Connect with us

LATEST NEWS

ಉಡುಪಿ ಜಿಲ್ಲೆಯಲ್ಲಿ ಕಂಟ್ರೋಲ್ ತಪ್ಪಿದ ಕೊರೊನಾ ಲಾಕ್ ಡೌನ್: ಸರ್ಕಾರದ ವಿನಾಯಿತಿ ದುರ್ಬಳಕೆ:ಕಠಿಣ ಕ್ರಮಕ್ಕೆ ಸಾರ್ವಜನಿಕರ ಮನವಿ..

Published

on

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕೊರೋನಾ ಕಂಟ್ರೋಲ್ ತಪ್ಪಿದೆ. ಪ್ರತಿದಿನ ಸಾವಿರದ ಐನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.

ಸರ್ಕಾರ ಕೊಟ್ಟಿರುವ ವಿನಾಯಿತಿಯನ್ನು ಜನ ದುರ್ಬಳಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯ ಒಂದೊಂದು ಜಂಕ್ಷನ್ನಲ್ಲಿ ಮೂವತ್ತಕ್ಕಿಂತ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.ನಿಗಧಿತ ಕಾರಣವಿಲ್ಲದೆ ಓಡಾಡುವವರಿಗೆ ಟ್ರಾಫಿಕ್ ಪೊಲೀಸರು   ನಗರ ಠಾಣೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಮಣಿಪಾಲ- ಉಡುಪಿ ರಸ್ತೆ ಆಗಿರೋದ್ರಿಂದ ಬೇರೆ ಎಲ್ಲ ಏರಿಯಾಗಳಿಗಿಂತ ಈ ರಸ್ತೆಯಲ್ಲಿ ಹೆಚ್ಚಿನ ಜನರ ಓಡಾಟ ಕಂಡುಬಂತು.

ಉಡುಪಿ ನಗರ ಮತ್ತು ಮಣಿಪಾಲದಲ್ಲಿ ಆಸ್ಪತ್ರೆಗಳು ಹೆಚ್ಚು ಇರುವ ಕಾರಣ ರೋಗಿಗಳ ಕಡೆಯವರು ಮೆಡಿಕಲ್ ಗೆ ಓಡಾಡುವವರು ಹೆಚ್ಚಾಗಿ ಕಂಡು ಬಂದರು.

ಪೊಲೀಸರು ದಂಡ ವಿಧಿಸುವ ಜೊತೆ ಜನಜಾಗೃತಿಯನ್ನ ಮೂಡಿಸುತಿದ್ದು, ಬೇಕಾಬಿಟ್ಟಿ ಓಡಾಡದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಜಿಲ್ಲೆಯ ಸದ್ಯದ ಕೊರೋನಾ ಸ್ಥಿತಿಗತಿಗಳ ಬಗ್ಗೆ ವಾರ್ನ್ ಮಾಡುತ್ತಿದ್ದಾರೆ.

ನಿಗದಿತ ಕಾರಣ ಕೊಡದವರ ಮೇಲೆ ಪೊಲೀಸರು ದಂಡ ಹಾಕಿದ್ದಾರೆ. ಕಾರ್ಯಕ್ರಮಗಳಿಗೆ ಓಡಾಡುವವರಿಗೆ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಅವಕಾಶ ಕೊಡುತ್ತಿದ್ದಾರೆ.

ದಿನಸಿ ಅಂಗಡಿಗಳಿಗೆ 12 ಗಂಟೆಯ ತನಕ ಅವಕಾಶ ಕೊಟ್ಟ ಕಾರಣ ನಗರ ಭಾಗದಲ್ಲಿ ಕೊಂಚ ಓಡಾಟ ಹೆಚ್ಚಿದೆ. ಹತ್ತು ಗಂಟೆ ತನಕ ಸಮಯಾವಕಾಶ ಕೊಟ್ಟರೆ ಸಾಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಇದೆ.


