Connect with us

LATEST NEWS

ಕಾಂಗ್ರೆಸ್‌ ಸದಸ್ಯತ್ವ ಅಭಿಯಾನ: ಮಂಗಳೂರಿಗೆ ಬಂದಿಳಿದ ಡಿಕೆಶಿ

Published

on

ಮಂಗಳೂರು: ಕಾಂಗ್ರೆಸ್ ಪಕ್ಷದಿಂದ ಹೊಸ ಸದಸ್ಯತ್ವ ಅಭಿಯಾನ ಆರಂಭಗೊಂಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.


ಕರಾವಳಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು ಮಂಗಳೂರು ಏರ್‌ಪೋರ್ಟ್‌ನಲ್ಲಿ ಮಾಧ್ಯಮದ ಜೊತೆ ಮಾತನಾಡಿ, ಕಾಂಗ್ರೆಸ್ ಪಕ್ಷ ಒಂದು ರಾಷ್ಟ್ರೀಯ ಪಕ್ಷ.

ಸ್ವಾತಂತ್ರ್ಯ ತಂದು ಕೊಟ್ಟು 75 ವರ್ಷ ಆಗಿದೆ. ಭಾರೀ ಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದು ಅಭಿವೃದ್ಧಿ ಪಥದದಲ್ಲಿ ಮುನ್ನಡೆಸಿದೆ. ಈ ದೇಶಕ್ಕೆ ಕಾಂಗ್ರೆಸ್ ಆಡಳಿತ ಮತ್ತೆ ಬೇಕಾಗಿದೆ.

ನಾಯಕಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮತ್ತೆ ಪಕ್ಷವನ್ನು ಸಂಘಟನೆ ಮಾಡಲಾಗುತ್ತಿದೆ. ಇದಕ್ಕೋಸ್ಕರ ಸದಸ್ಯತ್ವ ಅಭಿಯಾನ ಮಾಡಲಾಗುತ್ತಿದೆ.

ಚುನಾವಣೆಗೆ ಸಂಬಂಧಿಸಿ ಪಕ್ಷ ಪೂರ್ವ ಸಿದ್ಧತೆ ಮಾಡುತ್ತಿದೆ. ಕಾಂಗ್ರೆಸ್ ಗೆಲ್ಲುವ ವಿಚಾರದಲ್ಲಿ ಪಕ್ಷದ ಕಾರ್ಯಕರ್ಥರ ಮಾತಿಗೂ ನಾವು ಬೆಲೆ ಕೊಡಲಿದ್ದೇವೆ. ಇದಕ್ಕೋಸ್ಕರ ಹೆಚ್ಚಿನ ಸಂಘಟನೆ ನಡೆಸಲಿದ್ದೇವೆ ಎಂದರು.

ಅಶಾಂತಿ ಸೃಷ್ಟಿಸುವುದು ಅವರ ಡ್ಯೂಟಿ
ಬಿಜೆಪಿ ನಾಯಕರ ಕೆಲಸವೇ ಮಕ್ಕಳಲ್ಲಿ ಅಶಾಂತಿ ಮೂಡಿಸುವುದು. ಈ‌ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ ಎಂದು ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ವಿವಾದದ ಬಗ್ಗೆ ಮಂಗಳೂರಿನಲ್ಲಿಂದು ಪ್ರತಿಕ್ರಿಯಿಸಿದ್ದಾರೆ. ದೇಶದಲ್ಲಿ, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವುದು ಅವರ ಡ್ಯೂಟಿ. ನಮ್ಮ ಪಾರ್ಟಿಯ ವಿರುದ್ಧ ಮಾತನಾಡುವುದೇ ಅವರ ಕೆಲಸ ಎಂದರು.

