Connect with us

BIG BOSS

‘ಮೆಟ್ಟು ತಗೊಂಡು ಹೊಡಿತೀನಿ’: ಮತ್ತೆ ನಾಲಿಗೆ ಹರಿಬಿಟ್ಟ ಚೈತ್ರಾ ಕುಂದಾಪುರ

Published

on

ಜಾಸ್ತಿ ಮಾತನಾಡುತ್ತಾರೆ ಎಂಬ ಕಾರಣದಿಂದಲೇ ಚೈತ್ರಾ ಕುಂದಾಪುರ ಅವರು ಹೈಲೈಟ್ ಆಗುತ್ತಾರೆ. ಆದರೆ ಆ ಮಾತೇ ಅವರಿಗೆ ಮುಳುವಾಗುತ್ತಿದೆ. ಕಳೆದ ವಾರ ಅವರು ‘ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..’ ಎಂದು ಜಗದೀಶ್​ಗೆ ಹೇಳಿದ್ದರು. ಆ ಮಾತನ್ನು ಕಿಚ್ಚ ಸುದೀಪ್ ಅವರು ಕಟುವಾಗಿ ಖಂಡಿಸಿದ್ದರು. ಹಾಗಂತ ಚೈತ್ರಾ ಅವರು ತಮ್ಮ ಮಾತಿನ ವರಸೆಯನ್ನು ಬದಲಿಸಿಕೊಂಡಿದ್ದಾರಾ? ಖಂಡಿತಾ ಇಲ್ಲ. ಸೋಮವಾರದ (ಅಕ್ಟೋಬರ್​ 21) ಸಂಚಿಕೆಯಲ್ಲಿ ಅವರು ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಚಪ್ಪಲಿಯಲ್ಲಿ ಹೊಡೆಯುವ ಬಗ್ಗೆ ಅವರು ಮಾತನಾಡಿದ್ದಾರೆ.

ಕಳೆದ ವಾರ ಜಗದೀಶ್ ಅವರಿಗೆ ಉಗ್ರಂ ಮಂಜು ಅವರು ಚಪ್ಪಲಿ ತೋರಿಸಿದ್ದರು. ಅದು ಸರಿಯಲ್ಲ ಎಂದು ಸುದೀಪ್ ಅವರು ಹೇಳಿದ್ದರು. ಇಂಥ ಹಲವು ಕಾರಣಗಳಿಂದಾಗಿ ಮನೆಯ ಸದಸ್ಯರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದರು. ಅಷ್ಟಾದರೂ ಕೂಡ ಚೈತ್ರಾ ಅವರು ಮಾತಿನ ವರಸೆ ಬದಲಾಯಿಸಿಕೊಂಡಿಲ್ಲ. ಸಂದರ್ಭ ಬಂದರೆ ತಾವು ಮೆಟ್ಟಿನಲ್ಲಿ ಹೊಡೆಯುವುದಾಗಿ ಚೈತ್ರಾ ಹೇಳಿದ್ದಾರೆ.

ಈ ಮೊದಲು ಹಂಸಾ ಅವರ ಬಗ್ಗೆ ಗೋಲ್ಡ್ ಸುರೇಶ್ ಏನೇನೋ ಕಮೆಂಟ್ ಮಾಡಿದ್ದರು. ಹಂಸಾ ಅವರದ್ದು ಲವ್​ ಸ್ಟೋರಿ ನಡೆಯುತ್ತಿತ್ತು ಎಂದು ಅವರು ಹೇಳಿದ್ದರು. ಅದರಿಂದ ಹಂಸಾಗೆ ಬೇಸರ ಆಯಿತು. ಹಾಗಾಗಿ ಅವರು ಈ ವಿಚಾರವನ್ನು ಚೈತ್ರಾ ಕುಂದಾಪುರ ಜೊತೆ ಚರ್ಚೆ ಮಾಡುತ್ತಿದ್ದರು. ಆಗ ಚೈತ್ರಾ ಅವರ ಮಾತುಗಳು ಮೆಟ್ಟಿನ ತನಕ ಹೋಯಿತು.

