Connect with us

LATEST NEWS

ಕೊರೊನಾ ತಂದಿಟ್ಟ ಸಂಕಷ್ಟ : ಆನೇಕಲ್​ನಲ್ಲಿ ತಂದೆ, ಇಬ್ಬರು ವಯಸ್ಕ ಮಕ್ಕಳು ಆತ್ಮಹತ್ಯೆಗೆ ಶರಣು..!

Published

on

ಅನೇಕಲ್: ಮಹಾಮಾರಿ ಕೊರೊನಾ ಜನರ ಬದುಕನ್ನೇ ಹಿಂಡಿ ಹಿಪ್ಪೆ ಮಾಡಿದೆ. ಸಮಾಜದ ಎಲ್ಲರನ್ನೂ ಸಂಕಷ್ಟಕ್ಕೆ ನೂಕಿರುವ ಈ ವೈರಸ್​ ಅದೇಷ್ಟೋ ಕುಟುಂಬಗಳನ್ನು ನುಂಗಿ ಹಾಕಿದೆ.

ಇಂತಹುದೇ ಘಟನೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಅತ್ತಿಬೆಲೆ ಟೌನ್ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ.

ಇಲ್ಲಿನ ಮೂರು ಜನ ಒಂದೇ ಕುಟುಂಬದ ಸದಸ್ಯರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಂಗಳ ಹಿಂದೆ ನಡೆದಿದ್ದ ತಾಯಿಯ ಸಾವಿನ ನೋವು ಆ ಕುಟುಂಬದ ಮೂವರ ಆತ್ಮಹತ್ಯೆಗೆ ಕಾರಣವಾಗಿದೆ ಎನ್ನಲಾಗಿದೆ.

ಮೃತರರನ್ನು ಸತೀಶ್ (45) ಕೀರ್ತಿ (18 ) , ಮೋನಿಷಾ (15) ಎಂದು ಗುರುತ್ತಿಸಲಾಗಿದೆ. ಸತೀಶ್ ಅಂಬೇಡ್ಕರ್ ಕಾಲೋನಿ ಸಾಮ್ರಾಟ್ ಗಾರ್ಮೆಂಟ್ಸ್ ನಲ್ಲಿ ಮಾಜಿ ನೌಕರರಾಗಿದ್ದರು.

ಇವರ ಹೆಣ್ಣು ಮಕ್ಕಳಾದ ಕೀರ್ತಿ, ಪ್ರಥಮ ಬಿಎಸ್ಸಿ, ಮೋನಿಷಾ 9ನೇ ತರಗತಿ ಓದುತ್ತಿದ್ದರು. ಇದೀಗ ಇವರೆಲ್ಲರೂ ನೇಣಿಗೆ ಶರಣಾಗಿದ್ದಾರೆ.

ಸತೀಶ್ ಅವರ ಧರ್ಮಪತ್ನಿ ಆಶಾ ಒಂದೂವರೆ ತಿಂಗಳ ಹಿಂದೆ ಕೊರೊನಾ ವೈರಸ್​ಗೆ ಬಲಿಯಾಗಿದ್ದರು. ಇದೇ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡ ಈ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

LATEST NEWS

ಹೊತ್ತಿ ಉರಿಯುತ್ತಿರುವ ದಕ್ಷಿಣ ಕೊರಿಯಾ : 27 ಸಾವಿರ ಜನರ ಸ್ಥಳಾಂತರ..!

Published

on

ಮಂಗಳೂರು / ದಕ್ಷಿಣ ಕೊರಿಯಾ : ದಕ್ಷಿಣ ಕೊರಿಯಾದ ಆಗ್ನೇಯ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಸಾವಿರಾರು ಎಕ್ರೆ ಪ್ರದೇಶಕ್ಕೆ ವ್ಯಾಪಿಸಿಕೊಂಡು ಭಾರಿ ಅನಾಹುತ ಸೃಷ್ಟಿಸಿದೆ. ಇದುವರೆಗೆ ಕಾಡ್ಗಿಚ್ಚಿನಲ್ಲಿ ಸಿಲುಕಿ ಸುಮಾರು 24 ಜನರು ಮೃ*ತ ಪಟ್ಟಿದ್ದು, 27 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದೆ. ಬೆಂಕಿಯನ್ನು ನಂದಿಸಲು ಸಾವಿರಾರು ಅಗ್ನಿಶಾಮಕ ವಾಹನ ಹಾಗೂ ಹೆಲಿಕಾಪ್ಟರ್ ಗಳು ಕಾರ್ಯೋನ್ಮುಖವಾಗಿದೆ. ಆದ್ರೆ ಬೆಂಕಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಸಾಗಿದ್ದು ಜನರು ಆತಂಕಗೊಂಡಿದ್ದಾರೆ.


