Connect with us

DAKSHINA KANNADA

ಕೋವಿಡ್ ಪಾಸಿಟಿವಿಟಿ ರೇಟ್ 5% ಕಡಿಮೆ ಇರುವ 16 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆ : ದಕ್ಷಿಣ ಕನ್ನಡಕ್ಕೆ ಇಲ್ಲ ಭಾಗ್ಯ..!

Published

on

ಬೆಂಗಳೂರು :  ರಾಜ್ಯದಲ್ಲಿ ಕಳೆದೊಂದು ವಾರದಿಂದ ಸೋಂಕು ನಿಯಂತ್ರಣವಾಗಿರುವ ಹಿನ್ನಲೆ  16 ಜಿಲ್ಲೆಗಳಲ್ಲಿ ಲಾಕ್​ಡೌನ್​ ನಿಯಮ ಸಡಿಲಿಕೆ ಮಾಡಿ ಸಿಎಂ ಬಿಎಸ್​ ಯಡಿಯೂರಪ್ಪ ಆದೇಶ ನೀಡಿದ್ದಾರೆ.

ಅಗತ್ಯ ವಸ್ತು ಸೇರಿದಂತೆ ಹೊಟೇಲ್​, ರೆಸ್ಟೋರೆಂಟ್​ಗಳಿಗೆ ಸಂಜೆ 5ಗಂಟೆವರೆಗೂ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಬಿಎಂಟಿಸಿ ಹಾಗೂ ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಜೊತೆಗೆ ಕೆಎಸ್​ಆರ್​ಟಿಸಿ ಬಸ್​ ಸಂಚಾರಕ್ಕೆ ಕೂಡ ಅವಕಾಶ ನೀಡಲಾಗಿದೆ. ಶೇ 50ರಷ್ಟು ಆಸನ ಭರ್ತಿಯೊಂದಿಗೆ ಬಸ್​ ಸಂಚಾರ ನಡೆಸಬಹುದಾಗಿದೆ. ಅನ್​ಲಾಕ್​ ಕುರಿತು ಮಾತನಾಡಿದ ಅವರು,  ಸಾಮಾನ್ಯ ಜನರಿಗೆ ಸಂಕಷ್ಟದ ಸ್ಥಿತಿ ಇದೆ. ಹೀಗಾಗಿ ವಿನಾಯಿತಿ ನೀಡಲಾಗಿದೆ, ಜನರು ಕೂಡ ಸೋಂಕು ಕಡಿಮೆಯಾಗಿದೆ ಎಂದು ಮೈ ಮರೆಯದೇ ಮೊದಲಿನಂತೆ ಬಿಗಿ ನಿಲುವು ತೆಗೆದುಕೊಳ್ಳಬೇಕು. ಮಾಸ್ಕ್,ಸಾಮಾಜಿಕ ಅಂತರ ಕಾಪಾಡಬೇಕು. ಇದಕ್ಕೆ ರಾಜ್ಯದ ಜನ ಸಹಕರಿಸಬೇಕು. ಈ ನಿಯಮಗಳು ಜುಲೈ 5ರವರೆಗೂ ಮುಂದುವರೆಯಲಿದೆ ಎಂದು ತಿಳಿಸಿದರು

ಶೇ 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ (ಬಿ.ಬಿ.ಎಂ.ಪಿ ಸೇರಿದಂತೆ), ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳಿಗೆ  ಈ ಕೆಳಕಂಡ ಸಡಿಲಿಕೆಗಳನ್ನು ನೀಡಲಾಗಿದೆ.

ಶೇ 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ (ಬಿ.ಬಿ.ಎಂ.ಪಿ ಸೇರಿದಂತೆ), ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳಿಗೆ  ಈ ಕೆಳಕಂಡ ಸಡಿಲಿಕೆಗಳನ್ನು ನೀಡಲಾಗಿದೆ.

