Connect with us

DAKSHINA KANNADA

ಸ್ವಚ್ಛ ಭಾರತದ ಪರಿಕಲ್ಪನೆಗೆ ಕಳಂಕ ತಂದೊಡ್ಡುತ್ತಿರುವ ಪ್ರಜ್ಞಾವಂತ ನಾಗರಿಕರು..!

Published

on

ಮಂಗಳೂರು: ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಪರಿಕಲ್ಪನೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತಿದೆ ಅನ್ನೋದನ್ನ ಈ ವೀಡಿಯೋ ನೋಡಿದ್ರೆ ಗೊತ್ತಾಗುತ್ತೆ. ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆಗೈಯುವವರ ಸಂಖ್ಯೆ ಮಿತಿ ಮೀರುತ್ತಿದ್ದಾಗ ಜಿಲ್ಲಾಡಳಿತ ಅದಕ್ಕೆ ತಡೆ ಬೇಲಿಯನ್ನು ನಿರ್ಮಿಸಿದೆ. ಆತ್ಮಹತ್ಯೆಯನ್ನೇನೋ ಈ ತಡೆ ಬೇಲಿ ತಡೆಯುತ್ತಿದೆ. ಆದರೆ  ನದಿಗೆ ತ್ಯಾಜ್ಯ ಎಸೆಯುವವರಿಗೆ ಮಾತ್ರ ತಡೆ ಹಾಕುತ್ತಿಲ್ಲ ಈ ತಡೆ ಬೇಲಿ

ಇಷ್ಟೆಲ್ಲ ಜಲ ಪ್ರಳಯ, ಅಥವಾ ಕೊರೊನಾದಂಥಹ ಮಹಾಮಾರಿ ವೈರಸ್ ತಂದಿರುವ ಅನಾಹುತದಿಂದಲೂ ಜನತೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದಾದ್ರೆ ಇನ್ಯಾವಾಗ ಎಚ್ಚೆತ್ತುಕೊಳ್ಳುತ್ತಾರೆ. ಪ್ರಕೃತಿಯನ್ನು ಮಲಿನಗೊಳಿಸುವುದು ನಾಶಪಡಿಸುವುದನ್ನು ಇನ್ನೂ ಬಿಟ್ಟಿಲ್ಲ ಅನ್ನೋದಕ್ಕೆ ಇಲ್ಲಿದೆ ನೋಡಿ ಉದಾಹರಣೆ  ಖಾಸಗಿ ವಾಹನಗಳಲ್ಲಿ ಹೋಗುವವರು ಕೆಲವೊಮ್ಮೆ ಬಸ್ಸುಗಳಲ್ಲಿ ಸಂಚರಿಸುವವರೂ ಕೂಡಾ ಮನೆಯಿಂದ ಅಥವಾ ತಮ್ಮಲ್ಲಿರುವ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಲಕೋಟೆಯಲ್ಲಿ ತುಂಬಿ ನದಿ ಸೇತುವೆ ಬಳಿ ಬಂದಾಗ ಅದನ್ನ ಬಿಸಾಡುವುದು ಕಂಡು ಬರುತ್ತಿದೆ. ಇನ್ನು ಮುಂದೆ ಇಲ್ಲಿ ಮೃತದೇಹ ಕಂಡು ಬರುವುದಿಲ್ಲವಾದರೂ ತ್ಯಾಜ್ಯ ರಾಶಿ ಮಾತ್ರ ತುಂಬಿ ತುಳುಕುವುದರಲ್ಲಿ ಸಂಶಯವಿಲ್ಲ.

