Connect with us

ಮೇ 18ರಿಂದ ಉಡುಪಿ ಜಿಲ್ಲೆಯಾದ್ಯಂತ ಸಲೂನ್ ಪುನಃರಾರಂಭಿಸಲು ಶರತ್ತು ಬದ್ಧ ಅನುಮತಿ…..

Published

on

ಮೇ 18ರಿಂದ ಉಡುಪಿ ಜಿಲ್ಲೆಯಾದ್ಯಂತ ಸಲೂನ್ ಪುನಃರಾರಂಭಿಸಲು ಶರತ್ತು ಬದ್ಧ ಅನುಮತಿ…..

ಉಡುಪಿ: ಕೋವಿಡ್ -19 ವಿಪತ್ತಿನಿಂದ ಇಡೀ ವಿಶ್ವವೇ ತತ್ತರಿಸುತ್ತಿದ್ದು, ಭಾರತದಲ್ಲಿ ಲಾಕ್ ಡೌನ್ ಘೋಷಣೆ ಮಾಡುವ ಮೂರು ದಿನ ಮೊದಲೇ ಕ್ಷೌರಿಕ ಅಂಗಡಿಗಳನ್ನು ಮುಚ್ಚಲಾಗಿತ್ತು.

ಇದೀಗ ಮೇ 18ರಿಂದ ಜಿಲ್ಲೆಯಲ್ಲಿ ಎಲ್ಲಾ ಸಲೂನ್ ಗಳನ್ನು ಪುನರಾರಂಭಿಸಲು ಜಿಲ್ಲಾಧಿಕಾರಿ ಜಿ.ಜಗದೀಶ ಶರತ್ತುಬದ್ಧ ಅನುಮತಿ ನೀಡಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಅವರನ್ನು ಉಡುಪಿ ಜಿಲ್ಲಾ ಸವಿತಾ ಸಮಾಜದ ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಿ, ಪರಿಸ್ಥಿತಿಯನ್ನು ವಿವರಿಸಿದ್ದು, ಇದಕ್ಕೆ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಮೇ 18ರಿಂದ ಜಿಲ್ಲೆಯಾದ್ಯಂತ ಎಲ್ಲಾ ಸಲೂನ್ ಗಳನ್ನು ಪುನಃರಾರಂಭಿಸಲು ಶರತ್ತುಬದ್ಧ ಅನುಮತಿ ನೀಡಿದ್ದಾರೆ.

ಶರತ್ತುಗಳು:

– ಗ್ರಾಹಕರು ಫೋನ್‌ ಮುಖಾಂತರ ಸಮಯ ನಿಗದಿಪಡಿಸಿ ಆ ಮೂಲಕ ಕ್ಷೌರ ಮಾಡಿಸಲು ಬಂದರೆ ಉತ್ತಮ

– ಯಾವುದೇ ಸೆಲೂನುಗಳು ಎಸಿ ಹಾಕುವಂತಿಲ್ಲ.

– ಗ್ರಾಹಕರು ಮತ್ತು ಕ್ಷೌರಿಕರ ಅಂತರವನ್ನು ಎರಡು ಫೀಟ್‌ ಕಡಿಮೆ ಇರದಂತೆ ಕಾಪಾಡಬೇಕು.

– ಸೆಲೂನ್‌ ನ ಬಟ್ಟೆಗಳು ಹಾಗೂ ಅಂಗಡಿಗಳು ಸ್ವಚ್ಛತೆ ಮತ್ತು ಶುಭ್ರತೆಯನ್ನು ಕಾಪಾಡಬೇಕು.

– ಗ್ರಾಹಕರಿಗೆ ಸೇವೆ ನೀಡುವಾಗ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್‌ ಗಳನ್ನು ಅಳವಡಿಸಬೇಕು.

– ಗ್ರಾಹಕರಿಗೆ ಸೇವೆ ನೀಡಿದ ಬಳಿಕ ಸಾಬೂನಿನಲ್ಲಿ ಕೈ ತೊಳೆಯಬೇಕು.

– ಗ್ರಾಹಕರು ಬಂದ ತತ್‌ ಕ್ಷಣ ಅವರಿಗೆ ಸ್ಯಾನಿಟೈಸರ್‌ನಲ್ಲಿ ಕೈಯನ್ನು ಸ್ವಚ್ಛಗೊಳಿಸುವಂತೆ ತಿಳಿಸಬೇಕು.

