Connect with us

LATEST NEWS

ಬಸ್ ಗೆ ಕಾರು ಢಿಕ್ಕಿ- ಪ್ರೇಮಿಗಳು ಡೆತ್..!!

Published

on

ರಾಮನಗರ: ಮಿನಿ ಬಸ್ ಗೆ ಕಾರು ಒಂದು ಢಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಕನಕಪುರ ತಾಲೂಕಿನ ಕೆಬ್ಬಹಳ್ಳಿ ಗ್ರಾಮದಲ್ಲಿ ನಡೆದಿದೆ.


ಕೆಬ್ಬಹಳ್ಳಿ ಗ್ರಾಮದ ದೀಪಕ್ (25) ಮತ್ತು ಶೈಲ(22) ಮೃತ ದುರ್ದೈವಿಗಳು. ದೀಪಕ್ ಕನಕಪುರದಿಂದ ಸ್ವಗ್ರಾಮ ಕೆಬ್ಬಹಳ್ಳಿಗೆ ಅತೀವೇಗವಾಗಿ ಕಾರು ಚಲಾಯಿಸುತ್ತಿದ್ದು, ಮುಂದಿದ್ದ ಮಿನಿ ಬಸ್ ಒಂದನ್ನು ಓವರ್ ಟೇಕ್ ಮಅಡಲು ಹೋಗಿ ಬಸ್ ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.

ಕಾರಿನಲ್ಲಿದ್ದ ಯುವತಿ ಶೈಲ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೀಪಕ್ ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ದೀಪಕ್ ಕೂಡ ಮೃತಪಟ್ಟಿದದಾರೆ. ಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LATEST NEWS

ಉತ್ತರಪ್ರದೇಶದಲ್ಲಿ ಎರಡು ರೈಲುಗಳ  ಹಳಿ ತಪ್ಪಿಸುವ ಯತ್ನ

Published

on

ಮಂಗಳೂರು/ಹರ್ದೋಗ್ : ಎರಡು ರೈಲುಗಳ  ಹಳಿತಪ್ಪಿಸುವ ಯತ್ನ ಉತ್ತರ ಪ್ರದೇಶದ ಹರ್ದೋಮ್ ಜಿಲ್ಲೆಯಲ್ಲಿ ನಡೆದಿದೆ. ಲೋಕೋ ಪೈಲಟ್‌ಗಳ ಸಮಯಪ್ರಜ್ಞೆಯಿಂದಾಗಿ ಹಳಿ ತಪ್ಪಿಸುವ ಯತ್ನ ವಿಫಲಗೊಳಿಸಲಾಗಿದೆ ಎಂದು ವರದಿಯಾಗಿದೆ.

ಸೋಮವಾರ(ಮೇ 19) ಸಂಜೆ, ದಲೇಲ್‌ನಗರ ಮತ್ತು ಉಮರ್ತಾಲಿ ನಿಲ್ದಾಣಗಳ ನಡುವಿನ ಕಿ.ಮೀ ಮಾರ್ಕರ್ 1129/14 ಬಳಿ ದು*ಷ್ಕರ್ಮಿಗಳು ಕೃ*ತ್ಯ ಎಸಗಿದ್ದಾರೆ. ಮರದ ದಿಮ್ಮಿಗಳನ್ನು ಅರ್ಥಿಂಗ್ ವೈರ್ ಬಳಸಿ ಹಳಿಗೆ ಕಿಡಿಗೇಡಿಗಳು ಕಟ್ಟಿದ್ದರು ಎಂದು ತಿಳಿದುಬಂದಿದೆ.

ಲಖನೌ ಕಡೆಗೆ ಹೋಗುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ (20504) ನ ಲೋಕೋ ಪೈಲಟ್ ಅಡಚಣೆಯನ್ನು ಗಮನಿಸಿ ತುರ್ತು ಬ್ರೇಕ್ ಹಾಕಿದರು. ಮರದ ದಿಮ್ಮಿ ತೆರವು ಮಾಡಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ : ಬೆಳ್ತಂಗಡಿಯ ಆಕಾಂಕ್ಷ ನಿಗೂಢ ಸಾ*ವು ಪ್ರಕರಣ; ಸೂಕ್ತ ತನಿಖೆಗೆ ಪಂಜಾಬ್‌ ಸರ್ಕಾರಕ್ಕೆ ದಿನೇಶ್‌ ಗುಂಡೂರಾವ್‌ ಒತ್ತಾಯ

ರಾಜಧಾನಿ ಎಕ್ಸ್‌ಪ್ರೆಸ್ ಬಳಿಕ ಕಠೋಡಮ್ ಎಕ್ಸ್‌ಪ್ರೆಸ್ (15044) ನ  ಹಳಿತಪ್ಪಿಸಲು ಎರಡನೇ ಪ್ರಯತ್ನ ಮಾಡಲಾಗಿದೆ. ಲೋಕೊ ಪೈಲಟ್‌ ಸಮಯಪ್ರಜ್ಞೆಯಿಂದ ದುರಂ*ತ ತಪ್ಪಿದೆ.  ರೈಲ್ವೆ ಪೊಲೀಸ್, ರೈಲ್ವೆ ರಕ್ಷಣಾ ಪಡೆ ಮತ್ತು ಸ್ಥಳೀಯ ಪೊಲೀಸರ ತಂಡಗಳು  ದು*ಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದು, ತನಿಖೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

ಉಳ್ಳಾಲ: ತಾನು ಕಲಿತ ಶಾಲೆಯಲ್ಲೇ ನೇಣುಹಾಕಿಕೊಂಡು ಯುವಕ ಆತ್ಮಹ*ತ್ಯೆ

Published

on

ಉಳ್ಳಾಲ: ಯುವಕನೋರ್ವ ತಾನು ಕಲಿತ ಶಾಲೆಯಲ್ಲೇ ನೇಣು ಬಿಗಿದು ಆತ್ಮಹ*ತ್ಯೆಗೆ ಶರಣಾದ ಘಟನೆ ಕುರ್ನಾಡು ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೇ 19ರಂದು ನಡೆದಿದೆ.

