Connect with us

LATEST NEWS

ಉಡುಪಿ ಭಾರಿ ಮಳೆಗೆ ಕಾರು ಸ್ಕಿಡ್ : ಚಾಲಕ ಸಾವು..!

Published

on

ಉಡುಪಿ :ನಿಯಂತ್ರಣ ತಪ್ಪಿದ  ಕಾರು ಚರಂಡಿಗೆ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ  ಉಡುಪಿ ಜಿಲ್ಲೆಯ ಕಾಪು ತಾಲೂಕಿನ  ಉಚ್ಚಿಲ – ಮುದರಂಗಡಿ ರಸ್ತೆಯ ಎಲ್ಲೂರು ಪೆಜತ್ತಕಟ್ಟೆ ಬಳಿ ಇಂದು ಮುಂಜಾನೆ ನಡೆದಿದೆ.

ಮೃತರನ್ನು ಕಾಪು‌ ಕೊಪ್ಪಲಂಗಡಿ ನಿವಾಸಿ ರವೀಂದ್ರ ಪೂಜಾರಿ (38)  ಎಂದು ಗುರುತ್ತಿಸಲಾಗಿದ್ದು, ಉದ್ಯಾವರ ಬಲಾಯಿಪಾದೆಯಲ್ಲಿ ಗ್ಯಾರೇಜ್ ನಡೆಸುತ್ತಿರುವ ರವಿಂದ್ರ ನಿನ್ನೆ ಆದಿತ್ಯವಾರ ರಾತ್ರಿ ಎಲ್ಲೂರಿಗೆ ತೆರಳಿದ್ದರು.

ಇಂದು ಮುಂಜಾನೆ ವಾಪಾಸ್ಸಾಗುತ್ತಿರುವ ವೇಳೆ ಅಪಘಾತ ಸಂಭವಿಸರಬೇಕೆಂದು ಸಂಶಯಿಸಲಾಗಿದೆ.

ಭಾರಿ ಮಳೆಯು ಅಪಘಾತಕ್ಕೆ ಕಾರಣವಾಗಿರಬಹುದೆಂಬ ಸಂಶಯ ವ್ಯಕ್ತವಾಗಿದೆ.

ಕಾರು ರಸ್ತೆ ಬದಿಯ ಚರಂಡಿ ಮತ್ತು ಮಣ್ಣಿನ‌ ದಿಬ್ಬಕ್ಕೆ ಢಿಕ್ಕಿ ಹೊಡೆದಿದ್ದು, ರವೀಂದ್ರ ಅವರು ಕಾರಿನಿಂದ ಹೊರಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುಂಜಾನೆ ಪೇಪರ್ ಹಾಕುವ ಏಂಜಟರು ಇದನ್ನು ಗಮನಿಸಿ, ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಬಳಿಕ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

 

ಮೃತರು ತಾಯಿ, ಸಹೋದರರು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

DAKSHINA KANNADA

ಮಂಗಳೂರು: ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಸಹಿತ ಮೂವರು ಅರೆಸ್ಟ್

Published

on

ಮಂಗಳೂರು: ಡ್ರಗ್‌ ಪೆಡ್ಲಿಂಗ್ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಮೂವರನ್ನು ಮಂಗಳೂರಿನ ಉಳ್ಳಾಲ ಪೊಲೀಸರು ಕೋಟೆಕಾರು ಗ್ರಾಮದ ಬಗಂಬಿಲ ಮೈದಾನ ಮತ್ತು ಪೆರ್ಮನ್ನೂರು ಗ್ರಾಮದ ಗಂಡಿ ಎಂಬಲ್ಲಿ ಬಂಧಿಸಿದ್ದಾರೆ. ಮೊಹಮ್ಮದ್ ನಿಗಾರೀಸ್, ಅಬ್ದುಲ್ ಶಕೀಬ್ ಯಾನೆ ಶಾಕಿ ಮತ್ತು ಸಬೀರ್ ಅಹಮ್ಮದ್ ಬಂಧಿತ ಆರೋಪಿಗಳು.

