Connect with us

ಉದ್ಯಮ ಕ್ಷೇತ್ರಕ್ಕೂ ತಟ್ಟಿದ ಕೊರೋನಾ ಕಂಟಕ

Published

on

ಉಧ್ಯಮ ಕ್ಷೇತ್ರಕ್ಕೂ ತಟ್ಟಿದ ಕೊರೋನಾ ಕಂಟಕ

ಬೆಂಗಳೂರು: ಇಡೀ ಜಗತ್ತಿಗೆ ಮಾರಕವಾಗಿ ಕಾಡುತ್ತಿರುವ ಕೊರೋನಾ ವೈರಸ್‌ ಉದ್ಯಮ ಕ್ಷೇತ್ರಕ್ಕೂ ಕಂಟಕವಾಗಿ ಪರಿಣಮಿಸಿದೆ. ದೇಶದ ಹೋಟೆಲ್‌ ಆತಿಥ್ಯ, ಏರ್‌ಲೈನ್ಸ್‌, ಟ್ರಾವೆಲ್ಸ್‌, ಕೈಗಾರಿಕೆಗಳು ಸೇರಿದಂತೆ ಎಲ್ಲ ಉದ್ಯಮಗಳಿಗೆ ಕೊರೊನಾ ತೀವ್ರ ಹೊಡೆತ ನೀಡಿದೆ. ಮೊದಲೇ ಆರ್ಥಿಕ ಹೊಡೆತ ತಿಂದಿರುವ ದೇಶಕ್ಕೆ ಇದು ಮತ್ತೊಂದು ಪೆಟ್ಟು ನೀಡಿದೆ.

ಆರ್ಥಿಕ ಬೆಳವಣಿಗೆ ಮತ್ತು ಉದ್ಯಮ ಸುಮಾರು ಎರಡು ವರ್ಷಗಳಷ್ಟು ಹಿಂದಿನ ಸ್ಥಿತಿಗೆ ತಲುಪುವ ಆತಂಕ ಶುರುವಾಗಿದೆ. ಈಗಾಗಲೇ ಹೋಟೆಲ್‌ ಆತಿಥ್ಯ ಕ್ಷೇತ್ರ ಶೇ.50ಕ್ಕೂ ಹೆಚ್ಚು ಪ್ರಮಾಣದಲ್ಲಿ ಕುಸಿದಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ತುಂಬಿರುತ್ತಿದ್ದ ಹೋಟೆಲ್‌ಗಳಿಗೆ ಬುಕ್ಕಿಂಗ್‌ ರದ್ದಾಗುತ್ತಿದ್ದು, ಹೊಸ ಬುಕ್ಕಿಂಗ್‌ ನಿಂತೇ ಹೋಗಿದೆ.

ಇನ್ನು ಉದ್ಯಮ, ವ್ಯವಹಾರ ಸಂಬಂಧಿತ ಸಭೆ, ಸಮಾರಂಭ, ಸಮ್ಮೇಳನಗಳು ಕೂಡ ನಡೆಯುತ್ತಿಲ್ಲ. ಪರಿಣಾಮ ವಹಿವಾಟಿಗೆ ಸಂಬಂಧಿಸಿದಂತೆ ಪರಿಶೀಲನೆಗಾಗಿ ಬರುತ್ತಿದ್ದ ದೊಡ್ಡ ದೊಡ್ಡ ಕಂಪನಿಗಳ ಅಧಿಕಾರಿಗಳು ನಗರದತ್ತ ಮುಖ ಮಾಡುತ್ತಿಲ್ಲ. ಮಾರ್ಚ್ ತಿಂಗಳಲ್ಲಿನ ಹೋಟೆಲ್‌ ಬುಕ್ಕಿಂಗ್‌ ಶೇ.30ರಷ್ಟು ರದ್ದಾಗಿದ್ದು, ಮತ್ತಷ್ಟು ಜನ ರದ್ದು ಮಾಡುತ್ತಿದ್ದಾರೆ.

