Connect with us

BIG BOSS

ಅಶ್ವಿನಿ ಗೌಡ ಆರೋಪಕ್ಕೆ ಚೈತ್ರಾ ಗರಂ; ಸೋಶಿಯಲ್ ಮೀಡಿಯಾದಲ್ಲಿ ಶುರುವಾಯ್ತು ಕಿತ್ತಾಟ!

Published

on

ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದ ಬಳಿಕ ಚೈತ್ರಾ ಕುಂದಾಪುರ ಮತ್ತು ಅಶ್ವಿನಿ ಗೌಡ ನಡುವಿನ ಕಿತ್ತಾಟ ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದಿದೆ. ಅಶ್ವಿನಿ ಗೌಡ ಅವರು ಇತ್ತೀಚೆಗೆ ತಮ್ಮ ಕೈ ಕಾಲುಗಳ ಮೇಲಿರುವ ಗಾಯದ ಗುರುತುಗಳ ಫೋಟೋ ಹಂಚಿಕೊಂಡಿದ್ದು, ಇದು ಚೈತ್ರಾ ಕುಂದಾಪುರ ಅವರಿಂದ ಆದ ಗಾಯಗಳೆಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.


ಇದಕ್ಕೆ ತಿರುಗೇಟು ನೀಡಿರುವ ಚೈತ್ರಾ ಕುಂದಾಪುರ, ತನಗೂ ಅಶ್ವಿನಿ ಅವರಿಂದ ಗಾಯಗಳಾಗಿವೆ ಎಂದು ಹೇಳುತ್ತಾ, ಚೈತ್ರಾ ತಮ್ಮ ದೇಹದ ಮೇಲಿರುವ ಪರಚಿದ ಕಲೆಗಳನ್ನು ತೋರಿಸಿ, ‘ನನ್ನ ಮೇಲೆ ದೈಹಿಕ ಹಲ್ಲೆ ನಡೆದಿದೆ’ ಎಂದು ಆರೋಪಿಸಿದ್ದಾರೆ. ‘ಗಾಯಗಳ ಫೋಟೋ ಹಾಕಿ ಪ್ರಚಾರ ಪಡೆಯಲು ನನ್ನ ಹತ್ತಿರ ಅಶ್ವಿನಿ ಅವರಂತೆ ಯಾವುದೇ ಪಿಆರ್ ಟೀಮ್ ಇಲ್ಲ’ ಎಂದು ಚೈತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮನೆಯೊಳಗೆ ಅತಿಥಿಗಳಾಗಿ ಹೋಗಿದ್ದರೂ, ಟಾಸ್ಕ್ ವೇಳೆ ಪರಸ್ಪರ ಉಗುರಿನಿಂದ ಪರಚಿಕೊಂಡು ನೈಜ ಸ್ಪರ್ಧಿಗಳಂತೆ ಕಿತ್ತಾಡುತ್ತಿದ್ದುದರ ಬಗ್ಗೆ ಈ ಹಿಂದೆ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಅಶ್ವಿನಿ ಗೌಡ ಈ ಮೊದಲು ‘ಚೈತ್ರಾ ಕುಂದಾಪುರ ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದರು ಮತ್ತು ರಜತ್ ಕಿಶನ್ ಮಾನಸಿಕವಾಗಿ ಕಿರುಕುಳ ನೀಡಿದರು’ ಎಂದು ಗಂಭೀರ ಆರೋಪ ಮಾಡಿದ್ದರು.


ಇದನ್ನೂ ಓದಿ: ಹೆತ್ತವರನ್ನು ನಿರಾಕರಿಸಿ ಪ್ರೀತಿಸಿದ ಯುವಕನೊಂದಿಗೆ ತೆರಳಿದ ಮಗಳು!

