Connect with us

ಕೊರೋನಾ ಎಫೆಕ್ಟ್: ಕಟೀಲು ಯಕ್ಷಗಾನ ಮೇಳದ ತಿರುಗಾಟ ತಾತ್ಕಾಲಿಕ ಬಂದ್

Published

on

ಕೊರೋನಾ ಎಫೆಕ್ಟ್: ಕಟೀಲು ಯಕ್ಷಗಾನ ಮೇಳದ ತಿರುಗಾಟ ತಾತ್ಕಾಲಿಕ ಬಂದ್

ಮಂಗಳೂರು: ಕೊರೊನಾ ವೈರಸ್ ನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ  ಕಟೀಲು ಯಕ್ಷಗಾನ ಮೇಳದ ತಿರುಗಾಟವನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕಟೀಲಿನ ಯಕ್ಷಗಾನ ಮೇಳಗಳು ಕೇವಲ ಮನರಂಜನೆ ಮಾತ್ರವಲ್ಲದೆ ಆರಾಧನೆಯಾಗಿದ್ದು  ಮೇಳಗಳು ತಿರುಗಾಟ ಆರಂಭದ ನಂತರ ಯಕ್ಷಗಾನ ನಿಲ್ಲಬಾರದೆಂಬ ನಂಬಿಕೆ ಇದೆ.

ಇದೂ ಕೂಡ ದೇವರ ಪೂಜೆ ಎಂಬುದು ಇಲ್ಲಿಯ ನಂಬಿಕೆ. ಯಕ್ಷಗಾನ ನಿಲುಗಡೆ ಆದರೂ ಎಲ್ಲಾ ಮೇಳಗಳ ದೇವರುಗಳಿಗೆ ಕಟೀಲಿನಲ್ಲಿ  ಅರ್ಚಕರು ತ್ರಿಕಾಲಪೂಜೆ ಮಾಡುತ್ತಾರೆ. ದೇವಳದ ರಥಬೀದಿಯಲ್ಲಿ ರಂಗಸ್ಥಳದಲ್ಲಿ  ಕಟ್ಟೇಶ (ಬಾಲಗೋಪಾಲ) ವೇಷದವರು ಕುಣಿದು ಆರತಿ ಮಾಡುತ್ತಾರೆ. ಅಲ್ಲಿ ವರೆಗಿನ ಸಂಪ್ರದಾಯ ದೇವರ ಪೂಜೆ ಎಂಬ ನಂಬಿಕೆ ಇರುವುದರಿಂದ ಮುಂದಿನ ಆದೇಶದವರೆಗೆ ಕಟೀಲಿನಲ್ಲಿ ನಡೆಯುತ್ತದೆ.

ಈ ಹಿನ್ನಲೆಯಲ್ಲಿ ದೇವರ ಪೂಜಾರೂಪವಾದ ಯಕ್ಷಗಾನವನ್ನು ಮಾತ್ರ ಕಟೀಲು ರಥಬೀದಿಯಲ್ಲಿ ನಿನ್ನೆಯಿಂದ ನಡೆಸಲಾಗುವುದು.  ಸಂಜೆ ಏಳುಗಂಟೆಗೆ ಆರೂ ಮೇಳಗಳ ದೇವರ ಪೂಜೆಯನ್ನು ಬಿಡಾರದಲ್ಲಿಯೇ ನೆರವೇರಿಸಿ ಅಲ್ಲಿಂದ ರಂಗಸ್ಥಳಕ್ಕೆ ಕುಕ್ಕೇಶ( ಕೋಡಂಗಿ) ಬಂತು.  ಸೀಮಿತ ಹಾಡುಗಳ ನಂತರ ಕಟ್ಟೇಶ(ಬಾಲಗೋಪಾಲ) ಬಂದು ಕುಣಿದಾಗ ಆರೂ ಮೇಳದ ದೇವರು ರಂಗಸ್ಥಳಕ್ಕೆ ಬಂದ್ರು  ದೇವರ ಪೂಜೆ ಬಾಲಗೋಪಾಲ ವೇಷದವರು ನೆರವೇರಿಸಿದ ನಂತರ ಮೇಳದ ದೇವರ ಪೂಜಾವಿಧಿಗಳು ಶಾಸ್ತ್ರೋಕ್ತವಾಗಿ ಹಾಗೂ ಸಾಂಪ್ರದಾಯಿಕವಾಗಿ ಮುಕ್ತಾಯವಾಯ್ತು.