ಕುರ್ನಾಡು ಹೂವಿನಕೊಪ್ಪಲ ನಿವಾಸಿ ಸುಧೀರ್ (32) ಆತ್ಮಹತ್ಯೆ ಮಾಡಿಕೊಂಡ ಯುವಕ.

ವೃತ್ತಿಯಲ್ಲಿ ಪೇಂಟರ್‌ ಆಗಿದ್ದ ಸುಧೀರ್, ನಸುಕಿನ ಜಾವ ಬೈಕ್‌ನಲ್ಲಿ ಹಾಲು ತರಲು ಮನೆಯಿಂದ ತೆರಳಿದ್ದರು. ತಡವಾದರೂ ಮಗ ಬಾರದ ಕಾರಣ ಅವರ ತಾಯಿ ಸುಧೀರ್ ಅವರನ್ನು ಹುಡುಕಿಕೊಂಡು ಹೋದಾಗ ಮನೆಯ ಸಮೀಪದ ಶಾಲೆಯ ಹೊರಗಡೆ ಬೈಕ್ ಕೀ ಸಮೇತ ಪತ್ತೆಯಾಗಿತ್ತು.

ಬಳಿಕ ಶಾಲೆಯೊಳಗೆ ಗಮನಿಸುವಾಗ ಸುಧೀರ್ ಅವರು ಶಾಲೆಯ ಮಹಡಿಗೆ ನೇಣು ಹಾಕಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹ*ತ್ಯೆ

ಅವಿವಾಹಿತರಾಗಿದ್ದ ಸುಧೀರ್ ಅವರ ಸಹೋದರಿಯ ಪತಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ತನ್ನ ಕಿಡ್ನಿ ದಾನ ಮಾಡುವಂತೆ ಹಾಗೂ ಮೇ 29ರಂದು ನಿಗದಿಯಾಗಿರುವ ಸಹೋದರನ ವಿವಾಹವನ್ನು ನಿಲ್ಲಿಸದಂತೆ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಘಟನೆ ಸಂಬಂಧ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Continue Reading

DAKSHINA KANNADA

ಬೆಂಗಳೂರಿನಲ್ಲಿ ಮಳೆಯ ಆರ್ಭಟ; ಮಂಗಳೂರು ನಿವಾಸಿ ಸಹಿತ ಇಬ್ಬರ ಸಾವು

Published

on

ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ನಿನ್ನೆಯ ದಿನ (ಮೇ.19) ಗೋಡೆ ಕುಸಿದು ಓರ್ವ ಮಹಿಳೆ ಮೃತಪಟ್ಟಿದ್ದಳು. ಇದೀಗ ಭಾರೀ ಮಳೆಗೆ ಮತ್ತಿಬ್ಬರು ಬಲಿಯಾದ ಘಟನೆ ಸಿಲಿಕಾಸ್ ಸಿಟಿಯ ಬಿಟಿಎಂ ಲೇಔಟ್‌ನ ಎರಡನೇ ಹಂತದ ಎನ್.ಎಸ್ ಪಾಳ್ಯದಲ್ಲಿ ನಡೆದಿದೆ.

ಮನಮೋಹನ್ ಕಾಮತ್ (63), ದಿನೇಶ್ (12) ಮೃತಪಟ್ಟವರು ಎಂದು ತಿಳಿದು ಬಂದಿದೆ. ಮಂಗಳೂರು ಮೂಲದ ಮನಮೋಹನ್ ಕಾಮತ್ ಹಾಗೂ ನೇಪಾಳ ಮೂಲದ ಭರತ್ ಅವರು ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಭಾರೀ ಮಳೆಗೆ ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ನಲ್ಲಿ ನೀರು ತುಂಬಿತ್ತು. ನಿನ್ನೆ ಸಂಜೆ 6.30ಕ್ಕೆ ಇಬ್ಬರು ಮೋಟಾರ್ ಮೂಲಕ ಮಳೆ ನೀರು ತೆರವು ಮಾಡಲು ಹೋಗಿದ್ದರು.

ಇದನ್ನೂ ಓದಿ: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಮೇಲೆ ಜೈಲಲ್ಲೇ ಹಲ್ಲೆ

ಮೋಟಾರ್ ಮೂಲಕ ಮಳೆ ನೀರು ತೆರವು ಮಾಡುವಾಗ ಎಲೆಕ್ಟ್ರಿಕ್ ಶಾಕ್ ಹೊಡೆದು ಮನಮೋಹನ್ ಕಾಮತ್ ಮತ್ತು ದಿನೇಶ್ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಮೈಕೋ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಾರ್ಟ್‌ಮೆಂಟ್‌ ನಲ್ಲಿ ಪವರ್ ಕಟ್ ಮಾಡಲಾಗಿದ್ದು, ಬ್ಯಾರಿಕೇಡ್ ಕೂಡ ಹಾಕಲಾಗಿದೆ. ಇಬ್ಬರ ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page