ಸದ್ಯ ಈ ಇಬ್ಬರ ನಡುವಿನ “ಕೋಳಿ ಜಗಳ” ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ನಡುವಿನ ಯುದ್ಧಕ್ಕೂ ಕಾರಣವಾಗಿದೆ. ಅಶ್ವಿನಿ ಗೌಡರ ಅಭಿಮಾನಿಗಳು ಚೈತ್ರಾ ವಿರುದ್ಧ ಗರಂ ಆಗಿದ್ದರೆ, ಚೈತ್ರಾ ಮಾತ್ರ ಆಟವನ್ನು ಆಟವಾಗಿ ನೋಡಬೇಕೆಂದು ಸಮರ್ಥಿಸಿಕೊಂಡಿದ್ದಾರೆ.

BIG BOSS

ಬಿಗ್‌ ಬಾಸ್‌ ವಿನ್ನರ್‌ನ ಅನ್‌ಫಾಲೋ ಮಾಡಿದ ರಘು; ಮೌನ ಮುರಿದ ಗಿಲ್ಲಿ ನಟ

Published

on

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ-ರಘು ಅವರ ನಡುವೆ ಒಳ್ಳೆಯ ಸ್ನೇಹ ಬೆಳೆದಿತ್ತು. ಹೊರಗಡೆ ಬಂದ ನಂತರವೂ ಅದೇ ಗೆಳೆತನ ಕಂಟಿನ್ಯೂ ಆಗಿತ್ತು. ಇದೀಗ ಇಬ್ಬರ ಸ್ನೇಹದ ನಡುವೆ ಬಿರುಕು ಮೂಡಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಕಾರಣ ರಘು ಅವರು ಈಗ ಗಿಲ್ಲಿಯನ್ನ ಅನ್‌ಫಾಲೋ ಮಾಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಮುಗಿದು ತಿಂಗಳುಗಳೇ ಕಳೆದಿವೆ. ಆದ್ರೂ ಕೂಡಾ ಬಿಗ್‌ ಸ್ಪರ್ಧಿಗಳ ಹವಾ ಮಾತ್ರಾ ಚೂರು ಕಮ್ಮಿ ಆಗಿಲ್ಲ ಎನ್ನಬಹುದು. ಅದರಲ್ಲೂ ವಿಶೇಷವಾಗಿ ಗಿಲ್ಲಿ ನಟನ ಹೆಸರು ಮಾತ್ರಾ ಕೇಳದ ದಿನಗಳೇ ಇಲ್ಲ ಎನ್ನಬಹುದು.

ಹಾಗೆಯೇ ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಹಾಗೂ ಕೆಲವು ಸ್ಪರ್ಧಿಗಳ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅದ್ರಲ್ಲಿ ಮ್ಯೂಟೆಂಟ್‌ ರಘು ಹಾಗೂ ಗಿಲ್ಲಿ ನಡುವಿನ ಸ್ನೇಹ ಎಲ್ಲರ ಗಮನ ಸೆಳೆದಿತ್ತು. ಈ ಇಬ್ಬರ ಸ್ನೇಹ ಬಿಗ್‌ ಬಾಸ್‌ ಮಗಿದ ಬಳಿಕವೂ ಮುಂದುವರೆದಿತ್ತು. ಹಲವಾರು ಕಾರ್ಯಕ್ರಮದಲ್ಲಿ ಜೊತೆಗೆ ಕಾಣಿಸಿಕೊಳ್ಳುತ್ತಿದ್ದರು. ಆದರೀಗ ಇಬ್ಬರ ನಡುವೆ ಎಲ್ಲವೂ ಸರಿಯಿಲ್ವಾ? ಭಿನ್ನಾಭಿಪ್ರಾಯ ಮೂಡಿದ್ಯಾ? ಅಷ್ಟಕ್ಕೂ ಗಿಲ್ಲಿ ಅಕೌಂಟ್‌ ಅನ್ನು ರಘು ಅನ್‌ ಫಾಲೋ ಮಾಡಿದ್ದು ಯಾಕೆ ಎನ್ನುವ ಚರ್ಚೆ ಜೋರಾಗಿದೆ. ಈ ಬಗ್ಗೆ ಸ್ವತಃ ಗಿಲ್ಲಿ ಈಗ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮದುವೆ ವಿಚಾರ; ಹೀಗಿತ್ತು ರಿಷಭ್‌ ಶೆಟ್ಟಿ ಮೊದಲ ಪ್ರತಿಕ್ರಿಯೆ

