Connect with us

chikkamagaluru

ಚಿಕ್ಕಮಗಳೂರು ಹೋಮ್‌ಸ್ಟೇಗಳಿಗೆ ಅರಣ್ಯ ಇಲಾಖೆಯಿಂದ ನೋಟೀಸ್..!

Published

on

ಚಿಕ್ಕಮಗಳೂರು/ಮಂಗಳೂರು: ಅಂಕೋಲಾದ ಶಿರೂರು, ಶಿರಾಡಿ ಘಾಟ್‌ ಭೂಕುಸಿತ ಹಾಗೂ ವಯನಾಡಿನ ದುರ್ಘಟನೆ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರ್ಮಿಸಲಾಗಿರುವ ರೆಸಾರ್ಟ್​​ ಅಥವಾ ಹೋಂಸ್ಟೇಗಳಿಗೆ ನೋಟಿಸ್ ನೀಡಿದೆ. ಅನಧಿಕೃತವಾಗಿ ನಡೆಯುತ್ತಿರುವ ಹೋಂಸ್ಟೇ ಅಥವಾ ರೆಸಾರ್ಟ್​ಗಳನ್ನು ಪತ್ತೆ ಹಚ್ಚಲು ಮುಂದಾಗಿದೆ.

ಚಿಕ್ಕಮಗಳೂರು ಅರಣ್ಯ ವಲಯ  ವ್ಯಾಪ್ತಿಯಲ್ಲಿನ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್​ಸ್ವಾಮಿ ದರ್ಗಾ, ಚಂದ್ರದ್ರೋಣ ಪರ್ವತದ ಸುತ್ತಮುತ್ತ ನಿರ್ಮಾಣವಾಗಿರುವ ಹೋಂಸ್ಟೇ, ರೆಸಾರ್ಟ್​ ಮಾಲಿಕರು ತಮ್ಮ ಹೋಂಸ್ಟೇಗೆ ಸಂಬಂಧಿಸಿದ ಕಂದಾಯ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸುವಂತೆ ಡಿಎಫ್​ಒ ರಮೇಶ್ ಬಾಬು ಅವರು ನೋಟಿಸ್ ಹೊರಡಿಸಿದ್ದಾರೆ.

ಗಡಿನಾಡು ಹೊಸೂರಿನಲ್ಲಿ ಗಣೇಶನಿಗೆ ಹೈಕೋರ್ಟ್​ ಮಂಟಪ, ಗಣಪನೇ ಜಡ್ಜ್

ಎಚ್ಚೆತ್ತ ಅರಣ್ಯ ಇಲಾಖೆ:
ಸಾಲು ಸಾಲು ದುರ್ಘಟನೆ ಬಳಿಕ ಎಚ್ಚತ್ತ ಅರಣ್ಯ ಇಲಾಖೆ ಚಿಕ್ಕಮಗಳೂರು ಅರಣ್ಯ ವಲಯದಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಹೋಂಸ್ಟೇ ಅಥವಾ ರೆಸಾರ್ಟ್​​​ಗಳ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿತ್ತು. ವರದಿ ಸಲ್ಲಿಕೆಯಾದ ಬಳಿಕ ಅರಣ್ಯ ಇಲಾಖೆ 2015ರ ನಂತರ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಿರುವ ರೆಸಾರ್ಟ್ ​​ಅಥವಾ ಹೋಂಸ್ಟೇ, ತೋಟ, ಬಡವಾಣೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡುವಂತೆ ಸೂಚನೆ ನೀಡಿತ್ತು.

ಇದೀಗ, ಅನಧಿಕೃತವಾಗಿ ನಡೆಯುತ್ತಿರುವ ರೆಸಾರ್ಟ್​ ಅಥವಾ ಹೋಂಸ್ಟೇಗಳನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ಮುಂದಾಗಿದೆ. ಹೀಗಾಗಿ ಚಿಕ್ಕಮಗಳೂರು ಅರಣ್ಯ ವಲಯದಲ್ಲಿ ನಿರ್ಮಾಣ ಮಾಡಿರುವ ಎಲ್ಲ ಹೋಂಸ್ಟೇ ಮಾಲಿಕರು ಕಂದಾಯ ದಾಖಲಾತಿಗಳನ್ನು ಸಲ್ಲಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.

chikkamagaluru

ಮಹಿಳೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ಬರ್ಬರ ಹತ್ಯೆ; ಕೊಲೆಗೆ ಕಾರಣವಾಯಿತಾ ಪ್ರೇಮ್ ಕಹಾನಿ ?