ಅಲ್ಲಿಗೆ ಯಕ್ಷಗಾನ ಮುಗಿಸಿ ದೇವರಿಗೆ ಬಿಡಾರದಲ್ಲಿ ಪುನಃ ಅರ್ಚಕರು ಪೂಜೆ ಮಾಡಿದ ನಂತರ ಇಡೀ ಪ್ರಕ್ರಿಯೆ  ಮುಗಿದಿದೆ.. ಕಟೀಲು ಆರೂ ಮೇಳಗಳು ಹೊರಡುವ ಮತ್ತು ಮೇಳ ಒಳಗಾಗುವ ಸಂದರ್ಭ ರಥಬೀದಿಯ ಆರೂ ರಂಗಸ್ಥಳದಲ್ಲಿ ದೇವರು ಬರುವ ಸಂಪ್ರದಾಯವಿದ್ದು, ಅಷ್ಟಮಿಯ ಆಟದ ದಿನ ಆರೂ ಮೇಳದ ದೇವರು ಒಂದೇ ರಂಗಸ್ಥಳಕ್ಕೆ ಬರುವ ಸಂಪ್ರದಾಯವಿದ್ದು ಇದ್ದು ವರ್ಷಕ್ಕೆ ಒಂದೇ ಬಾರಿ ನಡೆಯುತ್ತದೆ. ಆದರೆ ಕೊರೊನ ಹಿನ್ನೆಲೆಯಲ್ಲಿ ತಿರುಗಾಟ ರದ್ದಾದ ಕಾರಣ, ಒಂದೇ ರಂಗಸ್ಥಳದಲ್ಲಿ ಆರೂ ಮೇಳಗಳ ದೇವರನ್ನು ಕಾಣ ಬಹುದಾಗಿದೆ.

ಕೊರೋನ ಹಿನ್ನೆಲೆಯಲ್ಲಿ ಕಟೀಲು ದೇವಳದಲ್ಲಿ ಎಲ್ಲ ಸೇವೆಗಳು ರದ್ದಾಗಿದ್ದು, ದೇವಳಕ್ಕೆ ಬೆರಳೆಣಿಕೆಯ ಭಕ್ತರು ಭೇಟಿ ನೀಡುತ್ತಿದ್ದು, ದೇವರ ದರ್ಶನ ಬಿಟ್ಟು ಎಲ್ಲಾ ವ್ಯವಸ್ಥೆಗಳು ನಿಲ್ಲಿಸಲಾಗಿದೆ.  ದೇವಳಕ್ಕೆ ಬುಧವಾರ ದುಬೈನಿಂದ ಬಂದ ಕುಟುಂಬವೊಂದನ್ನು ಪೊಲೀಸರು ವಾಪಾಸು ಕರೆಸಿದ್ದಾರೆ, ದುಬೈಯಿಂದ ಭಾರತಕ್ಕೆ ಬಂದವರನ್ನು 14 ದಿನ ತೀವೃ ನಿಗಾದಲ್ಲಿ ಇರಿಸಬೇಕಾಗಿದ್ದು,  ದುಬೈಯಿಂದ ಜಿಲ್ಲೆಗೆ ಆಗಮಿಸಿದ್ದ ಮಂಗಳವಾರ ವ್ಯಕ್ತಿಯೋರ್ವರನ್ನು ತಪಾಸಣೆ ನಡೆಸಲಾಗಿದ್ದು ಕೊರೊನಾ ತಪಾಸಣೆಯಲ್ಲಿ  ನೆಗಟಿವ್  ಬಂದಿದ್ದು,  ಆದರೆ ಹೊರಗಡೆ ತಿರುಗಾಟ ನಡೆಸದಂತೆ ವೈದ್ಯರು ಸೂಚಿಸಿದ್ದಾರೆ.

ಆದರೆ ಕುಟುಂಬದೊಂದಿಗೆ ಕಟೀಲಿಗೆ ಆಗಮಿಸಿದ ಅವರು ದೇವರ ದರ್ಶನ ಪಡೆದು ಪರಿಸರದಲ್ಲಿ ತಿರುಗಾಟ ನಡೆಸಿದ್ದಾರೆ. ಮಾಹಿತಿ ಪಡೆದ ಬಜಪೆ ಪೊಲೀಸರು ದೇವಳಕ್ಕೆ ಬಂದು ಅವರನ್ನು ವಾಪಾಸು ಕರೆದುಕೊಂಡು ಹೋದ ಘಟನೆ ನಡೆದಿದೆ. ಇನ್ನು  ಕಿನ್ನಿಗೋಳಿಯ ದಾಮಸ್ಕಟ್ಟೆಯಲ್ಲಿ ವಿದೇಶದಿಂದ ಎರಡು ವಾರದ ಹಿಂದೆ ಬಂದ ವ್ಯಕ್ತಿಯೋರ್ವರಿಗೆ ಕೊರೊನದ ಎರಡು ಲಕ್ಷಣಗಳು ಗೋಚರಿಸಿದ್ದು, ತಪಸಣೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ.

