Connect with us

BIG BOSS

ಚೈತ್ರಾ ಕುಂದಾಪುರಗೆ ಮೊದಲ ದಿನವೇ ಹೊಸ ಬಿರುದು ಕೊಟ್ಟ ಲಾಯರ್ ಜಗದೀಶ್

Published

on

ಬೆಂಗಳೂರು: ಹಿಂದೂ ಕಾರ್ಯಕರ್ತೆ ಆಗಿ ಚೈತ್ರಾ ಕುಂದಾಪುರ ಗುರುತಿಸಿಕೊಂಡಿದ್ದರು. ಅವರ ವಿರುದ್ಧ ವಂಚನೆ ಆರೋಪ ಇದೆ. ಈಗ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಟಿಕೆಟ್ ಸಿಕ್ಕಿದೆ. ಅವರಿಗೆ ಮೊದಲ ದಿನವೇ ಹೊಸ ಬಿರುದು ಕೂಡ ಸಿಕ್ಕಿದೆ ಅನ್ನೋದು ವಿಶೇಷ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೊದಲ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಹಲವು ವಿಚಾರಗಳನ್ನು ರಿವೀಲ್ ಮಾಡಲಾಗಿದೆ. ಗೌತಮಿ ಜಾಧವ್ ಅವರು ಟೋಪನ್ ಹಾಕಿಕೊಂಡ ವಿಚಾರಕ್ಕೆ ಸಂಬಂಧಿಸಿ ಅವರನ್ನು ಮನೆಯ ಕೆಲವರು ಟೀಕೆ ಮಾಡಿದ್ದರು. ಇದಕ್ಕೆ ಅವರು ಕಣ್ಣೀರು ಹಾಕಿದ್ದಾರೆ. ಚೈತ್ರಾ ಕುಂದಾಪುರ್​ಗೆ ‘ಲೇಡಿ ಡಾನ್’ ಎಂಬ ಬಿರುದನ್ನು ಜಗದೀಶ್ ಅವರು ಕೊಟ್ಟಿದ್ದಾರೆ.

BIG BOSS

‘ಆ ತರ ನೋಡಬೇಡಿ, ಗಿಲ್ಲಿಗೆ ಇಷ್ಟ ಆಗಲ್ಲ’: ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಗಿಲ್ಲಿ ಫ್ಯಾನ್ಸ್!

Published

on

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಶೋ ಮುಗಿದ ಬಳಿಕ ಸ್ಪರ್ಧಿಗಳೆಲ್ಲರೂ ದೊಡ್ಮನೆ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಇದರ ಪ್ರೋಮೋ ರಿಲೀಸ್‌ ಆಗಿದ್ದು, ರಕ್ಷಿತಾ ಶೆಟ್ಟಿ ಎಮೊಶನಲ್‌ ಆಗಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರವೂ ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ನಟ ನಡುವಿನ ಬಾಂಧವ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.


ಇತ್ತೀಚಿನ ‘ದೊಡ್ಮನೆ ಹಬ್ಬ’ ಕಾರ್ಯಕ್ರಮದ ವೇಳೆ ಗಿಲ್ಲಿ ಮತ್ತು ಕಾವ್ಯ ಅವರ ಕೆಮಿಸ್ಟ್ರಿ ನೋಡಿ ರಕ್ಷಿತಾ ಅಸಮಾಧಾನಗೊಂಡಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಬಿಗ್‌ಬಾಸ್‌ ಮುಗಿದು ತುಂಬ ದಿನ ಆಗಿದೆ. ಬಿಗ್‌ಬಾಸ್‌ ಮನೆಯಲ್ಲಿ ಒಟ್ಟಾಗಿ ಕೂತು ತುಂಬಾ ಮಾತನಾಡುತ್ತಿದ್ದೆವು. ಡಿಸ್‌ಕನೆಕ್ಟ್‌ ಆದರೆ ಬೇಜಾರು ಆಗುತ್ತದೆ. ದಯವಿಟ್ಟು ಕನೆಕ್ಷನ್‌ ಬ್ರೇಕ್‌ ಮಾಡಬೇಡಿ ಎಂದು ರಕ್ಷಿತಾ ಶೆಟ್ಟಿ ಕಣ್ಣೀರು ಹಾಕುತ್ತಾ ಹೇಳಿದ್ದಾರೆ. ಆಗ ಗಿಲ್ಲಿ ನಟ, ರಘು ಬಂದು ಎಮೋಶನಲ್‌ ಆಗಿ ಮೂವರು ಅಪ್ಪಿಕೊಂಡಿದ್ದಾರೆ.