Published

on

ಚಿಕ್ಕಮಗಳೂರು: ಗಂಡನನ್ನು ಬಿಟ್ಟು ಮಕ್ಕಳ ಜತೆ ತವರು ಮನೆ ಸೇರಿದ್ದ ಮಹಿಳೆಯ ಭೀಕರ ಕೊಲೆಯಾಗಿರುವ ಘಟನೆ ಚಿಕ್ಕಮಗಳೂರಿನ ಅರೇನೂರು ಗ್ರಾಮದಲ್ಲಿ ಮಂಗಳವಾರ (ಡಿ.2)ನಡೆದಿದೆ.


ಚಿಕ್ಕಮಗಳೂರಿನ ಅರೇನೂರು ಗ್ರಾಮದ ನಿವಾಸಿ, ಸಂಧ್ಯಾ(32) ಹತ್ಯೆಗೊಳಗಾದ ಮಹಿಳೆ.

ಹತ್ತು ವರ್ಷಗಳಿಂದ ಹಿಂದೆ ಸಂಧ್ಯಾಗೆ ಶಿರಗೋಳ ಗ್ರಾಮದ ರವಿ ಜತೆ ಮದುವೆ ಆಗಿತ್ತು. ಇವರಿಗೆ ಮೂವರು ಮಕ್ಕಳಿದ್ದರು. ಬಳಿಕ ಸಂಬಂಧದಲ್ಲಿ ಬಿರುಕು ಉಂಟಾಗಿ ಸಂಧ್ಯಾ ಕಳೆದ 3 ವರ್ಷಗಳಿಂದ ಗಂಡನನ್ನು ಬಿಟ್ಟು ಅರೇನೂರು ಗ್ರಾಮದ ತವರು ಮನೆ ಸೇರಿದ್ದಳು. ಕಾಫಿತೋಟದಲ್ಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು.

ಕೆಲ ದಿನಗಳ ಹಿಂದೆ ಸಂಧ್ಯಾ ನಾಪತ್ತೆಯಾಗಿದ್ದು, ಆತಂಕಗೊಂಡ ತಂದೆ ಈ ಕುರಿತು ಆಲ್ದೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಸೋಮವಾರ ಸಂಧ್ಯಾ ಅರೇನೂರು ಗ್ರಾಮದ ತಾಯಿ ಮನೆಗೆ ವಾಪಸ್‌ ಬಂದಿದ್ದಾಳೆ. ಸಂಬಂಧಿಕರ ಮನೆಗೆ ಹೋಗಿರುವುದಾಗಿ ಮನೆಯವರಿಗೆ ತಿಳಿಸಿದ್ದಾಳೆ. ಆದರೆ, ನಿನ್ನೆ ಬೆಳಗ್ಗೆ (ಡಿ.2)ಮನೆಯ ಹಿಂಭಾಗ ಬಟ್ಟೆ ತೊಳೆಯುತ್ತಿದ್ದ ಸಂಧ್ಯಾ ಕುತ್ತಿಗೆಯನ್ನು ಚಾಕುವಿನಿಂದ ಇರಿಯಲಾಗಿದೆ. ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಆಕೆ ಪ್ರಾಣ ಬಿಟ್ಟಿದ್ದಾಳೆ.

ಪ್ರಿಯಕರನಿಂದ ಕೃತ್ಯ?

ತನ್ನ ಕುಟುಂಬದ ಹತ್ತಿರದ ಸಂಬಂಧಿಯೊಂದಿಗೆ ಸಂಧ್ಯಾಗೆ ಪ್ರೇಮವಾಗಿತ್ತು. ಗಂಡನಿಂದ ದೂರವಾಗಿದ್ದ ಸಂಧ್ಯಾ ಮತ್ತೊಂದು ಮದುವೆ ಬಗ್ಗೆ ಯೋಚಿಸಿದ್ದಳು. ಆದರೆ, ಇದಕ್ಕೆ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು. ಆ ಬೆನ್ನಲ್ಲೇ ಮಕ್ಕಳನ್ನು ಕರೆದುಕೊಂಡು ಸಂಧ್ಯಾ ಪ್ರೇಮಿ ಜತೆ ಹೋಗಿದ್ದಳು ಎನ್ನಲಾಗಿದೆ. ಈ ಕುರಿತು ತಂದೆ ನೀಡಿದ್ದ ಮಗಳ ನಾಪತ್ತೆ ದೂರಿನ ಬಳಿಕ ಪೊಲೀಸರಿಗೆ ಸುಳಿವು ಸಿಕ್ಕಾಗ ಸಂಧ್ಯಾ ತಾಯಿ ಮನೆಗೆ ಹಿಂದಿರುಗಿದ್ದರು.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸಿದ ಚಾಲಕ; ಓರ್ವ ವ್ಯಕ್ತಿಗೆ ಗಂಭೀರ ಗಾಯ

ಇದೇ ಕಾರಣಕ್ಕೆ ಆಕ್ರೋಶಗೊಂಡ ಪ್ರಿಯಕರ ಸಂಧ್ಯಾ ಹತ್ಯೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಕುರಿತು ಆಲ್ದೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಹಂತಕನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Continue Reading

chikkamagaluru

ಕಾರಿನ ಮೇಲೆ ಬಿದ್ದ ಕಾಡಾನೆ ; ಆಮೇಲೇನಾಯ್ತು?

