ಮಂಗಳೂರು : ದಕ್ಷಿಣ ಜಿಲ್ಲೆಯಲ್ಲಿ ಕೋರೋನಾ ವೈರಸ್ ಸೋಂಕು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಡಾ. ರಾಜೇಂದ್ರ ಕೆ.ವಿ ಅವರು ಆದೇಶ ಹೊರಡಿಸಿರುತ್ತಾರೆ.

ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಗ್ರಾಮಾಂತರ, ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯವಹಾರ ನಡೆಯುವ ಎಲ್ಲಾ ಹೋಟೆಲ್, ರೆಸ್ಟೋರೆಂಟ್‍ಗಳು ವಾಣಿಜ್ಯ ಸಂಕೀರ್ಣಗಳು, ಮಾಲ್‍ಗಳು ಜನಸಂದಣಿ ಸೇರುವ ಪ್ರದೇಶಗಳಲ್ಲಿ ಎಲ್ಲಾ ಅಂಗಡಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಪತ್ರಿಯೊಬ್ಬಅಂಗಡಿ ಮಾಲೀಕರು ಸಾಮಾಜಿಕಅಂತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ನಿಯಮ ಉಲ್ಲಂಘನೆಯಾಗದಂತೆ ಸಾಕಷ್ಟು ಮುಂಜಾಗೃತಾಕ್ರಮವಹಿಸಬೇಕು. ನಗರ ಸ್ಥಳೀಯ ಸಂಸ್ಥೆ ಹಾಗೂ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಪ್ರತಿಯೊಬ್ಬ ವರ್ತಕರುತಮ್ಮಅಂಗಡಿಯಲ್ಲಿ ಸಾರ್ವಜಿನಿಕರು ಹೆಚ್ಚಿನ ಸಂಖ್ಯೆಯಲ್ಲಿ ಏಕಕಾಲದಲ್ಲಿ ಸೇರದಂತೆ ಅಂಗಡಿ ಮುಂಗಟ್ಟಿನ ಮುಂಭಾಗದಲ್ಲಿ ಕನಿಷ್ಟ 6×6 ಅಡಿ ಅಂತರವನ್ನು ಗುರುತಿಸಿ ಗ್ರಾಹಕರಲ್ಲಿ ದೈಹಿಕಅಂತರ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟ್ಟಿನಲ್ಲಿ ಮುಂದೆ ಇರುವ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಬಳಸಲ್ಪಡುವ ರಸ್ತೆಯನ್ನು ಹೊರತುಪಡಿಸಿ, ಉಳಿದ ಸ್ಥಳವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಳಸುವುದು.
ಪ್ರತಿ ಅಂಗಡಿ ಮಾಲೀಕರು ತಮ್ಮಅಂಗಡಿ ಮುಂಭಾಗದಲ್ಲಿ ಸ್ವಯಂಚಾಲಿತ ಸ್ಯಾನಿಟೈಸರ್ ವ್ಯವಸ್ಥೆಯನ್ನು ಅಳವಡಿಸುವುದು ಹಾಗೂ ಗ್ರಾಹಕರನ್ನು ಸ್ಯಾನಿಟೈಸರ್ ಬಳಸಲು ಉತ್ತೇಜಿಸುವುದು. ಪ್ರತಿ ಅಂಗಡಿ ಮಾಲೀಕರು ಪ್ರತಿದಿನ ತಮ್ಮತಮ್ಮ ಅಂಗಡಿಗಳಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳ ಆರೋಗ್ಯತಪಾಸಣೆಯನ್ನು ನಡೆಸುವುದು, ಅಲ್ಲದೇ ಪ್ರತಿ ಮೂರು ದಿನಗಳಿಗೊಮ್ಮೆ ತಮ್ಮ ಅಂಗಡಿಗಳನ್ನು ಸ್ಯಾನಿಟೈಸರ್ ಮಾಡಲು ಕ್ರಮವಹಿಸಬೇಕು.
