Connect with us

LATEST NEWS

ಎಚ್ಚರ..! ಇಂದು ಮಧ್ಯರಾತ್ರಿಯಿಂದ ಶುರುವಾಗ್ತಿದೆ ಕೊರೊನಾದ ನಿರ್ಣಾಯಕ ಸಮಯ..!

Published

on

ನವದೆಹಲಿ :  ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಆದ್ರೆ ಇಂದು ರಾತ್ರಿ 12 ಗಂಟೆಯ ನಂತರ ನಿರ್ಣಾಯಕ ಸಮಯ ಪ್ರಾರಂಭವಾಗಲಿದೆ ಎಂದು ಮೆಡಂತಾ ಆಸ್ಪತ್ರೆ ಸಿಎಂಡಿ ನರೇಶ್ ಟ್ರೆಹನ್ ಹೇಳಿದ್ದಾರೆ. ಅವ್ರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಡಾ. ಟ್ರೆಹನ್, ನಾನು ನಿಮಗೆ ಒಂದು ವಿಶೇಷ ಸಂದೇಶವನ್ನು ನೀಡಲಿದ್ದೇನೆ ಎಂದು ದೇಶದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಚೀನಾ, ಇಟಲಿ ಮತ್ತು ಡಬ್ಲ್ಯುಎಚ್‌ಒಗಳಿಂದ ನಾನು ವೈಯಕ್ತಿಕ ಮಾಹಿತಿ ಸ್ವೀಕರಿಸಿದ್ದೇನೆ. 23 ರಿಂದ ಅಪಾಯಕಾರಿ ಸಮಯ ಪ್ರಾರಂಭವಾಗಿದೆ. ಮೊದಲ ನಾಲ್ಕು ದಿನಗಳು ಮತ್ತು ನಂತರ ನಾಲ್ಕು ದಿನಗಳನ್ನು ಲೆಕ್ಕ ಹಾಕಬೇಕು. ಈ ಎಂಟು ದಿನಗಳಲ್ಲಿ ಕೊರೊನಾ ವೈರಸ್ ಗಂಟಲಿನಿಂದ ಎದೆಯವರೆಗೆ ತಲುಪುತ್ತದೆ. ಶನಿವಾರ ಒಂಬತ್ತನೇ ದಿನ ಪ್ರಾರಂಭವಾಗಲಿದ್ದು, ಸೋಂಕಿತರ ಸಂಖ್ಯೆ ಏಕಾಏಕಿ ಏರಿಕೆಯಾಗಲಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಕಾಳಜಿ ವಹಿಸುವುದು ಅತ್ಯಗತ್ಯವೆಂದು ಅವರು ಹೇಳಿದ್ದಾರೆ. ಅನವಶ್ಯಕ ಓಡಾಟ ಬೇಡವೆಂದು ಅವರು ಹೇಳಿದ್ದಾರೆ. ಮನೆ ಸಾಮಗ್ರಿಗಳನ್ನು ತರುವಾಗ ಎಚ್ಚರವಿರಲಿ ಎಂದವರು ಹೇಳಿದ್ದಾರೆ. ಮಾಸ್ಕ್ ಕಡ್ಡಾಯವಾಗಿರಲಿ. ಕೈಗಳಿಗೆ ಗ್ಲೌಸ್ ಬಳಸಿ ಎಂದಿದ್ದಾರೆ. ಮನೆಯಲ್ಲಿ ಮಕ್ಕಳು ಅಥವಾ ಹಿರಿಯ ನಾಗರಿಕರಿದ್ದರೆ ಅಪಾಯ ಹೆಚ್ಚು. ಕೊರೊನಾ ವೈರಸ್ ಸೋಂಕಿತ ಆರು ಅಡಿ ದೂರದಲ್ಲಿದ್ದರೂ ಈಗ ಸೋಂಕು ಹರಡುತ್ತದೆ ಎಂದವರು ಹೇಳಿದ್ದಾರೆ.

ಇಟಲಿಯಲ್ಲಿ ಏನಾಯಿತು ಎಂದು ಅವರು ವಿವರಿಸಿದ್ದಾರೆ. ಮೊದಲ 15 ದಿನಗಳು ಅಲ್ಲಿ ಒಂದು ಅಥವಾ ಎರಡು ಪ್ರಕರಣಗಳು ಬಂದಿದ್ದವು. ಆದರೆ ಒಂಬತ್ತನೇ ದಿನದಿಂದ ಪ್ರಕರಣಗಳು ಹೆಚ್ಚಾದವು. ನಂತರ ಸಾವಿರಾರು ಜನರು ಸೋಂಕಿಗೆ ಒಳಗಾದರು. ಹಾಗಾಗಿ ನಾವು ಎಚ್ಚರಿಕೆಯಿಂದಿರಬೇಕೆಂದು ಅವರು ಹೇಳಿದ್ದಾರೆ.