ಮತ್ತೊಂದೆಡೆ ತೀವ್ರ ಪ್ರಮಾಣದ ಸಂಕಷ್ಟ ಎದುರಿಸುತ್ತಿರುವ ಏರ್‌ಲೈನ್ಸ್‌ ಕಂಪನಿಗಳು ಟಿಕೆಟ್‌ ದರವನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಿದರೂ ಪ್ರಯಾಣಿಸುವವರೇ ಇಲ್ಲದಂತಾಗಿದೆ. ಹೀಗಾಗಿ ಮಾರ್ಚ್ ತಿಂಗಳಲ್ಲಿ ಪ್ರಯಾಣದ ದಿನಾಂಕ ಬದಲಿಸುವವರಿಗೆ ಶುಲ್ಕ ವಿಧಿಸುವುದಿಲ್ಲ ಎಂದು ಇಂಡಿಗೋ ಮತ್ತು ಏರ್‌ ಏಷ್ಯಾ ಘೋಷಿಸಿವೆ.

ಕೈಗಾರಿಕೆಗಳು ಅತಿ ಹೆಚ್ಚು ಪ್ರಮಾಣದಲ್ಲಿ ಬಾಧಿತವಾಗಿದ್ದು, ವಿದೇಶಗಳಿಗೆ ರಫ್ತು ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. ಉತ್ಪಾದನೆಯಾಗುವ ವಸ್ತುಗಳನ್ನು ವಿದೇಶಗಳಲ್ಲಿ ಅನ್‌ಲೋಡ್‌, ಸ್ವೀಕಾರ, ಸಾಗಣೆ ಮಾಡುವವರು ಇಲ್ಲದೇ, ಅಲ್ಲಿಂದ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ದೇಶಿಯ ಮಾರುಕಟ್ಟೆಗೆ ಅಗತ್ಯವಿರುವಷ್ಟು ಮಾತ್ರ ಉತ್ಪಾದನೆ ಮಾಡಲಾಗುತ್ತಿದ್ದು, ಮಾನವ ಸಂಪನ್ಮೂಲ ಮತ್ತು ಹೂಡಿಕೆ ವ್ಯರ್ಥವಾಗುತ್ತಿದೆ. ತರಕಾರಿ, ಹಣ್ಣು, ಹೂವು ಸೇರಿದಂತೆ ಇನ್ನಿತರ ಪದಾರ್ಥಗಳು ವಿದೇಶಕ್ಕೆ ಹೋಗುತ್ತಿಲ್ಲ. ಈ ಕಾರಣದಿಂದ ಅವುಗಳ ಬೆಲೆಯಲ್ಲಿಯೂ ಗಣನೀಯ ಕುಸಿತ ಕಂಡಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಬೆಂಗಳೂರು: ಟಿಪ್ಪರ್‌ ಹರಿದು ವೈದ್ಯಕೀಯ ವಿದ್ಯಾರ್ಥಿನಿ ಜೀವಾಂತ್ಯ!

Published

on

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಟಿಪ್ಪರ್‌ ಲಾರಿ ಹರಿದು 4ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನ 21 ವರ್ಷದ ಕೃತಿಕಾ ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ ಕೃತಿಕಾ ಜೊತೆಗಿದ್ದ ಮತ್ತೊಬ್ಬ ವಿದ್ಯಾರ್ಥಿನಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಗೆಳತಿ ಹಂಸಾ ಜೊತೆ ಕೃತಿಕಾ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಚಲಿಸುತ್ತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸ್ಕಿಡ್ ಆಗಿ, ಇಬ್ಬರು ಕೆಳಗೆ ಬಿದ್ದಿದ್ದಾರೆ. ಸ್ಕೂಟಿ ಚಲಾಯಿಸುತ್ತಿದ್ದ ಹಂಸಾ ಎಡಭಾಗಕ್ಕೆ ಬಿದ್ರೆ, ಕೃತಿಕಾ ಬಲಭಾಗಕ್ಕೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಕೃತಿಕಾ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಪ್ರೀತಿಸುವಂತೆ ಸಹಪಾಠಿಯಿಂದ ಒತ್ತಾಯ; ಶಾಲಾ ಕಟ್ಟಡದಿಂದ ಜಿ*ಗಿದು ವಿದ್ಯಾರ್ಥಿನಿ ಆ*ತ್ಮಹ*ತ್ಯೆ

ಹಂಸಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಂಗೇರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಬಗ್ಗೆ ಡಿಸಿಪಿ ಅನೂಪ್ ಶೆಟ್ಟಿ ಹೇಳಿದ್ದೇನು?