‘ನನ್ನ ಕ್ಯಾರೆಕ್ಟರ್ ಬಗ್ಗೆ ಯಾರಾದರೂ ಮಾತಾಡಿದರೆ ಮೆಟ್ಟು ತಗೊಂಡು ಹೊಡಿತೀನಿ. ಅದರಿಂದ ನಾನು ಹೊರಗೆ ಹೋದ್ರೂ ಚಿಂತೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ’ ಎಂದು ಚೈತ್ರಾ ಕುಂದಾಪುರ ಅವರ ಹೇಳಿದ್ದಾರೆ. ಇಂಥ ಮಾತುಗಳನ್ನು ಆಡಿದ್ದಕ್ಕೆ ಸುದೀಪ್ ಅವರು ವೀಕೆಂಡ್ ಸಂಚಿಕೆಯಲ್ಲಿ ಯಾವ ರೀತಿ ಪಂಚಾಯ್ತಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.

BIG BOSS

ಗಿಲ್ಲಿ ಮನೆಯಿಂದ ಬಂತು ಶುಭ ಸುದ್ದಿ; ಏನು ಗೊತ್ತಾ?

Published

on

BBK12 :  ಬಿಗ್ ಬಾಸ್ ಸೀಸನ್ 12ರಲ್ಲಿ ಗಿಲ್ಲಿ ಹವಾ ಜೋರಾಗಿದೆ. ಕಾಮಿಡಿ, ತಲೆಹರಟೆ ಮೂಲಕ ಗಿಲ್ಲಿ ಬಿಗ್ ಬಾಸ್  ವೀಕ್ಷಕರಿಗೆ ಮನೋರಂಜನೆ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ಗಿಲ್ಲಿಗೆ ಫ್ಯಾನ್ಸ್ ಸಂಖ್ಯೆ ಹೆಚ್ಚಾಗಿದ್ದಾರೆ. ಈ ಬಾರಿ ಗಿಲ್ಲಿ ಬಿಗ್ ಬಾಸ್ ವಿನ್ನರ್ ಆಗ್ಬೇಕು ಅನ್ನೋ ಮಾತು ಕೇಳಿ ಬರುತ್ತಿದೆ.  ಮತ್ತೊಂದೆಡೆ, ಗಿಲ್ಲಿ ಮನೆಯಿಂದ ಗುಡ್ ನ್ಯೂಸ್ ಬಂದಿದೆ.

ಬಿಗ್ ಬಾಸ್ ಮನೆಯಲ್ಲಿ ಚಿಕ್ಕಪ್ಪನ ಬಗ್ಗೆ ಗಿಲ್ಲಿ ನಟ ಅವಾಗವಾಗ ಮಾತನಾಡುತ್ತಿದ್ದರು. ಇದೀಗ ಅವರು ಚಿಕ್ಕಪ್ಪನಾಗಿರುವ ಬಗ್ಗೆ ಶುಭಸುದ್ದಿ ಬಂದಿದೆ.  ಈ ವಿಚಾರವನ್ನು ಗಿಲ್ಲಿ ನಟನ ಇನ್ಸ್ಟಾ ಗ್ರಾಂ ಖಾತೆಯಲ್ಲಿ  ಹಂಚಿಕೊಳ್ಳಲಾಗಿದೆ.

ಗಿಲ್ಲಿಗೆ ಗೊತ್ತಿರದ ವಿಷಯ ಒಂದಿದೆ…ಮನೆಯೊಳಗೇ ಕೂತು ಚಿಕ್ಕಪ್ಪನ ಕಥೆ ಹೇಳೋ ಗಿಲ್ಲಿ ನಿಜಕ್ಕೂ ಇತ್ತೀಚೆಗೆ ಚಿಕ್ಕಪ್ಪ ಆಗಿದ್ದಾರೆ. ಗಿಲ್ಲಿಯ ಪ್ರೀತಿಯ ಅಣ್ಣ ಅತ್ತಿಗೆಗೆ ಇಂದು ವಿವಾಹ ವಾರ್ಷಿಕೋತ್ಸವ ಸಂಭ್ರಮ ಒಂದು ಕಡೆ ಆದ್ರೆ, ಮುದ್ದು ಕೃಷ್ಣ ಹುಟ್ಟಿರೋ ಖುಷಿ ಇನ್ನೊಂದು ಕಡೆ. ಈ ಜೋಡಿ ಸಂಭ್ರಮಕ್ಕೆ ನೀವು ಶುಭ ಹಾರೈಸಿ  ಎಂದು ಬರೆಯಲಾಗಿದೆ.

