Connect with us

LATEST NEWS

ಚಾರ್‌ಧಾಮ್ ಯಾತ್ರೆ; ಮೊದಲ ದಿನವೇ ದಾಖಲೆ ಮಟ್ಟದ ನೋಂದಣಿ

Published

on

ಡೆಹ್ರಾಡೂನ್: ಚಾರ್‌ಧಾಮ್ ಯಾತ್ರೆಗೆ ಮೊದಲ ದಿನವೇ ದಾಖಲೆ ಮಟ್ಟದ ನೋಂದಣಿ ಆಗಿದೆ. ಉತ್ತರಾಖಂಡದ ಚಾರ್‌ಧಾಮ್ ಯಾತ್ರೆಯು ಭಾರತದ ಅತ್ಯಂತ ಪ್ರಸಿದ್ಧ ತೀರ್ಥಯಾತ್ರೆಗಿದ್ದು, ಈಗಾಗಲೇ ಆನ್‌ಲೈನ್ ಮೂಲಕ ನೋಂದಣಿ ಆರಂಭವಾಗಿದೆ.

ಮೊದಲ ದಿನವೇ ದಾಖಲೆ ಮಟ್ಟದಲ್ಲಿ ಬರೋಬ್ಬರಿ 1.65 ಲಕ್ಷ ಮಂದಿ ಕೇದರಾನಾಥನ ದರ್ಶನಕ್ಕಾಗಿ ಯಾತ್ರಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾ.20 ಗುರುವಾರ ನೋಂದಣಿ ಆರಂಭವಾಗಿದ್ದು, ಸಂಜೆ 5 ಗಂಟೆ ವೇಳೆ 1.6 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಈ ಬಾರಿಯ ಮೊದಲ ದಿನದ ನೋಂದಣಿಯಲ್ಲಿ 53,570 ಮಂದಿ ಕೇದರನಾಥಕ್ಕೆ ನೋಂದಾಯಿಸಿಕೊಂಡರೆ, ಬದರಿನಾಥಕ್ಕೆ 49,395, ಗಂಗೋತ್ರಿಗೆ 30,933, ಯಮುನೋತ್ರಿಗೆ 30,224 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LATEST NEWS

ಅಂದು ನ್ಯಾಷುನಲ್ ಬ್ಯಾಂಕ್ .. ಇಂದು ಕಾಫಿ ಹೌಸ್ ..! ಏನಿದು ವಿಚಿತ್ರ ಕಥೆ ..?

Published

on

ಮುಂಬೈ : ಒಂದು ಸಮಯದಲ್ಲಿ ಆ ಕಟ್ಟಡ ನ್ಯಾಷುನಲ್ ಬ್ಯಾಂಕ್ ಆಗಿತ್ತು ಆದರೆ ಈಗ ಕಾಫಿ ಹೌಸ್ ಆಗಿ ಬದಲಾವಣೆ ಹೊಂದಿದೆ. ಈ  ವಿಷಯ ಮುಂಬೈ ನಗರದಾದ್ಯಂತ ವೈರಲ್ ಆಗುತ್ತಿದೆ. ಅಷ್ಟಕ್ಕೂ ಏನಿದು ವಿಚಿತ್ರ ಕಥೆ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮುಂಬೈನ ಖ್ಯಾತ ಉದ್ಯಮಿ ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೆಹುಲ್ ಚೋಕ್ಸಿ ಅವರು ನಡೆಸಿದ್ದ ನ್ಯಾಷುನಲ್ ಬ್ಯಾಂಕ್ ಬಹುಕೋಟಿ ರೂ. ಹಗರಣದಿಂದ ಕುಖ್ಯಾತವಾಗಿದ್ದ ಮುಂಬೈನ ಬ್ರಾಡಿ ಹೌಸ್‌ನ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಶಾಖೆಯ ಕಟ್ಟಡವನ್ನು ಕಾಫಿ ಹೌಸನ್ನಾಗಿ ಪರಿವರ್ತಿಸಲಾಗಿದೆ.