ಯಾವುದಕ್ಕೆ ವಿನಾಯಿತಿ

  • ಎಲ್ಲಾ ಅಂಗಡಿಗಳನ್ನು ಸಂಜೆ 5.00 ಗಂಟೆವರೆಗೆ ತೆರೆಯಲು ಅನುವು ಮಾಡಿಕೊಡಲಾಗುವುದು.
  • ಎಸಿ. ಚಾಲನೆಗೊಳಿಸದೇ ಹೋಟೆಲ್‌, ಕ್ಲಬ್ಸ್‌, ರೆಸ್ಟೋರೆಂಟ್‌ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತು ತಿನ್ನಲು ಸಂಜೆ 5.00 ಗಂಟೆವರೆಗೆ  ಶೇ 50 ಸಾಮರ್ಥ್ಯದೊಂದಿಗೆ ಅವಕಾಶ ಮಾಡಿಕೊಡಲಾಗುವುದು.  •
  • ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.
  • ಬಸ್‌ ಮತ್ತು ಮೆಟ್ರೋ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆಗೆ ಅವಕಾಶ ನೀಡಿದೆ.
  • ಹೊರಾಂಗಣ ಕ್ರೀಡೆಗಳಿಗೆ, ವೀಕ್ಷಕರಿಲ್ಲದೇ ಅನುಮತಿ ನೀಡಲಾಗಿದೆ.
  •  ಸರ್ಕಾರಿ/ಖಾಸಗಿ ಕಛೇರಿಗಳಿಗೆ ಶೇ 50 ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿಸಿದೆ.
  •  ಲಾಡ್ಜ್‌ ಗಳಲ್ಲಿ ಮತ್ತು ರೆಸಾರ್ಟ್‌ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ.
  • ಜಿಮ್‌ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ (ಹವಾ ನಿಯಂತ್ರಣ ಇಲ್ಲದೇ) ಅವಕಾಶ ನೀಡಿದೆ.
  • ಶೇ 5 ಕ್ಕಿಂತ ಹೆಚ್ಚಿನ ಪಾಜಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಿಗೆ ನಿಯಮ ಸಡಿಲಿಕೆಗಳು ಮಾತ್ರ ಅನ್ವಯಿಸುತ್ತವೆ.

ರಾಜ್ಯಾದ್ಯಾಂತ ಜಾರಿ ಇರಲಿದೆ ನೈಟ್​ ಕರ್ಫ್ಯೂ

ಪ್ರತಿ ದಿನ ನೈಟ್‌ ಕರ್ಫ್ಯೂ ರಾತ್ರಿ 07.00 ಗಂಟೆಯಿಂದ ಬೆಳಗ್ಗೆ 05 ಗಂಟೆವರೆಗೆ ಇರುತ್ತದೆ.  ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 07.00 ಗಂಟೆಯಿಂದ ಸೋಮವಾರ ಬೆಳಿಗ್ಗ 05.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.   ಬಸ್‌ ಸಂಚಾರವು ಶೇ. 50 ಪ್ರಯಾಣಿಕರಿಗೆ ಮಿತಿಗೊಳಿಸಿ ಸಂಚಾರಕ್ಕೆ ಅನುಮತಿಸಲಾಗಿದೆ.

DAKSHINA KANNADA

ಪ್ರಚೋದನಕಾರಿ ಪೋಸ್ಟ್: 4 ಇನ್ಸ್ಟಾಗ್ರಾಂ, 1 ಪೇಸ್ಬುಕ್ ಪೇಜ್ ರದ್ದು

Published

on

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದ 4 ಇನ್‌ಸ್ಟಾಗ್ರಾಂ ಹಾಗೂ 1 ಪೇಸ್‌ಬುಕ್ ಪೇಜ್‌ಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಈ ಪೇಜ್‌ಗಳನ್ನು ಡಿಆ್ಯಕ್ಟಿವೇಟ್ ಮಾಡಲಾಗಿದೆ.

