Connect with us

LATEST NEWS

ಕರ್ನಾಟಕ ಕಾಂಗ್ರೆಸ್‌ನಿಂದ ಬಿಜೆಪಿಗೆ ವಾಲೆಂಟೈನ್‌ ಗಿಫ್ಟ್‌..!!?

Published

on

ಬೆಂಗಳೂರು: ಪ್ರೇಮಿಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಐಟಿ ಸೆಲ್‌ ವಿಭಿನ್ನವಾಗಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯ ತಿಳಿಸಿದೆ. ಅದರ ಒಂದಷ್ಟು ಝಲಕ್‌ ನೋಡಿ….

1.ಬಿಜೆಪಿಗರು ಶುದ್ಧ 40% ಪ್ರೇಮಿಗಳು, 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು!! ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ…..!!

 

2. ಬಿಜೆಪಿಗರದ್ದು ಗೋ ಪ್ರೀತಿಯಲ್ಲ, Go ಪ್ರೀತಿ!! ಬಿಜೆಪಿಗರು ಗೋವಿನ ಎದುರು ಫ್ಲರ್ಟ್ ಮಾಡುತ್ತಾರೆ ಹೊರತು ಪ್ರೀತಿಯಲ್ಲ!.

3. ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು,
ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು.
ಸಿಎಂ ಮನೆಗೆ ಕಲ್ಲು ಹೊಡೆಯುವುದು.
ರೈತರಿಗೆ ಅವಮಾನಿಸುವುದು.
ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸ್‌ಲಿಂಗ್ ಅಗತ್ಯವಿದೆ!.

4. ಒಮ್ಮೆ ತಿರಸ್ಕಾರ ಭಾವ ಮೂಡಿದರೆ ಮತ್ತೆಂದೂ ಅಲ್ಲಿ ಪ್ರೀತಿಗೆ ಜಾಗವಿಲ್ಲ. ಮಂಡ್ಯದಲ್ಲಿ ತಿರಸ್ಕಾರದ ಪ್ರೇಮವೈಫಲ್ಯ ಅನುಭವಿಸಿ ನೋವಿನಲ್ಲಿರುವ ಭಗ್ನಪ್ರೇಮಿಗೆ ನಮ್ಮ ಸಾಂತ್ವಾನಗಳು!

5. “ಪ್ರೀತಿ ಮಧುರ, ತ್ಯಾಗ ಅಮರ” ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ.. ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ!!

6. ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ! “ಸಚಿವ ಹುದ್ದೆ” ಎಂಬ ಪ್ರೇಮ ವೈಫಲ್ಯದಿಂದ ಭಗ್ನಪ್ರೇಮಿಯಾಗಿ ತಿರುಗುತ್ತಿರುವವರ ನೋವು ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ!

7. ಈ ಸ್ಪೆಷಲ್ ಡಾಕ್ಟರ್‌ಗೆ ಹೃದಯ ಬಡಿತವೂ ತಿಳಿಯುತ್ತದೆ.
ಲೂಟಿ ಹೊಡೆತವೂ ತಿಳಿದಿದೆ! ಈ ಡಾಕ್ಟರ್‌ಗೂ ಲವ್ವಾಗಿದೆ – PSI ಹುದ್ದೆಗಳ ಮೇಲೆ!.

8. ಪ್ರೇಮದಲ್ಲಿ ಮುಳುಗಿದವರು ಸದಾ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಮತ್ತು ಆ ಭ್ರಮೆಗಳನ್ನೇ ವಾಸ್ತವ ಎಂದು ತಿಳಿದುಕೊಂಡಿರುತ್ತಾರೆ. ಇದು ಪ್ರೇಮದ ಮೊದಲ ಹಂತ.

9. ಪ್ರೇಮವಿರುವ ಕಡೆ ದ್ವೇಷಕ್ಕೆ ಜಾಗವಿಲ್ಲ..ಆದರೆ ದ್ವೇಷವನ್ನೇ ಪ್ರೇಮಿಸಿದರೆ….!? ದ್ವೇಷವನ್ನೇ ಪ್ರೀತಿಸಿ, ದ್ವೇಷವನ್ನೇ ಧ್ಯಾನಿಸಿ, ದ್ವೇಷದೊಂದಿಗೆ ರೊಮ್ಯಾನ್ಸ್ ಮಾಡುವ ವಿಶಿಷ್ಠ ಪ್ರೇಮಿ ಇವರು!!

