Connect with us

60 ರೂ. ಗಡಿ ದಾಟಿದ ತೆಂಗಿನಕಾಯಿ ಬೆಲೆ

Published

on

ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ತೆಂಗಿನಕಾಯಿ ದರ ಭಾರಿ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಎಳನೀರು ಭರ್ಜರಿ ಮಾರಾಟವಾದ ಹಿನ್ನೆಲೆ ತೆಂಗಿನಕಾಯಿ ಕಡಿಮೆಯಾಗಿದ್ದು, ಈ ಹಿನ್ನೆಲೆ ದರ ಏರಿಕೆಯಾಗಿದೆ.

ಈ ಮೊದಲು ಒಂದು ತೆಂಗಿನಕಾಯಿಗೆ 20, 25, 30 ರೂ. ದರ ಇತ್ತು. ಈಗ 65 ರೂ.ವರೆಗೆ ಮಾರಾಟವಾಗುತ್ತಿದೆ. ಕೆಜಿಗೆ 32-33 ಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಈಗ 60 ರೂ.ಗೆ ತಲುಪಿದೆ. ತೆಂಗಿನ ಇಳುವರಿ ಕಡಿಮೆಯಾಗಿದ್ದು, ಎಳನೀರಿಗೂ ಭಾರಿ ಪ್ರಮಾಣದಲ್ಲಿ ಕೊಯ್ದು ಮಾಡುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಪರೀಕ್ಷಾ ಪೇ ಚರ್ಚಾಗೆ ಹೊಸ ಮೆರಗು; ಖ್ಯಾತ ಸೆಲೆಬ್ರಿಟಿಗಳಿಂದ ಸಲಹೆ, ಮಾರ್ಗದರ್ಶನ

Published

on

ಹೊಸದಿಲ್ಲಿ: ಪರೀಕ್ಷಾ ಪೇ ಚರ್ಚಾ 2025 ಕಾರ್ಯಕ್ರಮವನ್ನು ಫೆ.10ರಂದು ದಿಲ್ಲಿಯ ಭಾರತ್ ಮಂಟಪಂನಲ್ಲಿ ಆಯೋಜಿಸಲಾಗುತ್ತಿದೆ. ಈ ಬಾರಿಯ ಪರೀಕ್ಷಾ ಪೇ ಚರ್ಚಾಗೆ ಹೊಸ ಮೆರುಗು ನೀಡಲಾಗುತ್ತಿದೆ.

ಪರೀಕ್ಷೆಯ ಒತ್ತಡವನ್ನು ನಿವಾರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ನಡೆಸುವ ವಾರ್ಷಿಕ ಸಂವಾದ ‘ಪರೀಕ್ಷಾ ಪೇ ಚರ್ಚಾ’ಗೆ ಈ ಬಾರಿ ಹೊಸ ಆಯಾಮ ದೊರೆತಿದೆ. ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಿದ್ದು, ವಿವಿಧ ಕ್ಷೇತ್ರಗಳ ಏಳು ಸೆಲೆಬ್ರಿಟಿಗಳು ಪರೀಕ್ಷೆಯ ಸಮಯದಲ್ಲಾಗುವ ಒತ್ತಡವನ್ನು ನಿವಾರಿಸುವ ಕುರಿತು ಸಲಹೆ ನೀಡಲಿದ್ದಾರೆ.

ಪರೀಕ್ಷಾ ಪೇ ಚರ್ಚಾದಲ್ಲಿ ಒಟ್ಟು 8 ಪಾಡ್‌ಕಾಸ್ಟ್ ಎಪಿಸೋಡ್ ಸೇರಿಸಲಾಗಿದ್ದು, ಅದರಲ್ಲಿ ಸದ್ಗುರು ಜಗ್ಗಿ ವಾಸುದೇವ್, ದೀಪಿಕಾ ಪಡುಕೋಣೆ, ಮೇರಿ ಕೋಮ್, ಅವನಿ ಲೇಖಾರಾ, ರುಜುತಾ ದಿವೇಕರ್, ಸೊನಾಲಿ ಸಭರ್ವಾಲ ಮತ್ತು ರಾಧಿಕಾ ಗುಪ್ತಾ ಪಾಲ್ಗೊಂಡು ಮಕ್ಕಳಿಗೆ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ಕಿಂಗ್ ಖಾನ್ ಪುತ್ರನಿಗೆ ಬೆಂಬಲ ನೀಡಿದ ಚಿತ್ರರಂಗ !

