Connect with us

bengaluru

ಸೆ.1ಕ್ಕೆ ಯೋಗಿ ಆದಿತ್ಯನಾಥ್ ರಾಜ್ಯಕ್ಕೆ-SDMಗೆ ಭೇಟಿ

Published

on

ಬೆಂಗಳೂರು: ನೂತನವಾಗಿ ರಾಜ್ಯಸಭಾ ಸದಸ್ಯನಾಗಿ ಅಧಿಕಾರವನ್ನು ಅಲಂಕರಿಸಿರುವ ಡಾ. ವಿರೇಂದ್ರ ಹೆಗ್ಗಡೆಯವರ ಮನವಿ ಮೇರೆಗೆ ಸಪ್ಟೆಂಬರ್ 1ರಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.


ಇವರು ಸೆ.1ರ ಬೆಳಿಗ್ಗೆ 11.30ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಎಸ್‌ಡಿಎಂ ಆಫ್‌ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ ಕ್ಯಾಂಪಸ್‌ಗೆ ಬೇಟಿ ನೀಡಲಿದ್ದಾರೆ.

ಡಾ. ಹೆಗ್ಗಡೆಯವರ ಕೋರಿಕೆ ಮೇರೆಗೆ ಯೋಗಿಯವರು ರಾಜ್ಯ ಪ್ರವಾಸ ಕೈಗೊಂಡಿದ್ದು ಈ ಸಂದರ್ಭ ಪಕ್ಷದಿಂದ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿಲ್ಲ.

bengaluru

ಇನ್ಮುಂದೆ ನಂದಿನಿ ತುಪ್ಪ ಭಾರೀ ದುಬಾರಿ..! ಪ್ರತಿ ಕೆಜಿಗೆ 90 ರೂ. ಏರಿಕೆ ಮಾಡಿ ಶಾಕ್ ನೀಡಿದ ಕೆಎಂಎಫ್

Published

on

ಬೆಂಗಳೂರು: ಜಿಎಸ್‌.ಟಿ ದರ ಇಳಿಕೆಯಾಗಿದ್ದ ಬಗ್ಗೆ ಸಂಭ್ರದಲ್ಲಿದ್ದ ರಾಜ್ಯದ ಜನತೆಗೆ ಕೆಎಂಎಫ್ ಶಾಕ್ ನೀಡಿದೆ. ತುಪ್ಪದ ದರವನ್ನು ಕೆಎಂಎಫ್ ಏರಿಕೆ ಮಾಡಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿದೆ.  ನಂದಿನಿ ತುಪ್ಪದ ದರವನ್ನು  ಪ್ರತಿ ಕೆ.ಜಿ.ಗೆ 90 ರೂಪಾಯಿ ಏರಿಕೆ ಮಾಡಿದೆ.

ಎಲ್ಲ ಮಾದರಿಯ ತುಪ್ಪದ ದರವನ್ನು ಪ್ರತಿ ಕೆ.ಜಿ.ಗೆ. 90 ರೂಪಾಯಿ ಏರಿಕೆ ಮಾಡಿದೆ.  ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ಹೇಳಿದೆ.  ಈ ಹಿಂದೆ ಒಂದು ಕೆ.ಜಿ.  ತುಪ್ಪಕ್ಕೆ 610 ರೂ ಇತ್ತು. ಇಂದಿನಿಂದ 700 ರೂ ಗೆ ಏರಿಕೆ ಆಗಿದೆ.  ತುಪ್ಪ ಹೊರತು ಪಡಿಸಿ ಉಳಿದ ಇತರೆ ನಂದಿನಿ ಉತ್ಪನ್ನದ ರೇಟ್ ನಲ್ಲಿ  ಯಾವುದೇ ಬದಲಾವಣೆ ಇಲ್ಲ.

ನಂದಿನಿ ಹಾಲು 95 ಲಕ್ಷದಿಂದ 1 ಕೋಟಿ ಲೀ.ವರೆಗೆ ಉತ್ಪತ್ತಿ ಆಗುತ್ತಿದೆ. ಕೇವಲ 50 ಲಕ್ಷ ಲೀ. ಹಾಲು‌ ಮಾರಾಟ ಆಗ್ತಿದೆ . ಹಸುಗಳ ಹಾಲಿನಿಂದ ತಯಾರಿಸಿದ ತುಪ್ಪ ಸರಬರಾಜು ಮಾಡ್ತಿದ್ದೇವೆ. ನಷ್ಟ ಭರಿಸಲು ಬೆಲೆ‌ ಏರಿಕೆ ಮಾಡಬೇಕು.ಹೀಗಾಗಿ ತುಪ್ಪದ ದರ ಏರಿಕೆ ಮಾಡಿದ್ದೇವೆ ಎಂದು ಬಮೂಲ್ ಹಾಲಿ ಅಧ್ಯಕ್ಷ, ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