 

Advertisement
Click to comment

Leave a Reply

Your email address will not be published. Required fields are marked *

LATEST NEWS

ಲಾಡ್ಜ್‌ನ ಹಿಂಭಾಗದ ಪಾಳು ಬಿ*ದ್ದ ಪಾರ್ಕ್‌ನಲ್ಲಿ ಯುವಕನ ಶ*ವ ಪತ್ತೆ

Published

on

ಮಂಗಳೂರು/ಕಲಬುರಗಿ : ಲಾಡ್ಜ್ ಒಂದರ ಹಿಂಭಾಗದ ಪಾಳು ಬಿ*ದ್ದ ಪಾರ್ಕ್‌ನಲ್ಲಿ ಯುವಕನನ್ನು ಮಾರ*ಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹ*ತ್ಯೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

21 ವರ್ಷದ ಸಯ್ಯದ್ ಮೆಹಬೂಬ್ ಅಲಿಯಾಸ್ ಬಾಡಿ ಹ*ತ್ಯೆಗೊಳಗಾದ ಯುವಕ. ಅಪರಿಚಿತ ದುಷ್ಕರ್ಮಿಗಳು ತಡರಾತ್ರಿ ಈ ಕೃ*ತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಫಾರೆನ್ಸಿಕ್ ತಂಡ ಹಾಗೂ ಶ್ವಾನ ದಳದಿಂದಲೂ ತನಿಖೆ ಕೈಗೊಳ್ಳಲಾಗಿದೆ. ಮೆಹಬೂಬ್ ಕೆಲ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎನ್ನಲಾಗಿದೆ. ಹಳೆಯ ದ್ವೇಷದ ಹಿನ್ನೆಲೆ ಈ ಕೊ*ಲೆ ನಡೆದಿರುವ ಸಾಧ್ಯತೆಯಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಕೇರಳ: ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಆತ್ಮಹತ್ಯೆ ಪ್ರಕರಣ; ವ್ಲೋಗರ್ ಶಿಂಜಿತಾ ಮುಸ್ತಫಾ ಬಂಧನ

ಈ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Continue Reading

LATEST NEWS

ಕರಾಚಿ ಶಾಪಿಂಗ್ ಮಾಲ್‌ನಲ್ಲಿ ಅ*ಗ್ನಿ ಅವ*ಘಡ; ಒಂದೇ ಮಳಿಗೆಯಲ್ಲಿತ್ತು 30 ಶ*ವಗಳು

Published

on

ಮಂಗಳೂರು/ಕರಾಚಿ : ಕರಾಚಿಯ ಗುಲ್ ಪ್ಲಾಜಾ ಶಾಪಿಂಗ್‌ ಮಾಲ್‌ ನಲ್ಲಿ ಉಂಟಾದ ಅ*ಗ್ನಿ ಅವ*ಘಡದಲ್ಲಿ ಸಾ*ವನ್ನಪ್ಪಿದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಒಂದೇ ಮಳಿಗೆಯಲ್ಲಿ 30 ಶ*ವಗಳು ಪತ್ತೆಯಾಗಿರೋದು ಶಾ*ಕ್ ಕೊಟ್ಟಿದೆ.  ಸಾ*ವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆಯಿದೆ.

ಪಾಕಿಸ್ತಾನದ ಮನಿ ಕ್ಯಾಪಿಟಲ್‌ ಎಂದೇ ಖ್ಯಾತಿಗಳಿಂದ  ಕರಾಚಿ ಸದರ್‌ ಪ್ರದೇಶದಲ್ಲಿರುವ ಗುಲ್‌ ಶಾಪಿಂಗ್‌ ಮಾಲ್‌ನ ನೆಲಮಾಳಿಗೆಯಲ್ಲಿ ಜ.17 ರಂದು ಬೆಂ*ಕಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂ*ಕಿ ಬಳಿಕ ಕ್ಷಣಾರ್ಧದಲ್ಲಿ ಇಡೀ ಮಾಲ್‌ಗೆ ವ್ಯಾಪಿಸಿತ್ತು.

