Connect with us

ಕೊರೋನಾ ಸೋಂಕು ತಡೆಗೆ ಇಸ್ರೇಲ್‌ನಲ್ಲಿ ಔಷಧ ಸಿದ್ದ: ಕೆಲವೇ ವಾರಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ

Published

on

ಕೊರೋನಾ ಸೋಂಕು ತಡೆಗೆ ಇಸ್ರೇಲ್‌ನಲ್ಲಿ ಔಷಧ ಸಿದ್ದ: ಕೆಲವೇ ವಾರಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ

ಬೆಂಗಳೂರು: ಮಾರಣಾಂತಿಕ ಕೊರೋನಾ ವೈರಸ್ ಇಡೀ ವಿಶ್ವಕ್ಕೆ ಕಂಟಕವೆಂಬಂತೆ ಪರಿಣಮಿಸತೊಡಗಿದ್ದು, ವಿಶ್ವದ ಶೇಕಡ 69 ರಷ್ಟು ರಾಷ್ಟ್ರಗಳಿಗೆ ವ್ಯಾಪಿಸಿದೆ.

ಸಾವಿರಾರು ಮಂದಿ ಪ್ರಾಣ ಕಳಕೊಂಡಿದ್ದರೆ. ಲಕ್ಷಾಂತರ ಮಂದಿಗೆ ಈಗಾಗಲೇ ಕೊರೋನಾ ಸೋಂಕು ತಗಲಿದೆ. ಈ ಮಧ್ಯೆಇಸ್ರೇಲಿನ ಸಂಶೋದಕರ ತಂಡವೊಂದು ಸಿಹಿಸುದ್ದಿಯೊಂದನ್ನು ನೀಡಿದೆ. ಕೊರೋನಾ ಸೋಂಕು ತಡೆಯಬಲ್ಲ ಔಷಧಿಯನ್ನು ಇನ್ನು ಕೆಲವೇ ವಾರಗಳಲ್ಲಿ ಸಿದ್ಧವಾಗಲಿದ್ದು, ಬಳಕೆಗೆ ಲಭ್ಯವಾಗಲಿದೆ ಸಂಶೋಧಕರು ಹೇಳಿದ್ದಾರೆ.

ಮಿಗಾಲ್ ಎಂದೇ ಖ್ಯಾತಿ ಪಡೆದಿರುವ ಗಲೀಲಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಹಕ್ಕಿಗಳ ಶ್ವಾಸನಾಳಗಳಲ್ಲಿ ಕಂಡು ಬರುವ ಕೊರೋನಾ ಮಾದರಿಯ ಐಬಿವಿ ಇನ್ ಫೆಕ್ಟೀಯಸ್ ಬ್ರಾಂಕೈಟಿಸ್ ವೈರಸ್ ಸೋಂಕಿಗೆ ಔಷಧಿಯೊಂದನ್ನು ಕಂಡು ಹಿಡಿದಿದ್ದಾರೆ. ಬಳಕೆಪೂರ್ವ ಪರೀಕ್ಷೆ ವೇಳೆ ಈ ಔಷಧಿ ಯಶಸ್ವಿಯಾಗಿದೆ. ಇದೇ ಔಷಧ ಕರೋನಾ ವೈರಸ್’ಗೆ ಯಶಸ್ವಿಯಾಗಿ ಬಳಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಔಷಧ ಇನ್ನು ಕೆಲವೇ ವಾರಗಳಲ್ಲಿ ಸಿದ್ಧವಾಗುವ ವಿಶ್ವಾಸವಿದೆ, ಜೊತೆಗೆ ರೋಗಿಗಳ ಬಳಕೆಗೆ ಲಭ್ಯವಾಗಬಹುದು ಎಂದು ಸಂಶೋಧಕರ ತಂಡ ತಿಳಿಸಿದೆ.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಆಲ್ ನ್ಯೂ ಹ್ಯೂಂಡೈ ವೆನ್ಯೂ ಬೆಳ್ತಂಗಡಿ ಮಾರುಕಟ್ಟೆಗೆ ಬಿಡುಗಡೆ