‘ಅವರು ಏಕೆ ಅನ್​ಫಾಲೋ ಮಾಡಿದ್ರು ಅನ್ನೋದು ನಿಜಕ್ಕೂ ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲೇ ಗೊತ್ತಾಗಿದ್ದು. ನಾನು ಸೋಶಿಯಲ್ ಮೀಡಿಯಾ ಬಳಸಲ್ಲ. ಪೋಸ್ಟ್​ ಮಾಡೋದಲ್ಲ ಮಾಡಲ್ಲ. ಅವರು ಫಾಲೋ ಮಾಡಿರ್ತಾರೆ, ನಾನು ಫಾಲೋ ಬ್ಯಾಕ್ ಮಾಡಿಲ್ಲ ಎಂದು ಅನ್​​ಫಾಲೋ ಮಾಡಿರಬಹುದು’ ಎಂದು ಗಿಲ್ಲಿ ನಟ ಹೇಳಿದ್ದಾರೆ.

ರಘು ಅವರು ಅವಕಾಶವಾದಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ. ‘ರಘು ಅವರು ಮಗುವಿನ ರೀತಿಯ ಮನಸ್ಸು ಹೊಂದಿರುವವರು. ಅವರು ಯಾವಾಗಲೂ ಆ ರೀತಿ ಮಾಡಿದವರಲ್ಲ. ಅವರ ದೇಹಕ್ಕೂ ವೈಕ್ತಿತ್ವಕ್ಕೂ ಸಂಬಂಧವೇ ಇಲ್ಲ’ ಎಂದು ಒಳ್ಳೆಯ ಮಾತನ್ನು ಆಡಿದರು.

Continue Reading

BIG BOSS

ಮುಖವಾಡ ಹೊತ್ತು ಬಂದವರು ದೂರವಾದರು…ಪತಿ ಬಗ್ಗೆ ಚೈತ್ರಾ ಕುಂದಾಪುರ ಪೋಸ್ಟ್

Published

on

ಮಂಗಳೂರು/ಬೆಂಗಳೂರು : ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅಶ್ವಿನಿ ಗೌಡ ಹಾಗೂ ಅವರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ಕೂಡ ನಡೆಯುತ್ತಿದೆ. ಈ ನಡುವೆ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ.

ಪತಿ ಬರ್ತ್‌ಡೇ … ವಿಶೇಷ ಪೋಸ್ಟ್…

ಇಂದು(ಫೆ.20) ಚೈತ್ರಾ ಕುಂದಾಪುರ  ಪತಿ ಶ್ರೀಕಾಂತ್ ಕಶ್ಯಪ್‌ರಿಗೆ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಪತಿಯೊಂದಿಗಿನ ಕೆಲವೊಂದು ಅಪೂರ್ವ ಫೋಟೋಗಳ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಜೊತೆಗೆ ತಮ್ಮ 10 ವರ್ಷಗಳ ಪ್ರೀತಿಯ ಬಗ್ಗೆ ಬರೆದುಕೊಂಡು ಪತಿಗೆ ಧನ್ಯವಾದ ತಿಳಿಸಿ, ಶುಭ ಹಾರೈಸಿದ್ದಾರೆ.

ಇದನ್ನೂ ಓದಿ : ಬಾಲಿವುಡ್‌ನ ಖ್ಯಾತ ನಿರ್ದೇಶಕನ ಶ*ವ ಕೊಳೆತ ಸ್ಥಿತಿಯಲ್ಲಿ ಪತ್ತೆ!

ಯೋಚನೆ ನಿರ್ಧಾರ ಒಂದೇ ಆಯಿತು…

ಚೈತ್ರಾ ಕುಂದಾಪುರ ತಮ್ಮ 10 ವರ್ಷಗಳ ಪ್ರೇಮಯಾನವನ್ನು ಬಣ್ಣಿಸಿ ಬರೆದಿದ್ದಾರೆ. 2016 ರಿಂದ ಇವರಿಬ್ಬರ ಒಡನಾಟ ಆರಂಭಗೊಂಡಿತ್ತು. ಅಲ್ಲಿಂದ ಇಲ್ಲಿಯ ವರೆಗಿನ ಜರ್ನಿಯನ್ನು ಅವರು ವಿವರಿಸಿದ್ದಾರೆ.