ಮುಂಬೈನ ಪಿಎನ್‌ಬಿ ಶಾಖೆಯನ್ನು ಮತ್ತೊಂದು ಕಟ್ಟಡಕ್ಕೆ ಕೆಲ ವರ್ಷಗಳ ಹಿಂದೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹಗರಣವೊಂದರ ಮೂಲಕ ಕೇಂದ್ರ ಬಿಂದುವಾಗಿದ್ದ ಬ್ರಾಡಿ ಹೌಸ್‌ನಲ್ಲಿ ಇಂದು ಆರ್ಗಾನಿಕ್ ಕಾಫಿ ಕೆಫೆ ತಲೆಯೆತ್ತಿದೆ. 2011-17ರವರೆಗೆ ನೀರವ್ ಮತ್ತು ಚೋಕ್ಸಿ, ಈ ಶಾಖೆಯ ಅಧಿಕಾರಿಗಳಿಗೆ ಲಂಚ ನೀಡಿ ಸುಮಾರು 13,000 ಕೋಟಿ ರೂ. ಸಾರ್ವಜನಿಕ ಹಣವನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

Continue Reading

DAKSHINA KANNADA

ವರುಣನ ಆರ್ಭಟಕ್ಕೆ ಮಂಗಳೂರು ಫುಲ್ ಕೂಲ್.. ಕೂಲ್.. !

Published

on

ಮಂಗಳೂರು : ಬೆಂದಿದ್ದ ಧರೆಯ ತಂಪಾಗಿಸಲು ಭುವಿಗಿಳಿದ ವರುಣ… ರಾತ್ರಿ ಮಲಗುವ ವೇಳೆ “ಎಂಥಾ ಸೆಕೆ ಮಾರ್ರೆ ?” ಎನ್ನುತ್ತಿದ್ದವರೂ ಸಹ ಫ್ಯಾನ್ ಆಫ್ ಮಾಡಿ ಮಲಗಿದ್ದಾರೆ. ಹೌದು .. ನಿನ್ನೆ(ಏ.27) ಕರ್ನಾಟಕದ ವಿವಿಧೆಡೆ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆ ಈ ಕುರಿತು ಮೊದಲೇ ಮುನ್ಸೂಚನೆ ನೀಡಿದೆ. ಅದರಲ್ಲೂ ದಕ್ಷಿಣ ಕನ್ನಡದ ಹಲವೆಡೆ ನಿನ್ನೆ ಹಾಗೂ ಮೊನ್ನೆ (ಏ.26) ಗುಡುಗು ಮಿಂಚು ಸಹಿತ ವರುಣನ ಆರ್ಭಟ ಜೊರಾಗಿಯೇ ಇತ್ತು,

ನಿನ್ನೆ ಹಗಲು ಬಿಸಿಲು ಇತ್ತು. ಆದರೆ ಸಂಜೆ ಹೊತ್ತಿಗೆ ಯಾರೂ ಊಹಿಸದ ರೀತಿ ಮಳೆ ಸುರಿದಿದೆ. ಧಾರಕಾರ ಮಳೆಯಿಂದ ಬಿಸಿ ಬಿಸಿಯಾಗಿದ್ದ ನಗರ ಫುಲ್ ಕೂಲ್ ಆಗಿದೆ. ಬಿಸಿ ವಾತಾವರಣ ಪೂರ್ತಿ ನಿವಾರಣೆಯಾಗಿದೆ.

ಎರಡು ಮೂರು ದಿನಗಳಿಂದ ದಕ್ಷಿಣ ಕನ್ನಡ ಹಲವು ಕಡೆಗಳಲ್ಲಿ ಆಗಾಗ ಮಳೆ ಕಾಣಿಸಿಕೊಳ್ಳುತ್ತಿದೆ. ಇಂದು (ಏ.28) ಮಂಗಳೂರು ನಗರದಲ್ಲಿ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎಂಬುವುದಾಗಿ ಹವಮಾನ ಇಲಾಖೆ ಸೂಚಿಸಿದ್ದು, ಸಂಜೆ ತನಕ ಕಾದು ನೋಡಬೇಕಷ್ಟೇ.