ಅಭಿಮಾನಿಗಳ ಆಕ್ರೋಶ: 

ರಕ್ಷಿತಾ ಗಿಲ್ಲಿನ ಬರಿ ಫ್ರೆಂಡ್ ತರ ನೋಡಿದ್ರೆ ನಮಗೂ ಅವಳಿಷ್ಟ. ಆದರೆ ಗಿಲ್ಲಿ ಬಹಳ ಸಲ ತಂಗಿ ಅಂದ ಮೇಲು ಅವಳು ಅದನ್ನ ಒಪ್ಪಿಕೊಂಡಂಗೆ ಇಲ್ಲ, ಆಚೆ ಬಂದ ಮೇಲು ಕಾವ್ಯ ಗಿಲ್ಲಿ ಒಂದಾಗೋದು ಇಷ್ಟ ಇಲ್ಲ ಅಂತಾನೆ ಹೇಳಿದ್ದಾಳೆ, ಅದು ಬೇಡ ಅಲ್ವಾ ಅವಳು ಸತ್ಯನ ಒಪ್ಕೋಬೇಕು ಅಲ್ವಾ? ಆಗ ಎಲ್ಲ ಚೆನ್ನಾಗಿರುತ್ತೆ, ನಮಗೂ ರಕ್ಷಿತಾ ಇಷ್ಟ ಆಗ್ತಾಳೆ. ಗಿಲ್ಲಿ ನಿನಗೆ ತಂಗಿ ಸ್ಥಾನದಲ್ಲಿ ನೋಡುತ್ತಿದ್ದಾನೆ. ನೀನು ಬೇರೆ ರೀತಿ ನೋಡುತ್ತಿದ್ದಿಯಾ. ಅದು ಅವನಿಗೆ ಇಷ್ಟ ಆಗಲ್ಲ.

ಇದನ್ನೂ ಓದಿ: ಕಾವ್ಯ ಶೈವ ಹಿಂದೆ ಬಿದ್ದ ಗಿಲ್ಲಿ ನಟ: ರಕ್ಷಿತಾ ಶೆಟ್ಟಿಗೆ ಶುರುವಾಯ್ತಾ ಅಸೂಯೆ?

ಗಿಲ್ಲಿ ಗೆದ್ದು ಇಷ್ಟು ದಿನ ಆದ್ರೂ ಒಂದು ಪೋಸ್ಟ್ ಹಾಕಿ ವಿಶ್ ಮಾಡಲಿಲ್ಲ.. ಒಂದು ಕಾಲ್ ಮಾಡಿ ಅಭಿನಂದನೆ ಕೂಡ ಹೇಳಲಿಲ್ಲ. ಈಗ ಕ್ಯಾಮರಾ ಮುಂದೆ ಕಣ್ಣೀರು ಸುರಿಯುತ್ತೆ. ಗಿಲ್ಲಿ ನಟ ಗೆದ್ದಾಗ ಇಬ್ಬರು ಕೂಡ ಒಂದು ಪೋಸ್ಟ್ ಹಾಕಿ ವಿಶ್ ಮಾಡಲಿಲ್ಲ. ಆದರೆ ಈಗ ಕಂಟೆಂಟ್‌ಗಾಗಿ ಗಿಲ್ಲಿ ಬೇಕು, ಕಣ್ಣೀರು ಬರಲೇ ಬೇಕು. ಇಷ್ಟು ಮನಸಿಗೆ ತಗೋ ಬೇಡ ಕ್ರಮೇಣ ಎಲ್ಲ ಸಂಬಂಧಗಳು ಒಂದಿನ ಹೀಗೆ ಜೀವನ ಆದ್ರೂ ಶೋ ಆದ್ರೂ ಅಷ್ಟೇ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

Continue Reading

BIG BOSS

ಕಾವ್ಯ ಶೈವ ಹಿಂದೆ ಬಿದ್ದ ಗಿಲ್ಲಿ ನಟ: ರಕ್ಷಿತಾ ಶೆಟ್ಟಿಗೆ ಶುರುವಾಯ್ತಾ ಅಸೂಯೆ?

