Connect with us

DAKSHINA KANNADA

ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; ಬಸ್ ಗೆ ಕಲ್ಲು ತೂರಾಟ

Published

on

ಮಂಗಳೂರು : ರಾಜ್ಯಪಾಲರು ಸಿದ್ಧರಾಮಯ್ಯ ಪ್ರಕರಣವನ್ನು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ನಡೆ ಖಂಡಿಸಿ ಇಂದು ಕಾಂಗ್ರೆಸ್‌ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಮಂಗಳೂರಿನಲ್ಲಿ ಕೂಡ ಪ್ರತಿಭಟನೆ ನಡೆದಿದೆ.

ಮಂಗಳೂರು ಮಹಾನಗರ ಪಾಲಿಕೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರಿನ ಲೇಡಿಹಿಲ್‌ ನಾರಾಯಣ ಗುರು ವೃತ್ತದಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆದಿದ್ದು, ಮಂಗಳೂರು ನಗರ ಸೇರಿ ಪುತ್ತೂರು, ಸುಳ್ಯ, ಬೆಳ್ತಂಗಡಿಯ ಕಾರ್ಯಕರ್ತರು ಭಾಗಿಯಾಗಿದ್ದರು.  ಎಂಎಲ್‌ಸಿ ಐವನ್ ಡಿ ಸೋಜಾ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ ಸೇರಿ ಭಾರಿ ಸಂಖ್ಯೆಯ ಕಾರ್ಯಕರ್ತರು ಭಾಗಿಯಾಗಿದ್ದರು.

ಬಸ್ ಗೆ ಕಲ್ಲು, ಟಯರ್ ಗೆ ಬೆಂಕಿ :

ಜಾಥದ ಬಳಿಕ ಪಾಲಿಕೆ ಮುಂಭಾಗ ಬೃಹತ್‌ ಪ್ರತಿಭಟನಾ ಸಭೆ, ರಸ್ತೆಯ ತಡೆಯನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಉದ್ರಿಕ್ತ ಕಾರ್ಯಕರ್ತರು ಟಯರ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಅಲ್ಲದೆ ನಗರದ ಖಾಸಗಿ ಬಸ್ಸಿಗೆ ಕಲ್ಲು ತೂರಾಟವನ್ನೂ ಮಾಡಿದ್ದು, ಪ್ರಯಾಣಿಕರೊಬ್ಬರಿಗೆ ಗಾಯಗಳಾಗಿವೆ.

Advertisement
1 Comment

Leave a Reply

Your email address will not be published. Required fields are marked *

DAKSHINA KANNADA

ಸದನದಲ್ಲಿ ಗದ್ದಲ; 18 ಬಿಜೆಪಿ ಶಾಸಕರು 6 ತಿಂಗಳು ಅಮಾನತು!

Published

on

ಮಂಗಳೂರು/ ಬೆಂಗಳೂರು :  ಇಂದು ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಮಂಡಿಸಿರುವ  ಬಜೆಟ್ ಅಂಗೀಕಾರಗೊಂಡಿದೆ. ಈ ವೇಳೆ ವಿಪಕ್ಷ ಸದಸ್ಯರು ಬಜೆಟ್ ನಲ್ಲಿ ಸೇರಿಸಿರುವ ಕೆಲವೊಂದು ವಿಚಾರಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಸದನದಲ್ಲಿ ಹನಿಟ್ರ್ಯಾಪ್ ವಿಚಾರವೂ ಸದ್ದು ಮಾಡಿದ್ದು, ಸಾರ್ವಜನಿಕ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಿಟ್ಟ ನಾಲ್ಕು ಶೇಕಡ ಮೀಸಲಾತಿ ರದ್ದು ಮಾಡುವಂತೆ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಅಲ್ಲದೇ, ಸ್ಪೀಕರ್ ಪೀಠಕ್ಕೇರಿದ ವಿಪಕ್ಷ ಸದಸ್ಯರು
ಖಾದರ್ ಮೇಲೆ ಪೇಪರ್‌ಗಳನ್ನು ಹರಿದು ಹಾಕಿ ಗಲಾಟೆ ಮಾಡಿದ್ದರು. ಮಧ್ಯಾಹ್ನ ಭೋಜನ ವಿರಾಮದ ಬಳಿಕವೂ ಇದು ಮುಂದುವರಿದಿತ್ತು.