10. “ಸರಸ ಸಲ್ಲಾಪದ ಸಿಡಿಗಳು” ಬಿಜೆಪಿಗರ ‘ಸಿಡಿ ಸಂಭ್ರಮ’ದ ಎಪಿಸೋಡ್‌ಗಳು ನೂರಾರಿವೆಯಂತೆ. ಯತ್ನಾಳರು ಹೇಳುವ ಸಿಡಿ ಸಿಡಿಯುವುದು ಯಾವಾಗ?

ಕನಸಲ್ಲೂ ನೀನೇ, ಮನಸಲ್ಲೂ ನೀನೇ, ಉಸಿರಲ್ಲೂ ನೀನೇ, ಹೆಸರಲ್ಲೂ ನೀನೇ..
ಹೃದಯದ “ಆಕ್ಸಿಜನ್”! ಕಮಿಷನ್ ಕೊಡಿಸುವ,
ಖಜಾನೆ ತುಂಬುವ “ಆಕ್ಸಿಜನ್” ಎಂದರೆ ಇವರಿಗೆ ಅದಮ್ಯ ಪ್ರೇಮ!!

 

INTERNATIONAL

ದಾವೋಸ್ ನಲ್ಲಿ ಫ್ರೆಂಚ್‌ ಅಧ್ಯಕ್ಷರ ಭಾಷಣ; ಸನ್‌ ಗ್ಲಾಸ್‌ ಕಂಪನಿಯ ಷೇರುಗಳಲ್ಲಿ ಭಾರೀ ಏರಿಕೆ!

Published

on

ದಾವೋಸ್:‌ ವಿಶ್ವ ನಾಯಕರು ಸೇರಿದ್ದ ವಿಶ್ವ ಆರ್ಥಿಕ ವೇದಿಕೆ ಚರ್ಚೆಯಲ್ಲಿ ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಸನ್‌ ಗ್ಲಾಸ್‌ ಧರಿಸಿದ್ದರು. ಇದೀಗ ಈ ಸನ್‌ ಗ್ಲಾಸ್‌ ಕಂಪನಿಯ ಅದೃಷ್ಟ ಬದಲಾದಂತಾಗಿದೆ.


ಹೌದು, ಜಾಗತೀಕವಾಗಿರುವ ಅತ್ಯಂತ ಸಂಕೀರ್ಣ ಮತ್ತು ಆತಂಕಕಾರಿ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಸೇರಿ ಇತರ ವಿಚಾರಗಳ ಬಗ್ಗೆ ಚರ್ಚಿಸಲು ವಿಶ್ವ ನಾಯಕರು ಸೇರಿರುವ ವಿಶ್ವ ಆರ್ಥಿಕ ವೇದಿಕೆ ಚರ್ಚೆಯಲ್ಲಿ ಮಹತ್ವದ ವಿಚಾರಗಳ ಬದಲಾಗಿ, ಎಲ್ಲರ ಕಣ್ಣುಗಳು ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಧರಿಸಿದ್ದ ಸನ್‌ ಗ್ಲಾಸ್‌ ಮೇಲೆ ಬಿದ್ದಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ತಮ್ಮ ಕಣ್ಣು ಊದಿಕೊಂಡು ಕೆಂಪಾಗಿ ಕಾಣುತ್ತಿವೆ. ಹೀಗಾಗಿ ಸನ್‌ ಗ್ಲಾಸ್‌ ಧರಿಸುವ ಅನಿವಾರ್ಯತೆ ಇದೆ ಎಂದು ಹೇಳಿಕೊಂಡಿದ್ದರು.

“ದಯವಿಟ್ಟು ಸನ್ ಗ್ಲಾಸ್ ಧರಿಸಿರುವ ನನ್ನ ಕಣ್ಣಿನ ನೋಟಕ್ಕಾಗಿ ಕ್ಷಮಿಸಿ, ಇದು ಸಂಪೂರ್ಣವಾಗಿ ನಿರುಪದ್ರವ” ಎಂದು ಹೇಳಿದ್ದರು.

ಇದನ್ನೂ ಓದಿ: ಮದುವೆ ಮನೆಯಲ್ಲಿ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ಸಿಕ್ಕಿಬಿದ್ದಿದ್ದ ಪಲಾಶ್ ಮುಚ್ಚಲ್..!‌?