Published

on

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಶೋ ಮುಗಿದ ಮೇಲೆ ದೊಡ್ಮನೆ ಹಬ್ಬ ಎಂದು ಕಾರ್ಯಕ್ರಮ ಮಾಡಲಾಗಿದೆ.ಈ ಕಾರ್ಯಕ್ರಮದಲ್ಲಿ BBK12ರ ಎಲ್ಲಾ ಸ್ಪರ್ಧಿಗಳು ಒಂದೇ ಬಾರಿ ಭೇಟಿಯಾಗಿದ್ದಾರೆ. ಇದರ ನಿರೂಪಕಿಯಾದ ನಟಿ ಸುಷ್ಮಾ ರಾವ್‌ ಆವರು ಬಿಗ್‌ಬಾಸ್‌ ಸ್ಪರ್ಧಿಗಳ ಗುಟ್ಟು ರಟ್ಟು ಮಾಡಿದ್ದಾರೆ.


ದೊಡ್ಮನೆ ಹಬ್ಬದಲ್ಲಿ ಸ್ಪರ್ಧಿಗಳಿಗೆ ಒಂದು ಗೇಮ್‌ ಆಡಿಸಲಾಗಿದೆ. ಕೆಲ ಸ್ಪರ್ಧಿಗಳ ಫೋಟೋಗಳನ್ನು ಇಡಲಾಗಿದ್ದು, ಯಾರು ಯಾರ ಹಲ್ಲನ್ನು ಮುರಿಯಲು ಇಷ್ಟಪಡುತ್ತಾರೆ? ಜತೆಗೆ ಅದಕ್ಕೆ ಕಾರಣ ಹೇಳಿ ಸೂಚಿಸಿದ ಸ್ಪರ್ಧಿಗಳ ಫೋಟೋಗೆ ಬಾಲ್‌ ಎಸೆಯಬೇಕು.

ಆ ವೇಳೆ, ‘ಗಿಲ್ಲಿ ಬಿಗ್‌ಬಾಸ್‌ ಮನೆಯೊಳಗೆ ಹಲ್ಲು ಸೆಟ್‌ ಎಂದು ರೇಗಿಸಿದ್ದಾನೆ’ ಎಂದು ಅಶ್ವಿನಿ ಗೌಡ ಆರೋಪಿಸಿದ್ದಾರೆ. ಆಗ ಗಿಲ್ಲಿ ನಟ, ‘ನಾನು ಕೂಡ ಹಲ್ಲು ಸೆಟ್‌ ಮುರಿಯಬಹುದಿತ್ತು, ಆದರೆ ಅವರೇ ಹಲ್ಲು ಸೆಟ್‌ ಎಂದು ಹೇಳಿದ್ರು, ನಾನು ಹೇಗೆ ಹಲ್ಲು ಮುರಿಯಲಿ? ಎಂದು ಅಶ್ವಿನಿ ಗೌಡರ ಮಾತಿಗೆ ತಿರುಗೇಟು ಕೊಟ್ಟಿದ್ದಾರೆ.


ಇದನ್ನೂ ಓದಿ: ರಕ್ಷಿತಾ ಶೆಟ್ಟಿಯ ತಮಾಷೆಯ ಪ್ರಶ್ನೆ: ಬೆಂಗಳೂರಿಗರು ಫುಲ್‌ ಫಿದಾ!

ಬಳಿಕ ಕಾವ್ಯಾ ಶೈವಾ, ಸೀಸನ್‌ ಪೂರ್ತಿ ರೇಗಿಸಿದ್ದಕ್ಕೆ ಗಿಲ್ಲಿ ನಟನ ಹಲ್ಲು ಮುರಿದಿದ್ದಾರೆ. ‘ಬಿಗ್‌ಬಾಸ್‌ ಮನೆಯಲ್ಲಿ ರೇಗಿಸೋದಲ್ಲ. ಮನೆ ಹತ್ತಿರ ಹೋಗಿ ರೇಗಿಸ್ತೀನಿ, ಮೆಸೇಜ್ ಅಲ್ಲಿ ರೇಗಿಸ್ತೀನಿ’ ಎಂದು ಗಿಲ್ಲಿ ನಟ ಹೇಳಿದ್ದರು. ಗಿಲ್ಲಿ ನಟ ಮತ್ತು ಕಾವ್ಯಾ ಶೈವಾ ಮಾತು ಕೇಳಿ, ರಕ್ಷಿತಾ ಶೆಟ್ಟಿ ಆ ಕ್ಷಣ ತುಸು ಗಂಭೀರವಾಗಿ ಪ್ರತಿಕ್ರಿಯಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕಲರ್ಸ್‌ ಕನ್ನಡ ಹಂಚಿಕೊಂಡಿರುವ ಪ್ರೋಮೋದಲ್ಲಿ ಅವರ ಹಾವ ಭಾವ ಸೆರೆಯಾಗಿದೆ.

