Connect with us

ಬಂಟ್ಸ್ ಹಾಸ್ಟೆಲ್ ಸರ್ಕಲ್ ನಲ್ಲಿ ಅವೈಜ್ಞಾನಿಕ ಕಾಮಗಾರಿ: ಕುರುಡರಂತೆ ವರ್ತಿಸುತ್ತಿರುವ ಪಾಲಿಕೆ

Published

on

ಮಹಾನಗರ ಪಾಲಿಕೆಯ ಬೇಜಾವಾಬ್ದಾರಿ: ಬಂಟ್ಸ್ ಹಾಸ್ಟೆಲ್ ನಲ್ಲಿ ಅವೈಜ್ಞಾನಿಕ ಕಾಮಗಾರಿ ಹಿನ್ನಲೆ ಪ್ರತಿಭಟನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಅಭಿವೃದ್ಧಿಯ ಭರದಲ್ಲಿ ಅವೈಜ್ಞಾನಿಕ ಕಾಮಗಾರಿಗಳನ್ನು ಮಾಡುತ್ತಿದೆ.

ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಬಂಟ್ಸ್ ಹಾಸ್ಟೆಲ್ ಸರ್ಕಲ್ ಬಳಿ ರಸ್ತೆಯ ಇಕ್ಕೆಲಗಳಿಗೆ ಮಾಡುತ್ತಿರುವ ಕಾಂಕ್ರಿಟೀಕರಣ.

ಹೆಚ್ಚಾಗಿ ಪ್ರತೀ ರಸ್ತೆಯ ಇಕ್ಕೆಲಗಳಲ್ಲಿ ಮಹಾನಗರ ಪಾಲಿಕೆ ನೀರು ಪೂರೈಸುವ ಪೈಪ್ ಅಳವಡಿಸಲಾಗಿದೆ.

ಆದ್ರೆ ಇದೀಗ ಪೈಪ್ ಅನ್ನು ಕೊಂಚವೂ ಅತ್ತಿತ್ತ ಸರಿಸದೆ, ಅದರ ಮೇಲೆಯೇ ಕಾಂಕ್ರೀಟ್ ಹಾಕಿ ಮುಚ್ಚಲಾಗುತ್ತಿದೆ.

ಒಂದು ವೇಳೆ ನೀರಿನ ಪೈಪ್ ರಿಪೇರಿಗೆ ಬಂದರೆ, ಮತ್ತೆ ಕಾಂಕ್ರೀಟ್ ಒಡೆದು ಪೈಪ್ ರಿಪೇರಿ ಮಾಡಬೇಕಾಗುತ್ತೆ. ಈ ಸಂದರ್ಭದಲ್ಲಿ ಪೈಪ್ ಒಡೆಯುವ ಸಾಧ್ಯತೆಯು ಹೆಚ್ಚು.

ಇದರಿಂದಾಗಿ ಎರಡೆರಡು ಬಾರಿ ಕಾಮಗಾರಿ ಮಾಡಬೇಕಾದ ಪರಿಸ್ಥಿತಿ ಬರುತ್ತದೆ.

ಮಂಗಳೂರು ಮಹಾನಗರ ಪಾಲಿಕೆಯ ಈ ಅವೈಜ್ಞಾನಿಕ ಕಾಮಗಾರಿಯನ್ನು ಪ್ರಶ್ನಿಸಿ, ಇಂದು (29, ಶನಿವಾರ) ಸಂಜೆ 5 ಗಂಟೆಗೆ ‘ಸಿವಿಕ್ ಗ್ರೂಪ್ ಸದಸ್ಯರಿಂದ’, ಮಹಾನಗರ ಪಾಲಿಕೆಯ ಕಣ್ಣು ತೆರೆಸುವ ನಿಟ್ಟಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಪ್ರೀತಿಸುವಂತೆ ಸಹಪಾಠಿಯಿಂದ ಒತ್ತಾಯ; ಶಾಲಾ ಕಟ್ಟಡದಿಂದ ಜಿ*ಗಿದು ವಿದ್ಯಾರ್ಥಿನಿ ಆ*ತ್ಮಹ*ತ್ಯೆ

Published

on

ಮಂಗಳೂರು/ಬೀದರ್ : ಶಾಲಾ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಬೀದರ್‌ನಲ್ಲಿ ನಡೆದಿದೆ.