 

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಬಜೆಟ್ ನಲ್ಲಿ ದ.ಕ ಜಿಲ್ಲೆ ಸಹಿತ ಕರಾವಳಿ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ, ಇದು ಅಮಲುಪ್ರೇರಿತ ಸರ್ಕಾರ-ಸತೀಶ್ ಕುಂಪಲ

Published

on

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಪ್ರದೇಶವನ್ನು ಕಡೆಗಣಿಸಿದ್ದಾರೆ. ಗ್ಯಾರೆಂಟಿ ಯೋಜನೆಗಳ ಬಗ್ಗೆ ಮಾತ್ರ ಗಮನ ಹರಿಸಿದ್ದಾರೆಯೇ ಹೊರತು ಅಭಿವೃದ್ಧಿ ಕೆಲಸಗಳಿಗೆ ಅನುದಾನ ಒದಗಿಸಿಲ್ಲ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.

ಶನಿವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಕರಾವಳಿಯ ಜನರು ಈ ಬಜೆಟ್ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದರು. ಈ ಭಾಗದ ಶಾಸಕರು ವಿಧಾನ ಮಂಡಲದ ಅಧಿವೇಶನಗಳಲ್ಲಿ ಹಲವು ಪ್ರಸ್ತಾಪಗಳನ್ನು ಮುಂದಿಟ್ಟಿದ್ದರು. ಆದರೆ ಯಾವುದಕ್ಕೂ ಅನುದಾನ ಒದಗಿಸಿಲ್ಲ ಎಂದರು. ಅಲ್ಪ ಸಂಖ್ಯಾತ ಸಮುದಾಯಗಳನ್ನು ಅದರಲ್ಲೂ ಮುಖ್ಯವಾಗಿ ಮುಸ್ಲಿಮರನ್ನು ಓಲೈಸುವ ವೋಟ್ ಬ್ಯಾಂಕ್ ಬಜೆಟ್ ಇದಾಗಿದೆ.

ಸಾಲ ಮಾಡುವ ಕೆಲಸವನ್ನು ಮಾತ್ರ ಮಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಸಾಲದ ಮೊತ್ತ 5 ಲಕ್ಷ ಕೋಟಿ ರೂಪಾಯಿಗೆ ಏರಿದೆ.  2013 ರಲ್ಲಿ ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಾಲದ ಮೊತ್ತ 1.23 ಲಕ್ಷ ಕೋಟಿ ರೂಪಾಯಿ ಇತ್ತು. ಅಂದಿನಿಂದ ಸಾಲವನ್ನೇ ಮಾಡುತ್ತಾ ಬಂದಿದ್ದಾರೆ ಎಂದು ಟೀಕಿಸಿದರು.  ಹಾಲು ಉತ್ಪಾದಕರ ಪ್ರೋತ್ಸಾಹ ಧನ 9 ತಿಂಗಳುಗಳಿಂದ ಪಾವತಿಯಾಗಿಲ್ಲ.

ಸುಮಾರು 900 ಕೋಟಿ ರೂ. ಬಾಕಿ ಇದೆ. ವಿವಿಧ ನಿಗಮಗಳಿಗೆ ಅನುದಾನ ಕಡಿಮೆ ಮಾಡಿದೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ವರ್ಗದವರ ನಿಗಮಗಳಿಗೆ ಅನುದಾನ ಕಡಿಮೆ ಮಾಡುವ ಮೂಲಕ ಅನ್ಯಾಯ ಎಸಗಿದೆ. ಇದೊಂದು ಅಮಲು ಪ್ರೇರಿತ ಸರಕಾರ. ಕಂಬಳ ಕ್ರೀಡೆಗೆ ಅನುದಾನ ಒದಗಿಸಿಲ್ಲ. ದ.ಕ. ಉಡುಪಿ ಜಿಲ್ಲೆಯಲ್ಲಿ ಐಟಿ ಉದ್ಯಮಕ್ಕೆ ಅನುದಾನ ನೀಡಿಲ್ಲ. ಮೀನುಗಾರಿಕೆಗೆ ಯಾವುದೇ ಹೊಸ ಯೋಜನೆ ಇಲ್ಲ. ಕಡಲ ಕೊರೆತ ಸಮಸ್ಯೆಗೆ ಪರಿಹಾರ ಇಲ್ಲ. ಅಭಿವೃದ್ಧಿಗೆ ಮಾರಕವಾದ ಬಜೆಟ್ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕೊಟ್ಟಾರಿ , ಬಿಜೆಪಿ ಮುಖಂಡ ನಿತಿನ್ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.