ಇದನ್ನೂ ಓದಿ : BBK12: ಬಾಯಿಬಿಟ್ಟು ನಿಜ ಹೇಳಿದ್ರಾ ರಜತ್? ಬಿಚ್ಚಿಟ್ಟ ಸತ್ಯ ಏನು?

ಈ ಪೋಸ್ಟ್‌ಗೆ ಗಿಲ್ಲಿ ನಟನ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಗಿಲ್ಲಿ ನಟ ಕಾಮಿಡಿ ಶೋಗಳ ಮೂಲಕ ಜನಪ್ರಿಯರಾಗಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಸಕತ್ ಸದ್ದು ಮಾಡುತ್ತಿದ್ದಾರೆ. ಮತ್ತೊಂದೆಡೆ ಅವರು ನಟಿಸಿರುವ ‘ಸೂಪರ್ ಹಿಟ್’ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಟೀಸರ್ ಬಿಡುಗಡೆಗೊಂಡು ಜನಮನ ಗೆದ್ದಿದೆ.

Continue Reading

BIG BOSS

BBK12: ಬಾಯಿಬಿಟ್ಟು ನಿಜ ಹೇಳಿದ್ರಾ ರಜತ್? ಬಿಚ್ಚಿಟ್ಟ ಸತ್ಯ ಏನು?

Published

on

BBK12: ಬಿಗ್‌ಬಾಸ್‌ ಕನ್ನಡ ಸೀಸನ್ 12ರಲ್ಲಿ 58ನೇ ದಿನಕ್ಕೆ ಕಳೆದ ಸೀಸನ್ ಸ್ಪರ್ಧಿಗಳಾದ ರಜತ್ ಮತ್ತು ಚೈತ್ರಾ ಕುಂದಾಪುರ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟರು. ಆರಂಭದಲ್ಲಿ ಅತಿಥಿಗಳಾಗಿದ್ದ ಅವರು ಬಳಿಕ ವೈಲ್ಡ್ ಕಾರ್ಡ್ ಅಭ್ಯರ್ಥಿಗಳಾದರು. ಆದರೆ, ಇವರು ಈ ವಾರವೇ ಮನೆಯಿಂದ ಹೊರಹೋಗುತ್ತಾರೆ ಎಂಬ ಮಾತು ಹರಿದಾಡುತ್ತಿದೆ. ಇದಕ್ಕೆ ಸಾತ್ ಕೊಡುವ ರೀತಿಯಲ್ಲಿ ರಜತ್ ಮಾತಾಡಿದ್ದಾರೆ. ಇದು ಮನೆಯಲ್ಲಿ ಚರ್ಚೆಗೆ ಕಾರಣವಾಗಿದೆ.

ಡಿಸೆಂಬರ್ 3ರಂದು ಜೋಡಿಯೊಂದಿಗೆ ಆಡುವ ಟಾಸ್ಕ್ ಒಂದನ್ನು ಬಿಗ್‌ಬಾಸ್‌ ನೀಡಿದ್ದರು. ರಜತ್ ಮತ್ತು ಚೈತ್ರಾ ಜತೆಯಾಗಿ ಟಾಸ್ಕ್ ಆಡುತ್ತಿದ್ದರು. ಪ್ರತಿ ಟಾಸ್ಕ್ ಗೆದ್ದಾಗ, ಗೆದ್ದವರು ಒಂದು ಜೋಡಿಯನ್ನು ಹೊರ ಇಡಬೇಕು. ಮೊದಲ ಟಾಸ್ಕ್‌ನಲ್ಲಿ ರಕ್ಷಿತಾ ಮತ್ತು ಮಾಳು ಗೆದ್ದಿದ್ದರಿಂದ ಅವರು ರಜತ್ ಮತ್ತು ಚೈತ್ರಾ ಅವರನ್ನು ಗೇಮ್‌ನಿಂದ ಹೊರಕ್ಕೆ ಇಟ್ಟಿದ್ದಾರೆ. ಇದು ರಜತ್‌ಗೆ ಬೇಸರ ಮೂಡಿಸಿದೆ.