ಬೆಂಗಳೂರು ಮೂಲದ ಖಾಸಗಿ ಕಾರಲ್ಲಿ ಬಂದ ಮಹಿಳೆಯೋರ್ವಳು ನೇತ್ರಾವತಿ ನದಿಗೆ ತ್ಯಾಜ್ಯ ಎಸೆಯುತ್ತಿರುವುದು ವೈರಲ್ ಆಗಿದ್ದು,ಈ ಕೃತ್ಯ ಪರಿಸರಾಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ.   ಇಂಥಹ ಅನೌಪಚಾರಿಕ ಕೃತ್ಯಕ್ಕೆ ಜಿಲ್ಲಾಡಳಿತ ಯಾವ ರೀತಿ ತಡೆ ಹಾಕಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

BANTWAL

ತುಂಬೆ: ಚಾಲಕನಿಗೆ ಮೂರ್ಛೆ ರೋಗ ಬಂದು ಡಿವೈಡರ್ ಮೇಲೇರಿದ ಲಾರಿ

Published

on

ಬಂಟ್ವಾಳ: ಚಾಲಕನಿಗೆ ಮೂರ್ಛೆ ರೋಗ ಬಂದು ಡಿವೈಡರ್ ಮೇಲೆ ಲಾರಿ ಹತ್ತಿ ಸುಮಾರು 100 ಮೀ ನಷ್ಟು ಚಲಿಸಿ ನಿಂತಿದ್ದು, ಬಳಿಕ ಡ್ರೈವರ್ ಸೀಟಿನಲ್ಲಿ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ರಾ.ಹೆ.75ರ ತುಂಬೆ ಸಮೀಪ ನಡೆದಿದೆ.

ಲಾರಿ ಚಾಲಕನನ್ನು ಕೂಡಲೇ ಸ್ಥಳೀಯರು ತುಂಬೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇಂದು ಬೆಳಗ್ಗೆ 7.45 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಡಿವೈಡರ್ ಮೇಲೆ ಹಾಕಿದ್ದ ರಸ್ತೆ ಸೂಚಕಾ ಫಲಕಕ್ಕೆ ಹಾನಿಯಾಗುವುದು ಬಿಟ್ಟರೆ ಬೇರೆ ಯಾವೂದೇ ರೀತಿಯ ತೊಂದರೆ ಆಗಲಿಲ್ಲ.

ಲಾರಿಯು ಬೆಂಗಳೂರಿನಿಂದ ಮಂಗಳೂರು ಕಡೆಗೆ ಚಲಿಸುತ್ತಿತ್ತು. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Continue Reading

BELTHANGADY

ಬೆಳ್ತಂಗಡಿ: ದಿನಸಿ ಅಂಗಡಿಗೆ ನುಗ್ಗಿ ನಗದು ಸೇರಿ ಇನ್ನಿತರ ವಸ್ತುಗಳನ್ನು ದೋಚಿದ ಕಳ್ಳರು

Published

on

ಬೆಳ್ತಂಗಡಿ: ದಿನಸಿ ಅಂಗಡಿಗೆ ಕಳ್ಳರು ನುಗ್ಗಿ ನಗದು ಸೇರಿ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಓಡೀಲು ಎಂಬಲ್ಲಿ ಫೆ.10 ರಂದು ರಾತ್ರಿ ನಡೆದಿದೆ.

ಹರೀಶ್ ಕುಲಾಲ್ ಎಂಬುವವರಿಗೆ ಸೇರಿದ ದಿನಸಿ ಅಂಗಡಿ ಇದಾಗಿದ್ದು, ನಿನ್ನೆಯ ದಿನ ರಾತ್ರಿ ಕಳ್ಳರು ಅಂಗಡಿಗೆ ಹಾಕಿದ್ದ ಬೀಗವನ್ನು ಮುರಿದು ಒಳಗೆ ಹೋದಿ ಅಂಗಡಿಯಲ್ಲಿದ್ದ ಹಲವಾರು ವಸ್ತುಗಳನ್ನು ಬಾಚಿಕೊಂಡು ಹೋಗಿದ್ದಾರೆ.