ಹೀಗಾಗಿ ವಿಧಾನಸಭೆಯ ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ ಹಿನ್ನೆಲೆ ಕರಾವಳಿಯ ಮೂವರು ಸೇರಿದಂತೆ ಒಟ್ಟು 18 ಬಿಜೆಪಿ ಶಾಸಕರನ್ನು 6 ತಿಂಗಳ ವರೆಗೆ ಅಮಾನತುಗೊಳಿಸಿ ಸ್ಪೀಕರ್ ಖಾದರ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ಗದ್ದಲದ ನಡುವೆ ಅಂಗೀಕಾರವಾದ ಬಜೆಟ್; ಮುಸ್ಲಿಂ ಮೀಸಲಾತಿ ರದ್ಧಿಗೆ ಆಗ್ರಹಿಸಿ ಸ್ಪೀಕರ್ ಪೀಠಕ್ಕೇರಿದ ವಿಪಕ್ಷ ಸದಸ್ಯರು

ಯಾರೆಲ್ಲ ಅಮಾನತು?

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಮೂಡುಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ದೊಡ್ಡಣ್ಣ ಗೌಡ ಪಾಟೀಲ್, ಸಿ ಕೆ ರಾಮಮೂರ್ತಿ, ಅಶ್ವತ್ಥ ನಾರಾಯಣ, ಎಸ್ ಆರ್ ವಿಶ್ವನಾಥ್, ಬೈರತಿ ಬಸವರಾಜ, ಎಂ ಆರ್ ಪಾಟೀಲ್, ಚನ್ನಬಸಪ್ಪ, ಬಿ.ಸುರೇಶ್ ಗೌಡ, ಶರಣು ಸಲಗಾರ್, ಶೈಲೇಂದ್ರ ಬೆಲ್ದಾಳೆ, ಹರೀಶ್ ಬಿಪಿ, ಮುನಿರತ್ನ, ಬಸವರಾಜ ಮತ್ತಿಮೋಡ್, ಧೀರಜ್ ಮುನಿರಾಜು, ಡಾ. ಚಂದ್ರು ಲಮಾಣಿ.

Continue Reading

DAKSHINA KANNADA

ನಕಲಿ ಪತ್ರಕರ್ತರ ಹಾವಳಿ; ಮನವಿ ಸಲ್ಲಿಸಿದ ಜಿಲ್ಲಾ ಪತ್ರಕರ್ತರ ಸಂಘದ ನಿಯೋಗ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಜಿಲ್ಲಾ ಪತ್ರಕರ್ತರ ಸಂಘದ ನಿಯೋಗ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಮಪಮ್ ಅಗರ್ವಾಲ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.


ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಜಾಸ್ತಿಯಾಗಿದ್ದು, ಕೆಲವರು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್ ತಯಾರಿಸಿ ಬಳಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಲಿ ಪತ್ರಕರ್ತರಿಗೂ ಇವರನ್ನು ಪತ್ತೆ ಮಾಡುವುದು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತವರಿಂದ ಪತ್ರಕರ್ತರ ಹೆಸರಿಗೆ ಮಸಿ ಬಳಿಯುವ ಕೃತ್ಯಗಳು ನಡೆಯುತ್ತಿದೆ ಅನ್ನೋದನ್ನು ಅಲ್ಲಗಳೆಯುವಂತಿಲ್ಲ.

ನಿನ್ನೆ ನಗರದ ರಾಷ್ಟ್ರಕವಿ ಗೋವಿಂದ ಪೈ ವೃತ್ತದ ಬಳಿ ನಡೆದ ಸರಣಿ ಅಪಘಾತ ಮಾಡಿದ ಕಾರಿನಲ್ಲಿ ನಕಲಿ ಐಡಿಯೊಂದು ಪತ್ತೆಯಾಗಿದೆ. ಅಪಘಾತವಾದ ತಕ್ಷಣವೇ ಕಾರಿನಿಂದ ಇಳಿದಿದ್ದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಆತನ ಐಡಿ ಕಾರ್ಡ್ ಮೂಲಕ ಆತನ ಹೆಸರು ರಾಜಶೇಖರ್ ಎಂದು ಗುರುತಿಸಲಾಗಿದ್ದು, ಪ್ರತಿಷ್ಠಿತ ಮುದ್ರಣ ಸಂಸ್ಥೆಯಲ್ಲಿ ಉಪ ಸಂಪಾದಕ ಎಂದು ಐಡಿಯಲ್ಲಿ ನಮೂದಿಸಲಾಗಿದೆ.