Published

on

ಮಂಗಳೂರು/ಚಿಕ್ಕಮಗಳೂರು : ಇತ್ತೀಚೆಗೆ ಕಾಡಾನೆಗಳು ಅಲ್ಲಲ್ಲಿ ಪ್ರತ್ಯಕ್ಷವಾಗುತ್ತಿವೆ. ಕಾಡಿನಿಂದ ನಾಡಿಗೆ ಎಂಟ್ರಿ ಕೊಡುವ ಸಲಗಗಳು ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ. ಇದೀಗ ಚಿಕ್ಕಮಗಳೂರಿನಲ್ಲೊಂದು ಘಟನೆ ನಡೆದಿದೆ.


ನರಸಿಂಹರಾಜಪುರದಿಂದ ಆಡುವಳ್ಳಿ ಗ್ರಾಮದ ಬುರದ ಮನೆ ನಿವಾಸಿ ಪ್ರದೀಪ್ ಎಂಬವರು ತಮ್ಮ ಊರಿಗೆ ಕಾರಿನಲ್ಲಿ ಹೋಗುವಾಗ ಮುಡೋಡಿ ಬಳಿ ಎರಡು ಕಾಡಾನೆಗಳು ರಸ್ತೆ ದಾಟುತ್ತಿದ್ದವು. ಒಂದು ಕಾಡಾನೆ ರಸ್ತೆ ದಾಟಿದ್ದು ಇನ್ನೊಂದು ಕಾಡಾನೆ ದಾಟುವಾಗ ಕಾರು ಗುದ್ದಿದೆ. ಈ ವೇಳೆ ಆನೆ ಕಾರಿನ ಮೇಲೆಯೇ ಬಿದ್ದಿದೆ.

ಇದನ್ನೂ ಓದಿ: ಕಾಪು: ಕೌನ್ಸಿಲಿಂಗ್ ಸೆಂಟರ್ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

ಬಳಿಕ ಕಾಡಾನೆ ಎದ್ದು ಯಾವುದೇ ತೊಂದರೆ ಮಾಡದೇ ಅರಣ್ಯದೊಳಕ್ಕೆ ಹೋಗಿದೆ. ಆನೆ ಬಿದ್ದ ರಭಸಕ್ಕೆ ಕಾರಿಗೆ ಹಾನಿಯಾಗಿದೆ. ಎನ್.ಆರ್.ಪುರ – ಬಾಳೆಹೊನ್ನೂರು ರಾಜ್ಯ ಹೆದ್ದಾರಿಯ 9ನೇ ಮೈಲಿಕಲ್ಲುವಿನಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್, ಕಾರಿನಲ್ಲಿದ್ದವರು ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ.

Continue Reading

chikkamagaluru

ಘಾಟಿಯಲ್ಲಿ ಪಲ್ಟಿಯಾದ ಕಾರು; ಒಂದು ವರ್ಷದ ಮಗು ಸೇರಿದಂತೆ ಐವರ ರಕ್ಷಣೆ

Published

on

ಮೂಡಿಗೆರೆ: ದಟ್ಟ ಮಂಜು ತಿರುವಿನಲ್ಲಿ ಪ್ರವಾಸಿಗರ ಕಾರು ಪಲ್ಟಿಯಾದ ಘಟನೆ ಚಾರ್ಮಾಡಿ ಘಾಟಿಯಲ್ಲಿ ನಿನ್ನೆ (ಮಾ.27) ನಡೆದಿದೆ.

ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಪ್ರವಾಸಿಗರ ಸ್ವಿಫ್ಟ್ ಕಾರು ಮಲೆಯಮಾರುತ ತಿರುವಿನಲ್ಲಿ 60 ಅಡಿಗಳ ಪ್ರಪಾತಕ್ಕೆ ಪಲ್ಟಿಯಾಗಿದೆ. ಕಾರಿನಲ್ಲಿದ್ದ ಒಂದು ವರ್ಷದ ಮಗು ಸೇರಿದಂತೆ ಐವರ ರಕ್ಷಣೆ ಮಾಡಲಾಗಿದೆ. ಅದೃಷ್ಟವಶಾತ್ ಭಾರೀ ದೊಡ್ಡ ಅನಾಹುತ ತಪ್ಪಿದೆ ಎನ್ನಲಾಗಿದೆ.

ಕಾರಿನಲ್ಲಿದ್ದ ಶಿವಮೊಗ್ಗ ಮೂಲದ ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದ್ದು, ಗಾಯಾಳುಗಳನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page