ಆರೋಪಿಗಳಿಂದ 59,300 ರೂ. ಬೆಲೆಬಾಳುವ 1.511 ಕೆಜಿ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 2 ತೂಕ ಮಾಪಕ, 2 ಮೊಬೈಲ್, 1 ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ. ಖಾಸಗಿ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ವಿದ್ಯಾರ್ಥಿ ಆಗಿರುವ ಮಹಾರಾಷ್ಟ್ರದ ಧುಲೆ ನಿವಾಸಿ ಮೊಹಮ್ಮದ್ ನಿಗಾರೀಸ್  ವಿಲಾಸಿ ಜೀವನಕ್ಕಾಗಿ ತನ್ನ ಊರಿನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ.

ಇನ್ನೊಂದು ಪ್ರಕರಣದಲ್ಲಿ ನಾಟೆಕಲ್ ಉರುಮಣೆ ನಿವಾಸಿ ಅಬ್ದುಲ್ ಶಕೀಬ್ ಯಾನೆ ಶಾಕಿ ಮತ್ತು ಪೆರ್ಮನ್ನೂರು ಗಂಡಿ ನಿವಾಸಿ ಸಬೀರ್ ಅಹಮ್ಮದ್‌, ಡ್ರೈವರ್ ಮತ್ತು ಪೈಂಟರ್ ಅಗಿದ್ದವರು. ಶಕೀಬನು ಬಿ.ಸಿ.ರೋಡ್‌ನ ಫ್ಯಾಬೀನ್ ಎಂಬಾತನಿಂದ ಗಾಂಜಾ ಪಡೆದುಕೊಂಡು ಮಾರಾಟ ಮಾಡುತ್ತಿರುವಾಗ ಗಂಡಿ ಪ್ರದೇಶದಲ್ಲಿ  ಬಂಧಿಸಿದ್ದಾರೆ.

 

Continue Reading

DAKSHINA KANNADA

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಹುಭಾಷಾ ನಟಿ ನಯನ ತಾರಾ ದಂಪತಿ ಭೇಟಿ

Published

on

ಸುಬ್ರಹ್ಮಣ್ಯ: ಬಹುಭಾಷಾ ನಟಿ ನಯನ ತಾರಾ ದಂಪತಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಕ್ಷೇತ್ರದಲ್ಲಿ ನಡೆವ ಸರ್ಪ ಸಂಸ್ಕಾರ ಸೇವೆಯಲ್ಲಿ ಭಾಗಿಯಾದರು.

ಪತಿ ವಿಘ್ನೇಶ್‌ ಶಿವನ್ ಜೊತೆ ಆಗಮಿಸಿದ ನಯನ್ ತಾರಾ ದಂಪತಿಗೆ ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಗೌರವ ಸಲ್ಲಿಸಲಾಯಿತು.

ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರ ಉಪಸ್ಥಿತಿಯಲ್ಲಿ ಸಮಿತಿ ಪ್ರಮುಖರು ಸೇರಿ ಗೌರವ ಸಲ್ಲಿಸಿದರು.

 

Continue Reading

BIG BOSS

BBK12: ಟಾಸ್ಕ್‌ನಲ್ಲಿ ಸೋತು ತಂಡವನ್ನು ಸಂಕಷ್ಟದಲ್ಲಿ ಸಿಲುಕಿಸಿದ ಗಿಲ್ಲಿ!?