ಉತ್ತರ ಜಿಯೋಂಗ್ ಸಾಂಗ್ ಪ್ರಾಂತ್ಯದ ಸ್ಯಾಚಿಯಾಂಗ್ ಕೌಂಟಿಯಲ್ಲಿ ಶುಕ್ರವಾರ ಸಂಜೆ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಬೆಂಕಿ ರಾಜಧಾನಿ ಸಿಯೋಲ್ ನಿಂದ ಸುಮಾರು 180 ಕಿಲೋ ಮೀಟರ್ ಆಗ್ನೇಯಕ್ಕೆ ಇರುವ ಉಸೆಂಗ್ ಕೌಂಟಿಗೆ ವ್ಯಾಪಿಸಿತ್ತು. ಬಳಿಕ ಹಂತ ಹಂತವಾಗಿ ವ್ಯಾಪಿಸಿದ ಬೆಂಕಿ ಸುಮಾರು 42 ಸಾವಿರಕ್ಕೂ ಅಧಿಕ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿಕ ಗೌನ್ಸಾ ದೇವಾಲಯ ಸೇರಿದಂತೆ ನೂರಾರು ಕಟ್ಟಡಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಜೊತೆಗೆ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಇರುವ ಪ್ರವಾಸಿ ತಾಣ ಹಾಹೋ ಫೋಕ್ ವಿಲೇಜ್ ನ  8 ಕಿಲೋ ಮೀಟರ್ ಸಮೀಪ ತಲುಪಿದೆ.

ಗೌಂಜಾ ದೇವಾಲಯದಲ್ಲಿರುವ ಬುದ್ಧನ ಪ್ರತಿಮೆಯನ್ನು ಬೆಂಕಿಯಿಂದ ರಕ್ಷಿಸಲು ಹತ್ತಿ ಬಟ್ಟೆ ಮತ್ತು ಬೆಂಕಿ ನಿರೋಧಕ ಬಟ್ಟೆಗಳಲ್ಲಿ ಸುತ್ತಿಡಲಾಗಿದೆ (photo : ಯಸುಯೋಶಿ ಚಿಬಾ / ಎಎಫ್‌ಪಿ)

ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುವ ಕಾರ್ಯದ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡ ಹೆಲಿಕಾಪ್ಟರ್ ಅರಣ್ಯದಲ್ಲಿ ಪತನವಾಗಿ ಪೈಲೆಟ್ ಅ*ಸು ನೀಗಿದ್ದಾರೆ. ಇನ್ನು ಬೆಂಕಿಯಿಂದ ತಪ್ಪಿಸಿಕೊಂಡು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೆಂಕಿ ಕಾರಿಗೆ ತಗುಲಿ ನಾಲ್ವರು ಕಾರಿನಲ್ಲೇ ಸು*ಟ್ಟು ಕರಕಲಾಗಿದ್ದಾರೆ. ಬೆಂಕಿಯನ್ನು ನಂದಿಸಲು ಹರಸಾಹಸ ಪಡಲಾಗುತ್ತಿದ್ದು, ನಾಲ್ಕು ದಿನಗಳಿಂದ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ.

Continue Reading

LATEST NEWS

ಯತ್ನಾಳ್ ಬಾಯಿಗೆ ಬೀಗ ಜಡಿದ ಬಿಜೆಪಿ ಕೇಂದ್ರಿಯ ಸಮಿತಿ ; ಪಕ್ಷದಿಂದ 6 ವರ್ಷ ಉಚ್ಛಾಟನೆ

Published

on

ಮಂಗಳೂರು/ಬೆಂಗಳೂರು: ಕಳೆದ ಕೆಲ ಸಮಯದಿಂದ ಬಿಜೆಪಿ ಪಕ್ಷದೊಳಗೆ ಆಂತರಿಕವಾಗಿ ನಡಿತಾ ಇದ್ದ ಕಿತ್ತಾಟಕ್ಕೆ ಹೈ ಕಮಾಂಡ್ ಬ್ರೇಕ್ ಹಾಕಿದೆ.

ಪಕ್ಷದ ಅಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಕ್ಕೆ ಪಕ್ಷದಿಂದ ಉಚ್ಚಾಟನೆ ಮಾಡಿದೆ.

ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಪಕ್ಷದಿಂದ ಗೇಟ್ ಪಾಸ್ ನೀಡಿದೆ. ತಮ್ಮದೇ ಒಂದು ತಂಡ ಕಟ್ಟಿಕೊಂಡು ಪ್ರತ್ಯೇಕ ಸಭೆ ನಡೆಸುತ್ತಿದ್ದ ವಿಚಾರವನ್ನು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿತ್ತು. ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಸುಮ್ಮನಿರುವಂತೆ ಎಚ್ಚರಿಕೆ ಕೂಡಾ ನೀಡಿತ್ತು.

ಇದನ್ನೂ ಓದಿ: ‘ಹನಿಟ್ರ್ಯಾಪ್’ ಪ್ರಕರಣ; ಅರ್ಜಿದಾರನಿಗೆ ಸುಪ್ರೀಂಕೋರ್ಟ್ ಕ್ಲಾಸ್!