ನೀವು ಈಗಷ್ಟೇ ಬಿಗ್‌ಬಾಸ್‌ ಮನೆಗೆ ಬಂದಿದ್ದೀರಿ. ಈಗಲೇ ನಿಮಗೆ ಕ್ಯಾಪ್ಟನ್ಸಿ ಟಾಸ್ಕ್ ಬೇಡ. ಮುಂದಿನ ದಿನಗಳಲ್ಲಿ ನಿಮಗೆ ಮತ್ತಷ್ಟು ಅವಕಾಶ ಇರುತ್ತದೆ ಎಂದು ರಕ್ಷಿತಾ ಹೇಳಿದ ಮಾತು ರಜತ್ ಕೋಪಕ್ಕೆ ಕಾರಣ ಆಗಿದೆ.

ಇದನ್ನೂ ಓದಿ: ಈ ವಾರ ಕಿಚ್ಚನ ಚಪ್ಪಾಳೆ ಧ್ರುವಂತ್‌ಗೆ ಫಿಕ್ಸ್!? ಯಾಕೆ ಗೊತ್ತಾ?

ಮುಂದಿನ ವಾರಗಳಲ್ಲಿ ನಾವು ಇರುತ್ತೇವೆ ಎಂದು ಹೇಗೆ ಹೇಳುತ್ತೀರಿ? ನಾವು ಇದೇ ವಾರ ಹೋಗಿಬಿಟ್ಟರೆ ಎಂದು ರಜತ್ ಪ್ರಶ್ನೆ ಮಾಡಿದ್ದಾರೆ. ಈ ವಾರ ರಜತ್ ಮತ್ತು ಚೈತ್ರಾ ಇಬ್ಬರೂ ನಾಮಿನೇಟ್ ಆಗಿಲ್ಲ ಹಾಗಿರುವಾಗ ಅವರು ಈ ವಾರ ಮನೆಯಿಂದ ಹೊರ ಹೋಗೋಕೆ ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಅವರು ಈ ವಾರ ಹೊರ ಹೋಗೋದು ಫಿಕ್ಸ್ ಎಂದು ಹೇಳಲಾಗುತ್ತಾ ಇದೆ.

Continue Reading

BIG BOSS

ಈ ವಾರ ಕಿಚ್ಚನ ಚಪ್ಪಾಳೆ ಧ್ರುವಂತ್‌ಗೆ ಫಿಕ್ಸ್!? ಯಾಕೆ ಗೊತ್ತಾ?

Published

on

BBK12: ಬಿಗ್‌ಬಾಸ್‌ ಮನೆಯಲ್ಲಿ ಏಕಾಂಗಿಯಾಗಿರೋ ಧ್ರುವಂತ್ ಕಳೆದ ಕೆಲ ದಿನಗಳಿಂದ ಮನೆಯಿಂದ ಹೊರ ಹೋಗುವ ಬಗ್ಗೆ ಯೋಚಿಸುತ್ತಿದ್ದಾರೆ. ಮನೆಯಲ್ಲಿ ಎಲ್ಲರೂ ಅವರನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಭಾವಿಸಿರುವ ಅವರು ಈ ನಿರ್ಧಾರ ತಳೆದಿದ್ದಾರೆ.