ಸನ್‌ ಗ್ಲಾಸ್‌ ಕಂಪನಿಯ ಷೇರುಗಳಲ್ಲಿ ದಿಢೀರ್‌ ಏರಿಕೆ!
ಅಧ್ಯಕ್ಷರು ನೀಡಿದ ಹೇಳಿಕೆಯಿಂದ ಸನ್‌ ಗ್ಲಾಸ್‌ ಕಂಪನಿಯ ಅದೃಷ್ಟ ಖಲಾಯಿಸಿದೆ. ಅದರ ತಯಾರಕ ಐವಿಷನ್ ಟೆಕ್‌ನ ಷೇರುಗಳು ಗುರುವಾರ ಸುಮಾರು 28% ರಷ್ಟು ಏರಿಕೆ ಕಂಡಿವೆ. ಫ್ರೆಂಚ್ ಐಷಾರಾಮಿ ಕನ್ನಡಕ ಬ್ಯಾಂಡ್ ಹೆನ್ರಿ ಜೂಲಿಯನ್ ಅನ್ನು ಹೊಂದಿರುತ ಐವಿಷನ್ ಟೆಕ್, ಮ್ಯಾಕ್ರನ್ ಧರಿಸಿದ್ದ ಸನ್ ಗ್ಲಾಸ್ ಪೆಸಿಫಿಕ್ S 01 ಮಾದರಿಯಾಗಿದ್ದು, ಕಂಪನಿಯ ವೆಬ್‌ಸೈಟ್‌ನಲ್ಲಿ ಇದರ ಬೆಲೆ 659 ಯುರೋಗಳ ಎಂದು ಬುಧವಾರ ಹೇಳಿದೆ ಎಂದು ವರದಿಯಾಗಿದೆ.

Continue Reading

LATEST NEWS

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ; ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

Published

on

ಚಾಮರಾಜನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಇಂದು(ಜ.24) ಬೆಳಗ್ಗೆ ನಡೆದಿದೆ.


ಬಂಡಳ್ಳಿ ಗ್ರಾಮದ ಜಯಲಕ್ಷ್ಮಿ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ.


ಇದನ್ನೂ ಓದಿ: ಕೆಲಸಕ್ಕೆ ಗೈರಾಗಿದ್ದಕ್ಕೆ ಯುವತಿಗೆ ಸಾರ್ವಜನಿಕವಾಗಿ ಅವಮಾನ: ಮಾಲೀಕ ಪೊಲೀಸರ ವಶ

ಅದೃಷ್ಟವಶಾತ್‌, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಆದರೆ ಮನೆ ಸಂಪೂರ್ಣ ಹಾನಿಗೊಳಗಾಗಿದೆ.

Continue Reading

LATEST NEWS

ಜನ್ಮದಿನದ ಪಾರ್ಟಿಗೆ ಕರೆಸಿ ಯುವಕನ ಹ*ತ್ಯೆ

Published

on

ಮಂಗಳೂರು/ರಾಯಚೂರು :  ಜನ್ಮದಿನದ ಪಾರ್ಟಿಗೆ ಕರೆಸಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಯುವಕನ ಕೊ*ಲೆ ಮಾಡಿರುವ ಘಟನೆ ರಾಯಚೂರಿನ ಮಾವಿನಕೆರೆ ದಂಡೆಯ ಮೇಲೆ  ನಡೆದಿದೆ.

ಜಹೀರಾಬಾದ್ ಬಡಾವಣೆ ನಿವಾಸಿ, 22 ವರ್ಷದ ವಿಶಾಲ್ ಕೊ*ಲೆಯಾದ ಯುವಕ. 19 ವರ್ಷದ ರಾಜು ಅಲಿಯಾಸ್ ಯೇಸು ಮತ್ತು ಬಸವರಾಜ  ಕೊ*ಲೆಗೈದ ಆರೋಪಿಗಳು.

ಇದನ್ನೂ ಓದಿ : ವಸತಿ ಕಟ್ಟಡದ ಮೇಲೆ ಫೈ*ರಿಂಗ್ ; ಬಾಲಿವುಡ್ ನಟನ ಬಂಧನ

ಬಸವರಾಜ ಜನ್ಮದಿನದ ಪಾರ್ಟಿ ಕೊಡಿಸುವುದಾಗಿ ವಿಶಾಲ್ ನನ್ನು ಕರೆಸಿಕೊಂಡಿದ್ದ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಬಳಿಕ ಕೊ*ಲೆಯಲ್ಲಿ ಅಂತ್ಯ ಕಂಡಿದೆ. ಕೊ*ಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page