Connect with us

ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ: ಮತ್ತೆ 28 ಮಂದಿ ಸಾವು

Published

on

ಚೀನಾದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್: ಹೊಸದಾಗಿ 28 ಮಂದಿ ಕೊರೊನಾಗೆ ತುತ್ತು

ಬೀಜಿಂಗ್‌: ವಿಶ್ವದಾದ್ಯಂತ ಕೋರೋನಾದ ಅಟ್ಟಹಾಸ ಮುಂದುವರೆದಿದೆ.

ಕೊರಾನಾ ವೈರಸ್‌ ಸೋಂಕಿಗೆ ಚೀನಾದಲ್ಲಿ ನಿನ್ನೆ ಹೊಸದಾಗಿ 28 ಮಂದಿ ಬಲಿಯಾಗಿದ್ದು, ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 3,070ಕ್ಕೆ ತಲುಪಿದೆ.

ನಿನ್ನೆ ಹೊಸದಾಗಿ 99 ಜನರಿಗೆ ಕೋವಿಡ್–19 ತಗುಲಿರುವ ವರದಿಯಾಗಿದೆ.

ಹುಬೈ ಪ್ರಾಂತ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಇಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ‌

ಈ ಪ್ರಾಂತ್ಯದಲ್ಲಿ 74 ಜನರಿಗೆ ಹೊ‌ಸದಾಗಿ ಕೋವಿಡ್–19 ತಗುಲಿದ್ದಾಗಿ ತಿಳಿದುಬಂದಿದೆ.

ಇದು 2 ತಿಂಗಳ ಅವಧಿಯಲ್ಲಿ ದಾಖಲಾದ ಅತಿ ಕಡಿಮೆ ಸಂಖ್ಯೆಯಾಗಿದೆ.

ಇತರ ದೇಶಗಳಿಂದ ಬಂದಿರುವ 24 ಜನರಲ್ಲಿ ಕೋವಿಡ್‌–19 ತಗುಲಿದ್ದು, ವಿದೇಶಗಳಲ್ಲಿ ಕೊರೊನಾ ಸೋಂಕು ಹರಡುವ ಪ್ರಮಾಣ ಹೆಚ್ಚಾಗಲಿದೆ.

ವಿಶ್ವದಾದ್ಯಂತ 1 ಲಕ್ಷಕ್ಕೂ ಅಧಿಕ ಜನರು ಕೋವಿಡ್‌–19ನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ 31ಕ್ಕೆ ಏರಿದೆ.

ಥಾಯ್ಲೆಂಡ್‌ ಹಾಗೂ ಮಲೇಷ್ಯಾಗೆ ಭೇಟಿ ನೀಡಿ ಮರಳಿದ್ದ ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೆ ಕೋವಿಡ್‌ 19 ಸೋಂಕು ತಗುಲಿರುವುದು ದೃಢಪಟ್ಟಿದೆ.

ದೆಹಲಿ ಮೂಲದ 25 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ ಇದೀಗ 31ಕ್ಕೆ ಏರಿದೆ.

ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ನಿಗಾ ಇರಿಸಲಾಗಿದೆ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರತಿನಿತ್ಯ 25 ಸಾವಿರಕ್ಕೂ ಅಧಿಕ ಪ್ರವಾಸಿಗರನ್ನು ಸೆಳೆಯುವ ತಾಜ್‌ ಮಹಲ್‌ ವೀಕ್ಷಣೆಗೆ ತಾತ್ಕಾಲಿಕವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎನ್ನಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ

Published

on

ಬೆಂಗಳೂರು: ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿನ ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಉಂಟಾಗಿದೆ. ಇದರಿಂದಾಗಿ ಪ್ಲಾಸ್ಟಿಕ್ ಕಾರ್ಖಾನೆ ಹೊತ್ತಿ ಉರಿಯುತ್ತಿದೆ.

ಸ್ಥಳಕ್ಕೆ ಆಗಮಿಸಿರುವಂತ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿಯ ಹೊಗೆ ಸುತ್ತಮುತ್ತಲ ವ್ಯಾಪ್ತಿಗೆ ಆವರಿಸಿದ್ದು, ಜನರು ಭಯಭೀತರಾಗಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Continue Reading

NATIONAL

ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ

Published

on

ಮಂಗಳೂರು/ನವದೆಹಲಿ : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು(ಫೆ.13) ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆ 2025 ಅನ್ನು ಮಂಡಿಸಿದ್ದಾರೆ. ಅಂತೆಯೇ ಸದನದ ಆಯ್ಕೆ ಸಮಿತಿಗೆ ಉಲ್ಲೇಖಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದ್ದಾರೆ. ಫೆಬ್ರವರಿ 1 ರಂದು ತಮ್ಮ ಬಜೆಟ್ ಭಾಷಣದ ವೇಳೆ ಹೊಸ ಆದಾಯ ತೆರಿಗೆ ಮಸೂದೆ ಬಗ್ಗೆ ಘೋಷಿಸಿದ್ದರು. ಫೆ. 07 ರಂದು ಸಚಿವ ಸಂಪುಟ ಇದನ್ನು ಅನುಮೋದಿಸಿತ್ತು.