Continue Reading

bengaluru

ಕೊಲೆಯಾದವನ ಬರ್ತ್ ಡೇ ದಿನವೇ ಕೊಲೆಗಾರರಿಗೆ ಜೀವಾವಧಿ ಶಿಕ್ಷೆ…7 ವರ್ಷದ ಬಳಿಕ ಹಬ್ಬ ಆಚರಿಸಿದ ಮೃತನ ತಂದೆ

Published

on

ಬೆಂಗಳೂರು: ಹತ್ಯೆಯಾದವನ ಬರ್ತ್​ಡೇ ದಿನವೇ ಹಂತಕರಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿರುವ ಅಪರೂಪದ ಪ್ರಸಂಗ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನ ಮೈಕೋಲೇಔಟ್ ಪೊಲೀಸರ ಮುತುರ್ಜಿಯ ತನಿಖೆಯಿಂದ ಇಬ್ಬರು ಕೊಲೆ ಆರೋಪಿಗಳಾದ ಗಿರೀಶ್ , ಮಹೇಶ್ ಗೆ ಕೊನೆಗೂ ಶಿಕ್ಷೆಯಾಗಿದೆ. 2018 ಜೂನ್​ನಲ್ಲಿ ನಡೆದಿದ್ದ ಪಾಟ್ನಾ ಮೂಲದ ಸಿದ್ಧಾರ್ಥ ಕೊಲೆ ಪ್ರಕರಣ ಸಂಬಂಧ ಮಹತ್ವದ ತೀರ್ಪು ನೀಡಿರುವ ಬೆಂಗಳೂರಿನ ಸಿಸಿಹೆಚ್​ 59ನೇ ನ್ಯಾಯಾಲಯ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ 10 ಸಾವಿರ ರೂ.ಗಳನ್ನು ಮೃತನ ತಂದೆಗೆ ಪಾವತಿಸಲು ನ್ಯಾಯಾಲಯ ಸೂಚಿಸಿದೆ.

2018ರ ಜೂನ್ 26ರ ಬೆಳಗಿನ ಜಾವ 2.45ರ ಸುಮಾರಿಗೆ ಕಾರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಕಡೆ ಸಿದ್ದಾರ್ಥ್ ಕೌಶಲ್ ತೆರಳ್ತಿದ್ರು. ಮೈಕೊಲೇಔಟ್ ಸಮೀಪ‌ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಸಿದ್ದಾರ್ಥ್ ತೆರಳಿದ್ದ. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಸಿದ್ದಾರ್ಥ್ ಬೈಕ್‌ಗೆ ಮಿರರ್ ತಾಗಿಸಿ ಮುಂದೆ ಹೋಗಿದ್ರು. ಈ ವೇಳೆ ಸಿದ್ದಾರ್ಥ್ ನೋಡ್ಕೊಂಡ್ ಹೋಗಿ ಅಂತಾ ಹಿಂದಿಯಲ್ಲಿ ಹೇಳಿದ್ದ. ಇದರಿಂದ ಉಂಟಾದ ಜಗಳ ತಾರಕಕ್ಕೇರಿ ಸಿದ್ದಾರ್ಥ್‌ ತಲೆಗೆ ಹೊಡೆದು ಆರೋಪಿಗಳು ಪರಾರಿಯಾಗಿದ್ರು. ಆಸ್ಪತ್ರೆಗೆ ದಾಖಲಿಸಿದರೂ ಕೂಡಾ ಪ್ರಯೋಜನವಾಗದೆ ಸಾವನ್ನಪ್ಪಿದ್ದಾರೆ.

ಸಿದ್ದಾರ್ಥ್ ಕೌಶಲ್ ಹುಟ್ಟು ಹಬ್ಬದ ದಿನದಂದೇ ಜೀವಾವಧಿ ತೀರ್ಪು ಹೊರ ಬಂದಿದ್ದು, ಸಿದ್ದಾರ್ಥ್ ಕುಟುಂಬ ಆರೋಪಿಗಳಿಗೆ ಶಿಕ್ಷೆಯಾದ ಹಿನ್ನೆಲೆ ಭಗವಂತನಿದ್ದಾನೆ ಅಂತ ಸಂತಸ ವ್ಯಕ್ತಪಡಿಸಿದೆ. ಕೊಲೆಯಾದ ಸಿದ್ದಾರ್ಥ್ ತಂದೆ ತನ್ನ ಮನೆಗೆ ದೀಪಾಲಂಕಾರ ಮಾಡಿ ವಿಜೃಂಭಣೆಯಿಂದ ದೀಪಾವಳಿ ಹಬ್ಬ ಆಚರಿಸಿದ್ದಾರೆ.