ನೆರೆಹೊರೆಯವರ ಭೇಟಿಯನ್ನು ನಿರಾಕರಿಸಿ. ಏಪ್ರಿಲ್ 14 ರ ನಂತರ ಎಲ್ಲವೂ ಸರಿಯಾಗಿರುತ್ತದೆ. ಎಲ್ಲರ ಆರೋಗ್ಯ ಬಹಳ ಮುಖ್ಯವೆಂದು ಅವರು ಹೇಳಿದ್ದಾರೆ. ನಿಮಗೆ ಸೋಂಕು ಇದ್ದಲ್ಲಿ ಅದಕ್ಕೆ ಉತ್ತಮ ಚಿಕಿತ್ಸೆ ಪಡೆಯಿರಿ. ಮನೆಯ ತಿಂಡಿ ಸೇವನೆ ಮಾಡಿ. ಬಿಸಿ ನೀರು ಸೇವಿಸಿ. ಫ್ರಿಜ್ ಆಹಾರ ಸೇವನೆ ಮಾಡಬೇಡಿ. ಒಂದು ಹೊತ್ತಿಗೆ ಅಗತ್ಯವಿರುವ ಆಹಾರವನ್ನು ಮಾತ್ರ ತಯಾರಿಸಿಕೊಳ್ಳಿ ಎಂದವರು ಸಲಹೆ ನೀಡಿದ್ದಾರೆ.

INTERNATIONAL

ವಾಟ್ಸಪ್ ಸ್ಟೇಟಸ್‌ನಲ್ಲಿ ಮತ್ತೊಂದು ಮಹತ್ವದ ಬದಲಾವಣೆ!

Published

on

ಅತ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಆ್ಯಪ್ ವಾಟ್ಸಪ್ ಈಗ ಮತ್ತೆ ಸ್ಟೇಟಸ್ ಮಿತಿಯನ್ನು ಏರಿಕೆ ಮಾಡಿದೆ.

ಹೌದು, ವಾಟ್ಸಪ್ ಬಳಕೆದಾರರಿಗೆ ಇದು ಭರ್ಜರಿ ಗುಡ್‌ ನ್ಯೂಸ್! ವಾಟ್ಸಪ್ ಸ್ಟೇಟಸ್ ಅವಧಿ ಇದೀಗ ಒಂದುವರೆ ನಿಮಿಷಕ್ಕೆ ಏರಿಕೆಯಾಗಿದೆ. ವಿಶ್ವಾದ್ಯಂತ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್‌ನಲ್ಲಿ ದಿನಕ್ಕೊಂದು ಹೊಸ ಹೊಸ ಫೀಚರ್‌ಗಳು ಸೇರಿಕೊಳ್ಳುತ್ತಿದೆ. ವಾಟ್ಸಪ್ ಸಂಸ್ಥೆಯು, ಇದೀಗ ‘ವಾಟ್ಸಪ್ ಸ್ಟೇಟಸ್‌’ನಲ್ಲಿ ಈ ಪ್ರಮುಖ ಬದಲಾವಣೆ ತಂದಿದೆ.

ಈ ಮೊದಲು 30 ಸೆಕೆಂಡ್, ನಂತರ ಒಂದು ನಿಮಿಷಕ್ಕೆ ಏರಿಕೆಯಾಗಿತ್ತು. ಇದೀಗ ಒಂದುವರೇ (1:30) ನಿಮಿಷಗಳ ವೀಡಿಯೋವನ್ನು ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಬಹುದಾಗಿದೆ.

