಮುಸ್ಲಿಂ-ಕ್ರಿಶ್ಚಿಯನ್ ಅಂಡರ್‌ಸ್ಟಾಂಡಿಂಗ್‌ನಲ್ಲಿ ಪೋಸ್ಟ್‌ ಡಾಕ್ಟರಲ್ ಫೆಲೋ ಆಗಿದ್ದಾರೆ.

ಇದನ್ನೂ ಓದಿ : ಆ‌ರ್.ಜಿ ಕರ್‌ ಪ್ರಕರಣ : 7 ತಿಂಗಳ ಬಳಿಕ ಪೋಷಕರ ಕೈ ಸೇರಿತು ಮರಣ ಪ್ರಮಾಣ ಪತ್ರ

2020 ರಲ್ಲಿ ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ನೆಲ್ಸನ್ ಮಂಡೇಲಾ ಸೆಂಟರ್ ಫಾರ್ ಪೀಸ್ ಅಂಡ್ ಕಾನ್ಫ್ಲಿಕ್ಟ್ ರೆಸಲ್ಯೂಷನ್‌ನಿಂದ ಶಾಂತಿ ಮತ್ತು ಸಂಘರ್ಷ ಅಧ್ಯಯನ ವಿಚಾರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

 

Continue Reading

DAKSHINA KANNADA

ಸುಳ್ಯ : ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ; ಕಾರಣ ನಿಗೂಢ

Published

on

ಸುಳ್ಯ : ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಕಾರಣಗಳು ನಿಖರವಾಗಿರುವುದಿಲ್ಲ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲೂ ಅಂತಹದ್ದೇ ಘಟನೆಯೊಂದು ನಡೆದಿದೆ.

ಸುಳ್ಯದ ನಲ್ಲೂರು ಕಮ್ರಾಜೆಯ ಪೊಲ್ಲಾಜೆ ಎಂಬಲ್ಲಿ, ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತಪಟ್ಟ ಮಹಿಳೆಯನ್ನು ರೇವತಿ (51) ಎಂದು ಗುರುತಿಸಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page