Connect with us

BIG BOSS

ಕ್ಲೋಸ್‌ ಫ್ರೆಂಡ್ಸ್‌ ಈಗ ವೈರಿಗಳು; ಸೂರಜ್‌-ರಾಶಿಕಾ ಮಧ್ಯೆ ವಾರ್‌!

Published

on

BBK12: ಬಿಗ್‌ಬಾಸ್‌ ಮನೆಯಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ಸೂರಜ್‌ ಹಾಗೂ ರಾಶಿಕಾ ಮಧ್ಯೆ ಆಪ್ತತೆ ಬೆಳೆದಿದೆ. ನಾವಿಬ್ಬರೂ ಲವರ್ಸ್‌ ಅಲ್ಲ ಎಂದು ಅವರು ಅನೇಕ ಬಾರಿ ಸ್ಪಷ್ಟನೆ ಕೊಟ್ಟರೂ, ಒಂದು ಬಾಂಧವ್ಯ ಅಂತೂ ಇದ್ದೇ ಇದೆ.


ಹೆಚ್ಚಾಗಿ ಸೂರಜ್‌ ಜತೆಯಲ್ಲೇ ಕಾಲ ಕಳೆಯುತ್ತಿದ್ದುದ್ದನ್ನು ಕಂಡು ಅವರಿಬ್ಬರ ನಡುವೆ ಪ್ರೀತಿ-ಪ್ರೇಮ ಮೂಡಿರುವುದಾಗಿ ವೀಕ್ಷಕರು ಅಭಿಪ್ರಾಯ ಪಟ್ಟಿದ್ದರು. ರಾಶಿಕಾ ಮತ್ತು ಸೂರಜ್‌ ನಡೆದುಕೊಳ್ಳುವ ರೀತಿ ತುಂಬಾ ಮುಜುಗರ ತರಿಸುತ್ತೆ ಎಂದೆಲ್ಲ ಕಮೆಂಟ್‌ ಮಾಡಿದ್ದರು.

ಮನೆಮಂದಿ ನಾಮಿನೇಟ್‌ ಮಾಡಲೂ ಮುಂದಾಗಿದ್ದರು. ಯಾವುದಕ್ಕೂ ತಲೆಕೆಡಿಸದೇ ಅವರ ಬಾಂಧವ್ಯ ಅದೇ ರೀತಿ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲದೇ, ಬಿಗ್‌ಬಾಸ್‌ ಮನೆಯಲ್ಲಿ ರಾಶಿಕಾ ಆಟವನ್ನು ಬಹಳ ಚೆನ್ನಾಗಿ ಆಡುತ್ತಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲೂ ಸೂರಜ್‌ ಮತ್ತು ರಾಶಿಕಾ ಉತ್ತಮವಾಗಿ ಆಡಿದ್ದಾರೆ.

ಇದನ್ನೂ ಓದಿ: ವೀಕೆಂಡ್‌ನಲ್ಲಿ ಯಾವೆಲ್ಲಾ ವಿಷಯಗಳು ಚರ್ಚೆಗೆ ಬರಲಿವೆ?

ಆದರೆ, ಈ ವಾರ ರಾಶಿಕಾ ಕ್ಯಾಪ್ಟನ್‌ ಆಗುತ್ತಿದ್ದಂತೆ ಇಬ್ಬರೂ ಬದಲಾಗಿದ್ದಾರೆ. ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ರಾಶಿಕಾ ರಜತ್‌ ಜತೆ ಬೆರೆಯುತ್ತಿರುವುದು ಸೂರಜ್‌ಗೆ ಕೋಪ ತರಿಸಿದೆ. ಆ ಸಂದರ್ಭದ ಪ್ರೋಮೋನ ಕಲರ್ಸ್‌ ಕನ್ನಡ ಹಂಚಿಕೊಂಡಿದೆ.