ಇಂದು ಮಸೂದೆ ಮಂಡನೆಗೆ ಆರಂಭದಲ್ಲೇ಼ ವಿರೋಧ ಪಕ್ಷಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಬಳಿಕ ಧ್ವನಿ ಮತದ ಮೂಲಕ ಮಸೂದೆ ಮಂಡನೆಗೆ ಒಪ್ಪಿಗೆ ಲಭಿಸಿತು.

ಮಸೂದೆ ಪರಿಚಯಿಸುವ ವೇಳೆ ಸೀತಾರಾಮನ್ ಬಿರ್ಲಾ ಅವರನ್ನು ಕರಡು ಕಾನೂನನ್ನು ಸದನದ ಆಯ್ಕೆ ಸಮಿತಿಗೆ ಉಲ್ಲೇಖಿಸುವಂತೆ ಒತ್ತಾಯಿಸಿದರು. ಅದು ಮುಂದಿನ ಅಧಿವೇಶನದ ಮೊದಲ ದಿನದೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ.

ಇದನ್ನೂ ಓದಿ : ರಿಷಭ್ ಪಂತ್ ಜೀ*ವ ಉಳಿಸಿದ್ದಾತನಿಂದ ಆತ್ಮಹ*ತ್ಯೆಗೆ ಯ*ತ್ನ!

622 ಪುಟಗಳ ಈ ಹೊಸ ಆದಾಯ ತೆರಿಗೆ ಮಸೂದೆ 1961ರ 60 ವರ್ಷಗಳಷ್ಟು ಹಳೆಯದಾದ ಆದಾಯ ತೆರಿಗೆ ನೀತಿಯನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ. ಹೊಸ ಮಸೂದೆಯಲ್ಲಿ ತೆರಿಗೆಭಾಷೆಯನ್ನು ಸರಳಗೊಳಿಸುವ ಪ್ರಸ್ತಾವನೆಯಿದೆ.

Continue Reading

LATEST NEWS

ಮಾರಣಾಂತಿಕ ಕಾಯಿಲೆಯ ಭೀತಿ; 10 ದಿನಗಳಲ್ಲಿ 25ಕ್ಕೂ ಹೆಚ್ಚು ಹಸುಗಳು ಸಾವು

Published

on

ರಾಮನಗರ: ದಿನದಿಂದ ದಿನಕ್ಕೆ ಒಂದೊಂದು ರೀತಿಯ ಮಾರಣಾಂತಿಕ ಕಾಯಿಲೆಗಳು ಬರುತ್ತಲೇ ಇವೆ. ಇದೀಗ ಹಸುಗಳಲ್ಲಿ ಮಾರಣಾಂತಿಕ ಕಾಯಿಲೆ ಕಾಡಿದೆ. ಕೇವಲ 10 ದಿನಗಳಲ್ಲಿ 25ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ರಾಮನಗರದ ಪುಣ್ಯಕೋಟಿ ಗೋಶಾಲೆಯಲ್ಲಿ ಕೇವಲ 10ದಿನಗಳಲ್ಲಿ‌ 25ಕ್ಕೂ ಹೆಚ್ಚು ಹಸುಗಳ ಸಾವನ್ನಪ್ಪಿದ್ದು. ತೀವ್ರ ಹೊಟ್ಟೆ ನೋವಿನಿಂದ ಬಳಲಿ ಕೇವಲ ಒಂದು ದಿನದಲ್ಲೇ ಜಾನುವಾರುಗಳು ಸಾವೀಗೀಡಾಗಿವೆ. ಜಾನುವಾರುಗಳ ಶವ ಪರೀಕ್ಷೆಯಲ್ಲಿ ಹೆಮಾರಾಜಿಕ್ ಬೋವೆಲ್ ಖಾಯಿಲೆಯ ಶಂಕೆ ವ್ಯಕ್ತಪಡಿಸಿದ್ದು. ತೀವ್ರ ಕರುಳಿನ ರಕ್ತಸ್ರಾವವಾಗಿ ಹಸುಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.

ಹಸುಗಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡ 24 ಗಂಟೆಗಳಲ್ಲಿ ಜಾನುವಾರುಗಳು ಸಾವನ್ನಪ್ಪುತ್ತಿದ್ದು. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕೆಂದು ಗೋಪಾಲಕರು ಮನವಿ ಮಾಡಿದ್ದಾರೆ. ಜೊತೆಗೆ ಹಸುಗಳ ಸಾವಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದು. ಸದ್ಯ ಸಾವನ್ನಪ್ಪಿದ ಹಸುಗಳ ಸ್ಯಾಂಪಲ್ಸ್ ಪ್ರಯೋಗಾಲಯಕ್ಕೆ ರವಾನಿಸಿದ್ದು. ವರದಿ ಬಂದ ಬಳಿಕ ತಜ್ಙರಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಪಶು ಸಂಗೋಪನೆ. ಇಲಾಖೆ ಉಪನಿರ್ದೇಶಕ ಮಾಹಿತಿ ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page