Continue Reading

BIG BOSS

ರಕ್ಷಿತಾ ಶೆಟ್ಟಿಯ ತಮಾಷೆಯ ಪ್ರಶ್ನೆ: ಬೆಂಗಳೂರಿಗರು ಫುಲ್‌ ಫಿದಾ!

Published

on

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಜನತೆಗೆ ಒಂದು ತಮಾಷೆಯ ಮತ್ತು ಮುದ್ದಾದ ಪ್ರಶ್ನೆಯನ್ನು ಕೇಳಿದ್ದಾರೆ. ರಕ್ಷಿತಾ ತಮಗಿದ್ದಂತಹ ತಪ್ಪು ಕಲ್ಪನೆಯ ಬಗ್ಗೆ ಹೇಳಿಕೊಂಡಿದ್ದಾರೆ.


ರಕ್ಷಿತಾ ಶೆಟ್ಟಿ ತಮ್ಮ ವಿಭಿನ್ನ ಶೈಲಿಯ ಮಾತುಗಳಿಂದಲೇ ಜನರ ಮನ ಸೆಳೆದಿದ್ದಾರೆ. ಬಿಗ್‌ಬಾಸ್‌ನಿಂದ ಹೊರಬಂದ ಮೇಲೆ ಸೋಶಿಯಲ್‌ ಮೀಡಿಯಾದಲ್ಲಿ ಇವರ ಮಾತುಗಳು ಟ್ರೋಲ್‌ ಆಗುತ್ತಿರುತ್ತವೆ. ಇದೀಗ ಬೆಂಗಳೂರಿನ ಜನತೆಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.

ಮುಂಬೈನಲ್ಲಿ ಬೆಳೆದು ಉಡುಪಿಯವರಾದ ರಕ್ಷಿತಾ ಅವರಿಗೆ ಬೆಂಗಳೂರಿನ ಯಾವುದಾದರೂ ಒಂದು ಭಾಗದಲ್ಲಿ ಸಮುದ್ರ (ಬೀಚ್) ಇರಬಹುದು ಎಂಬ ತಪ್ಪು ಕಲ್ಪನೆ ಇತ್ತು. ಆದರೆ, ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರವೇ ರಕ್ಷಿತಾ ಶೆಟ್ಟಿಗೆ ಬೆಂಗಳೂರಿನಲ್ಲಿ ಸಮುದ್ರ ಇಲ್ಲ ಎಂಬ ವಿಷಯ ತಿಳಿಯಿತು.

ನನಗೆ ಬೇಸರವಾದಾಗ ನಾನು ಕಡಲ ಕಿನಾರೆಗೆ ಹೋಗಿ ಕುಳಿತುಕೊಳ್ಳುತ್ತೇನೆ. ಮುಂಬೈ ಅಥವಾ ಉಡುಪಿಯಲ್ಲಿ ಸಮುದ್ರ ತೀರಕ್ಕೆ ಹೋಗಿ ಕುಳಿತುಕೊಳ್ಳುವುದು ಅಭ್ಯಾಸ. ಬೆಂಗಳೂರಿನಲ್ಲಿ ಸಮುದ್ರವೇ ಇಲ್ಲದಿರುವುದರಿಂದ ಇಲ್ಲಿನ ಜನರು ಬೇಸರವಾದ್ರೆ ಎಲ್ಲಿಗೆ ಹೋಗುತ್ತಾರೆ? ಎಂದು ಕುತೂಹಲದಿಂದ ಕೇಳಿದ್ದಾರೆ.

ಇದನ್ನೂ ಓದಿ: ಬಹುಮಾನ ಹಣದಲ್ಲಿ ಚಿನ್ನ ಖರೀದಿಸಿದ ಬಿಗ್‌ ಬಾಸ್‌ ರಕ್ಷಿತಾ ಶೆಟ್ಟಿ

ಇದಕ್ಕೆ ಪ್ರತಿಕ್ರಿಯಿಸಿದ ಜನರು “ನಾವು ಗೋವಾಗೆ ಹೋಗುತ್ತೇವೆ” ಎಂದು, ಅವರ ಜೊತೆಗಿದ್ದ ಗಿಲ್ಲಿ ನಟ ತಮಾಷೆಯಾಗಿ “ಬಾರ್‌ಗೆ ಹೋಗುತ್ತಾರೆ” ಎಂದು ಉತ್ತರಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page