ಇಂದು ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದೆ. ಅಂಗಡಿಗೆ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Continue Reading

DAKSHINA KANNADA

ಭೂಮಿ ತಾಯಿ ಮುಟ್ಟಾಗಿದ್ದಾಳೆ; ತುಳುನಾಡಿನಲ್ಲಿ ‘ಕೆಡ್ಡಸ’ ದ ಸಂಭ್ರಮ

Published

on

ತುಳುನಾಡಿನಲ್ಲಿ ಆಚರಿಸುವ ಅರ್ಥಪೂರ್ಣ ಹಬ್ಬ “ಕೆಡ್ಡಸ”. ಮಾತೃ ಭೂಮಿಯನ್ನು ಪೂಜಿಸುವ ಉತ್ಸವ ಇದಾಗಿದ್ದು, ದಕ್ಷಿಣ ಭಾರತದ ತುಳುನಾಡಿನ ಪ್ರದೇಶದಲ್ಲಿ ಭೂಮಿ ಪೂಜೆಯೆಂದೇ ಜನಪ್ರಿಯವಾಗಿದೆ. ಫೆಬ್ರುವರಿ ಮುಕ್ತಾಯದ ದಿನಗಳಲ್ಲಿ ಆಚರಿಸಲಾಗುವ ಪ್ರಮುಖ ಮೂರು ದಿನಗಳ ಉತ್ಸವ ಇದಾಗಿದ್ದು, ತುಳುನಾಡಿನಲ್ಲಿ ವಾಸಿಸುವ ಜನರಲ್ಲಿ ಪ್ರಕೃತಿಯ ಅರಿವು ಮೂಡಿಸುತ್ತದೆ. ಕೆಡ್ಡಸ ಎಂದರೆ ಕೇಟ. ಅಂದರೆ ಬೇಟೆ ಎಂಬ ಅರ್ಥವನ್ನು ನೀಡುತ್ತದೆ. ಇದರಲ್ಲಿ ಮೂರು ವಿಧ ಇದ್ದು, ಕೆಡ್ಡಸ, ನಡು ಕೆಡ್ಡಸ, ಕಡೆ ಕೆಡ್ಡಸ ಎಂದು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.

ಕುಟುಂಬದ ಓರ್ವ ವಯಸ್ಸಾದ ಮಹಿಳೆ ಕಡೆ ಕೆಡ್ಡಸದ ಸಮಯದಲ್ಲಿ ಈ ಆಚರಣೆ ಮಾಡಬೇಕು. ಕಡೆ ಕೆಡ್ಡಸದ ದಿನದಂದು ‘ಸಾರ್ನಡ್ಡೆ’ (ತುಳುನಾಡಿನ ಖಾದ್ಯ) ಮತ್ತು ವಿವಿಧ ಭಕ್ಷ್ಯಗಳನ್ನು ತಯಾರಿಸಿ ತುಳಸಿ ಕಟ್ಟೆಯ ಮುಂದೆ ಇಡಬೇಕು. ಮುಂಜಾನೆ ತುಳಸಿ ಕಟ್ಟೆಯ ಸುತ್ತ ಹಸುವಿನ ಸಗಣಿಯನ್ನು ಸಾರಿಸಿ ಸುತ್ತಲು ದೀಪ ಬೆಳಗಬೇಕು. ಜೊತೆಗೆ ಕುಂಕುಮ, ಸೀಗೆ ಕಾಯಿಯನ್ನು ಕಟ್ಟೆಯ ಮುಂದೆ ಬಾಳೆ ಎಲೆಯಲ್ಲಿ ಬಡಿಸುತ್ತಾರೆ. ನಂತರ ತೆಂಗಿನ ಎಣ್ಣೆಯನ್ನು ಮಣ್ಣಿಗೆ ಸುರಿಯಬೇಕು (ಇದು ಭೂಮಿತಾಯಿಗೆ ಮಾಡುವ ಅಭಿಷೇಕ ಎಂಬ ನಂಬಿಕೆ). ಬಳಿಕ ಆ ಹಿರಿ ಮಹಿಳೆ ಸ್ನಾನ ಮಾಡಿ ಬರಬೇಕು.