ವಾಟ್ಸಪ್ ಸ್ಟೇಟಸ್ ಕಿರು ಪರಿಚಯ
2017ರಲ್ಲಿ ವಾಟ್ಸಪ್ ಸಂಸ್ಥೆ ಮೊದಲ ಬಾರಿಗೆ ಸ್ಟೇಟಸ್ ಆಯ್ಕೆ ಪರಿಚಯಿಸಿದ್ದು, ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಿತ್ತು. ಅಪ್ಲೋಡ್‌ ಮಾಡಿದ ಫೈಲ್‌ಗಳು 24 ಗಂಟೆಗಳ ನಂತರ ತನ್ನಷ್ಟಕ್ಕೆ ತಾನೇ ಮರೆಯಾಗುತ್ತವೆ. ಅಲ್ಲಿಯವರೆಗೆ ಬಳಕೆದಾರನ ಸಂಪರ್ಕದಲ್ಲಿರುವರಿಗೆ ಮಾತ್ರ ಸ್ಟೇಟಸ್‌ ಕಾಣಿಸುತ್ತದೆ. ಇತ್ತೀಚಿಗೆ ವಾಟ್ಸಪ್‌ ‘ಸ್ಟೇಟಸ್’ ಫೀಚರ್‌ನಲ್ಲಿ ಬದಲಾವಣೆ ತಂದಿದ್ದು, ವಾಟ್ಸಪ್‌ ಸ್ಟೇಟಸ್‌ ಅನ್ನು ನೇರವಾಗಿ ಫೇಸ್‌ಬುಕ್‌ ಒಡೆತನದ ಯಾವುದೇ ಸಾಮಾಜಿಕ ಆಪ್‌ ಖಾತೆಗೆ ಶೇರ್‌ ಮಾಡಬಹುದಾಗಿದೆ.

ವಾಟ್ಸ್‌ಆಪ್‌ ಅಪ್ಡೇಟ್‌ ಮಾಡಿ
ವಾಟ್ಸಪ್‌ನಲ್ಲಿ ವಿಡಿಯೋ ಸ್ಟೇಟಸ್‌ ಹಂಚಿಕೊಳ್ಳಬಹುದು. ವಾಟ್ಸಪ್‌ ಓಪನ್ ಮಾಡಿ ಚಾಟ್ಸ್‌ ಪಕ್ಕದ ಸ್ಟೇಟಸ್‌ ಕ್ಲಿಕ್ ಮಾಡಿ. ಮೈ ಸ್ಟೇಟಸ್‌ ಆಯ್ಕೆಯನ್ನು ಕ್ಲಿಕ್ ಮಾಡಿ, ಆ ನಂತರ ಕ್ಯಾಮೆರಾ ಐಕಾನ್ ಕ್ಲಿಕ್ ಮಾಡಿ. ಸ್ಟೇಟಸ್‌ ಇಡಲು ಫೋನ್ ಗ್ಯಾಲರಿಯ ವಿಡಿಯೋ ಫೈಲ್ ಆಯ್ಕೆ ಮಾಡಿ. ನಂತರ, ನಿಮ್ಮ ವಿಡಿಯೋವನ್ನು ಹೊಸ ಮಿತಿ ಒಂದುವರೇ ನಿಮಿಷದ ಅವಧಿಗೆ ಸೆಟ್‌ ಮಾಡಿ, ಸೆಂಡ್ ಬಟನ್ ಕ್ಲಿಕ್ ಮಾಡಿ. ಈ ಹೊಸ ಫೀಚರ್ ಬಳಸಲು ಕೂಡಲೇ ವಾಟ್ಸ್‌ಆಪ್‌ ಅಪ್ಡೇಟ್‌ ಮಾಡಿ.

Continue Reading

LATEST NEWS

ಮಗಳಿಗೆ ಇನ್ಸುಲಿನ್ ತರಲು ಹಣವಿಲ್ಲ ಎಂದು ಗುಂಡು ಹಾರಿಸಿಕೊಂಡು ಆತ್ಮಹ*ತ್ಯೆಗೆ ಶರಣಾದ ತಂದೆ

Published

on

ಲಕ್ನೋ: ಮಧುಮೇಹಿ ಮಗಳಿಗೆ ಇನ್ಸುಲಿನ್ ತರಲು ಹಣವಿಲ್ಲ ಎಂದು ವೀಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಅಸಹಾಯಕ ತಂದೆಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೃ*ತ ವ್ಯಕ್ತಿ ರಿಯಲ್ ಎಸ್ಟೇಟ್ ಡೀಲರ್ ಶಹಬಾಜ್ ಶಕೀಲ್ ಎಂದು ಗುರುತಿಸಲಾಗಿದೆ. ಆತ್ಮಹ*ತ್ಯೆಗೂ ಮುನ್ನ ಶಕೀಲ್ ವಿಡಿಯೋ ಮಾಡಿ, ಅದರಲ್ಲಿ ತಮ್ಮ ನೋವೆಲ್ಲಾ ಹಂಚಿಕೊಂಡು, ಬಳಿಕ ಸೆಕ್ಯುರಿಟಿ ಗಾರ್ಡ್​ ಬಳಿ ಇದ್ದ ಗನ್​ನಿಂದ ಶೂ*ಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ವಾಕಿಂಗ್ ಮಾಡಲು ಹೋದ ವ್ಯಕ್ತಿ ಹೃದಯಾ*ಘಾತಕ್ಕೆ ಬ*ಲಿ