ಆದ್ರೆ ಆ ಮುದ್ರಣ ಸಂಸ್ಥೆಯಲ್ಲಿ ಅಂತಹ ಹೆಸರಿನವರು ಯಾರೂ ಕೂಡಾ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಪತ್ರಕರ್ತರ ಸಂಘದಿಂದ ಪತ್ರಕರ್ತರ ಹೆಸರು ದುರ್ಬಳಕೆ ತಡೆಯುವಂತೆ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಮಪಮ್ ಅಗರ್ವಾಲ್ ಅವರನ್ನು ಭೇಟಿಯಾದ ಜಿಲ್ಲಾ ಪತ್ರಕರ್ತರ ಸಂಘದ ನಿಯೋಗ, ಪತ್ರಕರ್ತರ ನಕಲಿ ಐಡಿ ಕಾರ್ಡ್ ದುರ್ಬಳಕೆ ತಡೆ ಮತ್ತು ಪತ್ರಕರ್ತರು ಸುಲಲಿತವಾಗಿ ಕರ್ತವ್ಯ ನಿರ್ವಹಿಸಲು ಭದ್ರತೆ ಖಾತ್ರಿಪಡಿಸುವಂತೆ ಮನವಿ ಸಲ್ಲಿಸಿದ್ದಾರೆ.

Continue Reading

DAKSHINA KANNADA

ಮಂಗಳೂರು : ಮನೆಗೆ ನುಗ್ಗಿ ಲಕ್ಷಾಂತರ ನಗದು ಸಹಿತ ಚಿನ್ನಾಭರಣ ದೋಚಿ ಕಳ್ಳರು ಪರಾರಿ

Published

on

ಮಂಗಳೂರು : ಗುರುಪುರದ ಹಳೆಯ ಶಾಲೆಯ ಹಿಂಬದಿಯ ಮಾಣಿಬೆಟ್ಟುವಿನ ಗುರುಪುರ ಬಳಿಯ ನಿವಾಸಿ ಗುಲಾಬಿ ಮನೆಯೊಂದರ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ನಗದು, ಚಿನ್ನ ಮತ್ತು ಬೆಳ್ಳಿ ಕಳವು ಮಾಡಿರುವ ಘಟನೆ ನಿನ್ನೆ (ಮಾ.20) ನಸುಕಿನ ಜಾವ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಕಪಾಟು ಮತ್ತಿತರ ಸೊತ್ತುಗಳನ್ನು ತಡಕಾಡಿ ಬೀರುವಿನಲ್ಲಿದ್ದ ಅಂದಾಜು ೨.೫ ಲಕ್ಷ ರೂಪಾಯಿ ನಗದು, ೧೦ ಪವನ್ ಚಿನ್ನ ಹಾಗೂ ೨೦ ಬೆಳ್ಳಿ ನಾಣ್ಯ (ಕಾಯಿನ್) ದರೋಡೆಗೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಮಂಗಳೂರು : ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ವಂಚನೆ

ಗುಲಾಬಿ ಅವರ ಇಬ್ಬರು ಪುತ್ರರು ಮುಂಬೈಯಲ್ಲಿ ವಾಸ ಮಾಡಿಕೊಂಡಿದ್ದು, ಗುಲಾಬಿ ಅವರ ಪತಿ ಇತ್ತೀಚೆಗಷ್ಟೇ ನಿಧನ ಹೊಂದಿದ್ದು, ಗುಲಾಬಿ ಮಗಳ ಮನೆಗೆ ತೆರಳಿದ್ದು. ಮನೆಯಲ್ಲಿ ಯಾರೂ ಇಲ್ಲದಿರುವ ಬಗ್ಗೆ ಖಚಿತಪಡಿಸಿಕೊಂಡಿರುವ ಕಳ್ಳರೇ ಯೋಜನೆ ರೂಪಿಸಿ ಈ ಕಳವು ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಲಾಬಿಯ ಪುತ್ರಿ ವಿಜಯಾ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page