Published

on

BBK12: ಬಿಗ್‌ ಬಾಸ್‌ ಸೀಸನ್ 12ರಲ್ಲಿ ಗಿಲ್ಲಿ ಬೆಸ್ಟ್ ಎಂಟರ್‌ಟೈನರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಟಾಸ್ಕ್ ವಿಚಾರಕ್ಕೆ ಬಂದಾಗ ಎಲ್ಲೋ ಒಂದು ಕಡೆ ಎಡವಿ ಬೀಳುತ್ತಿರುತ್ತಾರೆ. ಅದು ಈ ವಾರದ ಟಾಸ್ಕ್‌ನಲ್ಲಿಯೂ ರೀಪಿಟ್ ಆಗಿದೆ. ಈ ಬಾರಿ ಗಿಲ್ಲಿ ಟಾಸ್ಕ್‌ನಲ್ಲಿ ಸೋತಿರುವ ಕಾರಣ ಇಡೀ ತಂಡನೇ ಬೆಲೆ ತೆರಬೇಕಿದೆ.

ಹೌದು, ಬಿಗ್ ಬಾಸ್‌ನಲ್ಲಿ ಈ ವಾರ ಮಾಳು ಕ್ಯಾಪ್ಟನ್ ಆಗಿದ್ದು, ಟಾಸ್ಕ್‌ಗಳ ಅಬ್ಬರ ಜೋರಾಗಿದೆ. ಮನೆಯಲ್ಲಿ ನಾಮಿನೇಟ್ ಟೀಮ್ ಹಾಗೂ ಸೇಫ್‌ ಟೀಮ್ ಎಂಬ ಎರಡು ಗುಂಪುಗಳಾಗಿದ್ದು, ಟಾಸ್ಕ್‌ನಲ್ಲಿ ಪೈಪೋಟಿ ನೀಡುತ್ತಿದ್ದಾರೆ.

ಆದರೆ ಸೇಫ್ ಟೀಮ್‌ ಸೋತು ಹೋಗಿದೆ. ಇದಕ್ಕೆ ಕಾರಣ ಗಿಲ್ಲಿ ಮಾಡಿಕೊಂಡಿರುವ ಎಡವಟ್ಟು. ಈ ಬಗ್ಗೆ ಗಿಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: BBK12: ‘ನಾಮಿನೇಟೆಡ್’ ತಂಡಕ್ಕೆ ಹೊಸ ಚಾಲೆಂಜ್ ನೀಡಿದ ಬಿಗ್ ಬಾಸ್; ರಾಶಿಕಾ ವಿರುದ್ದ ತಿರುಗಿಬಿದ್ದ ರಕ್ಷಿತಾ!

ಮೊದಲು ತಂಡದ ಪರವಾಗಿ ನಾನೇ ಆಡೋಕೆ ಹೊಗ್ತೀನಿ ಅಂತ ಮುಂದೆ ಹೋಗಿದ್ದಾರೆ. ಆದರೆ ಆಟದ ಮಧ್ಯದಲ್ಲಿ ಎಡವಟ್ಟು ಮಾಡಿಕೊಂಡು ಸೋತು ಹೋಗಿದ್ದಾರೆ. ಈ ಬಗ್ಗೆ ಗಿಲ್ಲಿ ‘ನಾನು ಹೋದ ಟೀಮ್ ಸೋಲುತ್ತೆ ಅಂತ ಎಲ್ಲರೂ ಹೇಳ್ತಿದ್ರು, ನನಗೂ ಈಗ ನಿಜ ಅನಿಸ್ತಿದೆ. ಎಷ್ಟು ಸ್ಟಾಂಗ್ ಇದ್ರೂ ಸೋಲುತ್ತಿದ್ದೇವೆ ಅಂದ್ರೆ ನನ್ನಲ್ಲೇ ಏನೋ ಸಮಸ್ಯೆ ಇರಬೇಕೆಂದು’ ತಂಡದ ಜೊತೆ ತಮಾಷೆಯಿಂದ ಮಾತನಾಡಿದ್ದಾರೆ. ಇನ್ನೊಂದು ಕಡೆ ಗಿಲ್ಲಿಗೆ ನಾಮಿನೇಟ್ ಆಗುವ ಆತಂಕ ಎದುರಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page