ಸದ್ಗುರು ವಿದ್ಯಾರ್ಥಿಗಳಿಗೆ ಒತ್ತಡ ನಿವಾರಣೆ ಬಗ್ಗೆ ತಿಳಿಹೇಳಿದರೆ, ನಟಿ ದೀಪಿಕಾ ಮಾನಸಿಕ ಆರೋಗ್ಯದ ಕುರಿತು, ಮೇರಿ ಕೋಮ್, ಪ್ಯಾರಾಲಿಂಪಿಕ್ಸ್ ಚಿನ್ನ ವಿಜೇತೆ ಅವನಿ ಲೇಖಾರಾ, ಸವಾಲುಗಳ ಮೆಟ್ಟಿನಿಲ್ಲುವ ಬಗ್ಗೆ ತಮ್ಮ ಅನುಭವ ಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಬಾರಿ ದೇಶದೆಲ್ಲೆಡೆಯಿಂದ ಸುಮಾರು 2,500 ವಿದ್ಯಾರ್ಥಿ ಗಳು ಭಾಗಿಯಾಗಲಿದ್ದಾರೆ.

 

Continue Reading

DAKSHINA KANNADA

ನಾಲ್ಕು ದಿಕ್ಕಿಗೆ ಪ್ರಸಾದ ಹಾರಿಸಿ ಉರ್ವ ಮಾರಿಯಮ್ಮ ಜಾತ್ರೋತ್ಸವಕ್ಕೆ ಚಾಲನೆ

Published

on

ಮಂಗಳೂರು : ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿರುವ ಉರ್ವ ಮಾರಿಯಮ್ಮ ಕ್ಷೇತ್ರದಲ್ಲಿ ಫೆ.7 ರಿಂದ ಜಾತ್ರೋತ್ಸವದ ಕಾರ್ಯಕ್ರಮಗಳು ಆರಂಭವಾಗಿವೆ. ಫ್ರೆ.18 ರಂದು ದರ್ಶನ ಬಲಿ ಹಾಗೂ ವಿಶೇಷವಾಗಿ ನಡೆಯುವ ರಾಶಿ ಪೂಜೆಯೊಂದಿಗೆ ಜಾತ್ರೋತ್ಸವ ನಡೆಯಲಿದೆ.

ಇಂದು ಕ್ಷೇತ್ರದಲ್ಲಿ ಮಾರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಮೆರವಣಿಗೆ ಮೂಲಕ ತೆರಳಿ ನಾಲ್ಕು ದಿಕ್ಕಿಗೆ ಪ್ರಸಾದ ಹಾರಿಸುವ ಧಾರ್ಮಿಕ ವಿಧಿಯ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗಿದೆ. ಉರ್ವ ಮೈದಾನದಲ್ಲಿ ಹಾಗೂ ಮೂರು ಮಾರ್ಗ ಸೇರುವ ಜಾಗದಲ್ಲಿ ಈ ಪ್ರಸಾದ ಹಾರಿಸುವ  ಧಾರ್ಮಿಕ ವಿಧಿ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಹಾಜರಿದ್ದ  ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿದೆ. ಫೆ.14 ರಂದು ಪರ್ಸಿನ್‌ ಮೀನುಗಾರರ ಸಂಘದಿಂದ ಕ್ಷೇತ್ರದಲ್ಲಿ ಚಂಡಿಕಾ ಯಾಗ ನಡೆಯಲಿದ್ದು, 17 ರಂದು ಹಾಲು ಉಕ್ಕಿಸುವ ಕಾರ್ಯಕ್ರಮ ನಡೆಯಲಿದೆ. ಮಡೆಸ್ನಾನ, ದರ್ಶನ ಬಲಿ ಸೇವೆ, ರಾಶಿ ಪೂಜೆಗಳು ಫೆ.18 ರಂದು ನಡೆಯಲಿದ್ದು ಫೆ. 22 ರಂದು ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ.