ಅಂಗಡಿ ಮಾಲಿಕರು ತಮ್ಮ ಅಂಗಡಿ ಮುಂಭಾಗದಲ್ಲಿ ಓರ್ವ ಸಿಬ್ಬಂದಿಯನ್ನು ನಿಯೋಜಿಸಿ ದಿನನಿತ್ಯ ಗ್ರಾಹಕರನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡುವುದು. ಜ್ವರದ ಲಕ್ಷಣಗಳುಳ್ಳ ಗ್ರಾಹಕರ ಹೆಸರು ದೂರವಾಣಿ ಸಂಖ್ಯೆ ಮತ್ತು ವಿಳಾಸವನ್ನು ರಿಜಿಸ್ಟರ್ ನಲ್ಲಿ ನಮೂದಿಸುವುದು ಹಾಗೂ ತಮ್ಮ ವ್ಯಾಪ್ತಿಯಆರೋಗ್ಯಾಧಿಕಾರಿ ಹಾಗೂ ಮಹಾನಗರಪಾಲಿಕೆಗೆ ವರದಿ ನೀಡಬೇಕು.
ಜ್ವರದ ಲಕ್ಷಣಗಳುಳ್ಳ ಗ್ರಾಹಕರ ಕುರಿತು ವರದಿ ಮಹಾನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆಗೆ ಸ್ವೀಕೃತವಾದ ತಕ್ಷಣವೇ ಮಹಾನಗರಪಾಲಿಕೆಯಿಂದ / ಜಿಲ್ಲಾಡಳಿತದಿಂದ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿಕೋವಿಡ್ ಲಕ್ಷಣಗಳುಳ್ಳ ವ್ಯಕ್ತಿಯನ್ನುಕೋವಿಡ್‍ಕೇರ್ ಸೆಂಟರ್ ಗೆ ತಪಾಸಣೆಗೆ ಕಳುಹಿಸಬೇಕು.
ಅಂಗಡಿ ಮುಂಗಟ್ಟುಗಳಲ್ಲಿ ಸಾರ್ವಜಿನಿಕರು ಸಾಮಾಜಿಕ ಅಂತರವನ್ನುಕಾಯ್ದುಕೊಂಡಿರುವ ಬಗ್ಗೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವ ಬಗ್ಗೆ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಿ ರೆಕಾರ್ಡಿಂಗ್ ಮಾಡವುದು ಸಂಬಂಧಪಟ್ಟ ವರ್ತಕರ ಜವಾಬ್ದಾರಿಯಾಗಿರುತ್ತದೆ. ಸಿಸಿಟಿವಿ ರೆಕಾರ್ಡಿಂಗ್ ದಾಖಲೆಗಳನ್ನು ಸಂಬಂಧಪಟ್ಟ ಆರೋಗ್ಯ ಇಲಾಖಾಧಿಕಾರಿಗೆ ಹಾಗೂ ಆಯುಕ್ತರು ಮಂಗಳೂರು ಮಹಾನಗರಪಾಲಿಕೆ/ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸಲ್ಲಿಸಬೇಕು. ಮೇಲ್ಕಂಡ ಅಧಿಕಾರಿಗಳು ದಾಖಲೆಗಳನ್ನು ನಿಯಮಿತವಾಗಿ ಪರಿಶೀಲಿಸಿ ಸಾಮಾಜಿಕ ಅಂತರವನ್ನು ಹಾಗೂ ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಉಲ್ಲಂಘಿಸಿದಲ್ಲಿ ದಂಡ ವಿಧಿಸುವುದು/ ಪರವಾನಗಿರದ್ದು ಪಡಿಸುವಂತೆಕ್ರಮ ಕೈಗೊಳಲಾಗುವುದು.
ಯಾವುದೇ ಅಂಗಡಿಗಳಲ್ಲಿ ಮಾಸ್ಕ್‍ಧರಿಸದಿರುವುದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿರುವುದು ಅಥವಾ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಮೊದಲ ಬಾರಿಗೆರೂ.1000, ಎರಡನೇ ಮತ್ತು ಮೂರನೇ ಬಾರಿಗೆ ಕ್ರಮವಾಗಿರೂ.2000 ಮತ್ತುರೂ.3000 ದಂಡವನ್ನು ವಿಧಿಸಿ ಎಚ್ಚರಿಗೆ ನೀಡಲು ಹಾಗೂ ಮೂರಕ್ಕಿಂತ ಹೆಚ್ಚು ಬಾರಿ ಷರತ್ತುಗಳನ್ನು ಉಲ್ಲಂಘಸಿದ್ದಲ್ಲಿ ಅಂಗಡಿಗಳ ಪರವಾನಿಗೆಯನ್ನುರದ್ದು ಪಡಿಸಲು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಹಂತದಲ್ಲಿ ಸೂಕ್ತ ಉಪನಿಯಮಗಳನ್ನು ರಚಿಸಿ ಅದನ್ನು ಅನಿಷ್ಟಾನಗೊಳಿಸಬೇಕು.