Connect with us

MANGALORE

ಮಂಗಳೂರು: ಸಾನಿಧ್ಯ ವಿಶೇಷ ಚೇತನ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

Published

on

ಮಂಗಳೂರು: ಸ್ವಂತ ಲಾಭ ನೋಡದೇ ಯಾವುದೇ ಕೆಲಸಕ್ಕಿಳಿದರೂ ಜಯ ಖಂಡಿತ. ಅದರಲ್ಲೇನೂ ಸಂಶಯವಿಲ್ಲ ಎಂದು ಕುಲಶೇಖರ ಹೋಲಿ ಕ್ರಾಸ್ ಚರ್ಚ್ ನ ಧರ್ಮಗುರು ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ ಕ್ರಿಸ್ಮಸ್ ಹಬ್ಬದ ಶುಭ ಸಂದೇಶ ನೀಡಿದರು.


ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಚೇತನ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ ನಡೆಯಿತು.

ಧರ್ಮಗುರು ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ ಕ್ರಿಸ್ಮಸ್ ಹಬ್ಬದ ಶುಭ ಸಂದೇಶ ನೀಡಿದರು.

ಶಾಲೆಯ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಸಂಸ್ಥೆಯಲ್ಲಿ ಆಚರಿಸಲಾದ ಕಿಸ್ಮಸ್ ಹಬ್ಬದ ಕುರಿತು ಮಾತನಾಡಿದರು.

ಬಳಿಕ ವಿಶೇಷ ಚೇತನ ಮಕ್ಕಳಿಂದ ಯೇಸು ಕ್ರಿಸ್ತನ ಜೀವನ ವೃತಾಂತ ಕುರಿತ ದೃಶ್ಯ ರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಂಗಳೂರು ವಿಶ್ವವಿದ್ಯಾಲಯದ ಹಿರಿಯ ಉಪನ್ಯಾಸಕಿ ಡಾ. ಬಿ. ಕೆ ಸರೋಜಿನಿ ಎಂಎಸ್ಸಿ,

ಕರ್ನಾಟಕ ಮುಸ್ಲಿಮ್ ಸಾಂಸ್ಕೃತಿಕ ಸಂಘ ಕತಾರ್ ಇದರ ಅಧ್ಯಕ್ಷ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ಲಾ ಮೋನು ಮೊಯಿದ್ದೀನ್, ಮಾಜಿ ಮೇಯರ್ ಮಹಾಬಲ ಮಾರ್ಲ ಸೇರಿದಂತೆ ಹಲವಾರು ಮಂದಿ ಅತಿಥಿ ಗಣ್ಯರು ಪಾಲ್ಗೊಂಡಿದ್ದರು.

