Connect with us

LATEST NEWS

WATCH VIDEO : ಶಾಲೆಗೆ ನುಗ್ಗಿದ ‘ಚಡ್ಡಿ ಗ್ಯಾಂಗ್’; 7.85 ಲಕ್ಷ ಲೂಟಿ

Published

on

ಹೈದರಾಬಾದ್ : ಇಲ್ಲಿನ ಶಾಲೆಯೊಂದರ ಮೇಲೆ ಬಿಗಿಯುಡುಪು ಧರಿಸಿ ಇಬ್ಬರು ಕಳ್ಳರು ದಾಳಿ ನಡೆಸಿದ್ದಾರೆ. ಮಧ್ಯರಾತ್ರಿ ಶಾಲೆಗೆ ನುಗ್ಗಿದ ಕಳ್ಳರು 7.85 ಲಕ್ಷ ರೂ ನಗದು ದೋಚಿ ಪರಾರಿಯಾಗಿದ್ದಾರೆ. ಘಟನೆಯ ನಂತರ, ಸಿಸಿಟಿವಿ ದೃಶ್ಯಾವಳಿ ಕೂಡ ಹೊರಬಿದ್ದಿದ್ದು, ಕಳ್ಳರು ಶಾಲೆಯ ಆವರಣಕ್ಕೆ ನುಗ್ಗಿ ಕಳ್ಳತನ ಮಾಡುತ್ತಿರುವುದನ್ನು ಕಾಣಬಹುದು. ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ಚಡ್ಡಿ ಗ್ಯಾಂಗ್ ಕೃತ್ಯ ಬೆಳಕಿಗೆ ಬಂದಿದೆ. ಇಲ್ಲಿ ಒಳ ಉಡುಪು ಧರಿಸಿದ್ದ ಇಬ್ಬರು ಕಳ್ಳರು ಶಾಲೆಗೆ ನುಗ್ಗಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ.

ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್ ನ ಮಿಯಾಪುರದಲ್ಲಿರುವ ವರ್ಲ್ಡ್ ಒನ್ ಶಾಲೆಯನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದಾರೆ. ರಾತ್ರಿ ವೇಳೆ ಒಳ ಉಡುಪನ್ನು ಹಾಕಿಕೊಂಡು ಶಾಲಾ ಆವರಣಕ್ಕೆ ನುಗ್ಗಿದ ಇಬ್ಬರು ಕಳ್ಳರು ಲಕ್ಷಾಂತರ ಮೌಲ್ಯದ ನಗದು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಗುರುತು ಮರೆಮಾಚಲು ಮಾಸ್ಕ್ ಧರಿಸಿದ್ದ ಖದೀಮರು !

ಘಟನೆಯ ಸಿಸಿಟಿವಿ ದೃಶ್ಯಾವಳಿ ಕೂಡ ಹೊರಬಿದ್ದಿದ್ದು, ಇಬ್ಬರು ಕಳ್ಳರು ಶಾಲಾ ಆವರಣದೊಳಗೆ ತಿರುಗಾಡಿಕೊಂಡು ಕಳ್ಳತನ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಕಳ್ಳರು ಒಳ ಉಡುಪನ್ನು ಮಾತ್ರ ಧರಿಸಿದ್ದರು. ತಮ್ಮ ಗುರುತು ಮರೆಮಾಚಲು ಇಬ್ಬರು ಕಳ್ಳರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ಕಳ್ಳನೊಬ್ಬ ತಲೆಮರೆಸಿಕೊಂಡೇ ಮೆಟ್ಟಿಲು ಹತ್ತುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ದಾಖಲಾಗಿದೆ.

ಮದುವೆಗೆ ಒಂದು ತಿಂಗಳಿರುವಾಗಲೇ ತನ್ನ ತಂದೆಯ ತಂಗಿಯೊಂದಿಗೆ ಪರಾರಿಯಾದ ಯುವಕ!

ಪಾಟ್ನಾದಲ್ಲೂ ನಡೆದಿತ್ತು ಘಟನೆ:

ಇಂತಹ ಕಳ್ಳತನದ ಘಟನೆಗಳು ದೇಶದ ವಿವಿಧ ಪ್ರದೇಶಗಳಲ್ಲಿ ಈ ಹಿಂದೆಯೂ ನಡೆದಿವೆ. ಸುಮಾರು ಒಂದು ವರ್ಷದ ಹಿಂದೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ‘ಚಡ್ಡಿ-ವೆಸ್ಟ್’ ಗ್ಯಾಂಗ್ ಎಲೆಕ್ಟ್ರಾನಿಕ್ ಅಂಗಡಿಯನ್ನು ಗುರಿಯಾಗಿಸಿಕೊಂಡಿತ್ತು. ಅಂಗಡಿಗೆ ನುಗ್ಗಿದ ಕಳ್ಳರು ಕೌಂಟರ್ ನಲ್ಲಿದ್ದ 2 ಲಕ್ಷ ರೂ. ದೋಚಿದ್ಇದರು. ಇಡೀ ಘಟನೆ ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇದಕ್ಕೂ ಮೊದಲು ಮುಂಬೈ ಮತ್ತು ಭೋಪಾಲ್ ನಲ್ಲಿ ಪ್ಯಾಂಟಿ ವೆಸ್ಟ್ ಗ್ಯಾಂಗ್ ನಿಂದ ಇಂತಹ ಕೃತ್ಯ ನಡೆದಿತ್ತು. ಮುಚ್ಚಿದ ಮನೆಗಳಲ್ಲಿ ಬಿಗಿಯುಡುಪು ಧರಿಸಿ ಕಳ್ಳತನ ಮಾಡುತ್ತಿದ್ದ ಇಂತಹ ಮೂವರು ಕಳ್ಳರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