ಆದ್ರೆ, ತಮ್ಮ ಹಿಂದಿನ ಅಭ್ಯಾಸ ಮುಂದುವರೆಸಿದ್ದ ಯತ್ನಾಳ್ ಮತ್ತೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಮೇಲೆ ಆರೋಪ ಮಾಡಿದ್ದರು. ಇದಾದ ಬಳಿಕ ಮತ್ತೊಂದು ಶೋಕಾಸ್ ನೀಡಲಾಯ್ತಾದ್ರೂ ತಮ್ಮ ದಾಳಿಯನ್ನು ಮಾತ್ರ ಯತ್ನಾಳ್ ಬಿಟ್ಟಿರಲಿಲ್ಲ.

ಇದೀಗ ಕಠಿಣ ನಿರ್ಧಾರ ತೆಗೆದುಕೊಂಡಿರುವ ಕೇಂದ್ರಿಯ ಶಿಸ್ತು ಸಮಿತಿ ಯತ್ನಾಳ್ ಅವರನ್ನು ಆರು ವರ್ಷ ಪಕ್ಷದಿಂದ ಉಚ್ಚಾಟನೆ ಮಾಡಿದೆ.

 

Continue Reading

LATEST NEWS

ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿಯ ವರದಿ ತಿರಸ್ಕರಿಸಿದ ಭಾರತ..!

Published

on

ಮಂಗಳೂರು/ನವದೆಹಲಿ: ಭಾರತದಲ್ಲಿ ಅಲ್ಪಸಂಖ್ಯಾತರು ತೀರಾ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಸೂಚಿಸುವ USCIRF ನ 2025 ರ ವರದಿಯನ್ನು ಭಾರತದ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ.


ಇದರೊಂದಿಗೆ ಭಾರತೀಯ ಬೇಹುಗಾರಿಕಾ ಸಂಸ್ಥೆ ‘ರಾ’ ಮೇಲೆಯೂ ನಿರ್ಬಂಧ ಹೇರಲೂ ವರದಿ ಶಿಫಾರಸು ಮಾಡಿತ್ತು. ಈ ವರದಿ ಪಕ್ಷಪಾತ ಮತ್ತು ರಾಜಕೀಯ ಪ್ರೇರಿತ ಎಂದು ಭಾರತ ವರದಿಯನ್ನು ತಿರಸ್ಕಾರ ಮಾಡಿದೆ.

ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಅಮೆರಿಕದ ಆಯೋಗ (USCIRF) ವನ್ನು ‘ಕಳವಳಕಾರಿ ಘಟಕ’ ಎಂದು ಹೆಸರಿಸಬೇಕು ಎಂದು ಭಾರತ ಪ್ರತಿಪಾದಿಸಿದೆ. ಭಾರತದ ಪ್ರಜಾಪ್ರಭುತ್ವ ಮತ್ತು ಸಹಿಷ್ಣುತೆಯ ಸಂಕೇತ ಎಂಬ ಖ್ಯಾತಿಯನ್ನು ಕುಗ್ಗಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ತನ್ನ ಕಠಿಣ ಹೇಳಿಕೆಯಲ್ಲಿ ತಿಳಿಸಿದೆ ಎಂದು ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಮಮ್ಮುಟ್ಟಿ ಹೆಸರಿನಲ್ಲಿ ಮೋಹನ್‌ಲಾಲ್ ವಿಶೇಷ ಪೂಜೆ: ಏನಿದು ವಿವಾದ ?

ಧಾರ್ಮಿಕ ಸ್ವಾತಂತ್ರ್ಯ ವರದಿ ಏನು ಹೇಳಿದೆ..?
2024ರಲ್ಲಿ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತು ತಾರತಮ್ಯ ಹೆಚ್ಚುತ್ತಲೇ ಇದೆ ಎಂದು 2025 ರ ವರದಿಯು ಉಲ್ಲೇಖಿಸಿದೆ. ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿ ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ “ದ್ವೇಷಪೂರಿತ ಭಾಷಣ” ವನ್ನು ಪ್ರಚಾರ ಮಾಡಿದೆ ಎಂದು ಆರೋಪಿಸಿದೆ.

ಅಲ್ಲದೆ ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಕೊಲೆ ಸಂಚುಗಳಲ್ಲಿ ಭಾಗಿಯಾಗಿರುವ ಆರೋಪ ಮಾಡಿದೆ. ಈ ಹಿನ್ನಲೆಯಲ್ಲಿ ಬೇಹುಗಾರಿಕಾ ಸಂಸ್ಥೆ ‘ರಾ’ವಿರುದ್ಧ ನಿರ್ಬಂಧ ವರದಿ ಶಿಫಾರಸು ಮಾಡಿದೆ.

ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ವಿಫಲವಾದ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ರಾ ಏಜೆಂಟ್ ವಿಕಾಸ್ ಯಾದವ್ ವಿರುದ್ಧ ಆರೋಪ ಹೊರಿಸಿದೆ. ಇದರಿಂದ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page