ಕೆಡ್ಡಸ ಆಚರಣೆ ವಿಧಾನ : 

ಕೃಷಿ ಸಂಬಂಧಿಯಾಗಿ ಈ ಕೆಡ್ಡಸ ಹಬ್ಬವನ್ನು ತುಳುವರು ಆಚರಿಸುತ್ತಾರೆ.  ಕೃಷಿಯಲ್ಲಿ ಸಮೃದ್ಧಿ ಮತ್ತು ‍ಫಲಾಪೇಕ್ಷೆಯ ಆಶಯದಿಂದ ಈ ಹಬ್ಬದ ಆಚರಣೆ ಮಾಡಲಾಗಿದ್ದು, ಇದನ್ನು ಭೂಮಿ ತಾಯಿಯ ‘ಮಿಯಾದ ಹಬ್ಬ’ ವೆಂದು ಕರೆಯಲಾಗುತ್ತದೆ. ಭೂಮಿಯನ್ನು ಸಾಮಾನ್ಯ ಸ್ತ್ರೀ ಎಂಬಂತ ಪರಿಭಾವಿಸಿ ಹೆಣ್ಣಿನಂತೆ ಭೂಮಿಯು ಮುಟ್ಟಾಗುತ್ತಾಳೆಂದು ಯೋಚಿಸಿ, ಅದರ ಪ್ರಕಾರ ಅವಳನ್ನು ಮಡಿಗೊಳಿಸುವ ದಿನ ಎಂಬುವುದಾಗಿ ಆಚರಿಸಲಾಗುತ್ತದೆ. ಕೆಡ್ಡಸದ ಮೂರು ದಿನ ಕೊಡಲಿ ಏಟು, ಹಾರೆ, ಪಿಕ್ಕಾಸಿಗಳಲ್ಲಿ ಭಅಗೆಯುವಂತಿಲ್ಲ. ಮನೆಯ ಆವರಣವನ್ನು ಸ್ವಚ್ಛ ಮಾಡಿ 7 ಬಗೆಯ ಧಾನ್ಯಗಳನ್ನು ಬೆರೆಸಿ ಬೂತಾಯಿಗೆ ಬಾಳೆಲೆಯಲ್ಲಿ ಇಡುವುದು ಕ್ರಮ. ಭೂದೇವಿಗೆ ವಸ್ತ್ರ, ಗೆಜ್ಜೆ, ಕತ್ತಿ, ಕಲಶ, ಅರಶಿನ, ಕುಂಕುಮ ಇತ್ಯಾದಿಯನ್ನು ಸಾಮಾನ್ಯವಾಗಿ ಇಡಬೇಕೆಂದು ವಾಡಿಕೆ.

ನಲಿಕೆ ಜನಾಂಗದವರ ಕರೆಯೋಲೆ :