BIG BOSS

ಅಂತ್ಯ ಅಲ್ಲ….ಇದು ಹೊಸ ಆರಂಭ..ಧ್ರುವಂತ್ ಗೆಟಪ್ ಚೇಂಜ್

Published

on

ಮಂಗಳೂರು/ಬೆಂಗಳೂರು : ಬಿಗ್ ಬಾಸ್ ಸೀಸನ್ 12 ಮುಕ್ತಾಯದ ಹಂತದಲ್ಲಿದೆ. ಒಬ್ಬೊಬ್ಬರೇ ಹೊರ ನಡೆದಿದ್ದಾರೆ. ಈಗ ಉಳಿದಿರೋದು ಕೇವಲ ಐದು ಮಂದಿ. ಮಿಡ್ ವೀಕ್ ಎಲಿಮಿನೇಷನ್‌ ಮೂಲಕ ಧ್ರುವಂತ್ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಲೇ ಧ್ರುವಂತ್ ಬದಲಾಗಿದ್ದಾರೆ.

ಬದಲಾಯ್ತು ಗೆಟಪ್:

ಬಿಗ್ ಬಾಸ್ ಮನೆಯೊಳಗಿದ್ದಾಗ ತಮ್ಮದೇ ಆದ ರೀತಿಯಲ್ಲಿ ಆಟವಾಡಿದ್ದರು ಧ್ರುವಂತ್. ಚರ್ಚೆ, ಜಗಳ, ವಾದದಲ್ಲೂ ಧ್ರುವಂತ್ ಇದ್ದರು. ಎಲ್ಲರೊಂದಿಗೆ ಜಗಳವಾಡುತ್ತಿದ್ದ ಧ್ರುವಂತ್‌ರನ್ನು ಕಿಚ್ಚ ಕ್ಲಾಸ ತೆಗೆದುಕೊಂಡಿದ್ದೂ ಇದೆ. ದೊಡ್ಮನೆಯೊಳಗೆ ‘ಜೈ ಮಹಾಕಾಳ್’ ಎನ್ನುತ್ತಾ ಖ್ಯಾತರಾಗಿದ್ದ ಧ್ರುವಂತ್ ಸೀಕ್ರೆಟ್ ರೂಮಿಗೂ ಹೋಗಿದ್ದರು. ಅಲ್ಲೂ ರಕ್ಷಿತಾ ಶೆಟ್ಟಿ ಜೊತೆ ಅವರ ಜಗಳ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಬಿಗ್ ಬಾಸ್ ಮನೆಯಲ್ಲಿ ತನ್ನ ಉದ್ದ ಕೂದಲನ್ನು ಜುಟ್ಟು ಕಟ್ಟಿಕೊಂಡು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದ ಧ್ರುವಂತ್, ಇದೀಗ ಜುಟ್ಟಿಗೆ ಕತ್ತರಿ ಹಾಕಿಸಿಕೊಂಡಿದ್ದಾರೆ. ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕಣ್ಣು ಬಣ್ಣದ ಥಾರ್‌ನಲ್ಲಿ ಬಂದಿಳಿದ ಧ್ರುವಂತ್, ಅಭಿಮಾನಿಗಳನ್ನು ಭೇಟಿಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಬಳಿಕ ಸೆಲೂನ್‌ಗೆ ಹೋದ ಅವರು ಕೂದಲು ಕತ್ತರಿಸಿಕೊಂಡಿದ್ದಾರೆ. ಸ್ಟೈಲಿಷ್ ಹೇರ್ ಸ್ಟೈಲ್ ಮಾಡಿಕೊಂಡು ಡಿಫರೆಂಟ್ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಅಂತ್ಯ ಅಲ್ಲ….ಇದು ಹೊಸ ಆರಂಭ ಎಂಬುದಾಗಿ ಟ್ಯಾಗ್ ಲೈನ್‌ನೊಂದಿಗೆ ವೀಡಿಯೋ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ : ‘ಅಶ್ವಿನಿ ಗೌಡಗೆ ಕನ್ನಡ ಬರೆಯೋಕೆ ಬರಲ್ಲ’ ಎಂಬ ಟೀಕೆಗೆ ಸ್ಪಷ್ಟೀಕರಣ ಕೊಟ್ಟ ಕರವೇ ನಾರಾಯಣ ಗೌಡ!

ಅಂದಹಾಗೆ, ಇಂದು(ಜ.17) ಬಿಗ್ ಬಾಸ್ ಪ್ರಿ ಫಿನಾಲೆ ನಡೆಯಲಿದೆ. ನಾಳೆ(ಜ.18) ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ,ರಘು, ಧನುಷ್, ಅಶ್ವಿನಿ ಗೌಡರಲ್ಲಿ ಯಾರು ಬಿಗ್ ಬಾಸ್ ಟ್ರೋಫಿ ಗೆಲ್ತಾರೆ ಅನ್ನೋದು ಸದ್ಯದ ಕುತೂಹಲ.