ಇದನ್ನೂ ಓದಿ: ಮಂಗಳೂರು : ಇಂದಿನಿಂದ 3 ದಿನ ಪಾಂಡೇಶ್ವರದಲ್ಲಿ ಬೃಹತ್ ಐಸ್‌ಕ್ರೀಂ ಪರ್ಬ

ಇಂದು ನಡೆದ ಪ್ರಸಾದ ಹಾರಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಂಗಳೂರು ಏಳು ಪಟ್ನ ಮೊಗವೀರ ಸಂಯುಕ್ತ ಸಭಾದ ಕುದ್ರೋಳಿ 3 ನೇ ಗ್ರಾಮ ಅಧ್ಯಕ್ಷ ಲೋಕೇಶ್ ಸುವರ್ಣ, ದೇವಸ್ಥಾನದ ಮೊಕ್ತೇಸರ ಕುದ್ರೋಳಿ ಒಂದನೇ ಗ್ರಾಮದ ಮಾಧವ ಪುತ್ರನ್ ಗುರಿಕಾರ, 2 ನೇ ಗ್ರಾಮದ ಯಾದವ ಸುವರ್ಣ, 3 ನೇ ಗ್ರಾಮದ ಯಾದವ ಸಾಲ್ಯಾನ್, ಪುರುಷೋತ್ತಮ ಕೋಟ್ಯಾನ್ ಬೊಕ್ಕಪಟ್ನ, ಯಶವಂತ ಪಿ. ಮೆಂಡನ್ ಬೋಳೂರು, ರಂಜನ್ ಕಾಂಚನ್ ಬೋಳೂರು, ವಾಸುದೇವ ಸಾಲ್ಯಾನ್ ಬೈಕಂಪಾಡಿ, ಸುರೇಶ್ ಕುಂದರ್ ಕೂಳೂರು, ಅಮರನಾಥ ಸುವರ್ಣ ಗುರಿಕಾರ ಪಣಂಬೂರು ಮತ್ತು ಗ್ರಾಮದ ಭಕ್ತರು ಉಪ್ಥಿತರಿದ್ದರು.

 

Continue Reading

LATEST NEWS

ಮಹಾಕುಂಭಮೇಳದಲ್ಲಿ ಮತ್ತೆ ಅ*ಗ್ನಿ ಅವಘ*ಡ

Published

on

ಮಂಗಳೂರು/ಪ್ರಯಾಗ್‌ರಾಜ್ : ಮಹಾಕುಂಭಮೇಳದಲ್ಲಿ ಒಂದಿಲ್ಲೊಂದು ದುರಂ*ತ ಸಂಭವಿಸುತ್ತಿದೆ. ಇದೀಗ ಮತ್ತೆ ಅಗ್ನಿ ಅವ*ಘಡ ಉಂಟಾಗಿದೆ. ಇಂದು (ಫೆ.07)ಸೆಕ್ಟರ್ 18ರ ಶಂಕರಾಚಾರ್ಯ ಮಾರ್ಗ್ ನಲ್ಲಿ ಬೃಹತ್ ಅ*ಗ್ನಿ ಅವ*ಘಡ ಸಂಭವಿಸಿದೆ. ತಕ್ಷಣ ಸ್ಥಳಕ್ಕೆ ಅ*ಗ್ನಿಶಾಮಕ ದಳ ಆಗಮಿಸಿ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಮಹಾಕುಂಭ ಮೇಳದಲ್ಲಿ ಸಂಭವಿಸಿದ ಮೂರನೇ ಅ*ಗ್ನಿ ಅವ*ಘಡ ಇದಾಗಿದೆ.

ಜನವರಿಯಲ್ಲಿ ಮೇಳ ಮೈದಾನದ ಸೆಕ್ಟರ್ 19 ರಲ್ಲಿ ಸಿಲಿಂಡರ್ ಸ್ಫೋ*ಟಗೊಂಡಿತ್ತು. ಅದೃಷ್ಟವಶಾತ್ ಯಾವುದೇ ಸಾ*ವು ನೋ*ವುಗಳು ವರದಿಯಾಗಿರಲಿಲ್ಲ. ಬಳಿಕ, ಜನವರಿ 25 ರಂದು, ಮೇಳ ಮೈದಾನದ ಸೆಕ್ಟರ್ 2 ರಲ್ಲಿ ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡಿತ್ತು. ಬೆಳಗಿನ ಜಾವ ಎರಡು ಕಾರುಗಳು ಬೆಂ*ಕಿಗೆ ಆ*ಹುತಿಯಾದವು. ಮೌನಿ ಅಮಾವಾಸ್ಯೆಯಂದು ಕಾಲ್ತು*ಳಿತ ಉಂಟಾಗಿತ್ತು. ಪರಿಣಾಮ 30 ಜನರು ಸಾ*ವನ್ನಪ್ಪಿದ್ದರು.

ಇದನ್ನೂ ಓದಿ : ಬಾಲಿವುಡ್ ಕಿಂಗ್ ಖಾನ್ ಪುತ್ರನಿಗೆ ಬೆಂಬಲ ನೀಡಿದ ಚಿತ್ರರಂಗ !

45 ದಿನಗಳ ಕಾಲ ನಡೆಯಲಿರುವ ಮಹಾಕುಂಭ ಮೇಳದಲ್ಲಿ ಫೆಬ್ರವರಿ 12 ರಂದು ನಡೆಯುವ ಮಾಘಿ ಪೂರ್ಣಿಮೆಯನ್ನು ಬಹಳಷ್ಟು ಜನರು ಸೇರುವ ಸಾಧ್ಯತೆ ಇದೆ. ಮಹಾಕುಂಭಮೇಳ 2025ರ ಫೆಬ್ರವರಿ 26 ರಂದು ಅಂತಿಮ ಅಮೃತ ಸ್ನಾನದೊಂದಿಗೆ ಮುಕ್ತಾಯಗೊಳ್ಳಲಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page