– ಅಂಗಡಿಯಲ್ಲಿ ಇಬ್ಬರು ಕ್ಷೌರಿಕರು ಸೇವೆ ನೀಡಬೇಕು. ಈ ಕುರ್ಚಿಯ ಅಂತರವೂ ಒಂದು ಮೀಟರ್‌ ನಷ್ಟು ಇರಬೇಕು.

– ಒಮ್ಮೆ ಗ್ರಾಹಕರಿಗೆ ಹಾಕಿದ ಬಟ್ಟೆಗಳನ್ನು ಮತ್ತೊಬ್ಬ ಗ್ರಾಹಕರಿಗೆ ಹಾಕುವಂತಿಲ್ಲ. ಬಟ್ಟೆಗಳು ಸ್ವಚ್ಛತೆಗೊಂಡ ಬಳಿಕವೆ ಉಪಯೋಗಿಸಬೇಕು.

– ಸವಿತಾ ಸಮಾಜದ ಪ್ರತಿಯೋರ್ವರು ಆರೋಗ್ಯ ಸೇತು ಆ್ಯಪ್‌ ಮೊಬೈಲಿಗೆ ಡೌನ್‌ ಲೋಡ್‌ ಮಾಡಿಕೊಳ್ಳಬೇಕು.

ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ ಸಾಲ್ಯಾನ್‌, ಆದಿ ಉಡುಪಿ, ಗೌರವಾಧ್ಯಕ್ಷ ಗೋವಿಂದ ಭಂಡಾರಿ, ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಸಿ.ಭಂಡಾರಿ ಕಿನ್ನಿಮೂಲ್ಕಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯು.ಶಂಕರ್‌ ಸಾಲ್ಯಾನ್‌ ಕಟಪಾಡಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಉಡುಪಿ: ಬಾವಿಗೆ ಹಾರಿ ಜೀವಾಂತ್ಯಗೊಳಿಸಿದ ಬಸ್ ಏಜೆಂಟ್

Published

on

ಉಡುಪಿ: ಬಸ್ ಏಜೆಂಟ್ ಓರ್ವರು ಮನೆಯ‌ ಹತ್ತಿರದ ಬಾವಿಗೆ ಜಿಗಿದು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಬನ್ನಂಜೆ ಗರಡಿ ಸಂಪರ್ಕಿಸುವ ರಸ್ತೆ ಸಮೀಪ ಬುಧವಾರ ನಡೆದಿದೆ.

ಬಸ್ ಏಜೆಂಟ್ ಕೆ. ರಾಜೇಶ್ ಶೆಣೈ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.  ಸಮಾಜಸೇವಕ ಈಶ್ವರ್ ಮಲ್ಪೆ ತಂಡದವರು ಕಾರ್ಯಾಚರಣೆ ಮೂಲಕ ಶವವನ್ನು ಬಾವಿಯಿಂದ ಮೇಲೆತ್ತಿದರು.

ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಸಹಕರಿಸಿದರು. ನಗರ ಪೋಲಿಸ್ ಠಾಣೆಯ ಎಸ್. ಐ ನಾರಾಯಣ, ಹೆಡ್  ಕಾನ್ಸ್ಟೇಬಲ್  ನೇತಾವತಿ ಕಾನೂನು ಪ್ರಕ್ರಿಯೆ ನಡೆಸಿದರು.

Continue Reading

LATEST NEWS

ಹೆಲ್ಮೆಟ್‌ ಧರಿಸದ ಸವಾರನನ್ನು ನಿಲ್ಲಿಸಿ ದಂಡ ಹಾಕದೇ ಕಳುಹಿಸಿದ ಪೊಲೀಸ್‌ ಸಿಬ್ಬಂದಿ!

Published

on

ಶಹದೋಲ್: ದ್ವಿಚಕ್ರ ವಾಹನ ಸವಾರರ ಸುರಕ್ಷತೆ ಚಾಲನೆ ಹಾಗೂ ಅಪಘಾತಗಳಾಗುವ ಸಂದರ್ಭದಲ್ಲಿ ತಲೆಗೆ ಏಟು ಬೀಳಬಾರದೆನ್ನುವ ಕಾರಣಕ್ಕೆ ಹೆಲ್ಮೆಟ್‌ ಖಡ್ಡಾಯಗೊಳಿಸಿ ಸರಕಾರವೇ ಆದೇಶ ಹೊರಡಿಸಿದೆ. ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸಲಾಗುತ್ತದೆ.