“ವಿಎಚ್‌ಪಿ ಬಜರಂಗದಳ ಅಶೋಕನಗರ’ ಮತ್ತು “ಶಂಖನಾದ’ ಇನ್‌ ಸ್ಟಾಗ್ರಾಂ ಪೇಜ್ ವಿರುದ್ಧ ಉರ್ವ ಪೊಲೀಸ್ ಠಾಣೆ, “ಡಿಜೆ ಭರತ್ 2008” ಇನ್‌ಸ್ಟಾಗ್ರಾಂ ಪೇಜ್ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ, “ಕರಾವಳಿ ಅಫೀಶಿಯಲ್ ಇನ್‌ಸ್ಟಾಗ್ರಾಂ ಪೇಜ್” ವಿರುದ್ಧ ಪಾಂಡೇಶ್ವರ ಠಾಣೆ ಮತ್ತು “ಆಶಿಕ್ ಮೈಕಾಲ’ ಫೇಸ್‌ಬುಕ್ ಪೇಜ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: WATCH : ಸಿನಿಮೀಯ ರೀತಿಯಲ್ಲಿ ನಡೆದಿತ್ತು ಕಾರ್ ಚೇಸಿಂಗ್! ಸುಹಾಸ್ ಹ*ತ್ಯೆಯ ಮತ್ತೊಂದು ಸಿಸಿ ಟಿವಿ ವೀಡಿಯೋ ವೈರಲ್

ಈ ಪ್ರಕರಣಗಳ ತನಿಖೆಯನ್ನು ಸೆನ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಈವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ಮತ್ತು ಪ್ರಚೋದನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದ 6 ಇನ್‌ಸ್ಟಾಗ್ರಾಂ ಹಾಗೂ 1 ಪೇಸ್‌ಬುಕ್ ಪೇಜನ್ನು ರದ್ದುಗೊಳಿಸಲಾಗಿದೆ.

Continue Reading

DAKSHINA KANNADA

ಮಂಗಳೂರು: ಬೈಕ್ ಸ್ಕಿಡ್ ಆಗಿ ಸವಾರ ಸಾ*ವು

Published

on

ಮಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಗಂ*ಭೀರ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾ*ವನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೊಲ್ಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಮೃತರನ್ನು ಸೋಮೇಶ್ವರ ಗ್ರಾಮದ ಪಿಲಾರು ಅಂಬಿಸಾದಿ ನಿವಾಸಿ ಮನೋಜ್ ಗಟ್ಟಿ ಎಂದು ಗುರುತಿಸಲಾಗಿದೆ. ಇಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದ ಮನೋಜ್ ಶುಕ್ರವಾರ ರಾತ್ರಿ ಕೋಟೆಕಾರಿನ ಕೊಂಡಾಣ ಕ್ಷೇತ್ರದ ಕಡೆಯ ಬಂಡಿ ಉತ್ಸವಕ್ಕೆ ತನ್ನ ಬೈಕಲ್ಲಿ ತೆರಳಿದ್ದರು. ರಾತ್ರಿ ವೇಳೆ ವಾಪಸ್ ಆಗುತ್ತಿದ್ದಾಗ ಕೊಲ್ಯದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ.

ಇದನ್ನೂ ಓದಿ: WATCH : ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾ*ಘಾತ; ಯುವಕ ಸಾ*ವು

ಇದರಿಂದ ರಸ್ತೆಗೆಸೆಯಲ್ಪಟ್ಟ ಮನೋಜ್ ಅವರು ಗಂ*ಭೀರ ಗಾಯಗೊಂಡಿದ್ದು ಅವರನ್ನು ಸ್ಥಳೀಯರು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ.

Continue Reading

DAKSHINA KANNADA

WATCH : ಸಿನಿಮೀಯ ರೀತಿಯಲ್ಲಿ ನಡೆದಿತ್ತು ಕಾರ್ ಚೇಸಿಂಗ್! ಸುಹಾಸ್ ಹ*ತ್ಯೆಯ ಮತ್ತೊಂದು ಸಿಸಿ ಟಿವಿ ವೀಡಿಯೋ ವೈರಲ್

Published

on

ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತ್ತು. ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ ಹ*ತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸಿಸಿಟಿವಿ ವೀಡಿಯೋ ವೈರಲ್ ಆಗುತ್ತಿದೆ.