Continue Reading

BIG BOSS

‘ಅಶ್ವಿನಿ ಗೌಡಗೆ ಕನ್ನಡ ಬರೆಯೋಕೆ ಬರಲ್ಲ’ ಎಂಬ ಟೀಕೆಗೆ ಸ್ಪಷ್ಟೀಕರಣ ಕೊಟ್ಟ ಕರವೇ ನಾರಾಯಣ ಗೌಡ!

Published

on

BBK12:ಬಿಗ್‌ ಬಾಸ್‌ ಫಿನಾಲೆ ವೀಕ್‌ ಟಾಸ್ಕ್‌ನಲ್ಲಿ ಸ್ಪರ್ಧಿ ಅಶ್ವಿನಿ ಗೌಡ ತಮಗಾಗಿ ʼಛಲಗಾರ್ತಿʼ ಎಂಬ ಹ್ಯಾಶ್‌ಟ್ಯಾಗ್‌ ಬರೆಯಲು ಹೋಗಿ ತಪ್ಪು ಮಾಡಿದ್ದರು. ಕನ್ನಡ ಪರ ಹೋರಾಟಗಾರ್ತಿಗೆ ಕನ್ನಡವೇ ಸರಿಯಾಗಿ ಬರೆಯೋಕೆ ಬರೋದಿಲ್ವಾ ಎಂಬ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರು ಸ್ಪಷ್ಟೀಕರಣ ನೀಡಿದ್ದಾರೆ.

 

ತಾನು ಹೋರಾಟಗಾರ್ತಿ, ಮಹಿಳಾ ಹಕ್ಕುಗಳ ರಕ್ಷಕಿ ಎಂದೆಲ್ಲಾ ಮಾತನಾಡುವ ಅಶ್ವಿನಿ ಗೌಡ ಅವರಿಗೆ ಕನ್ನಡವೇ ಸರಿಯಾಗಿ ಬರೆಯೋಕೆ ಬರೋದಿಲ್ಲ ಎಂಬ ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿತ್ತು.

ಬಿಗ್‌ಬಾಸ್‌ ಸೋಮವಾರದ ಎಪಿಸೋಡ್‌ನಲ್ಲಿ ಫಿನಾಲೆ ವೀಕ್‌ಗೆ ಕಾಲಿಟ್ಟಿರುವ ಸ್ಪರ್ಧಿಗಳಿಗೆ ಒಂದು ಟಾಸ್ಕ್‌ ನೀಡಿದ್ದರು. ಅದರಂತೆ ಸ್ಪರ್ಧಿಗಳು ತಮ್ಮ ಆಟಕ್ಕೆ ಅನುಗುಣವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಬಳಸಬಹುದಾದ ಹ್ಯಾಶ್‌ಟ್ಯಾಗ್‌ಗಳನ್ನು ಸ್ವತಃ ಅವರೇ ಬೋರ್ಡ್‌ ಮೇಲೆ ಬರೆಯಬೇಕಿತ್ತು. ಅದರಂತೆ ಅಶ್ವಿನಿ ಗೌಡ ಅವರು ಬೋರ್ಡ್‌ ಮೇಲೆ ತಮ್ಮನ್ನು ಯಾವ ಹೆಸರಿನಿಂದ ಗುರುತಿಸಬೇಕು ಎಂದು ಬರೆದರು. ಬಿಗ್‌ಬಾಸ್‌ನಲ್ಲಿನ ತಮ್ಮ ಗೇಮ್‌ನಿಂದ ಜನ ‘ಚಲಗಾರ್ತಿ ಅಶ್ವಿನಿ’ ಎಂದು ಕರೆಯಬೇಕು ಎಂದು ಬಯಸಿದ್ದರು.

ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಗೌರವಾಧ್ಯಕ್ಷೆಯಾಗಿರುವ ಅಶ್ವಿನಿ ಗೌಡ ಅವರಿಗೆ ಕನ್ನಡವೇ ಸರಿಯಾಗಿ ಬರೆಯೋಕೆ ಬರೋದಿಲ್ಲ ಅನ್ನೋದು ಇದರಲ್ಲಿ ಗೊತ್ತಾಗಿತ್ತು. ಇದನ್ನು ಅಶ್ವಿನಿ ಗೌಡ ಬರೆದರೋ ಅಥವಾ ಧ್ರುವಂತ್‌ ಅವರು ಬೋರ್ಡ್‌ ಮೇಲೆ ಬರೆದಿದ್ದೋ ಎನ್ನುವುದು ಗೊತ್ತಾಗಿಲ್ಲ. ಆದರೆ, ಕನ್ನಡದಲ್ಲಿ ಆಗಿರುವ ತಪ್ಪನ್ನು ಗುರುತಿಸಲು ಕೂಡ ಕರವೇ ನಾಯಕಿಗೆ ಗೊತ್ತಾಗಿಲ್ಲ ಅನ್ನೋದು ಅಚ್ಚರಿಯ ವಿಚಾರವಾಗಿದೆ.

ಛಲಗಾರ್ತಿ ಪದವನ್ನು ತಪ್ಪಾಗಿ ಬರೆದ ಅಶ್ವಿನಿ ಗೌಡ
ಮೊದಲಿಗೆ ‘ಚಲಗಾರ್ಥಿ ಅಶ್ವಿನಿ’ ಎಂದು ಬರೆಯಲಾಗಿತ್ತು. ಬಳಿಕ ಅದನ್ನು ಹೊಡೆದು, ‘ಚಲಗಾರ್ತಿ ಅಶ್ವಿನಿ’ ಎಂದು ಬರೆಯಲಾಗಿದೆ. ಆದರೆ, ಕನ್ನಡದಲ್ಲಿ ‘ಛಲಗಾರ್ತಿ ಅಶ್ವಿನಿ’ ಎಂದು ಬರೆದರೆ ಸರಿ. ಇನ್ನು ಅವರು ಬಳಸಿರುವ ಹ್ಯಾಶ್‌ಟ್ಯಾಗ್‌ನಲ್ಲೂ ಆಕೆ ತಪ್ಪು ಮಾಡಿದ್ದಾರೆ. ‘ಹಠವಾದಿ ಅಶ್ವಿನಿ’ ಎನ್ನುವ ಬದಲು, ‘#ಹಠವಾಧಿಅಶ್ವಿನಿ’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ಫಿನಾಲೆ ವೀಕ್‌ನಲ್ಲಿ ಸ್ಪರ್ಧಿಯಿಂದ ಇದೆಂತಾ ನಿರ್ಧಾರ; ಸಹಸ್ಪರ್ಧಿಗಳಿಗೆ ಬಿಗ್‌ ಶಾಕ್..!

ಸ್ಪಷ್ಟಿಕರಣ ಕೊಟ್ಟ ನಾರಾಯಣ ಗೌಡ
“ಅಶ್ವಿನಿ ಗೌಡ ತಂದೆ ಆಗರ್ಭ ಶ್ರೀಮಂತರು, ಹೀಗಾಗಿ ಮಗಳನ್ನು ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿಸಿದ್ದಾರೆ. ಇನ್ನೊಂದು ಕಡೆ ಅಶ್ವಿನಿ ಗೌಡ ಅವರು ಕರವೇಗೆ ಬರುವಾಗ ನಾನು, ಅವರಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ್ದೀರಾ? ಕನ್ನಡ ಮಾಧ್ಯಮದಲ್ಲಿ ಓದಿದ್ದೀರಾ ಎಂದು ಪ್ರಶ್ನೆ ಮಾಡಿರಲಿಲ್ಲ. ನೀವು ಇಲ್ಲಿಗೆ ಬರಲು ಉದ್ದೇಶ ಏನು ಎಂದು ಕೇಳಿದಾಗ ಅವರು, “ನಾನು ಕನ್ನಡತಿ, ಕನ್ನಡದ ಮೇಲೆ ಅಭಿಮಾನ ಇದೆ, ಕನ್ನಡದ ಪರವಾಗಿ ಸೇವೆ ಮಾಡಬೇಕು. ಅದನ್ನು ನಾನು ಗಮನಕ್ಕೆ ತಗೊಂಡೆ ಅಷ್ಟೇ” ಎಂದು ಹೇಳಿದ್ದಾರೆ.