“ಸೋಮವಾರ ಕೆಡ್ಡಸ, ಮುಟ್ಟುನೆ ಅಂಗಾರ ನಡು ಕೆಡ್ಡಸ ಬುಧವಾರ ಬಿರಿಪುನೆಪಜಿ ಕಡ್ಪರೆ ಬಲ್ಲಿ ಉನುಂಗೆಲ್ ಪೊಲಿಪ್ಯರೆ ಬಲ್ಲಿ, ಅರಸುಲೆ ಬೋಟೆಂಗ್ಸರ್ವೆರ್ ಉಲ್ಲಾಯನಕುಲು ಪೋವೋಡುಗೆ. ವಲಸಾರಿ ಮಜಲ್ಡ್ ಕೂಡ್ದುವಲಸರಿ ದೇರ್ದ್ದ್ ಪಾಲೆಜ್ಜಾರ್ ಜಪ್ಪುನಗ ಉಳ್ಳಾಲ್ದಿನಕುಲು ಕಡಿಪಿ ಕಂಜಿನ್ ನೀರ್ಡ್ ಪಾಡೋದು. ಓಡುಡ್ ಕಡೆವೊಡು, ಕಲ್ಲ್ ಡ್ ರೊಟ್ಟಿ ಪತ್ತವೊಡು. ಮಲ್ಲ ಮಲ್ಲ ಮೃರ್ಗೊಲು ಜತ್ತ್ದ್ ಬರ್ಪ. ಕಟ್ಟ ಇಜ್ಜಾಂದಿ ಬೆಡಿ, ಕದಿ ಕಟ್ಟಂದಿನ ಪಗರಿ, ಕೈಲ ಕಡೆಲ ಪತ್ತ್ದ್ಉಜ್ಜೆರ್ಗೊಂಜಿ ಎರ್ಪು ಏರ್ಪಾದ್ಇಲ್ಲ ಬೇತ್ತಡಿತ್ ಉಂತೊಂದು ಮುರ್ಗೊಲೆಗ್ ತಾಂಟಾವೊಡು. ಮಲ್ಲ ಮಲ್ಲ ಮುರ್ಗೊಲೆನ್ ಜಯಿಪೊಡು.ಎಂಕ್ ಅಯಿತ ಕೆಬಿ, ಕಾರ್, ಕೈ,ಉಪ್ಪು, ಮುಂಚಿ, ಪುಳಿ ಕೊರೊಡು” ಎಂದು ಕರಾವಳಿಯ ನಲಿಕೆ ಜನಾಂಗದವರು ಮನೆಮನೆಗೆ ತೆರಳಿ ಕರೆ ನೀಡುತ್ತಾರೆ.

ಇದನ್ನೂ ಓದಿ : ಎಚ್ಚರ : ಮನೆಯಲ್ಲಿ ನಡೆಯುವ ಈ ಘಟನೆಗಳು ಭವಿಷ್ಯದ ಅಶುಭ ಸೂಚಕ

ಕೆಡ್ಡಸ ವಿಶೇಷ ಆಹಾರ :

ಕುಡು ಅರಿ (ನನ್ಯೆರಿ) ಕೆಡ್ಡಸ ಸಮಯದಲ್ಲಿ ಕುಡು ಅರಿ (ಹುರುಳಿ, ಹೆಸರು ಕಾಳು, ಒಣಗಿದ ತೆಂಗಿನಕಾಯಿ, ಕುಚ್ಚುಲಕ್ಕಿ), ಬೆಲ್ಲ ಮತ್ತು ಕಡಲೆಕಾಯಿಗಳ ಮಿಶ್ರಣವನ್ನು ಎಲ್ಲರಿಗೂ ಹಂಚಲಾಗುತ್ತದೆ. ಏಕೆಂದರೆ ಚಳಿಗಾಲದಲ್ಲಿ ದೇಹಕ್ಕೆ ಬೇಕಾದ ಬಹಳಷ್ಟು ಪೌ‌‍‍ಷ್ಟಿಕಾಂಶಗಳನ್ನು ಮತ್ತು ಎಣ್ಣೆ ಅಂಶಗಳನ್ನು ಇದು ಒದಗಿಸುತ್ತದೆ. ಈ ಮಿಶ್ರಣವು ದೇಹವು ಚಟುವಟಿಕೆಯಿಂದ ಇರಲು ಸಹಾಯವಾಗುತ್ತದೆ. ಕೋಟಿ-ಚೆನ್ನಯ, ಮುಗೇರ್ಲು, ಉಳ್ಳಾಕುಲು ಈ ದೈವಗಳನ್ನು ಮನಸಾರೆ ನೆನೆದುಕೊಂಡು ಆಚರಿಸಲಾಗುತ್ತದೆ.

Continue Reading
Advertisement

Trending

Copyright © 2025 Namma Kudla News

You cannot copy content of this page