16 ವರ್ಷದ ಮದಿಯಾ ನಶೀರ್ ಪಾಷಾ ಆ*ತ್ಮಹ*ತ್ಯೆ ಮಾಡಿಕೊಂಡ ಬಾಲಕಿ. ಹತ್ತನೇ ತರಗತಿಯಲ್ಲಿ ಮದಿಯಾ ವ್ಯಾಸಂಗ ಮಾಡುತ್ತಿದ್ದಳು.  ಲವ್ ಮಾಡುವಂತೆ ಸಹಪಾಠಿ ಒತ್ತಾಯಿಸಿದ್ದಕ್ಕೆ ಬಾಲಕಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : 30 ವರ್ಷಗಳಿಂದ ಕೊರಗ ಸಮುದಾಯದ ವ್ಯಕ್ತಿಯನ್ನು ಜೀತದಾಳಾಗಿಸಿ ದೌರ್ಜನ್ಯ ಆರೋಪ; ಮಹಿಳೆ ಬಂಧನ

ಈ ಬಗ್ಗೆ ಭೆಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Continue Reading

LATEST NEWS

ಐಸಿಸಿ ಟಿ20 ರ‍್ಯಾಂಕಿಂಗ್‌: 10ರಲ್ಲಿ ನಾಲ್ವರು ಟೀಮ್‌ ಇಂಡಿಯಾ ಆಟಗಾರರು

Published

on

ಮುಂಬೈ: ಟಿ20 ವಿಶ್ವಕಪ್‌ ಮುಗಿದ ಬೆನ್ನಲ್ಲೇ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಬ್ಯಾಟರ್‌ಗಳ ನೂತನ ರ‍್ಯಾಂಕಿಂಗ್‌ ಬಿಡುಗಡೆ ಮಾಡಿದೆ. ಟಾಪ್‌ 10 ಆಟಗಾರರ ಪಟ್ಟಿಯಲ್ಲಿ ನಾಲ್ವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. ಅವರಲ್ಲಿಬ್ಬರು ಅಗ್ರಸ್ಥಾನದಲ್ಲಿರುವುದು ವಿಶೇಷ.

ಹೌದು.. ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಝಿಲೆಂಡ್‌ ತಂಡವನ್ನು ಮಣಿಸಿದ್ದ ಭಾರತ ಮೂರನೇ ಸಲ ಟಿ-20 ಕಿರೀಟ ಎತ್ತಿ ಹಿಡಿದಿತ್ತು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಅಭಿಷೇಕ್‌ ಫೈನಲ್‌ನಲ್ಲಿ 19 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಲಯಕ್ಕೆ ಮರಳಿದ್ದರು. ಇದಾಗ್ಯೂ ಐಸಿಸಿ ಟಿ20 ರ‍್ಯಾಂಕಿಂಗ್‌ ನಲ್ಲಿ 875 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಅದೇ ರೀತಿ ಟೂರ್ನಿಯಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಇಶಾನ್‌ ಕಿಶನ್‌ ಎರಡು ಸ್ಥಾನಗಳ ಬಡ್ತಿ ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ಅಗ್ರಸ್ಥಾನದಲ್ಲಿರುವ ಅಭಿಷೇಕ್‌ಗಿಂತಲ ಕೇವಲ ನಾಲ್ಕು ರೇಟಿಂಗ್‌ ಪಾಯಿಂಟ್‌ಗಳ (871) ಹಿನ್ನಡೆಯಲಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ 381ನ ರನ್‌ ಕಲೆಹಾಕುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದ ಪಾಕಿಸ್ತಾನ್‌ ಬ್ಯಾಟರ್‌ ಸಾಹಿಬ್‌ಝಾದ ಫರ್ಹಾನ್‌ 848 ಅಂಕಗಳೊಂದಿಗೆ ಈ ಬಾರಿಯ ಶ್ರೇಯಾಂಕದಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