ಹೀಗೆ ಪ್ರಾರಂಭವಾದ ಸ್ನೇಹ, ಮಾತೇ ಆಡದೆ ಭರವಸೆ ಹುಟ್ಟಿಸಿತು..
ಸಿದ್ಧಾಂತಕ್ಕಾಗಿ ಬಡಿದಾಡುವ ಕೆಚ್ಚು ಕಲಿಸಿತು
ಕೆಲಸ- ಕಲಿಕೆ ಜೊತೆಗೆ ಸಾಗಿತು
ಹೊಸ ಹೆಜ್ಜೆಯನ್ನಿಡುವ ಧೈರ್ಯ ತುಂಬಿತು
ಯೋಚನೆ ನಿರ್ಧಾರ ಒಂದೇ ಆಯಿತು
ಹೋರಾಟದ ಹಾದಿಗೆ ನಮ್ಮನ್ನು ಎಳೆದು ತಂದಿತು
ಕರ್ನಾಟಕದ ಮೂಲೆ ಮೂಲೆಗೂ ಜೊತೆಯಾಗಿ ಸಾಗುವ ಶಕ್ತಿ ನೀಡಿತು
ತಡೆಯಲು ಬಂದ ಶಕ್ತಿಗಳೆಷ್ಟೋ, ಮುರಿಯಲು ನಡೆದ ಪ್ರಯತ್ನ ಗಳೆಷ್ಟೋ ಲೆಕ್ಕವಿಲ್ಲ
ನಾವು ಸಾಗಿದೆವು ಇನ್ನಷ್ಟು ಗಟ್ಟಿಯಾದ ಭರವಸೆಯ ತಳಹದಿಯ ಮೇಲೆ
ಸ್ನೇಹಿತರು, ಹಿತೈಷಿಗಳೆಂಬ ಮುಖವಾಡ ಹೊತ್ತು ಬಂದವರು ದೂರವಾದರು
ಗುರುದೇವರೆಡೆಗಿನ ನಂಬಿಕೆ, ಭಗವಂತನೆಡೆಗಿನ ಶರಣಾಗತಿ ನಮ್ಮನ್ನು ಕಾಯುತ್ತಲೇ ಬಂದಿತು
ಅಪವಾದ, ಅಪಮಾನಗಳ ಮೆಟ್ಟಿ ನಿಲ್ಲಲು ಶಕ್ತಿಯಾದವನಿಗೆ
ನನ್ನೊಳಗಿನ ಶಕ್ತಿ, ನನ್ನ ಕನಸುಗಳ ಒಡೆಯನಿಗೆ,
ಕನಸು ಕಾಣುವ ಹೆಣ್ಣುಮಕ್ಕಳಿಗೆಲ್ಲ ನಾನು ಗಂಡಸು ಎನ್ನುವ ಅಹಮಿಕೆ ಇಲ್ಲದ ನಿನ್ನಂತಹ ಜೊತೆಗಾರ ಸಿಗಲಿ
ದೇವರಂತಹ ಗಂಡನ ಕೊಡು ಎಂದು ಯಾವತ್ತೂ ಕೇಳಿಲ್ಲ, ದೇವರೇ ನನ್ನ ಜೊತೆಗಿರುವ ಖಾತರಿ ನನಗಿದೆಯಲ್ಲ..  ಹುಟ್ಟುಹಬ್ಬದ ಶುಭಾಶಯಗಳು ಮಗಾ… Thank you.. ನನ್ನ ಬದುಕನ್ನ ಆವರಿಸಿಕೊಂಡಿದ್ದಕ್ಕೆ… Thank you ನನ್ನ ಬದುಕು ನೀನೇ ಆಗಿದ್ದಕ್ಕೆ. ಭಗವಂತ ನಿನ್ನೆಲ್ಲ ಆಯುಷ್ಯ, ಸಂಭ್ರಮ, ಯಶಸ್ಸನ್ನು ನನ್ನೊಂದಿಗೆ ಕೊಟ್ಟು ಕಾಪಾಡಲಿ… ಎಂದು  ಬರೆದುಕೊಂಡಿದ್ದಾರೆ.