 

Continue Reading

DAKSHINA KANNADA

ಬಿಜೆಪಿ ಮಾಡಿದ ಕೆಲಸಗಳಿಗೆ ಕಾಂಗ್ರೆಸ್‌ ಕ್ರೆಡಿಟ್ ಪಡೆದುಕೊಳ್ತಿರೋದು ನಾಚಿಕೇಡು-ಶಾಸಕ ಕಾಮತ್ ಗರಂ

Published

on

ಮಂಗಳೂರು:  ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪ ಸಮಸ್ಯೆ ಇರುವ ಕಡೆಗಳಲ್ಲಿ ಅನುದಾನ ಮಂಜೂರು ಆಗಿದೆ ಎಂದು 28 ಜಾಗಗಳಿಗೆ ತೆರಳಿ ಕಾಮಗಾರಿಗೆ ಅನುದಾನ ನೀಡಲಾಗಿದೆ ಎಂದು ಹೇಳುತ್ತಿರುವ ಕಾಂಗ್ರೆಸ್ ನಾಯಕರು ದಿನನಿತ್ಯ ಪತ್ರಿಕೆಗಳಲ್ಲಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನಿರಂತರವಾಗಿ ಒತ್ತಡ ಹೇರಿದ ಫಲವಾಗಿ ಪ್ರಕೃತಿ ವಿಕೋಪದಡಿ ಹಲವು ಕಡೆಗಳಲ್ಲಿ ಕಾಮಗಾರಿ ಮಾಡಲು ಅನುದಾನ ಮಂಜೂರು ಮಾಡಲಾಗಿದೆ. ಆದರೆ ಒಂದು ರೂಪಾಯಿ ಕೆಲಸ ಮಾಡದೆ ಅದರ ಕ್ರೆಡಿಟ್‌ ಅನ್ನು ಕಾಂಗ್ರೆಸ್ಸಿಗರು ಪಡೆಯುತ್ತಿದ್ದಾರೆ ಎಂದು ದೂರಿದರು.

ಸರಕಾರಕ್ಕೆ ಅದರದ್ದೇ ಆದ ನಿಯಮಗಳಿವೆ. ಅದನ್ನು ಮೀರಿ ಯಾರೂ ಹೋಗಬಾರದು. ಆದರೆ ವೇದವ್ಯಾಸ್ ಕಾಮತ್‌ ಪ್ರಯತ್ನ ಪಟ್ಟು ಈ ಬಗ್ಗೆ ಅಧಿವೇಶನದಲ್ಲಿ ಮಾತನಾಡಿ ಕಷ್ಟಪಟ್ಟು  ತಂದಿರುವ ಅನುದಾನದ ವಿಚಾರಗಳನ್ನು ತಮ್ಮದೆಂದು ಬಿಂಬಿಸುವುದನ್ನು ಖಂಡಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದಿಂದ ಯಾವುದೇ ಅನುದಾನವನ್ನು ತರಲಾಗದೆ ಹತಾಶರಾಗಿ ಕಾಂಗ್ರೆಸ್ ನಾಯಕರು  ಇದು ನಾನೇ ತಂದ್ದು ಎಂದು ಫೋಟೋ ಕ್ಲಿಕ್ಕಿಸಿ ಪತ್ರಿಕೆಗೆ ನೀಡೋದು ಸಣ್ಣತನ. ಕಾಂಗ್ರೆಸ್ಸಿಗರ  ಪ್ರಚಾರದ ಭರಾಟೆಯಲ್ಲಿ ನಿಜವಾಗಿಯೂ ಅನ್ಯಾಯವಾಗುತ್ತಿರುವ ಆಶಾ ಕಾರ್ಯಕರ್ತರಿಗೆ ಇವರೇನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ವೇದವ್ಯಾಸ್‌ ಆಶಾ ಕಾರ್ಯಕರ್ತರನ್ನು ಬೀದಿಪಾಲು ಮಾಡುವ ಕೆಲಸ ನಿಲ್ಲಿಸಿ. ಇದನ್ನು ಬಿಜೆಪಿ ಪಕ್ಷ ಒಪ್ಪಲ್ಲ.  ಮುಂದೆ ನಮ್ಮ ಸರ್ಕಾರ ಕೂಡಾ ಬರುತ್ತದೆ. ರಾಜ್ಯಸರ್ಕಾರದ ಆರೋಗ್ಯ ಇಲಾಖೆಯಿಂದ ಅನುದಾನ ತರುವ ಕೆಲಸ ನಾವು ಮಾಡುತ್ತೇವೆ. ಕೇಂದ್ರ ಸರಕಾರದ ಜೊತೆ ಮಾತನಾಡಿ ಅವರ ನೋವಿಗೆ ಬಿಜೆಪಿ ಸ್ಪಂದಿಸುವುದಾಗಿ ನುಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಪ್ರಮುಖರು ಉಪಸ್ಥಿತರಿದ್ದರು.