ಮುಂಜಾಗ್ರತೆ ವಹಿಸಿ ಕಠಿಣ ನಿಯಮ ಪಾಲಿಸಬೇಕು ಎಂಬ ಜನಾಭಿಪ್ರಾಯ ಉಡುಪಿಯಲ್ಲಿ ಕೇಳಿ ಬರುತ್ತಿದೆ…

LATEST NEWS

ಯುದ್ಧದ ಬಗ್ಗೆ ಪ್ರಧಾನಿ, ರಕ್ಷಣಾ ಸಚಿವರು ನಿರ್ಧಾರ ಮಾಡುತ್ತಾರೆ : ಪುತ್ತಿಗೆ ಶ್ರೀ

Published

on

ಉಡುಪಿ : ಭಾರತ ಹಾಗೂ ಪಾಕ್ ನಡೆವೆ ಈಗಾಗಲೇ ಉದ್ವಿಗ್ನತೆ ಉಂಟಾಗಿದ್ದು ಭವಿಷ್ಯ ಹೇಳುವುದು ಕಠಿಣ. ಈ ಕುರಿತು ಮಾತನಾಡಿದ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ “ಯುದ್ಧ ಬೇಕೋ ಬೇಡವೋ ಎನ್ನುವುದು ಪ್ರಧಾನಿ ಮತ್ತು ರಕ್ಷಣಾ ಸಚಿವರು ತೆಗೆದುಕೊಳ್ಳಬೇಕಾದ ನಿರ್ಧಾರ” ಎಂದು ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಪುತ್ತಿಗೆ ಶ್ರೀಗಳು “ಕಾಶ್ಮೀರ ಘಟನೆಗೆ ಹಿನ್ನೆಲೆ ಮತ್ತು ಕಾರಣವೇನೇಂದು ನಮಗೆ ಗೊತ್ತಿಲ್ಲ. ಕಾಶ್ಮೀರ ದಲ್ಲಿ ಭದ್ರತೆಯನ್ನು ಹೆಚ್ಚಿಸ ಬೇಕು. ಭದ್ರತೆಗೆ ಪ್ರಥಮ ಪ್ರಾಶಸ್ತ್ಯ ನೀಡ ಬೇಕು. ಶಾಂತಿಯಿಂದ ಸಮಸ್ಯೆ ಪರಿಹಾರ ಆಗುವುದು ಎಷ್ಟು ಮುಖ್ಯವೋ ಶಾಶ್ವತ ಪರಿಹಾರ ಸಿಗುವುದು ಕೂಡ ಅಷ್ಟೇ ಮುಖ್ಯ ಶಾಂತಿ, ಶಾಂತಿ ಎಂದು ಹೇಳಿ ನಾವೇ ಯಾವಾಗಲೂ ಸಂಕಷ್ಟಕ್ಕೀಡಾಗುತ್ತಿದ್ದರೆ ಅರ್ಥವಿಲ್ಲ. ಶಾಶ್ವತ ಪರಿಹಾರವೇ ಮುಖ್ಯ” ಎಂದರು.

ಪೆಹಲ್ಗಾಂವ್  ಘಟನೆಯಿಂದ ನನಗೆ ಆಶ್ಚರ್ಯವಾಗಿದೆ. ಈವರೆಗೆ ಧರ್ಮವನ್ನು ನೋಡಿ ಭಯೋತ್ಪಾದನೆ ನಡೆಯುತ್ತಿರಲಿಲ್ಲ. ಮಾರ್ಕೆಟ್ ನಲ್ಲಿ , ಬಸ್ ಸ್ಟ್ಯಾಂಡ್ ನಲ್ಲಿ ಎಲ್ಲೆಂದರಲ್ಲಿ  ಬಾಂಬ್ ಹಾಕುತ್ತಿದ್ದರು. ಅದನ್ನು ಮಾನಸಿಕ ದೌರ್ಬಲ್ಯ ಎಂದು ಭಾವಿಸ ಬಹುದಿತ್ತು. ಈಗ ಧರ್ಮವನ್ನು ಕೇಳಿ ಹೊಡೆಯುತ್ತಿದ್ದಾರೆ. ಹಿಂದೂ ಸಮಾಜ ಜಾಗೃತವಾಗ ಬೇಕು, ಒಗ್ಗಟ್ಟಾಗ ಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು, ಭಯೋತ್ಪಾದಕರಿಗೆ ಕಠಿನ ಶಿಕ್ಷೆಯಾಗ ಬೇಕು. ತಾತ್ಕಾಲಿಕ ಪರಿಹಾರಗಳಿಂದ ಸಮಸ್ಯೆ ಬಗೆಹರಿಯಲ್ಲ. ಶಾಶ್ವತ ಪರಿಹಾರ ಏನು ಅನ್ನೋದನ್ನ ಪ್ರಧಾನ ಮಂತ್ರಿಗಳು ಮತ್ತು ಸಚಿವ ಸಂಪುಟ ನಿರ್ಧಾರ ಮಾಡ ಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

Continue Reading

LATEST NEWS

ಉಡುಪಿ : ಹುಲಿ ವೇಷದಾರಿ ಹೃದಯಾಘಾತಕ್ಕೆ ಬಲಿ

Published

on

ಉಡುಪಿ : ನವರಾತ್ರಿ ಸಮಯ ಹುಲಿ ವೇಷ ಹಾಕಿ ಮನರಂಜನೆ ನೀಡುತ್ತಿದ್ದ ಯುವ ಹುಲಿ ವೇಷದಾರಿ ಅಜ್ಜರಕಾಡು ನಿವಾಸಿ ಅನಿಲ್ ಕುಮಾರ್(31) ಇಂದು ಬೆಳಿಗ್ಗೆ (ಏ.28) ಹೃದಯಘಾತದಿಂದ ವಿಧಿವಶರಾಗಿದ್ದಾರೆ.