ಮೈಸೂರು ರಸ್ತೆಯಲ್ಲಿರುವ ಆರ್.ಆರ್ ಆಸ್ಪತ್ರೆ ಎಕ್ಸಿಟ್ ಗೇಟ್ ನಲ್ಲಿ ಅಪಘಾತ ನಡೆದಿದೆ. ಇಬ್ಬರು ಮೆಡಿಕಲ್ ವಿದ್ಯಾರ್ಥಿನಿ ಬೈಕ್ ನಲ್ಲಿ ತೆರಳುತ್ತಿದ್ದರು. ಬೆಂಗಳೂರಿಂದ ಮೈಸೂರು ಕಡೆಗೆ ಹೋಗ್ತಿದ್ದ ಲಾರಿ ಡಿಕ್ಕಿ ಆಗಿದೆ. ಹಿಂಬದಿ ಸವಾರಿಣಿ ಸಾವನ್ನಪ್ಪಿದ್ದಾರೆ, ಚಾಲಕಿಗೆ ಗಾಯವಾಗಿದೆ. ಮೃತಳು ಆರ್.ಆರ್.ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ ಹೇಳಿದ್ದಾರೆ.

Continue Reading

International news

ಭಾರತಕ್ಕೆ ಹೊರಟಿದ್ದ ಸರಕು ಹಡಗಿನ ಮೇಲೆ ಇರಾನ್‌ ದಾ*ಳಿ

Published

on

ಮಂಗಳೂರು/ಟೆಹ್ರಾರ್ : ಯುಎಇ ಬಂದರಿನಿಂದ ಹೊರಟಿದ್ದ ಥಾಯ್ ಧ್ವಜದ ಸರಕು ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯ ಬಳಿ ದಾ*ಳಿ ನಡೆಸಲಾಗಿದೆ.

ಇಪ್ಪತ್ತು ನಾವಿಕರನ್ನು ರಕ್ಷಿಸಲಾಗಿದ್ದು, ಮೂವರು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಥಾಯ್ ಕಂಪೆನಿ ಪ್ರೆಷಿಯಸ್ ಶಿಪ್ಪಿಂಗ್ ಪಿಸಿಎಲ್ ಒಡೆತನದ ಬೃಹತ್ ವಾಹಕ ನೌಕೆ ಮಯೂರಿ ನಾರಿ ಹೆಸರಿನ ನೌಕೆ ಮೇಲೆ ದಾಳಿ ನಡೆಸಲಾಗಿದೆ.

ಈ ನೌಕೆ ಯುಎಇಯ ಖಲೀಫಾ ಬಂದರಿನಿಂದ ಹೊರಟು ಭಾರತದ ಕಾಂಡ್ಲಾ ಬಂದರಿನತ್ತ ಸಾಗುತ್ತಿತ್ತು. ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವಾಗ ಈ ದಾ*ಳಿ ನಡೆದಿದೆ. ದಾ*ಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ.

ಇದನ್ನೂ ಓದಿ : ಇಸ್ರೇಲ್‌-ಇರಾನ್‌ ಸಂಘರ್ಷ; ಕಿಮ್‌ ಜಾಂಗ್‌ ಉನ್‌ ಎಂಟ್ರಿ..ಬೆಂಬಲ ಯಾರಿಗೆ!?

20 ನಾವಿಕರನ್ನು ತೆಪ್ಪಗಳ ಮೂಲಕ ಒಮಾನಿ ನೌಕಾಪಡೆ ರಕ್ಷಿಸಿದ್ದು, ಉಳಿದ ಮೂವರು ನೌಕೆಯಲ್ಲಿಯೇ ಇದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. 178 ಮೀಟರ್ ಉದ್ದವಿರುವ ಈ ಹಡಗು 30,000 ಟನ್ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಸದ್ಯ ದಾ*ಳಿಯ ಬಗ್ಗೆ ತನಿಖೆ ನಡೆಸುವುದಾಗಿ ರಾಯಲ್ ಥಾಯ್ ನೌಕಾಪಡೆ ಹೇಳಿಕೆ ನೀಡಿದೆ.

 

 

 

 

 

 

Continue Reading

INTERNATIONAL

ಇಸ್ರೇಲ್‌-ಇರಾನ್‌ ಸಂಘರ್ಷ; ಕಿಮ್‌ ಜಾಂಗ್‌ ಉನ್‌ ಎಂಟ್ರಿ..ಬೆಂಬಲ ಯಾರಿಗೆ!?