Continue Reading

bengaluru

ಓಬೀರಾಯನ ಕಾಲದ ಹ್ಯಾಟ್‌ಗೆ ಗುಡ್ ಬೈ, ಇನ್ಮುಂದೆ ನೇವಿ ಬ್ಲೂಪೀಕ್‌ ಕ್ಯಾಪ್‌ ಧರಿಸಿ ಪೊಲೀಸರ ಹೊಸ ಲುಕ್…

Published

on

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಗಳು ಇದೀಗ ಹೊಸ ಲುಕ್ ನಲ್ಲಿ ಕಾಣುತ್ತಿದ್ದಾರೆ. ಹೌದು, ಇದುವರೆಗೆ ಸ್ಲೋಚ್ ಟೋಪಿ ಧರಿಸುತ್ತಿದ್ದ ಪೊಲೀಸರಿಗೆ ಅದನ್ನು ಬದಲಾಯಿಸಿ ಇದೀಗ ಹೊಸ ನೇವಿ ಬ್ಲೂ ಪೀಕ್ ಕ್ಯಾಪ್ ನೀಡಲಾಗಿದೆ. ಪೊಲೀಸರ ಹೊಸ ಲುಕ್‌ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ನಿನ್ನೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಮತ್ತು ಸನ್ಮಿತ್ರ ಕೈಪಿಡಿ ಬಿಡುಗಡೆ ಮಾಡಲಾಯಿತು. ಶೀಘ್ರದಲ್ಲೇ ರಾಜ್ಯದ ಎಲ್ಲಾ ಪೊಲೀಸ್ ಸಿಬಂದಿಗೆ ಈ ಪೀಕ್ ಕ್ಯಾಪ್‌ಗಳು ಲಭ್ಯವಾಗಲಿವೆ. ಈ ಕುರಿತು ಡಿಕೆಶಿ ಅವರು ಟ್ವೀಟ್ ಮಾಡಿದ್ದಾರೆ. ಪೀಕ್‌ಕ್ಯಾಪ್‌ನೀಡುವಂತೆ ಪೊಲೀಸರು ಕಳೆದ 4 ದಶಕಗಳಿಂದ ಬೇಡಿಕೆ ಇಟ್ಟಿದ್ದರು. ಕೊನೆಗೆ ನಮ್ಮ ಸರ್ಕಾರ ಹೊಸ ಮಾದರಿಯ ಕಡು ನೀಲಿ ಬಣ್ಣದ ಪೀಕ್‌ಕ್ಯಾಪ್‌ವಿತರಿಸಲು ಒಪ್ಪಿಗೆ ನೀಡಿತ್ತು. ಹೊಸ ಪೀಕ್‌ಕ್ಯಾಪ್‌ನಲ್ಲಿ ಎಲಾಸ್ಟಿಕ್‌ಇರುವುದರಿಂದ ಪೊಲೀಸರ ತಲೆಯಲ್ಲಿ ಸರಿಯಾಗಿ ಕೂರಲಿವೆ.

ಇಂದಿನಿಂದ ರಾಜ್ಯದ 1 ಲಕ್ಷ ಪೊಲೀಸ್‌ಸಿಬಂದಿಗೆ ಹೊಸ ಪೀಕ್‌ಕ್ಯಾಪ್‌ನೀಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿ ತಿಳಿಸಿದ್ದಾರೆ.ಈ ಮೂಲಕ ಪೊಲೀಸರು ಖಾಕಿ ಸಮವಸ್ತ್ರದ ಮೇಲೆ ಬಳಸುತ್ತಿದ್ದ ಸ್ಲೋಚ್ ಕ್ಯಾಪ್‌ಗೆ ವಿದಾಯ ಹೇಳಲಾಗಿದೆ. ಭಾರತೀಯ ನೌಕಾಪಡೆ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಗೋವಾ ಹಾಗೂ ದೆಹಲಿ ಸೇರಿದಂತೆ ಇತರ ರಾಜ್ಯಗಳ ಪೊಲೀಸರು ಧರಿಸುವ ಟೋಪಿಗಳನ್ನು ರಾಜ್ಯದ ಹೆಡ್ ಕಾನ್‌ಸ್ಟೆಬಲ್‌ಗಳು, ಕಾನ್‌ಸ್ಟೆಬಲ್‌ಗಳು ಧರಿಸಲಿದ್ದಾರೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜೂನ್ 16ರಂದು ನಡೆದ ವಾರ್ಷಿಕ ಸಮ್ಮೇಳನ ಸಭೆಯಲ್ಲಿ ಪೊಲೀಸ್ ಸಿಬಂದಿಯ ಟೋಪಿ ಬದಲಾವಣೆ ಕುರಿತು ಚರ್ಚೆ ನಡೆಸಲಾಗಿತ್ತು. ಈ ವೇಳೆ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರು ತೆಲಂಗಾಣ ಮಾದರಿ ಟೋಪಿ ಬಗ್ಗೆ ಒಲವು ತೋರಿಸಿದ್ದರು. ಇದೀಗ ತೆಲಂಗಾಣ ಮಾದರಿಯ ಕ್ಯಾಪ್‌ಗಳು ಅಂತಿಮವಾಗಿವೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page