LATEST NEWS

ಮೂಗಿಗಿಡುವ ಮೂಗುತ್ತಿಯನ್ನು ಬಾಯಲ್ಲಿಟ್ಟು ಕದ್ದೊಯ್ದ ಮಹಿಳೆ

Published

on

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದ ಚಿನ್ನ ಖರೀದಿ ಮಾಡಲೂ ಜನರಿಗೆ ಕಷ್ಟವಾಗುತ್ತಿದೆ. ಹೀಗಿರುವಾಗ ಇಲ್ಲೊಂದು ಮಹಿಳೆ ಚಿನ್ನವನ್ನೇ ಎರಗಿಸಿದ ಘಟನೆ ನಡೆದಿದೆ.

ಚಿನ್ನ ತೆಗೆದುಕೊಳ್ಳುವ ನೆಪದಲ್ಲಿ ಚಿನ್ನದ ಅಂಗಡಿಗೆ ಭೇಟಿ ನೀಡಿದ ಮಹಿಳೆಯೊಬ್ಬಳು ಬಾಯಿ ತುಂಬಾ ಚಿನ್ನವನ್ನು ಹಾಕಿ ನಂತರ ಸಿಬ್ಬಂದಿಗಳ ಕೈಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ. ಪಾಟ್ನಾದಾ ನಳಂದದಲ್ಲಿ ಈ ಘಟನೆ ನಡೆದಿದ್ದು ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಮಹಿಳೆಯು ಮೂಗುತಿ ತೆಗೆದುಕೊಳ್ಳಲೆಂದು ಸಣ್ಣ ಜ್ಯುವೆಲ್ಲರಿ ಶಾಪ್‌ಗೆ ಬಂದಿದ್ದರು. ಅಲ್ಲಿ ಮೂರು ಜನರ ಮಾತ್ರ ಸಿಬ್ಬಂದಿಗಳು ಇದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿನ್ನ ಖರೀದಿ ಮಾಡಲು ಆ ಶಾಪ್‌ಗೆ ಬಂದಿದ್ದರು. ಆ ವೇಲೆ ಚಿನ್ನದ ಅಂಗಡಿಯ ಒಳಗೆ ಒಂದು ಬದಿಯಲ್ಲಿ ಕೆಂಪು ಬಣ್ಣದ ಸೀರೆಯುಟ್ಟ ಮಹಿಳೆಯು ಮೂಗುತಿಯನ್ನು ನೋಡುತ್ತಿದ್ದಳು. ಆಮೇಲೆ ಸಿಬ್ಬಂದಿಯ ಗಮನ ಬೇರೆ ಕಡೆ ಹೋದಾಗ ಆ ಮೂಗುತಿಯನ್ನು ಬಾಯಿಯೊಳಗೆ ಹಾಕುತ್ತಿದ್ದಳು.

ಹೀಗೆ ಸುಮಾರು ನಾಲ್ಕರಿಂದ ಐದು ಮೂಗುತಿಯನ್ನು ಬಾಯೊಳಗೆ ಹಾಕಿ ನಂತರ ನನಗೆ ಯಾವೂದು ಇಷ್ಟವಾಗಿಲ್ಲ ಬೇಡವೆಂದು ಅಂಗಡಿಯಿಂದ ಹೊರ ನಡೆಯಲು ಪ್ರಯತ್ನಿಸಿದಳು. ಆಗ ಸಿಬ್ಬಂದಿಯು ಮಹಿಳೆಗೆ ಕೊಡುವಾಗ ಇದ್ದಷ್ಟು ಮೂಗುತಿ ಹಿಂದೆ ತೆಗೆದುಕೊಳ್ಳುವಾಗ ಇರಲಿಲ್ಲ. ಬಳಿಕ ಮಹಿಳೆಯಲ್ಲಿ ವಿಚಾರಿಸಿದಾಗ ಆಕೆ ಕೈ ಸನ್ನೆಯಲ್ಲೇ ನನ್ನಲ್ಲಿ ಇಲ್ಲ ಎಂದು ಹೇಳಿದ್ದಾಳೆ.