Published

on

ಪ್ಯೊಂಗ್ಯಾಂಗ್: ಇರಾನ್-ಇಸ್ರೇಲ್‌ ಸಂಘರ್ಷ ಜಗತ್ತಿನ ನಿದ್ದೆಗೆಡಿಸಿದೆ. ಇಸ್ರೇಲ್‌ ಗೆ ಅಮೆರಿಕ ಬೆಂಬಲವಾಗಿ ನಿಂತಿದ್ದರೆ, ಇರಾನ್‌ ಒಬ್ಬಂಟಿ ಹೋರಾಟ ನಡೆಸುತ್ತಿತ್ತು. ಇದೀಗ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಎಂಟ್ರಿ ಕೊಟ್ಟಿದ್ದಾರೆ. ಇರಾನ್‌-ಇಸ್ರೇಲ್‌ ಯುದ್ದದ ಬಗ್ಗೆ ಮಾತನಾಡಿದ್ದು, ಅಮೆರಿಕ ವಿರುದ್ದ ಗುಡುಗಿದ್ದಾರೆ.


ಹೌದು.. ಅಮೆರಿಕ ಮತ್ತು ಇರಾನ್‌ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೂರು ದೇಶಗಳ ನಡುವಿನ ಯುದ್ದೋನ್ಮಾದ ಕೇವಲ ಮಧ್ಯಪ್ರಾಚ್ಯ ಮಾತ್ರವಲ್ಲದೇ, ಜಾಗತಿಕ ಆತಂಕವನ್ನೂ ಹೆಚ್ಚಿಸಿದೆ. ಈ ನಡುವೆ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಇದೀಗ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಇರಾನ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ಇರಾನ್‌ ಮಾಜಿ ಸುಪ್ರೀಂ ಲೀಡರ್‌ ಅಯತೊಲ್ಲಾ ಅಲಿ ಖಮೇನಿಯ ಹತ್ಯೆಯ ನಂತರ ಅಧಿಕಾರ ವಹಿಸಿಕೊಂಡ ಮುಜ್ತಬಾ ಖಮೇನಿ ಅವರಿಗೆ ಉತ್ತರ ಕೊರಿಯಾದ ಕಿಮ್‌ ಜಾಂಗ್‌ ಉನ್‌ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ಕಾನೂನುಬಾಹಿರ ಎಂದು ಕರೆದಿರುವ ಉತ್ತರ ಕೊರಿಯಾ, ಯುದ್ದದ ನಡುವೆಯೇ ತನ್ನ ಅತ್ಯಂತ ಶಕ್ತಿಶಾಲಿ ಯುದ್ದನೌಕೆಯಿಂದ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳನ್ನು ಉಡಾಯಿಸಿ ಅಮೆರಿಕಕ್ಕೆ ನೇರ ಸವಾಲು ಹಾಕಿದೆ. ಅಲ್ಲದೆ ಸಂಕಷ್ಟದ ಸಮಯದಲ್ಲಿ ತಾವು ಇರಾನ್‌ ಜೊತೆಗೆ ಇರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಇರಾನ್-ಇಸ್ರೇಲ್ ಸಂಘರ್ಷ: ಮಾ.12ರಂದು ಮಂಗಳೂರು- ಮಧ್ಯ ಪ್ರಾಚ್ಯ ಮಾರ್ಗದ 14 ವಿಮಾನಗಳು ರದ್ದು

ಇರಾನ್‌ ವಿಷಯದಲ್ಲಿ ಕೇವಲ ಹೇಳಿಕೆ ನೀಡಿ ಸುಮ್ಮನಾಗದ ಕಿಮ್‌ ಜಾಂಗ್‌ ಉನ್‌, ಪ್ರಾಯೋಗಿಕವಾಗಿ ತನ್ನ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಉತ್ತರ ಕೊರಿಯಾದ ಅತಿದೊಡ್ಡ ನೌಕಾ ವಿಧ್ವಂಸಕ ನೌಕೆ ಚೋ ಹ್ಯೋನ್‌ನಿಂದ ವ್ಯೂಹಾತ್ಮಕ ಕ್ರೂಸ್‌ ಕ್ಷಿಪಣಿಗಳ ಪರೀಕ್ಷೆಯನ್ನು ಕಿಮ್‌ ವೈಯಕ್ತಕವಾಗಿ ಮೇಲ್ವಿಚಾರಣೆ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page