Connect with us

DAKSHINA KANNADA

2020ರ ಕಂದಾವರ ಮಸೀದಿ ಬಳಿಕೊಲೆ ಯತ್ನಪ್ರಕರಣ: ಸಿಸಿಬಿ ಪೊಲೀಸರಿಂದ 7 ಮಂದಿ ಆರೋಪಿಗಳ ಬಂಧನ.!

Published

on

ಮಂಗಳೂರು:  ಬಜ್ಪೆ ಹಾಗೂ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೨೦೨೦ ನೇ ನವಂಬರ್ ತಿಂಗಳಲ್ಲಿ ನಡೆದ ೨ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ 7 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಕುರಿತು, ಮಂಗಳೂರಿನಲ್ಲಿ  ಪ್ರತಿಕ್ರಿಯೆ ನೀಡಿದ  ಆಯುಕ್ತರಾದ ಎನ್.ಶಶಿಕುಮಾರ್ 2020ರ ನವೆಂಬರ್ 15ರಂದು ಬಜ್ಪೆ ಕಂದಾವರ ಗ್ರಾಮದ ಕಂದಾವರ ಮಸೀದಿ ಬಳಿ ಪ್ರಕರಣದ ಫಿರ್ಯಾದಿದಾರರಾದ ಅಬ್ದುಲ್ ಅಜೀಜ್ ರವರು ರಾತ್ರಿ 10-30ಕ್ಕೆ ಕಂದಾವರ ಮಸೀದಿ ಬಳಿಯಿಂದ ಹೋಗುತ್ತಿದ್ದಾಗ,

ಬೈಕ್‌ನಲ್ಲಿ ಬಂದು ತಲವಾರಿನಿಂದ ಕಡಿದು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಬ್ಬಾರ್ ಯಾನೆ ಮಾರಿಪಳ್ಳ ಜಬ್ಬಾರ್, ಫರಂಗಿಪೇಟೆಯ ನಝೀರ್ ಅಹಮ್ಮದ್,  ಫಳ್ನೀರ್‌ನ ಬಿಲಾಲ್‌ ಮೊಯ್ದೀನ್‌, ಸುರತ್ಕಲ್‌ ಮುಳಿಹಿತ್ಲು ನಿವಾಸಿ ಇಬ್ರಾಹಿಂ ಶಾಕೀರ್, ಅತ್ತಾವರದ ಮೊಹಮ್ಮದ್ ನಿಹಾಲ್‌, ಪಾಂಡೇಶ್ವರದ ಅಬ್ಬಾಸ್‌ ಅಫ್ವಾನ್ ಮತ್ತು ಮೊಹಮ್ಮದ್ ಅತಿಂ ಇಶಾಂ ಎಂದು ಗುರುತಿಸಲಾಗಿದೆ.

ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳಾದ ನಿಝಾಮುದ್ದೀನ್, ಸಫ್ವಾನ್ ಹುಸೈನ್, ಬಾಶಿತ್ ಎಂಬವರ ಜೊತೆ ಸೇರಿಕೊಂಡು ಈ ಕೃತ್ಯವನ್ನು ನಡೆಸಿದ್ದಾರೆ.

ಇದೇ ಪ್ರಕರಣದಲ್ಲಿ ಗಾಯಾಳುವಾಗಿದ್ದ ಅಬ್ದುಲ್ ಅಜೀಜ್‌ ಚಿಕಿತ್ಸೆಗಾಗಿ ಫಳ್ನೀರ್ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಯುನಿಟಿ ಆಸ್ಪತ್ರೆಯಲ್ಲಿ ಅವರ ಆರೈಕೆ ನೋಡಿಕೊಳ್ಳುತ್ತಿದ್ದ ತಂಗಿ ಮಗ ಮಕ್ದೂಮ್‌ ಆಸ್ಪತ್ರೆಯ ಮುಖ್ಯದ್ವಾರದ ಬಳಿ ಅಬ್ದುಲ್‌ ಅಜೀಜ್‌ ಮಗಳ ಗಂಡ ನೌಶಾದ್ ಎಂಬವರ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಕ್ದೂಮ್‌ ಎಂದು ಭಾವಿಸಿ  ನೌಶಾದ್‌ಗೆ ತಲವಾರಿನಿಂದ ಕಡಿದು ಕೊಲೆಗೈಯಲು  ಬಂಧಿತರು ಯತ್ನಿಸಿದ್ದರು.