ಆದರೆ, ಮಧ್ಯಪ್ರದೇಶದ ಶಹದೋಲ್‌ನಲ್ಲಿ ಸಂಚಾರಿ ಪೊಲೀಸ್ ಹೆಲ್ಮೆಟ್ ಧರಿಸದೇ ಬಂದ ಬೈಕ್ ಸವಾರರನನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಅವರು ಹೇಳಿದ ಉತ್ತರ ಕೇಳಿ ಕಕ್ಕಾಬಿಕ್ಕಿಯಾಗಿದ್ದಾರೆ.

ತನ್ನ ದೊಡ್ಡ ತಲೆಗೆ ಚಿಕ್ಕ ಹೆಲ್ಮೆಟ್ ಸರಿಹೊಂದುವುದಿಲ್ಲ ಎಂದಾಗ ಪೊಲೀಸ್‌ ತನ್ನದೇ ಹೆಲ್ಮೆಟ್‌ ತೆಗೆದು ಸವಾರನ ತಲೆಗೆ ಇಟ್ಟು ನೋಡಿದ್ದಾರೆ. ಆದರೂ ಹೆಲ್ಮೆಟ್‌ ಅವರ ತಲೆಗೆ ಸರಿಹೊಂದಿಲ್ಲ. ಇವರಿಬ್ಬರ ನಡುವಿನ ಸಂವಾದ ಇದೀಗ ಭಾರೀ ವೈರಲ್‌ ಆಗಿದೆ.

“ದಿ ಟ್ರಾಫಿಕ್ ಕಾಪ್” ಎಂದು ಜನಪ್ರಿಯವಾಗಿರುವ ಟ್ರಾಫಿಕ್ ಹೆಡ್ ಕಾನ್‌ಸ್ಟೆಬಲ್ ಮತ್ತು ಸೋಶಿಯಲ್ ಇನ್ಫ್ಲುಯೆನ್ಸರ್ ಆಗಿರುವ ವಿವೇಕಾನಂದ ತಿವಾರಿ, ಹೆಲ್ಮೆಟ್ ಇಲ್ಲದೆ ಮೋಟಾರ್‌ಸೈಕಲ್ ಸವಾರಿ ಮಾಡಿದ್ದಕ್ಕಾಗಿ ವ್ಯಕ್ತಿಯನ್ನು ತಡೆದಿದ್ದಾರೆ.

ಸುರಕ್ಷತಾ ಉಲ್ಲಂಘನೆಯ ಬಗ್ಗೆ ಪ್ರಶ್ನಿಸಿದಾಗ, ಸವಾರ ಬೈಕ್‌ನಿಂದ ಇಳಿದು ಮಾರುಕಟ್ಟೆಯಲ್ಲಿ ತನ್ನ ಗಾತ್ರದ ಹೆಲ್ಮೆಟ್ ಸಿಗಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಆರಂಭದಲ್ಲಿ ಸಂಶಯ ವ್ಯಕ್ತಪಡಿಸಿದ ತಿವಾರಿ, ಸವಾರನ ತಲೆಯ ಮೇಲೆ ತನ್ನದೇ ಆದ ಹೆಲ್ಮೆಟ್ ಹಾಕಲು ಪ್ರಯತ್ನಿಸಿದ್ದಾರೆ. ಹೆಲ್ಮೆಟ್ ಹೊಂದಿಕೆಯಾಗಲಿಲ್ಲ, ನಿಜವಾದ ಕಷ್ಟವನ್ನು ಅರಿತುಕೊಂಡ ಅಧಿಕಾರಿ, ದಂಡ ವಿಧಿಸಲ್ಲ ಎಂದರು.

ಇದನ್ನೂ ಓದಿ: ಇಸ್ತ್ರಿ ಅಂಗಡಿಯವನ ಸಂಪಾದನೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು!