ಮುಂದುವರಿದು, “ಕೆಲವು ಮಂತ್ರಿಗಳು ಹೇಳ್ತಾರೆ, ನಾವು ಕನ್ನಡದಲ್ಲಿ ಮಾತನಾಡ್ತೇವೆ.. ಆದ್ರೆ ಬರೆಯೋದು ಕಷ್ಟ ಅಂತಾರೆ. ಹಾಗಾಂತ ಮಂತ್ರಿಗಳಾಗಬಾರದು, ಶಾಸಕರಾಗಬಾರದು ಅಂಥ ಏನಾದರೂ ಕಾನೂನು ಇದೆಯಾ, ಹಾಗೆಯೇ ಕನ್ನಡ ಹೋರಾಟದಲ್ಲಿ ಕನ್ನಡ ಬರೆಯೋಕೆ ಗೊತ್ತಿರಬೇಕು ಅಂತ ಅಲ್ಲ. ಕನ್ನಡದ ಬಗ್ಗೆ ಪ್ರೀತಿ ಇದ್ದರೆ ಸಾಕು. ನಾಡಿನ ಕುರಿತು ಗೌರವ, ಕಾಳಜಿ, ಕಳಕಳಿ ಇದ್ದರೆ ಸಾಕು. ಯಾರು ಬೇಕಾದರೂ ಕನ್ನಡದ ಚಳುವಳಿಯಲ್ಲಿ ಪಾಲ್ಗೋಳ್ಳಬಹುದು” ಎಂದಿದ್ದಾರೆ.

Continue Reading

BIG BOSS

ಬಿಗ್‌ ಬಾಸ್‌ ಫಿನಾಲೆ ವೀಕ್‌ನಲ್ಲಿ ಸ್ಪರ್ಧಿಯಿಂದ ಇದೆಂತಾ ನಿರ್ಧಾರ; ಸಹಸ್ಪರ್ಧಿಗಳಿಗೆ ಬಿಗ್‌ ಶಾಕ್..!

Published

on

BBK12: ಬಿಗ್‌ ಬಾಸ್ ಕನ್ನಡ ಇತಿಹಾಸದಲ್ಲೇ ಇಂಥಹ ನಿರ್ಧಾರವೊಂದನ್ನ ಯಾವುದೇ ಸ್ಪರ್ಧಿ ಕೈಗೊಂಡಿರಲಿಲ್ಲ. ಆದರೆ ಸೀಸನ್‌-12ರಲ್ಲಿ ಸ್ಪರ್ಧಿಯ ಅಪರೂಪದ ಬೇಡಿಕೆಗೆ ಬಿಗ್‌ ಬಾಸ್‌ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದರು. ಇದನ್ನ ಕೇಳಿ ಸಹ ಸ್ಪರ್ಧಿಗಳು ಶಾಕ್‌ ಆಗಿದ್ದಾರೆ.

ಹೌದು, ಬಿಗ್‌ ಬಾಸ್‌ ಸೀಸನ್‌-12ರ ಫಿನಾಲೆಗೆ ಆರು ಸ್ಪರ್ಧಿಗಳು ಟಿಕೆಟ್‌ ಪಡೆದಿದ್ದರು. ಫಿನಾಲೆ ವೀಕ್‌ನಲ್ಲಿ ಸ್ಪರ್ಧಿಗಳೆಲ್ಲ ಜಾಲಿ ಮೂಡನಲ್ಲಿದ್ದರು. ಯಾವುದೇ ಟಾಸ್ಕ್‌ಗಳಿಲ್ಲದೆ, ಜಗಳಗಳು ನಡೆಯದೇ ಮನೆಯೆಲ್ಲ ಶಾಂತವಾಗಿತ್ತು. ಇದೇ ವೇಳೆ ಸ್ಪರ್ಧಿಗಳಿಗೆ ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವ ಅವಕಾಶವನ್ನು ಬಿಗ್‌ ಬಾಸ್‌ ಕೊಟ್ಟಿದ್ದರು. ಮನೆಯ ಸದಸ್ಯರು ತಮ್ಮ ತಮ್ಮ ಆಸೆಗಳನ್ನು ಬರೆದು ಬೀಗ ಹಾಕಿದ್ದರು.