ಸದ್ಯ  ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಬಂಧಿಸಲಾಗಿದೆ. ಜೊತೆಗೆ  ವಿದೇಶದಲ್ಲಿದ್ದುಕೊಂಡು ಈ ಕೃತ್ಯ ಮಾಡಿರುವಂತವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

BELTHANGADY

ಭಾರೀ ಮಳೆಗೆ ಬೆಳ್ತಂಗಡಿಯಲ್ಲಿ ಧರೆಗುರುಳಿದ 131 ವಿದ್ಯುತ್ ಕಂಬಗಳು

Published

on

ಬೆಳ್ತಂಗಡಿ: ಕಳೆದ ಒಂದು ವಾರದಿಂದ ವಾತಾವರಣದ ಉಷ್ಣತೆಯು ವಿಪರೀತ ಏರಿಕೆಯಾಗಿತ್ತು. ಆದರೆ ಬಿಸಿಯ ಗಾಳಿಗೆ ತತ್ತರಿಸಿ ಹೋಗಿದ್ದ ಜನರಿಗೆ ಇದೀಗ ವರುಣದೇವ ತಂಪೆರೆದಿದ್ದಾನೆ. ರಾಜ್ಯದ ಹಲವು ಭಾಗಗಳಲ್ಲಿ ಈಗ ಮಳೆಯ ಆರ್ಭಟ ಜೋರಾಗಿದೆ.

ಕರಾವಳಿಯಲ್ಲೂ ಮಳೆಯ ಸಿಂಚನವಾಗಿದ್ದು, ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಕೆಲ ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯ ರಭಸಕ್ಕೆ 131 ವಿದ್ಯುತ್ ಕಂಬಗಳು ಧರೆಗುರುಳಿದೆ.

ರಭಸದ ಗಾಳಿಯೊಂದಿಗೆ ಆರ್ಭಟಿಸಿದ ವರ್ಷದ ಮೊದಲ ಮಳೆಗೆ ಬೆಳ್ತಂಗಡಿಯಲ್ಲಿ ಒಟ್ಟು 131 ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಹೀಗಾಗಿ ತಾಲೂಕಿನೆಲ್ಲೆಡೆ ಕರೆಂಟ್ ಇಲ್ಲದೇ ಜನರು ಪರದಾಡುವಂತೆ ಆಗಿದೆ. ಅಪಾರ ಸಂಖ್ಯೆಯಲ್ಲಿ ಅಡಿಕೆ, ತೆಂಗು, ಬಾಳೆ ಗಿಡಗಳು ತುಂಡಾಗಿ ಅಪಾರ ಪ್ರಮಾಣದ ಕೃಷಿನಷ್ಟ ಉಂಟಾಗಿದೆ.

Continue Reading

DAKSHINA KANNADA

ಭಗತ್ ಸಿಂಗ್ ಆರ್ಮಿ ಮಂಗಳೂರು : ಎಪ್ರಿಲ್ 25 ರಂದು ಉರ್ವದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ; ಆಮಂತ್ರಣ ಪತ್ರಿಕೆ ಬಿಡುಗಡೆ

Published

on

ಮಂಗಳೂರು : ಭಗತ್ ಸಿಂಗ್ ಆರ್ಮಿ ಮಂಗಳೂರು ವತಿಯಿಂದ ಎಪ್ರಿಲ್ 25 ರ ಶುಕ್ರವಾರದಂದು ಶ್ರೀ ದೇವಿ ಮಹಾತ್ಮೆ ಯಕ್ಷಗಾನವನ್ನು ಆಯೋಜಿಸಲಾಗಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಇಂದು(ಮಾ.14) ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ ಅನಾವರಣ ಮಾಡಲಾಗಿದೆ.

ಕಾರ್ಯಕ್ರಮ ವಿವರ :