Continue Reading

bangalore

ರಸ್ತೆ ಮಧ್ಯೆಯೇ ಕಾಲೇಜು ಪ್ರಾಧ್ಯಪಕನ ಮೇಲೆ ಹಲ್ಲೆ; ಮೂವರು ಅರೆಸ್ಟ್

Published

on

ಮಂಗಳೂರು/ಬೆಂಗಳೂರು : ಎಂಥಾ ವಿಚಿತ್ರ ಜನರಿರುತ್ತಾರೆ ಎಂದು ಹೇಳುವುದೂ ಅಸಾಧ್ಯ. ಇದು ಸರಿಯಲ್ಲ ತಪ್ಪು ಎಂದು ಹೇಳುವ ಹಾಗೆಯೂ ಇಲ್ಲ. ಬಿಸಿ ರಕ್ತ ಕುದಿಯುತ್ತೆ. ಹಲ್ಲೆ ಮಾಡಲು ಸಹ ಹಿಂಜರಿಯುವುದಿಲ್ಲ. ಇದೀಗ ಅಂತಹದ್ದೇ ಘಟನೆಯೊಂದು ರಾಜ್ಯ ರಾಜಧಾನಿಯಲ್ಲೂ ನಡೆದಿದೆ. ಕಾಲೇಜು ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಎಂಬವರ ಮೇಲೆ ಯುವಕರು ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವಿಂಗ್ ಕಮಾಂಡರ್ ರೋಡ್ ರೇಜ್ ಪ್ರಕರಣ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಅದೇ ಸಂದರ್ಭದಲ್ಲೇ ಈ ಘಟನೆಯೂ ನಡೆದಿತ್ತು.

ಅಷ್ಟಕ್ಕೂ ನಡೆದಿದ್ದೇನು ..?

ಕುಮಾರಸ್ವಾಮಿ ಲೇಔಟ್​ನ  ಜೆಹೆಚ್ ಬಿಸಿ ಲೇಔಟ್​ನಲ್ಲಿ ಖಾಸಗಿ ಕಾಲೇಜು ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಏಪ್ರಿಲ್ 21 ರಂದು ಸಂಜೆ 6 ರಿಂದ 7 ಗಂಟೆಯ ಸಮಯದಲ್ಲಿ  ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಆಟೋದಲ್ಲಿ ತೆರಳುತ್ತಿದ್ದ ಮೂವರು ಯುವಕರು, ತಿಂಡಿ ತಿಂದು ಕಸವನ್ನು ರಸ್ತೆ ಮೇಲೆಯೇ ಬಿಸಾಡಿದ್ದರು. ಆ ವೇಳೆ, ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಇದನ್ನು ಪ್ರಶ್ನಿಸಿದ್ದರು. ಕಸ ರಸ್ತೆ ಮೇಲೆ ಕಸ ಬಿಸಾಡಬೇಡಿ ಎಂದಿದ್ದರು. ಇದರಿಂದ ಕೋಪಗೊಂಡ ಯುವಕರು ಪ್ರಾಧ್ಯಾಪಕನ ಮೇಲೆ ಹಲ್ಲೆ ನಡೆಸಿದ್ದರು.

ಇದನ್ನೂ ಓದಿ : ಡೆಲ್ಲಿ ವಿರುದ್ಧ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ; ಅಂಕಪಟ್ಟಿಯಲ್ಲಿ ನಂ.1

ಸ್ಥಳೀಯರೊಬ್ಬರು ಈ ಅಮಾನುಷ ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಬಳಿಕ  ಕೆಎಸ್ ಲೇಔಟ್ ಪೊಲೀರು ಈ ಘಟನೆ ಕುರಿತು ಪ್ರಕರಣ ದಾಖಲಿಸಿ ಆರೋಪಿಗಳಾದ ಭಾನುಪ್ರಸಾದ್, ಶರತ್, ಅಮೃತ್ ಕುಮಾರ್​​ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page