ಸಿನಿಮೀಯ ರೀತಿಯಲ್ಲಿ ಕಾರ್ ಚೇಸಿಂಗ್ : 

ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದ್ದ ಸುಹಾಸ್ ಶೆಟ್ಟಿ ಹತ್ಯೆಯ ವೀಡಿಯೋ, ಸಿಸಿ ಕ್ಯಾಮೆರಾದ ವೀಡಿಯೋ ಈಗಾಗಲೇ ವೈರಲ್ ಆಗಿವೆ. ಇದೀಗ ಮತ್ತೊಂದು ವೀಡಿಯೋ ವೈರಲ್ ಆಗಿದೆ.

ಸಿನಿಮೀಯ ರೀತಿಯಲ್ಲಿ ಕಾರ್ ಚೇಸಿಂಗ್ ಮಾಡಿ ಭೀಕರವಾಗಿ ಸುಹಾಸ್ ಶೆಟ್ಟಿ ಹ*ತ್ಯೆ ಮಾಡಲಾಗಿದೆ. ಕೊ*ಲೆ ಆರೋಪಿ ಸಫ್ವಾನ್ ಚಲಾಯಿಸುತ್ತಿದ್ದ ಮೀನು ಸಾಗಾಟದ ಪಿಕಪ್ ವಾಹನ ಕಾರನ್ನು ಚೇಸ್ ಮಾಡಿ ಡಿ*ಕ್ಕಿ ಹೊಡೆಯುವ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಮೀನು ಸಾಗಾಟದ ವಾಹನ ಓವರ್ ಟೇಕ್ ಮಾಡುತ್ತಿದ್ದಂತೆಯೇ ಅಲ್ಲಿ ಜನ ಸೇರಿದ್ದರು. ವಾಹನ ಡಿ*ಕ್ಕಿ ಹೊಡೆದು ಅಟ್ಟಾಡಿಸಿಕೊಂಡು ಹೋಗುವಾಗಲೂ ಜನರು ಮೂಕ ಪ್ರೇಕ್ಷಕರಂತೆ ನಿಂತಿದ್ದರು.

ನಾಳೆ(ಮೇ.25) ಬಜಪೆ ಚಲೋ :

ಮೇ 1 ರಂದು ಸಂಜೆ 7 ಗಂಟೆಗೆ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಈಗಾಗಲೇ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೊಂದು ಪಕ್ಕಾ ಪ್ರೀ ಪ್ಲ್ಯಾನ್ಡ್ ಮರ್ಡರ್ ಎಂದು ಹಿಂದೂ ಸಂಘಟನೆಗಳು ಹೇಳಿದ್ದು, ಈ ಕೃ*ತ್ಯದಲ್ಲಿ ಮೂವತ್ತಕ್ಕೂ ಅಧಿಕ ಜನ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಕಾಂಕ್ರೀಟ್‌ ಮಿಕ್ಸಿಂಗ್‌ ವಾಹನದಡಿಗೆ ಬಿದ್ದು ಮಹಿಳೆ ಸಾ*ವು

ಸುಹಾಸ್ ಪ್ರಕರಣವನ್ನು ಎನ್ ಐ ಎ ಗೆ ಒಪ್ಪಿಸಲು ಹಿಂದೂ ಸಂಘಟನೆಗಳ ಆಗ್ರಹಿಸುತ್ತಿದೆ. ಮತ್ತೊಂದೆಡೆ, ನಾಳೆ ಮಧ್ಯಾಹ್ನ ಮೂರು ಗಂಟೆಗೆ ಬಜಪೆ ಚಲೋ  ಹಮ್ಮಿಕೊಳ್ಳಲಾಗಿದೆ. ಬಜ್ಪೆ ಶಾರಾದ ಮಂಟಪದಲ್ಲಿ ಹಕ್ಕೊತ್ತಾಯ ಸಭೆ ನಡೆಯಲಿದ್ದು,  ಜಿಲ್ಲೆಯಾದ್ಯಂತ ಸಾವಿರಾರು ಜನ ಸೇರುವ ನಿರೀಕ್ಷೆಯಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page