ಈ ವಾರ ಜೋಡಿ ಟಾಸ್ಕ್ ನಡೆದಿದೆ. ಯಾರೊಬ್ಬರೂ ಅವರನ್ನು ಟಾಸ್ಕ್‌ಗೆ ತೆಗೆದುಕೊಂಡಿಲ್ಲ. ಹಾಗಂತ ಆವರು ಯಾವುದೇ ಕಾರಣಕ್ಕೆ ಕುಗ್ಗದೇ ಕೊಟ್ಟ ಉಸ್ತುವಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅದರಲ್ಲೂ ರಿಂಗ ರಿಂಗ ಟಾಸ್ಕ್‌ನಲ್ಲಿ ಅವರು ನಡೆದುಕೊಂಡ ರೀತಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಧ್ರುವಂತ್ ವಿಚಿತ್ರ ಸ್ವಭಾವದವರು. ಯಾವಾಗ ಯಾವ ರೀತಿ ಇದ್ದಾರೆ ಎಂಬುದನ್ನು ಊಹಿಸಲು ಆಗಲ್ಲ. ಯಾರ ಜತೆಗಾದರೂ ಒಳ್ಳೆಯ ರೀತಿಯಲ್ಲಿ ಮಾತಾನಾಡಿದರೆ, ಸ್ವಲ್ಪ ಹೊತ್ತಿನಲ್ಲೇ ಅವರು ಉಲ್ಟಾ ಹೊಡೆಯುತ್ತಾರೆ ಎಂಬುದು ಇತರ ಸ್ಪರ್ಧಿಗಳ ನಿಲುವು. ಈ ಕಾರಣದಿಂದಲೇ ಕಳೆದ ವಾರ ಅವರಿಗೆ ಸಾಕಷ್ಟು ಬಿರುದುಗಳು ಸಿಕ್ಕವು. ಅವರನ್ನು ಮನೆ ಮಂದಿಯಲ್ಲಿ ಅನೇಕರು ಊಸರವಳ್ಳಿ, ಕಪಟಿ ಎಂದು ನಾನಾ ರೀತಿಯಲ್ಲಿ ಕರೆದರು. ಹೀಗಾಗಿ ಬೇಸರಗೊಂಡ ಧ್ರುವಂತ್ ಬಿಗ್‌ಬಾಸ್‌ ಮನೆಯಿಂದ ಹೊರಹೋಗುತ್ತೇನೆ ಎಂದು ಹೇಳಿದರು. ಆದರೆ ಇದಕ್ಕೆ ಸುದೀಪ್ ಒಪ್ಪಿಗೆ ನೀಡಿಲ್ಲ.

ಈ ವಾರ ಅವರನ್ನು ಕುಗ್ಗಿಸೋ ಮತ್ತೊಂದು ಘಟನೆ ನಡೆಯಿತು. ಅದೇನೆಂದರೆ ಜೋಡಿ ಟಾಸ್ಕ್‌ನಲ್ಲಿ ಯಾರೊಬ್ಬರೂ ಧ್ರುವಂತ್ ಅವರನ್ನು ಆಯ್ಕೆ ಮಾಡಿಯೇ ಇಲ್ಲ. ಈ ಕಾರಣ ಮನೆಯಲ್ಲಿ ಅವರು ಯಾರಿಗೂ ಬೇಡವಾದರು. ಹೀಗಾಗಿ ಬಿಗ್‌ಬಾಸ್‌ ಅವರಿಗೆ ಉಸ್ತುವಾರಿ ವಹಿಸಿದ್ದರು. ಸಣ್ಣ ಕೆಲಸ ಎಂದು ಭಾವಿಸದೇ ತಮಗೆ ಸಿಕ್ಕ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದರಿಂದ ಅವರು ಮೆಚ್ಚುಗೆ ಪಡೆದಿದ್ದಾರೆ.

ಇದನ್ನೂ ಓದಿ: BBK12: ಗಿಲ್ಲಿಗೆ ಖಡಕ್‌ ಎಚ್ಚರಿಕೆ ನೀಡಿದ ಕಾವ್ಯ! ಕಾರಣ ಏನು?

ಯಾಕೆ ಗೊತ್ತಾ?

ರಿಂಗ ರಿಂಗ ಟಾಸ್ಕ್‌ನಲ್ಲಿ ರಿಂಗ್‌ನನ್ನು ಎಸೆಯುವ ಕೆಲಸ ಧ್ರುವಂತ್‌ಗೆ ನೀಡಲಾಗಿತ್ತು. ಕಣ್ಣನ್ನು ಬಿಟ್ಟು ಆಡಿದರೆ ನೀನು ಫೇವರಿಸಂ ಮಾಡಿದೆ ಎಂಬ ಮಾತನ್ನು ಕೇಳಬೇಕೆಂಬ ಕಾರಣಕ್ಕೆ ಅವರು ಕಣ್ಣು ಮುಚ್ಚಿಕೊಂಡು ರಿಂಗ್‌ನ ಎಸೆದಿದ್ದಾರೆ. ಅವರ ಈ ಆಟಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅವರಿಗೆ ಈ ವಾರ ಕಿಚ್ಚನ ಚಪ್ಪಾಳೆ ಫಿಕ್ಸ್ ಎಂಬ ಮಾತುಗಳು ಕೇಳಿ ಬಂದಿವೆ.

Continue Reading
Advertisement

Trending

Copyright © 2025 Namma Kudla News

You cannot copy content of this page