ಉರ್ವ ಮೈದಾನದಲ್ಲಿ ‘ಶ್ರೀದೇವಿ ಮಹಾತ್ಮೆ’  ಯಕ್ಷಗಾನ ಬಯಲಾಟ ನಡೆಯಲಿದೆ.  ಸಂಜೆ 5.30 ಕ್ಕೆ ಚೌಕಿ ಪೂಜೆ ನಡೆಯಲಿದೆ. ಅನ್ನ ಸಂತರ್ಪಣೆಯನ್ನೂ ಹಮ್ಮಿಕೊಳ್ಳಲಾಗಿದೆ. ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶವಾತಾರ ಯಕ್ಷಗಾನ ಮಂಡಳಿಯಿಂದ ಪ್ರತಿ ವರ್ಷ ಉರ್ವ ಮೈದಾನದಲ್ಲಿ ದೇವಿ ಮಹಾತ್ಮೆ ಯಕ್ಷಗಾನವನ್ನು ಭಗತ್ ಸಿಂಗ್ ಆರ್ಮಿ ಆಯೋಜಿಸಿಕೊಂಡು ಬಂದಿದೆ. ಈ ವರ್ಷದ ಯಕ್ಷಗಾನ ಎಪ್ರಿಲ್ 25 ರಂದು ನಡೆಯಲಿದೆ. ಮಧ್ಯಾಹ್ನ 3  ಗಂಟೆಗೆ ಸರಿಯಾಗಿ ಶ್ರೀ ಕ್ಷೇತ್ರ ಚಾಮುಂಡೇಶ್ವರಿ ಹೊಯ್ಗೆಬೈಲ್‌ನಿಂದ ಭವ್ಯವಾದ ಮೆರವಣಿಗೆ ಹೊರಡಲಿದೆ.

ಇದನ್ನೂ ಓದಿ : ಕಟೀಲು ಕ್ಷೇತ್ರಕ್ಕೆ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಭೇಟಿ

ಭಕ್ತಾದಿಗಳು ತನು ಮನ, ಧನದಿಂದ ಸಹಕರಿಸಿ ದೇವಿಯ ಗಂಧ ಪ್ರಸಾದ ಸ್ವೀಕರಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

Continue Reading

DAKSHINA KANNADA

ತುಳು ಕಲಾವಿದ ವಿವೇಕ್ ಮಾಡೂರು ನಿ*ಧನ

Published

on

ಮಂಗಳೂರು : ತುಳು ನಟ ವಿವೇಕ್ ಮಾಡೂರು ಶುಕ್ರವಾರ ಬೆಳಿಗ್ಗೆ ಮಾಡೂರಿನ ಸ್ವಗೃಹದಲ್ಲಿ ನಿ*ಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು. ಗುರುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಅವರನ್ನು ಇಂದು ಬೆಳಿಗ್ಗೆ ಮನೆ ಮಂದಿ ಎಬ್ಬಿಸಲು ಹೋದಾಗ ಮೃ*ತಪಟ್ಟಿರುವುದು ತಿಳಿದುಬಂದಿದೆ.

ಈ ಹಿಂದೆ ಟೆಲಿಫೋನ್ ಎಸ್ ಟಿಡಿ ಬೂತ್ ನಡೆಸುತ್ತಿದ್ದ ವಿವೇಕ್ ಬೂತ್ ಮುಚ್ಚಿದ ಬಳಿಕ ಅಣ್ಣನ ದಿನಸಿ ಅಂಗಡಿಯಲ್ಲಿ ಪ್ಲಾಸ್ಟಿಕ್ ಮನೆ ಬಳಕೆಯ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ಕಳೆದ ಹಲವು ವರ್ಷಗಳಿಂದ ತುಳು ರಂಗಭೂಮಿಯಲ್ಲಿ ಮಾತ್ರವಲ್ಲದೇ, ತುಳು ಚಿತ್ರರಂಗದಲ್ಲೂ ಅಭಿನಯಿಸಿದ್ದರು.

ಇದನ್ನೂ ಓದಿ : ಮಹತ್ವ ಪಡೆದುಕೊಂಡ ಅಮೆರಿಕ ಉಪಾಧ್ಯಕ್ಷರ ಭಾರತ ಭೇಟಿ?

ತನ್ನ ಕುಬ್ಜ ದೇಹದಿಂದಲೇ ಮನರಂಜಿಸುತ್ತಿದ್ದ, ವೃತ್ತಿಪರ ಹಾಸ್ಯ ಕಲಾವಿದ ವಿವೇಕ್, ಹೆಸರಾಂತ ನಾಟಕ ತಂಡಗಳಲ್ಲಿ ಅಭಿನಯಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಹಲವು, ಸಂಘ, ಸಂಸ್ಥೆಗಳು ಸನ್ಮಾನಿಸಿವೆ.  ಅಕಾಲಿಕವಾಗಿ ಅ*ಗಲಿದ ಕಲಾವಿದನಿಗೆ ತುಳು ರಂಗಭೂಮಿ ಹಾಗೂ ಚಿತ್ರರಂಗ ಕಂಬನಿ ಮಿಡಿದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page