ಇನ್ನು ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್‌ ಬ್ಯಾಟರ್‌ ಫಿಲ್‌ ಸಾಲ್ಟ್‌ (792 ಅಂಕ) ಕಾಣಿಸಿಕೊಂಡಿದ್ದಾರೆ. 5ನೇ ಸ್ಥಾನದಲ್ಲಿ ಶ್ರೀಲಂಕಾ ತಂಡದ ಓಪನರ್‌ ಪಾತುಮ್‌ ನಿಸ್ಸಂಕಾ (766) ಸ್ಥಾನ ಪಡೆದಿದ್ದಾರೆ. 6ನೇ ಸ್ಥಾನದಲ್ಲಿ ನ್ಯೂಝಿಲೆಂಡ್‌ನ ಟಿಮ್‌ ಸೈಫರ್ಟ್‌ (749) ಇದ್ದು, 7ನೇ ಸ್ಥಾನದಲ್ಲಿ ಟೀಮ್‌ ಇಂಡಿಯಾದ ತಿಲಕ್‌ ವರ್ಮಾ (742) ಕಾಣಿಸಿಕೊಂಡಿದ್ದಾರೆ. ಹಾಗೆಯೇ 8 ಸ್ಥಾನದಲ್ಲಿ ಸೌತ್‌ ಆಫ್ರಿಕಾದ ಡೆವಾಲ್ಡ್‌ ಬ್ರೆವಿಸ್‌ (738) ಇದ್ದರೆ, 9ನೇ ಸ್ಥಾನದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (722) ಕಾಣಿಸಿಕೊಂಡಿದ್ದಾರೆ. ಇನ್ನು ಇಂಗ್ಲೆಂಡ್​ನ ಜೋಸ್ ಬಟ್ಲರ್ (716) 10ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಇದು ನನ್ನ ಕಾರ್ಯಾವಧಿಯ ಕೆಟ್ಟ ಘಳಿಗೆ’: ಹೀಗ್ಯಾಕಂದ್ರು ಗೌತಮ್ ಗಂಭೀರ್!

ಜಿಗಿತ ಕಂಡ ಸಂಜು ಸ್ಯಾಮ್ಸನ್
ಮತ್ತೊಂದೆಡೆ ಫೈನಲ್, ಸೆಮಿಫೈನಲ್ ಸೇರಿದಂತೆ ಕೊನೆಯ ಮೂರು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಕಟ್ಟುವ ಮೂಲಕ ಭಾರತಕ್ಕೆ ವಿಶ್ವಕಪ್ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು ಸ್ಯಾಟ್ಸನ್ 18 ಸ್ಥಾನಗಳ ಜಿಗಿತ ಕಂಡಿದ್ದು, 22ನೇ ಸ್ಥಾನ ಅಲಂಕರಿಸಿದ್ದಾರೆ. ಸಂಜು ಒಟ್ಟು 637 ರೇಟಿಂಗ್ ಅಂಕ ಗಳಿಸಿದ್ದಾರೆ.

Continue Reading

LATEST NEWS

ಕಾಸರಗೋಡು: ಕಾರು-ಖಾಸಗಿ ಬಸ್‌ ಮುಖಾಮುಖಿ ಡಿಕ್ಕಿ; ಕಾರಿನಲ್ಲಿದ್ದ ನಾಲ್ವರಿಗೆ ಗಾಯ, ಓರ್ವ ಗಂಭೀರ

Published

on

ಕಾಸರಗೋಡು: ಕಾರು ಹಾಗೂ ಖಾಸಗಿ ಬಸ್‌ ಪರಸ್ಪರ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಹಾಗೂ ಬಸ್‌ ನಲ್ಲಿದ್ದ ಎಂಟು ಮಂದಿ ಸೇರಿ ಒಟ್ಟು 12 ಮಂದಿ ಗಾಯಗೊಂಡಿರುವ ಘಟನೆ ಕುಂಬಳೆಯ ಶಾಂತಿಪಳ್ಳ ತಿರುವಿನಲ್ಲಿ ನಡೆದಿದೆ. ಈ ಪೈಕಿ ಕಾರಿನಲ್ಲಿದ್ದ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಬದಿಯಡ್ಕ ಕಡೆಗೆ ತೆರಳುತ್ತಿದ್ದ ಕಾರು ಮತ್ತು ಕುಂಬಳೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿದೆ.

ಕಾರಿನಲ್ಲಿದ್ದ ಆಲಂಪಾಡಿ ನಿವಾಸಿಗಳಾದ ಮಾಲಿಕ್, ತಾಜುದ್ದೀನ್, ಕಬೀರ್ ಮತ್ತು ಸಿದಾನ್ ಗಾಯಗೊಂಡಿದ್ದು, ಇವರಲ್ಲಿ ಸಿದಾನ್ ಅವರ ಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಮೂವರು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಸೆಕೆ ತಾಳಲಾರದೆ ತಂಪಾಗಲು ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

ಬಸ್‌ ನಲ್ಲಿದ್ದ ಎಂಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page