DAKSHINA KANNADA

ಕೇಂದ್ರದ ಯೋಜನೆಗೆ ಗಾಂಧಿ ಕನ್ನಡಕ ಬೇಕು, ಅವರ ಹೆಸರು ಬೇಡ್ವಾ-ಗರಂ ಆದ ಐವನ್ ಡಿಸೋಜಾ

Published

on

ಮಂಗಳೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರಕಾರ ಬದಲಿಸಿರುವುದನ್ನು ಖಂಡಿಸಿ ರಾಜ್ಯ ಸರ್ಕಾರ  ಜ.22ರಿಂದ 31ರವರೆಗೆ ಜಂಟಿ ಅಧಿವೇಶವನ್ನು ಕರೆದಿದೆ. ಬಡವರು ಬದುಕನ್ನು ಕಂಡುಕೊಂಡಿದ್ದಂತಹ ಉದ್ಯೋಗ ಖಾತರಿ ಯೋಜನೆಯನ್ನು ಮೂಲೆಗುಂಪಾಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಸಂವಿಧಾನಬದ್ಧವಾಗಿ ಜಾರಿಗೆ ತಂದಿರುವ  ಕಾಂಗ್ರೆಸ್ ನ ಜನಪರ ಯೋಜನೆಯನ್ನು  ಬೀದಿ ಪಾಲು ಮಾಡುವುದೇ ಬಿಜೆಪಿ ಉದ್ದೇಶ. ಬಿಜೆಪಿಗೆ ಜನಪರ ಕಾಳಜಿಯಿಲ್ಲ, ಸಾಮಾಜಿಕ ಬದ್ಧತೆಯಿಲ್ಲ. ಬರೀ ದ್ವೇಷದ ರಾಜಕೀಯ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಹೇಳಿದರು.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರ ಈ ಉದ್ಯೋಗ ಖಾತರಿ ಯೋಜನೆಯನ್ನು ಸಮಾಪ್ತಿಗೊಳಿಸುವ ಕೆಲಸ ಮಾಡುತ್ತಿದೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಸರ್ಕಾರ ಈ ಕಾಯ್ದೆ ಮೊದಲು ಹೇಗೆ ಇತ್ತೋ ಹಾಗೇ ಇರಬೇಕು. ಉದ್ಯೋಗ ಖಾತರಿ ಯೋಜನೆ ಮೂಲಕ ಪ್ರತೀ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿತ್ತು. ಇದರಿಂದ ಗ್ರಾಮದ ಪ್ರಗತಿ ಕುಂಠಿತವಾಗುತ್ತದೆ. ಅಭಿವೃದ್ಧಿಗೆ ಇದು ಕೊಡಲಿಯೇಟು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಳಿದೆಲ್ಲಾ ಕೇಂದ್ರದ ಯೋಜನೆಗೆ ನಿಮಗೆ ಮಹಾತ್ಮಾ ಗಾಂಧಿ ಕನ್ನಡಕ ಬೇಕು. ಮಹಾತ್ಮ ಗಾಂಧಿ ಬೇಡ್ವಾ.. ನೀವು ಬೇಕಾದ್ರೆ ನಾಥೋರಾಮ್ ಗೋಡ್ಸೆ ಹೆಸರಿಡಿ ವಿ ಡೋಂಟ್ ಮೈಂಡ್ . ಬಟ್ ನಮಗೆ ನೀವು ತೆಗೆದ ಕಾನೂನು ಮತ್ತೆ ಜಾರಿಗೆ ಬರಲೇ ಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನ ಇತರ ಮುಖಂಡರು ಉಪಸ್ಥಿತರಿದ್ದರು. ಐವನ್ ಡಿಸೋಜಾ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಖಾಯಿಲೆಯಿಂದ ಬಳಲುವ 9 ಜನ ಅರ್ಜಿದಾರರಿಗೆ  4 ಲಕ್ಷದ 44 ಸಾವಿರ 25 ರೂ. ಪರಿಹಾರ ಧನದ ಬಿಡುಗಡೆ ಪತ್ರವನ್ನು ಹಸ್ತಾಂತರಿಸಿದರು.

 

Continue Reading

DAKSHINA KANNADA

ಪಣಂಬೂರು ಕಡಲ ಕಿನಾರೆಯಲ್ಲಿ ಮೃತದೇಹ ಪತ್ತೆ

Published

on

ಮಂಗಳೂರು: ನಗರದ ಪಣಂಬೂರು ಠಅಣಾ ವ್ಯಾಪ್ತಿಯ ಪಣಮಬೂರು ಕಡಲ ಕಿನಾರೆ ಬ್ರೇಕ್ ವಾಟರ್ ಬಳಿ ಸಮುದ್ರದ ದಡದಲ್ಲಿ ಇಂದು ಬೆಳಿಗ್ಗೆ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ. 55-60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಇದಾಗಿದ್ದು ಮೃತರ ವಾರಿಸುದಾರರು ಪತ್ತೆಯಾಗದೇ ಇರುವುದರಿಂದ ಶವವನ್ನು ಸರ್ಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಅಪರಿಚಿತ ಮೃತ ವ್ಯಕ್ತಿ ಸುಮಾರು 5.5 ಅಡಿ ಎತ್ತರವಿದ್ದು ದೃಢಕಾಯ ಶರೀರ, 3 ಇಂಚು ಉದ್ದ ಬಿಳಿ ತಲೆ ಕೂದಲು ಹಾಗೂ ಬಿಳಿ ಬಣ್ಣದ ಗಡ್ಡ ಹೊಂದಿದ್ದಾರೆ. ಕಣ್ಣುಗಳು, ದೇಹ ಊದಿಕೊಂಡಿದ್ದು ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಈ ವ್ಯಕ್ತಿಯ ಕುರಿತು ಮಾಹಿತಿ ದೊರೆತಲ್ಲಿ ಪಣಂಬೂರು ಪೊಲೀಸ್ ಠಾಣೆ 0824-2220530, 9480805355 ಅಥವಾ ಮಂಗಳೂರು ನಗರ ಕಂಟ್ರೋಲ್ ರೂಂ ಫೋ-0824-2220800ಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