Continue Reading

LATEST NEWS

ದೇವಸ್ಥಾನದ ಸ್ನಾನಗೃಹದಲ್ಲಿ ಇಬ್ಬರು ಯುವತಿಯರ ಶವ ಪತ್ತೆ

Published

on

ಗಾಂಧೀನಗರ: ದೇವಾಲಯದ ಆವರಣದಲ್ಲಿ ಇಬ್ಬರು ಯುವತಿಯರ ಮೃತದೇಹಗಳು ಪತ್ತೆಯಾಗಿರುವ ಘಟನೆ ಗುಜರಾತ್‌ ಗಾಂಧೀನಗರದ ಸೂರತ್‌ನ ಸ್ವಾಮಿನಾರಾಯಣ ದೇವಾಲಯದಲ್ಲಿ ನಡೆದಿದೆ.


ದೇವಾಲಯದ ಆವರಣದಲ್ಲಿರುವ ಸ್ನಾನಗೃಹದಲ್ಲಿ ಇಬ್ಬರು ಯುವತಿಯರು ಶವವಾಗಿ ಪತ್ತೆಯಾಗಿದ್ದಾರೆ. ವಿಷಕಾರಿ ಔಷಧಗಳ ಚುಚ್ಚುಮದ್ದು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಇಬ್ಬರು ಹುಡುಗಿಯರು ಮನೆಯಿಂದ ಕಾಲೇಜಿಗೆ ಹೊರಟಿದ್ದು, ಆದರೆ ಮಧ್ಯಾಹ್ನದ ವೇಳೆಗೆ ಹಿಂತಿರುಗಲಿಲ್ಲ. ಬಳಿಕ ಮಾಹಿತಿ ತಿಳಿದ ಪೊಲೀಸರು ಹುಡುಕಾಟ ಆರಂಭಿಸಿದ್ದು, ಫೋನ್‌ಗಳ ಲೊಕೇಷನ್‌ ಆಧರಿಸಿ ದೇವಾಲಯ ಸಂಕೀರ್ಣದಲ್ಲಿ ಕೊನೆಯದಾಗಿ ಇದ್ದ ಸ್ಥಳವನ್ನು ಪೊಲೀಸರು ಪತ್ತೆಹಚ್ಚಿದರು. ಶನಿವಾರವೂ ಮುಂದುವರಿದ ಹುಡುಕಾಟದಲ್ಲಿ ಅವರ ಸ್ಕೂಟರ್‌ಗಳು ನಿಂತಿರುವುದು ಕಂಡುಬಂದಿದೆ.

ದೇವಾಲಯದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಹುಡುಗಿಯರು ಸ್ನಾನಗೃಹದ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ, ಲಾಕ್‌ ಆಗಿದ್ದ ಸ್ನಾನಗೃಹದ ಬಾಗಿಲನ್ನು ಒಡೆದು ಒಳನುಗ್ಗಿದಾಗ ಹುಡುಗಿಯರು ಸತ್ತಿರುವುದು ಕಂಡುಬಂದಿದೆ. ಅವರ ದೇಹದ ಬಳಿ ಬಿದ್ದಿದ್ದ ಒಂದು ಸಿರಿಂಜ್ ಮತ್ತು ಮೂರು ಬಾಟಲಿ ವಿಷಕಾರಿ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಪ್ರವಾಸಿ ತಾಣ ಜೇನುಕಲ್ಲು ಗುಡ್ಡದಲ್ಲಿ ದುರಂತ: ಪ್ರಪಾತಕ್ಕೆ ಹಾರಿ ಪ್ರಾಣ ಬಿಟ್ಟ ವ್ಯಕ್ತಿ

ಯುವತಿಯರ ಸಾವಿಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page