Published

on

ಬೆಳ್ತಂಗಡಿ: ಅದ್ವೈತ್ ಹುಂಡೈ ಕಂಪೆನಿ ತನ್ನ ವಿಶಿಷ್ಟ ಗುಣಮಟ್ಟ ಮತ್ತು ಸೇವೆಯಿಂದ ವಿಶ್ವಾಸಾರ್ಹ ಗ್ರಾಹಕರನ್ನು ಹೊಂದಿದೆ. ಇದು ಕರ್ನಾಟಕದಾದ್ಯಂತ 23 ಶೋ ರೂಂಗಳು, 37 ಸೇವಾ ಕೇಂದ್ರಗಳು, 4 ಪ್ರಿ-ಒನ್ಡ್ ಕಾರು ಶೋರೂಮ್‌ಗಳ ಬೃಹತ್ ಜಾಲ ಬಲದಿಂದ ದೇಶದ ಅಗ್ರಗಣ್ಯ ಡೀಲರ್ ಆಗಿರುವ ಅದ್ವೈತ್ ಹ್ಯೂಂಡೈ ದಕ್ಷಿಣ ಮಂಗಳೂರಿನ ಬೈಕಂಪಾಡಿ ಕುಂಟಿಕಾನ, ಸುಳ್ಯ, ಬೆಳ್ತಂಗಡಿಯಲ್ಲಿ ಸೇವಾ ಕೇಂದ್ರವನ್ನು ಹೊಂದಿದೆ. ಹುಂಡೈ ವೆನ್ಯೂ ಅನ್ನು ಮೊದಲು 2019 ರಲ್ಲಿ ಬಿಡುಗಡೆ ಮಾಡಲಾಯಿತು.


ಇದೀಗ ನೂತನ ಆಲ್ ನ್ಯೂ ಹ್ಯೂಂಡೈ ವೆನ್ಯೂ ಕಾರು ಬೆಳ್ತಂಗಡಿ ಮಾರುಕಟ್ಟೆಗೆ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ಬೆಳ್ತಂಗಡಿಯ ಅದ್ವೈತ್ ಹೂಂಡೈ ಶೋರೂಂನಲ್ಲಿ ನೆರೆವೇರಿತು.
ನೂತನ ಕಾರನ್ನು ರೈಡಿಂಗ್ ಜೋಡಿ ಯೂಟ್ಯೂಬ್ ಚಾನೆಲ್‌ನ ಶ್ಯಾಮ್ ಪ್ರಸಾದ್ ಕಾಮತ್ ಮತ್ತು ಶೈನಿ ಕಾಮತ್ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.

2019ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡ ಹ್ಯೂಂಡೈ ವೆನ್ಯೂ ಇದೀಗ 6 ವರ್ಷಗಳ ಬಳಿಕ ಹೊಸ ರೂಪದಲ್ಲಿ 2ನೇ ಪೀಳಿಗೆಯ ಆಲ್ ನ್ಯೂ ವೆನ್ಯೂ ಭಾರತೀಯ ಗ್ರಾಹಕರಿಗೆ ಪರಿಚಯವಾಗಿದ್ದು, ಹೊಸ ತಂತ್ರಜ್ಞಾನ, ಭದ್ರತೆ ಮತ್ತು ಶೈಲಿಯ ಪರಿಪೂರ್ಣ ಮಿಶ್ರಣವಾದ ಹೊಸ ಹ್ಯೂಂಡೈ ವೆನ್ಯೂ ತನ್ನ ವಿನೂತನ ಶೈಲಿ ನಮತ್ತು ಆಧುನಿಕ ತಂತ್ರಜ್ಞಾನದಿಂದ ವಾಹನ ಪ್ರಿಯರ ಗಮನ ಸೆಳೆದಿದೆ.

ಹ್ಯೂಂಡೈಯ ಹೊಸ ತಲೆಮಾರಿನ ವೆನ್ಯೂ ವಾಹನ ಪ್ರಿಯರ ಹೊಸ ಆಕರ್ಷಣೆ ಆಗಿ ಮೂಡಿ ಬಂದಿದೆ. ಬಿಡುಗಡೆ ಸಮಾರಂಭದಲ್ಲಿ ಬೆಳ್ತಂಗಡಿ ಅದ್ವೈತ್ ಹುಂಡೈ ಇದರ ಮಾರಾಟ ವ್ಯವಸ್ಥಾಪಕ ಭರತ್ ಶೆಟ್ಟಿ, ಸೇವಾ ವ್ಯವಸ್ಥಾಪಕ ವಿಷ್ಣು ಕುಮಾರ್, ಬಾಡಿ ಶಾಪ್ ಮ್ಯಾನೇಜರ್ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.

ಇದನ್ನು ಓದಿ: ‘ಆಲ್ ನ್ಯೂ ಹ್ಯೂಂಡೈ ವೆನ್ಯೂ’ ಕಾರು ಮಂಗಳೂರು ಮಾರುಕಟ್ಟೆಗೆ ಬಿಡುಗಡೆ

ಹ್ಯೂಂಡೈ ವೆನ್ಯೂ ಕಾರಿನ ವಿಶಿಷ್ಟ ಗುಣಲಕ್ಷಣಗಳ ಬಗ್ಗೆ ನೋಡೋದಾದ್ರೆ 65 ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ವಿಶಿಷ್ಟ ವಿನ್ಯಾಸ, ಕಾರ್ಯಕ್ಷಮತೆಯುಳ್ಳ ಚಾಲಿತ ಚಕ್ರಗಳು, ಬ್ರಾಂಡೆಡ್ ಡ್ಯುಯಲ್-ಟೋನ್ ಲೆದರೆಟ್ ಸೀಟು, 6 ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾಗಳು, ಹೊಸ ಮಾದರಿಯು ಉತ್ತಮ ನಿಲುಗಡೆ ಶಕ್ತಿಯನ್ನು ನೀಡಲು ನಾಲ್ಕು ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇದು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಒಳಗೊಂಡಿದೆ.

 

Continue Reading

LATEST NEWS

IND vs AUS: ಟಿ20I ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಅಭಿಷೇಕ್ ಶರ್ಮಾ

Published

on

ಬ್ರಿಸ್ಬೇನ್: ಭಾರತ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.


ಭಾರತ-ಆಸ್ಟ್ರೇಲಿಯಾ ನಡುವಿನ ಕೊನೆಯ ಟಿ20 ಪಂದ್ಯ ಬ್ರಿಸ್ಬೇನ್‌ನ ಗಾಬ್ಬಾದಲ್ಲಿ ಶನಿವಾರ ನಡೆಯುತ್ತಿದೆ. ಪಂದ್ಯದಲ್ಲಿ ಟಾಸ್ ಸೋತರು ಭಾರತ ತಂಡವು ಉತ್ತಮ ಆರಂಭ ಪಡೆದುಕೊಂಡಿದೆ. ಅದರಲ್ಲಿಯೂ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಭಾರತದ ಆರಂಭಿಕ ಆಟಗಾರರಾದ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಸಿಡಿಲು ಮಿಂಚಿನ ಕಾರಣದಿಂದ ಪಂದ್ಯದ ಸ್ಥಗಿತವಾಗುವ ವೇಳೆ ಭಾರತ ತಂಡವು 4.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 52 ರನ್ ಮಾಡಿದೆ. ಉಪನಾಯಕ ಗಿಲ್ 16 ಎಸೆತಗಳಲ್ಲಿ ಆರು ಬೌಂಡರಿ ಸಹಾಯದಿಂದ 29 ರನ್ ಮಾಡಿದರೆ, ಅಭಿಷೇಕ್ 13 ಎಸೆತಗಳಲ್ಲಿ 23 ರನ್ ಚಚ್ಚಿದ್ದಾರೆ.

ಇದನ್ನೂ ಓದಿ: ಧವನ್, ರೈನಾಗೆ ಇಡಿ ಶಾಕ್; ಕೋಟಿ ಮೌಲ್ಯದ ಆಸ್ತಿ ಜಪ್ತಿ

ಇದೇ ವೇಳೆ ಅಭಿಷೇಕ್ ಶರ್ಮಾ ದಾಖಲೆಯೊಂದನ್ನ ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 1000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅಭಿಷೇಕ್ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರನ್ನು ಹಿಂದಿಕ್ಕಿದ್ದಾರೆ. ಅಲ್ಲದೆ ಅತೀ ಕಡಿಮೆ ಎಸೆತಗಳಲ್ಲಿ ಸಾವಿರ ರನ್ ಗಡಿ ದಾಟಿದವರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್‌ರನ್ನು ಮೀರಿಸಿ ಮೊದಲ ಸ್ಥಾನಕ್ಕೇರಿದರು.

ಅಭಿಷೇಕ್ ಶರ್ಮಾ 528 ಎಸೆತಗಳಲ್ಲಿ 1000 ಅಂತರರಾಷ್ಟ್ರೀಯ ಟಿ20 ರನ್ ಪೂರೈಸಿದರು. ಇದೀಗ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಾರಿರುವ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ 569 ಎಸೆತಗಳಲ್ಲಿ 1000 ರನ್ ಪೂರೈಸಿದ್ದರು. ಮೂರನೇ ಸ್ಥಾನದಲ್ಲಿರುವ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ 573 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Continue Reading

BIG BOSS

ವ್ಯಕ್ತಿತ್ವದ ಪರೀಕ್ಷೆಯಲ್ಲಿ ಗೆಲ್ಲೋದು ಯಾರು? ಯಾರಿಗೆ ಗೇಟ್‌ ಪಾಸ್?

Published

on

BBK12 : ಬಿಗ್ ಬಾಸ್ ಕನ್ನಡ ಸೀಸನ್‌ 12 ಶೋನಲ್ಲಿ ವಾರಾಂತ್ಯ ಬಂತು ಅಂದ್ರೆ ಕುತೂಹಲ ಹೆಚ್ಚು. ಕಿಚ್ಚ ಯಾರಿಗೆ ಕ್ಲಾಸ್ ತಗೋತ್ತಾರೆ? ಕಿಚ್ಚನ ಚಪ್ಪಾಳೆ ಯಾರಿಗೆ? ಯಾರು ದೊಡ್ಮನೆಯಿಂದ ಹೊರ ಹೋಗ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತೆ. ಹಾಗಾಗಿ ಕಿಚ್ಚನ ಬರುವಿಕೆಗಾಗಿ ಬಿಗ್ ಬಾಸ್ ವೀಕ್ಷಕರು ಕಾಯುತ್ತಿರುತ್ತಾರೆ.