Continue Reading

DAKSHINA KANNADA

ಮಂಗಳೂರು ಐಸ್ ಕ್ರೀಮ್ ಪರ್ಬ-2026; ಈ ಬಾರಿ 17 ಐಸ್‌ಕ್ರೀಂ ಬ್ರ್ಯಾಂಡ್‌ಗಳು ಭಾಗಿ

Published

on

ಮಂಗಳೂರು: ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಮಾಲ್ ಮತ್ತು ಮಂಗಳೂರಿನ ಪ್ರಸಿದ್ಧ ತಿಂಡಿ ಟ್ರೈ ತಿಂಡಿ ಇನ್‌ಸ್ಟಾಗ್ರಾಂ ಪೇಜ್ ಸಹ ಭಾಗಿತ್ವದಲ್ಲಿ ಜನವರಿ 16, 17 ಮತ್ತು 18ರಂದು ಐಸ್ ಕ್ರೀಮ್ ಪರ್ಬವನ್ನು ಆಯೋಜಿಸಲಾಗಿದೆ. 3ನೇ ಆವೃತ್ತಿಯ ಐಸ್ ಕ್ರೀಮ್ ಪರ್ಬ ಇದಾಗಿದ್ದು ಮೂರೂ ದಿನ ಕೂಡ ಬೆಳಗ್ಗೆ 11 ರಿಂದ ರಾತ್ರಿ 9 ರವರೆಗೆ ನಡೆಯಲಿದೆ ಎಂದು ಆಯೋಜಕರಾದ ಕಿರಣ್ ಶೆಣೈ ತಿಳಿಸಿದ್ದಾರೆ.

ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಮಂಗಳೂರನ್ನು ಐಸ್ ಕ್ರೀಮ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದು ಕರೆಯುವ ಈ ಸಂದರ್ಭದಲ್ಲಿ ಎಲ್ಲಾ ಐಸ್ ಕ್ರೀಮ್ ಸಂಸ್ಥೆಗಳನ್ನು ಒಂದೇ ಸೂರಿನಡಿ ಸೇರಿಸಬೇಕು ಅನ್ನುವ ಆಲೋಚನೆಯಲ್ಲಿ 17 ಐಸ್‌ಕ್ರೀಂ ಸಂಸ್ಥೆಗಳು ಪರ್ಬದಲ್ಲಿ ಈ ಬಾರಿ ಭಾಗವಹಿಸಲಿದೆ ಎಂದರು.

ಐಡಿಯಲ್-ಪಬ್ಬಾಸ್, ಹ್ಯಾಂಗ್ಯೋ ಸೇರಿದಂತೆ ಮಂಗಳೂರಿನ ಹಲವು ಪ್ರಖ್ಯಾತ ಬ್ರ್ಯಾಂಡ್‌ನ ಐಸ್‌ಕ್ರೀಂ ಕಂಪೆನಿಗಳು ಇದರಲ್ಲಿ ಭಾಗವಹಿಸಲಿದ್ದು, ಪಚ್ಚೋಡಿ ಐಸ್ ಕ್ರೀಮ್ ಈ ಬಾರಿಯ ವಿಶೇಷವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಆರ್ ಜೆ ಅಭಿಷೇಕ್ ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page