ಬೆಂಗಳೂರು: ಸ್ಯಾಂಡಲ್ವುಡ್ ಕ್ಯೂಟ್ ಕಪಲ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸಂಸಾರ ಸಾಗರಕ್ಕೆ ಪುಲ್ ಸ್ಟಾಪ್ ಹಾಕಿದ್ದಾರೆ. ಇಬ್ಬರು ಒಮ್ಮತದಿಂದ ದೂರವಾಗುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ವಿಚಾರ ಹಂಚಿಕೊಂಡಿದ್ದಾರೆ. ಆದರೆ ಇವರಿಬ್ಬರ ನಡುವಿನ ಸಂಬಂಧ ದೂರವಾಗುತ್ತಿರುವ ಸಂಗತಿ ಕೇಳಿ ಅನೇಕರು ಅಚ್ಚರಿ ಪಟ್ಟಿದ್ದಾರೆ.

ಬಿಗ್ ಬಾಸ್ ಮೂಲಕ ಪರಿಚಯಗೊಂಡ ಈ ಜೋಡಿ ಪ್ರೀತಿಗೆ ಬಿದ್ದು, ಕೊನೆಗೆ ಮನೆಯವರ ಒಪ್ಪಿಗೆ ಮೇರೆಗೆ ವಿವಾಹವಾಗುತ್ತಾರೆ. ಮೈಸೂರು ದಸರಾದಲ್ಲಿ ಚಂದನ್ ಶೆಟ್ಟಿ ತನ್ನೊಡತಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡುವ ಮೂಲಕ ವಿವಾಹವಾಗುತ್ತಾರೆ. ಆದರೆ 4 ವರ್ಷ ಸಂಸಾರ ನಡೆಸಿದ ಜೋಡಿ ದೂರವಾಗಲು ನಿರ್ದಿಷ್ಟ ಕಾರಣವೇನು ಎಂದು ಫ್ಯಾನ್ಸ್ ಹುಡುಕಾಡುತ್ತಿದ್ದಾರೆ.
ಮಕ್ಕಳು ಬೇಡ ಅಂದ್ರಾ?
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದನ್ ಹಾಗೂ ನಿವೇದಿತಾ ಗೌಡ ಬೇರೆ ಬೇರೆಯಾಗಲು ಫ್ಯಾನ್ಸ್ ನಾನಾ ಕಾರಣವನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಂತೆಯೇ ಮಕ್ಕಳು ಮಾಡಿಕೊಳ್ಳುವ ವಿಚಾರಕ್ಕೆ ಚಂದನ್ – ನಿವಿ ದಾಂಪತ್ಯ ಮುರಿದುಬಿತ್ತಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ.
ನಿವೇದಿತಾಗೆ ನಾಯಕಿಯಾಗುವ ಕನಸು?
ನಿವೇದಿತಾ ಗೌಡ ಮೊದಲಿನಿಂದಲೂ ನಾಯಕಿ ಆಗುವ ಆಸೆ. ಸಿನಿಮಾ ಮಾಡುವ ಕನಸಿತ್ತು. ಅದರಂತೆಯೆ ಕೆಲವು ಶೋಗಳನ್ನು ನಿವೇದಿತಾ ಗೌಡ ಮಾಡುತ್ತಾ ಬಂದಿದ್ದಾರೆ. ಈಗ ಒಂದಷ್ಟು ಸಿನಿಮಾಗಳು ನಿವೇದಿತಾ ಗೌಡರನ್ನು ಹುಡುಕಿಕೊಂಡು ಬರ್ತಿವೆ. ಈ ಸಂದರ್ಭದಲ್ಲಿ ಮಕ್ಕಳು ಬೇಡ ಅನ್ನೋದು ನಿವೇದಿತಾ ವಾದವಾದರೆ. ಚಂದನ್ ಶೆಟ್ಟಿ ಪೋಷಕರಿಗೆ ಮಕ್ಕಳು ಬೇಕು ಎಂಬ ಆಸೆ ಎಂಬುದನ್ನು ಫ್ಯಾನ್ಸ್ ಹಂಚಿಕೊಳ್ಳುತ್ತಿದ್ದಾರೆ.
ಯಾವುದೇ ಮನಸ್ತಾಪವಿಲ್ಲ
ಮತ್ತೊಂದು ಸಂಗತಿ ಎಂದರೆ ಚಂದನ್ ಶೆಟ್ಟಿ ಕೂಡ ನಟನಾಗಿ, ಸಂಗೀತ ನಿರ್ದೇಶಕನಾಗಿ ಸಾಕಷ್ಟು ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ದಾಂಪತ್ಯ ಮುಂದುವರೆಸುವ ಬದಲು ಸ್ನೇಹಿತರಾಗಿ ಉಳಿಯಲು ನಿರ್ಧಾರ ಮಾಡಿದ್ದಾರೆ. ಇದನ್ನು ಹೊರತು ಪಡಿಸಿ ಮತ್ಯಾವುದೇ ಮನಸ್ತಾಪ ಇಬ್ಬರ ಮಧ್ಯೆ ಇಲ್ಲ ಅನ್ನೋದು ಸಹ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಚಂದನ್-ನಿವೇದಿತಾ ಹೇಳಿದಿಷ್ಟು
ಈ ದಿನ, ನಿವೇದಿತಾ ಗೌಡ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನ ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.