ವೀಕೆಂಡ್‌ ಮುಗಿಯುವಷ್ಟರಲ್ಲಿ ಬಹುತೇಕ ಎಲ್ಲ ಸ್ಪರ್ಧಿಗಳ ಆಸೆಗಳನ್ನು ಬಿಗ್‌ ಬಾಸ್‌ ನೆರವೇರಿಸಿದ್ದರು. ಗಿಲ್ಲಿ ಅವರು ನಲ್ಲಿ ಮೂಳೆ ತಿನ್ನೋಕೆ ಆಸೆ ಇದೆ ಎಂದು ಬರೆದಿದ್ದರು. ಇದನ್ನೂ ನೆರವೇರಿಸಲಾಯಿತು. ಕರಾವಳಿಯ ಹುಲಿ ಕುಣಿತ ಕಂಡು ರಕ್ಷಿತಾ ಅವರು ಸಂತೋಷ ಪಟ್ಟರು. ಅಶ್ವಿನಿ ಅವರ ತಮ್ಮ ಮನೆಗೆ ಎಂಟ್ರಿ ಕೊಟ್ಟು ಸರ್ಪ್ರೈಸ್‌ ಕೊಟ್ಟಿದ್ದರು. ಧನುಷ್‌ ಅವರ ಕುಟುಂಬಿಕರ ವೀಡಿಯೋ ಶುಭಾಶಯಗಳನ್ನು ಹಾಕಲಾಯಿತು. ಹಾಗೆಯೇ ರಘು ಅವರ ಮಗ ಮನೆಗೆ ಎಂಟ್ರಿ ಆಗಿ ಸ್ವೀಮ್ಮಿಂಗ್‌ ಫುಲ್‌ಗೆ ಇಳಿದು ಅಪ್ಪ-ಮಗ ಎಂಜಾಯ್‌ ಮಾಡಿದ್ದರು.

ಇದನ್ನೂ ಓದಿ: BBK12: ಇಂದು ನಡೆಯಲ್ಲ ಬಿಗ್‌ ಬಾಸ್‌ ಫಿನಾಲೆ! ಪ್ರೀ ಫಿನಾಲೆ

ಹೀಗೆ ಎಲ್ಲಾ ಸ್ಪರ್ಧಿಗಳ ಬಹುತೇಕ ಎಲ್ಲಾ ಬಯಕೆಗಳು ಇಡೇರಿದಂತಾಗಿತ್ತು. ಆದರೆ ಕಾವ್ಯಾ ಅವರ ಬಯಕೆ ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲೇ ಯಾವ ಸ್ಪರ್ಧಿಯೂ ಕೇಳದಂತಃಹದಾಗಿತ್ತು. ಆದರೂ ಕೂಡ ಬಿಗ್‌ ಬಾಸ್‌ ಕಾವ್ಯಾ ಅವರ ಆಸೆಯನ್ನ ನಿರಾಸೆ ಮಾಡಿರಲಿಲ್ಲ.

ನಿನ್ನೆ ಕಾವ್ಯಾ ಅವರ ಬಯಕೆಯಂತೆ ಅವರಿಗೆ ಕಳಪೆ ಪಟ್ಟ ಕೊಡಲಾಯಿತು. ಬಿಗ್‌ ಬಾಸ್‌ ರೂಲ್‌ ಬುಕ್‌ನಲ್ಲಿ ಬರೆದಂತೆ, ನಿಯಮಾನುಸಾರ ಎಲ್ಲಾ ಸ್ಪರ್ಧಿಗಳು ಕಾವ್ಯಾ ಅವರಿಗೆ ಸಿಲ್ಲಿ ಅಥವಾ ತಮಾಷೆಯ ಕಾರಣಗಳನ್ನು ಕೊಟ್ಟು ಕಳಪೆ ಪಟ್ಟ ಕೊಟ್ಟರು. ನಂತರ ಜೈಲಿಗೆ ಹೋಗಿ ದಿನ ಕಳೆದರು.
ಇದು ಬಿಗ್‌ ಬಾಸ್‌ ಶೋನಲ್ಲೇ ಅಪರೂಪದಲ್ಲೇ ಅಪರೂಪ ಎಂದೆನಿಸಿದೆ. ಒಟ್ಟಿನಲ್ಲಿ ಕಾವ್ಯಾ ಅವರ ವಿಶೇಷ ಬಯಕೆ ಕೇಳಿ ಸಹ ಸ್ಪರ್ಧಿಗಳು ಶಾಕ್‌ ಆಗಿದ್ದಂತೂ ನಿಜ.

Continue Reading
Advertisement

Trending

Copyright © 2025 Namma Kudla News

You cannot copy content of this page