1,200 ಮಳಿಗೆಗಳನ್ನು ಹೊಂದಿರುವ  ಗುಲ್ ಪ್ಲಾಜಾ ಶಾಪಿಂಗ್‌ ಮಾಲ್‌ನಲ್ಲಿ 36 ಗಂಟೆಗಳ ಬಳಿಕ ಬೆಂ*ಕಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು. ಬೆಂ*ಕಿಯನ್ನ ಮುಚ್ಚುವುದಕ್ಕಾಗಿ ಒಳಗಿದ್ದ ಹಲವು ಮಳಿಗೆಗಳ ಶೆಟರ್‌ಗಳನ್ನ ಬಂದ್‌ ಮಾಡಲಾಗಿತ್ತು.

ಇದನ್ನೂ ಓದಿ : ಕೇರಳ: ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಆತ್ಮಹತ್ಯೆ ಪ್ರಕರಣ; ವ್ಲೋಗರ್ ಶಿಂಜಿತಾ ಮುಸ್ತಫಾ ಬಂಧನ

ಬೆಂಕಿ ನಿಯಂತ್ರಣಕ್ಕೆ ಬಂದ ಬಳಿಕ  ಮಾಲ್ ಒಳಗೆ ಪರಿಶೀಲನೆ ನಡೆಸಲಾಯಿತು. ಈ ವೇಳೆ  ‘ದುಬೈ ಕ್ರಾಕರಿ’ ಎಂಬ ಒಂದೇ ಮಳಿಗೆಯಲ್ಲಿ ಸುಮಾರು 30 ಶ*ವಗಳು ಪತ್ತೆಯಾಗಿವೆ. ಬೆಂ*ಕಿಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಹಾಗೂ ಮಳಿಗೆಯವರು ಶೆಟ್ಟರ್ ಮುಚ್ಚಿಕೊಂಡಿದ್ದಾರೆ. ಈ ವೇಳೆ ದಟ್ಟ ಹೊಗೆ ತುಂಬಿಕೊಂಡು ಸಾ*ವನ್ನಪ್ಪಿರುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತವಾಗಿದೆ. ಅಲ್ಲದೇ ಹಲವು ಮಂದಿ ಕಾಣೆಯಾಗಿದ್ದಾರೆಂದು ತಿಳಿದು ಬಂದಿದೆ.

Continue Reading

DAKSHINA KANNADA

ಪುತ್ತೂರು: 33ನೇ ವರ್ಷದ ಕೋಟಿ-ಚೆನ್ನಯ ಜೋಡುಕೆರೆ ಕಂಬಳ

Published

on

ಪುತ್ತೂರು: ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 33ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ ಜನವರಿ 24 ಮತ್ತು 25ರಂದು ನಡೆಯಲಿದೆ.


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಕೂಟಗಳ ಪೈಕಿ ಹಲವು ಪ್ರಥಮಗಳನ್ನು ಸ್ಥಾಪಿಸಿದ ಕೂಟವೆಂಬ ಹೆಗ್ಗಳಿಕೆ ಪುತ್ತೂರು ಕಂಬಳಕ್ಕಿದ್ದು, ಈ ಬಾರಿ 200ಕ್ಕಿಂತಲೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸಲಿವೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.32ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯ ಜೋಡುಕರೆಯಲ್ಲಿ ಕಂಬಳವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ವಹಿಸಲಿದ್ದಾರೆ ಎಂದರು.

ಇದನ್ನೂ ಓದಿ: ಪಡುಬಿದ್ರೆಗೆ ಆಗಮಿಸಿದ ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ, ಕೈಯಲ್ಲಿ ಬಂಗುಡೆ ಹಿಡಿದು ಭರ್ಜರಿ ಡ್ಯಾನ್ಸ್

ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ರೈ ವಹಿಸಲಿದ್ದಾರೆ ಹಲವು ಮಂದಿ ಗಣ್ಯರು ಭಾಗವಹಿಸಲಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಕೋಶಾಕಾರಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾದ ನಿರಂಜನ ರೈ ಮಠಂತಬೆಟ್ಟು ಮೊದಲಾದವರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page