ಅಂದಹಾಗೆ,  ಈ ಬಾರಿ ಎಲ್ಲಾ ಸ್ಪರ್ಧಿಗಳನ್ನು ಕಿಚ್ಚ ಸುದೀಪ್‌ ನಾಮಿನೇಟ್‌ ಮಾಡಿದ್ದರು. ಈ ವಾರ ವ್ಯಕ್ತಿತ್ವದ ಆಟ, ಫಿಸಿಕಲ್‌ ಟಾಸ್ಕ್‌ ಇರೋದಿಲ್ಲ ಎಂದು ಹೇಳಿದ್ದರು. ಹಾಗಾಗಿ ಯಾರು ಬಚಾವಾಗ್ತಾರೆ ಅನ್ನೋ ಕುತೂಹಲ ಹೆಚ್ಚು.

ಕಲರ್ಸ್‌ ಕನ್ನಡ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕಿಚ್ಚ ಸುದೀಪ್ ವಾರದ ಪಂಚಾಯಿತಿ ನಡೆಸಲು ವೇದಿಕೆಗೆ ಎಂಟ್ರಿ ಕೊಟ್ಟಿರೋದನ್ನು ಕಾಣಬಹುದು. ತಾಳ್ಮೆ ನಮಗೆ ಕಲಿಸುವುದು ಪಾಠ ಒಂದು ಕಡೆಯಾದರೆ, ಬದುಕು ದಿನನಿತ್ಯ ಕಲಿಸುವ ಪಾಠಗಳೇ ಬೇರೆ ತರ ಆಗಿರುತ್ತವೆ.

ಬಿಗ್‌ಬಾಸ್‌ನಲ್ಲಿ ಪರೀಕ್ಷೆ ಎಲ್ಲರಿಗೂ ಒಂದೆ. ಆದರೇ, ಪಠ್ಯಕ್ರಮ ಎಲ್ಲ ವ್ಯಕ್ತಿತ್ವಗಳಿಗೆ ಸರಿಯಾಗಿ ಬದಲಾಗುತ್ತಾ ಹೋಗುತ್ತದೆ. ವ್ಯಕ್ತಿತ್ವದ ಪರೀಕ್ಷೆಯಲ್ಲಿ ಪಾಸ್ ಆದೋರು ಯಾರು? ಪಾಸ್ ಆಗದವರು ಯಾರು? ಎಂದು ಅವರು ಹೇಳಿದ್ದಾರೆ.

ಈ ಬಾರಿ ಲೆಟರ್‌ ಟಾಸ್ಕ್‌ ಇತ್ತು. ಎಲ್ಲ ಸ್ಪರ್ಧಿಗಳಿಗೂ ಮನೆಯವರಿಂದ ಪತ್ರ ಬಂದಿತ್ತು. ಈ ಪತ್ರ ಪಡೆಯಲು ಎಮೋಶನ್ ಟಾಸ್ಕ್ ಇತ್ತು. ಯಾರಿಗೆ ಪತ್ರ ಸಿಕ್ಕಿದೆಯೋ ಅವರಿಗೆ ಇಮ್ಯೂನಿಟಿ ಸಿಕ್ಕಿದೆ. ಅಭಿಷೇಕ್‌, ಜಾಹ್ನವಿ, ಕಾವ್ಯ ಶೈವ, ಮಾಳು ನಿಪನಾಳ, ರಿಷಾ ಗೌಡ ಅವರಿಗೆ ಪತ್ರ ಸಿಕ್ಕಿದ್ದು,  ಅವರು ಒಂದು ವಾರ ಸೇಫ್‌ ಆಗಿದ್ದಾರೆ.

ಇದನ್ನೂ ಓದಿ : BBK12: ಗ್ರೂಪಿಸಂ ಮಾಡಿ ಗಿಲ್ಲಿಗೆ ಕಳಪೆ ಪಟ್ಟ; ಕಿಚ್ಚನ ಕ್ಲಾಸ್?

ಪತ್ರ ಸಿಗದ ಅಶ್ವಿನಿ ಗೌಡ, ರಕ್ಷಿತಾ, ಗಿಲ್ಲಿ ನಟ, ಧನುಷ್, ಕಾಕ್ರೋಚ್ ಸುಧಿ, ಸ್ಪಂದನಾ, ಧ್ರುವಂತ್, ಸೂರಜ್, ಚಂದ್ರಪ್ರಭ ಹಾಗೂ ರಾಶಿಕಾ ಬಿಗ್‌ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page