ಅನಿಲ್ ಕುಮಾರ್ ಕಾಡಬೆಟ್ಟು ಅಶೋಕ್ ರಾಜ್ ಅವರ ತಂದಡಲ್ಲಿ ಹುಲಿ ಕುಣಿತದಲ್ಲಿ ಕಲಾವಿದರಾಗಿ ಗುರುತಿಸಿ ಕೊಂಡಿದ್ದರು. ಜೊತೆಗೆ  ಪೈಂಟಿಂಗ್ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ : ರೈಲ್ವೇ ಇಲಾಖೆ ಪರೀಕ್ಷೆಯಲ್ಲೂ ಎಡವಟ್ಟು; ಜನಿವಾರದ ಜೊತೆ ತಾಳಿಗೂ ಕಂಟಕ

ಈ ಘಟನೆ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ರೈಲ್ವೇ ಇಲಾಖೆ ಪರೀಕ್ಷೆಯಲ್ಲೂ ಎಡವಟ್ಟು; ಜನಿವಾರದ ಜೊತೆ ತಾಳಿಗೂ ಕಂಟಕ

Published

on

ಮಂಗಳೂರು : ಇತ್ತಿಚೆಗೆ ಸಿಇಟಿ ಪರೀಕ್ಷೆಯ ವೇಳೆ ಜನಿವಾರ ತೆಗೆಸಿದ ವಿಚಾರವಾಗಿ ಬ್ರಾಹ್ಮಣ ಸಮೂದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಹಿಂದೂ ಸಂಘಟನೆಗಳೂ ಕೂಡ ಪರೀಕ್ಷಾರ್ಥಿಗಳಿಗೆ ಜನಿವಾರ ತೆಗೆಸಿದ ವಿಚಾರವಾಗಿ ಪ್ರತಿಭಟನೆ ನಡೆಸಿತ್ತು. ಇದೀಗ ರೈಲ್ವೇ ಇಲಾಖೆ ಕೂಡಾ ಇಂತಹದೇ ಒಂದು ಯಡವಟ್ಟು ಮಾಡಿದೆ. ಅದೇನು ಗೊತ್ತಾ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಜನಿವಾರ ಪ್ರಕರಣ ತೀವ್ರ ಸುದ್ಧಿಯಾಗುತ್ತಿರುವ ಬೆನ್ನಲ್ಲೇ ಇದೀಗ ಪರೀಕ್ಷೆ ಬರೆಯಲು ಜನಿವಾರ ಮತ್ತು ಮಂಗಳ ಸೂತ್ರ ತೆಗೆದು ಬರುವಂತೆ ಸೂಚಿಸಿದೆ. ರೈಲ್ವೇ ಇಲಾಖೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಹುದ್ದೆಗೆ ಏಪ್ರಿಲ್ 29 ರಂದು ಪರೀಕ್ಷೆ ನಡೆಯಲಿದ್ದು, ಹಾಲ್ ಟಿಕೇಟ್ ನಲ್ಲೇ ಈ ಸೂಚನೆಯನ್ನು ನೀಡಿದೆ.

ಮಂಗಳೂರು ನಗರದ ಬೋಂದೇಲ್‌ ಸಮೀಪದ ಮಣೇಲ್ ಶ್ರೀನಿವಾಸ್ ನಾಯಕ್ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ರೈಲ್ವೇ ಇಲಾಖೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ನಡೆಯಲಿದ್ದು, ಹಾಲ್ ಟಿಕೇಟ್ ನಲ್ಲಿ ನಮೂದಿಸಿದ ವಿಚಾರ ಧಾರ್ಮಿಕ ಸ್ವಾತಂತ್ರ್ಯಕ್ಕೆ ದಕ್ಕೆ ತರುವ ವಿಚಾವಾಗಿದೆ. ಹೀಗಾಗಿ ಈ ಸೂಚನೆಯನ್ನು ರದ್ದು ಪಡಿಸುವಂತೆ ರೈಲ್ವೇ ಇಲಾಖೆಗೆ ಸೂಚಿಸಬೇಕು ಎಂದು ಹಿಂದೂ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page