ಅಲ್ಲದೆ ದೊಡ್ಡ ತಲೆಗೆ ಸರಿ ಹೊಂದುವ ಹೆಲ್ಮೆಟ್‌ಗಳನ್ನು ತಯಾರಿಸಿ ಎಂದು ಕಂಪೆನಿಗಳಿಗೆ ಮನವಿ ಮಾಡಿದರು. ಈ ವಿಡಿಯೋ ವೈರಲ್‌ ಆಗಿದ್ದು, ಸ್ಟೀಲ್‌ಬರ್ಡ್ ಕಂಪೆನಿ ಹೆಲ್ಮೆಟ್ಸ್ ಕೂಡ ಪ್ರತಿಕ್ರಿಯೆ ನೀಡಿದೆ. ದೊಡ್ಡ ಹೆಲ್ಮೆಟ್‌ಗಳನ್ನು ತಯಾರಿಸುವುದಾಗಿ ಹೇಳಿದೆ.

Continue Reading

LATEST NEWS

ಇಸ್ತ್ರಿ ಅಂಗಡಿಯವನ ಸಂಪಾದನೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು!

Published

on

ಕೇವಲ 10 ರೂಪಾಯಿಗೆ ಒಂದು ಬಟ್ಟೆ ಇಸ್ತ್ರಿ ಮಾಡುವ ಸಣ್ಣ ಉದ್ಯಮದಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.


ನಳಿನಿ ಉನಾಗರ್ ಎಂಬುವವರು ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅವರ ಮನೆಯ ಬಳಿಯಿರುವ ಡ್ರೈ ಕ್ಲೀನರ್ ಅಂಗಡಿಯ ಮಾಲೀಕರು ಮತ್ತು ಅವರ ಪತ್ನಿ ಇಬ್ಬರೂ ಸೇರಿ ಸಹಾಯಕರ ನೆರವಿನೊಂದಿಗೆ ಈ ಸಾಧನೆ ಮಾಡುತ್ತಿದ್ದಾರೆ.

ಪ್ರತಿದಿನ ಸುಮಾರು 350 ಬಟ್ಟೆಗಳನ್ನು ತಲಾ 10 ರೂಪಾಯಿಯಂತೆ ಇಸ್ತ್ರಿ ಮಾಡುತ್ತಾರೆ. ಇದರಿಂದ ದಿನಕ್ಕೆ 3,500 ರೂ. ಆದಾಯ ಬರುತ್ತದೆ. ಪ್ರತಿದಿನ ಸರಿಸುಮಾರು 20 ಭಾರೀ ಬಟ್ಟೆಗಳನ್ನು ತಲಾ 350 ರೂ. ರಂತೆ ಡ್ರೈ ಕ್ಲೀನ್ ಮಾಡುತ್ತಾರೆ. ಇದರಿಂದ ದಿನಕ್ಕೆ 7,000 ರೂ. ಆದಾಯ ಬರುತ್ತದೆ. ಎಲ್ಲಾ ಸೇರಿ ದಿನಕ್ಕೆ ಸುಮಾರು 10,500 ರೂಪಾಯಿ ಗಳಿಸುತ್ತಾರೆ. ತಿಂಗಳಿಗೆ 27 ದಿನ ಕೆಲ್ಸ ಮಾಡಿದ್ರೂ ಒಟ್ಟು ಆದಾಯ ಸುಮಾರು 2.8 ಲಕ್ಷ ಎಂದು ನಳಿನಿ ಹೇಳಿದ್ದಾರೆ.

ಇದನ್ನೂ ಓದಿ: ಅಪ್ಪನೊಂದಿಗೆ ಹಾಲು ತರಲು ಹೋದಾಗ ನಡೆದ ದುರಂತ; ಸ್ಕೂಲ್ ಬಸ್ ಹರಿದು ಇಬ್ಬರು ಕಂದಮ್ಮಗಳು ಸಾವು

ಅಂಗಡಿ ಅವರದ್ದೇ ಆದ ಕಾರಣ ಬಾಡಿಗೆ ಇರುವುದಿಲ್ಲ. ವಿದ್ಯುತ್ ಬಿಲ್ ಸುಮಾರು 6,000 ರೂ. ಮತ್ತು ಇಬ್ಬರು ಸಹಾಯಕರ ಸಂಬಳ 40,000 ರೂ. ಕಳೆದರೆ, ಅವರಿಗೆ ತಿಂಗಳಿಗೆ ಅಂದಾಜು 2.3 ಲಕ್ಷ ರೂಪಾಯಿ ಉಳಿಯುತ್ತದೆ.

Continue Reading
Advertisement

Trending

Copyright © 2025 Namma Kudla News

You cannot copy content of this page