ಮಗಳು ಮಧುಮೇಹದಿಂದ ಬಳಲುತ್ತಿದ್ದಾಳೆ, ಆಕೆಗೆ ಇನ್ಸುಲಿನ್ ಖರೀದಿ ಮಾಡಲು ನನ್ನ ಬಳಿ ಹಣವಿಲ್ಲ ಎಂದು ಅಸಹಾಯಕ ತಂದೆ ಕಣ್ಣೀರಿಟ್ಟಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೋಟಿಗಟ್ಟಲೆ ಸಾಲ ಮಾಡಿದ್ದು, ಅವರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ ಎಂಬುದು ತಿಳಿದುಬಂದಿದೆ.

Continue Reading

DAKSHINA KANNADA

ಮಂಗಳೂರು: ಸ್ಪೀಕರ್ ಯು.ಟಿ ಖಾದರ್ ರವರಿಂದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ

Published

on

ಮಂಗಳೂರು: ದ.ಕ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್, ಮಂಗಳೂರು ನೀರುಮಾರ್ಗ ಗ್ರಾಮ ಪಂಚಾಯತ್ ಮತ್ತು ಹಸಿರು ದಳ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ ಇಂದು ಮಂಗಳೂರಿನ ನೀರುಮಾರ್ಗದಲ್ಲಿ ನಡೆಯಿತು.

ವಿಧಾನ ಸಭಾಸ್ಪೀಕರ್ ಯು.ಟಿ ಖಾದರ್ ರವರು ವಿವಿಧ ಕಾಮಗಾರಿಯ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಯನ್ನು ನೆರೆವೇರಿಸಿದರು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉಧ್ಘಾಟನೆಯನ್ನು ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್ ಉದ್ಘಾಟಿಸಿದರು.

ನಾಡಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಬಳಿಕ ಎಸ್.ಎಸ್.ಎಲ್.ಸಿ ಯ ಕೆ.ರೂಪಾಲಿರಾವ್, ಇಜಾರ ಸಾಹಿಲ್, ಲಿಜಾ ರೂಜ್ ಮೊಂತೆರೊ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಬಳಿಕ ವಿಕಲಚೇತರಿಗೆ ಹಾಗೂ ಕ್ರೀಡಾ ಸಾಧಕರಿಗೆ ಚೆಕ್ ವಿತರಣೆ ನಡೆಯಿತು.

ಬಳಿಕ ನೀರುಮಾರ್ಗ ಗ್ರಾಮ ಪಂಚಾಯತ್-ಹಸಿರು ದಳ ಮಂಗಳೂರು ವತಿಯಿಂದ ಸನ್ಮಾನಿಸಿದರು. ಯು.ಟಿ ಖಾದರ್ ಅವರು ಮಾತನಾಡಿ, ಗ್ರಾಮ ಪಂಚಾಯತ್ ಎಂದರೆ ಅದು ಗ್ರಾಮದ ಹೃದಯ, ಅ ಹೃದಯ ಭಾಗದ ಕಾಮಗಾರಿ ವೇಗವಾಗಿ ನಡೆದರೆ ಜಿಲ್ಲೆಯ ಕಾಮಗಾರಿಗೆ ವೇಗಪಡೆದಂತೆ ಎಂದರು.

ಇದನ್ನೂ ಓದಿ: ಮಂಗಳೂರು: ಎಂ.ಆರ್.ಪಿ.ಎಲ್ ನಿಂದ ಸ್ವಚ್ಛತಾ ಜಾಥಾ

ವಿಶಿಷ್ಟ ಸಾಧನೆಗೈದ ಮಹೇಶ್ ಕುಮಾರ್ ಹೊಳ್ಳ,ಮಹಮ್ಮದ್ ಬಾಷ, ಪದ್ಮನಾಭ ಕೋಟ್ಯಾನ್, ವಿಜಯ್ ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಅಧ್ಯಕ್ಷ ಶ್ರೀಧರ್ ಚಿಕ್ಕಬೆಟ್ಟು, ಉಪಾಧ್ಯಕ್ಷೆ ಮೋಲಿ ಶಾಂತಿ ಸಲ್ಡಾನ , ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮೋನು, ಸಲೀಂ, ಕೆ.ಡಿಪಿ ಸದಸ್ಯ ಮೆಲ್ವಿನ್ ಡಿಸೋಜಾ, ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ ಮೊದಲಾದವರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page