ನಂತರ ಸಿಸಿ ಟಿವಿ ಪರಿಶೀಲಿಸಿದಾಗ ಮಹಿಳೆಯು ಬಾಯಲ್ಲಿ ಚಿನ್ನವನ್ನು ಹಿಟ್ಟಿರುವುದು ತಿಳಿದಿದೆ. ಪೊಲೀಸರು ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅಲ್ಲಿ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ.

Continue Reading

LATEST NEWS

ಶೂಟಿಂಗ್ ವೇಳೆ ಹೃತಿಕ್ ರೋಷನ್ ಕಾಲಿಗೆ ಗಾಯ

Published

on

ಮುಂಬೈ: ಶೂಟಿಂಗ್ ವೇಳೆ ನಟ ಹೃತಿಕ್ ರೋಷನ್ ಕಾಲಿಗೆ ಗಾಯವಾದ ಘಟನೆ ಮುಂಬೈನಲ್ಲಿ ನಡೆದಿದೆ.

ವಾರ್-2 ಸಿನಿಮಾದ ಚಿತ್ರೀಕರಣದ ಸೆಟ್‌ನಲ್ಲಿ ನಟ ಹೃತಿಕ್ ರೋಷನ್ ಇದ್ದರು. ಆಗ ತಮ್ಮ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಇದೀಗ ಅವರು ಉರುಗೋಲು ಸಹಾಯದಿಂದ ನಡೆದಾಡುತ್ತಿದ್ದಾರೆ.

ಕಾಲಿಗೆ ಗಾಯ ಜಾಸ್ತಿಯಾದ್ದರಿಂದ ಸ್ಚಲ್ಪ ದಿನ ಶೂಟಿಂಗ್ ಸೆಟ್‌ನಿಂದ ದೂರವಿರಲಿದ್ದಾರೆ ಎಂದು ತಿಳಿದುಬಂದಿದೆ.

Continue Reading

LATEST NEWS

ಕಾರ್‌ ಮೇಲೆ ಲಾರಿ ಬಿದ್ದು ಭೀಕರ ಅಪಘಾತ, ಅದೃಷ್ಟವಶಾತ್ ಇಬ್ಬರು ಬಚಾವ್…!

Published

on

ಬೆಳಗಾವಿ : ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನ ನೆಲಮಂಗಲದಲ್ಲಿ ಭೀಕರ ಅಪಗಾತವೊಂದು ನಡೆದಿದ್ದು, ಅದನ್ನು ನೆನೆಯುವ ರೀತಿ ಇದೀಗ ಬೆಳಗಾವಿಯಲ್ಲಿಯೂ ಅಪಘಾತ ಸಂಭವಿಸಿದೆ.ನೆಲಮಂಗಲದಲ್ಲಿ ನಡೆದಿದ್ದ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಸಾವು ಕಂಡಿದ್ದರೆ, ಆದರೆ, ಬೆಳಗಾವಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರ್‌ನ ಮೇಲೆ ಕಾಂಕ್ರಿಟ್‌ ಮಿಕ್ಸರ್‌ ಲಾರಿ ಬಿದ್ದಿದೆ. ಆದರೆ ಅದೃಷ್ಟವಶಾತ್ ಕಾರ್‌ನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. KA25 MD 6506 ಸಂಖ್ಯೆಯ ಕಾರ್ ಮೇಲೆ ಕ್ಯಾಂಟರ್ ಬಿದ್ದಿದ್ದು, ಯಾವುದೇ ರೀತಿಯಿಂದಲೂ ಪ್ರಾಣಹಾನಿ ಸಂಭವಿಸಿಲ್ಲ.

ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆ ಬಳಿಯ ಹೈವೇ ಪಕ್ಕದಲ್ಲಿ ಘಟನೆ ನಡೆದಿದ್ದು, ಕಾರಿನ ಒಳಗೆ ಇಬ್ಬರು ಪ್ರಯಾಣಿಕರು ಸಿಕ್ಕಿಕೊಂಡಿರುವ ಮಾಹಿತಿ ಸಿಕ್ಕ ಬೆನ್ನಲ್ಲಿಯೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ಕ್ರೇನ್ ಸಹಾಯದಿಂದ ಕಾರಿನಲ್ಲಿ ಇದ್ದವರನ್ನ ರಕ್ಷಿಸಲು ದೊಡ್ಡ ಮಟ್ಟದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯಿತು.

ಕೇವಲ 15 ನಿಮಿಷದಲ್ಲೇ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಲಾರಿಯನ್ನ ಮೊದಲಿಗೆ ಕ್ರೇನ್‌ ಮೂಲಕ ಮೇಲೆತ್ತಲಾಗಿದೆ. ಅನಂತರ ಲಾರಿ ಅಡಿಯಲ್ಲಿದ್ದ ಕಾರನ್ನ ಸಾರ್ವಜನಿಕರು ಹೊರಗೆ ತೆಗೆದಿದ್ದಾರೆ. ಕಾರಿನಲ್ಲಿದ್ದ ಇಬ್ಬರನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page