Continue Reading

BIG BOSS

ವರ್ತೂರು ಸಂತೋಷ್ ಹೆಸರು ಚೇಂಜ್ ಮಾಡಿದ ರಕ್ಷಿತಾ ಶೆಟ್ಟಿ; ವೈರಲ್ ಆಯ್ತು ಹೊಸ ಹೆಸರು!

Published

on

ಬಿಗ್ ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿದ್ದ ರಕ್ಷಿತಾ ಶೆಟ್ಟಿ, ಮೂಲತಃ ಮಂಗಳೂರಿನವರಾಗಿದ್ದು, ಮುಂಬೈನಲ್ಲಿ ಹುಟ್ಟಿ, ಬೆಳೆದಿದ್ದರಿಂದ ಅವರಿಗೆ ಕನ್ನಡ ಸ್ಪಷ್ಟವಾಗಿ ಬರುವುದಿಲ್ಲ. ಹೀಗಾಗಿ ಸಂಭ್ರಮದಲ್ಲಿ ಅಥವಾ ಆತುರದಲ್ಲಿ ಮಾತನಾಡುವಾಗ ಹೆಸರುಗಳನ್ನು ವಿಭಿನ್ನವಾಗಿ ಉಚ್ಚರಿಸುತ್ತಾರೆ. ಇದಕ್ಕೆ ಹೊಸ ಉದಾಹರಣೆ ಎಂದರೆ ಅದು ಕರಿಬಸಯ್ಯ ಅವರ ಹೆಸರನ್ನು ಬದಲಾಯಿಸಿದ್ದು, ಇದೀಗ ವರ್ತೂರು ಸಂತೋಷ್‌ಗೆ ಹೊಸದಾಗಿ ಹೆಸರಿಟ್ಟಿದ್ದಾರೆ.


ಹಿಂದೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಸಹ-ಸ್ಪರ್ಧಿ ಕರಿಬಸಯ್ಯ ಅವರ ಹೆಸರನ್ನು ತಪ್ಪಾಗಿ ಉಚ್ಚರಿಸಿ ‘ಕರಿಬಸೊಪ್ಪು’ ಎಂದು ಕರೆದಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈಗ ‘ದೊಡ್ಮನೆ ಹಬ್ಬ’ ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಮಾತನಾಡುವಾಗ, ಮಾಜಿ ಸ್ಪರ್ಧಿ ವರ್ತೂರು ಸಂತೋಷ್ ಹೆಸರನ್ನು ‘ವಂತೂರು ಸಂತೂರು’ ಎಂದು ಕರೆಯುವ ಮೂಲಕ ರಕ್ಷಿತಾ ಮತ್ತೆ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: ‘ನೀನು ಹೇಳೋವರೆಗೂ ಈ ವಿಷಯ ಯಾರಿಗೂ ಗೊತ್ತಿರಲಿಲ್ಲ’- ರಕ್ಷಿತಾ ಕಾಲೆಳೆದ ಪ್ರಥಮ್!

ಬಿಗ್ ಬಾಸ್ ಮನೆಯ ಸ್ಪರ್ಧಿಗಳನ್ನು ಒಟ್ಟುಗೂಡಿಸಿ, ‘ದೊಡ್ಮನೆ ಹಬ್ಬ’ ಕಾರ್ಯಕ್ರಮ ಮಾಡಲಾಯಿತು. ಈ ಕಾರ್ಯಕ್ರದಲ್ಲಿ ರಕ್ಷಿತಾ ಶೆಟ್ಟಿ ಕೂಡ ಇದ್ದರು. ಅವರು ಬಿಗ್ ಬಾಸ್ ಮನೆಯಲ್ಲಿರುವ ದಿನಗಳನ್ನು ನೆನೆದು ಭಾವುಕರಾದರು.

Continue Reading
Advertisement

Trending

Copyright © 2025 Namma Kudla News

You cannot copy content of this page