ಮಂಗಳೂರು : ಕೆಲವೊಂದು ಸಾವುಗಳು ನಮ್ಮನ್ನು ಮೌನವಾಗಿಸುತ್ತವೆ. ವ್ಯಕ್ತಿ ಅಳಿದರೂ ಆತನ ನೆನಪುಗಳು ಸದಾ ಹಸಿರಾಗುತ್ತದೆ. ಆತನ ಸಾಧನೆಗಳು ಎಂದಿಗೂ ಮರೆಯದಂತೆ ಇರುತ್ತದೆ. ಇದೀಗ ಅಂತಹದ್ದೇ ಸಾಧಕನೊಬ್ಬ ನಮ್ಮನ್ನಗಲಿದ್ದಾರೆ. ಮಂಗಳೂರಿನ ಬಹುಮುಖ ಪ್ರತಿಭೆ ಕದ್ರಿ ನವನೀತ ಶೆಟ್ಟಿ ಮೃತರ ಕುರಿತು ಬರೆದ ಲೇಖನವು ಮನಮುಟ್ಟುವಂತಿದೆ.

ಹಿರಿಯ ನಾಟಕ ನಿರ್ದೇಶಕ, ಒಂದು ಕಾಲದ ಪ್ರಸಿದ್ದ ಸ್ತ್ರೀ ವೇಷ ಧಾರಿ ರಾಘವ ಅತ್ತಾವರ ವಿಧಿವಶ ರಾಗಿ 5 ದಿನ ಕಳೆಯಿತು…ವೃತ್ತಿ ಯಲ್ಲಿ ನುರಿತ ಮೋಟಾರ್ ಎಲೆಕ್ಟ್ರಿಶನ್. ಪ್ರವೃತ್ತಿ..ರಂಗ ಭೂಮಿ…ಸುಮಾರು ನಾಲ್ಕು ದಶಕಗಳ ಕಾಲ ನಾಟಕ ಕ್ಷೇತ್ರ ದಲ್ಲಿ ಮಂಗಳೂರು ಹಾಗೂ ಗ್ರಾಮಾಂತರ ಪ್ರದೇಶ ಗಳಲ್ಲಿ ನೂರಾರು ನಾಟಕ ಗಳನ್ನು ನಿರ್ದೇಶಿಸಿದವರು. ಧನ ಅಪೇಕ್ಷೆ ಇಲ್ಲದೆ, ತನ್ನ ಸ್ಕೂಟರ್ ನಲ್ಲಿ ಪಯಣಿಸಿ, ತಿಂಗಳು ಗಟ್ಟಲೆ ರಂಗ ಅಭ್ಯಾಸ ಮಾಡಿಸಿ ನಾಟಕ ದ ಯಶಸ್ವಿ ಪ್ರದರ್ಶನ ನೋಡಿ ಸಂಭ್ರಮ ಪಡುತಿದ್ದ ಕಲಾರಾಧಕ.
ಹಲವಾರು ಮಹಿಳಾ ಮಂಡಳಿ ಗಳು, ಯುವಕ ಮಂಡಳಿ ಗಳ ಗದ್ದೆ ಯ ಪರದೆ ನಾಟಕ ಗಳಿಗೆ ಜೀವ ತುಂಬಿ ಹುರಿದುಂಬಿಸಿ ನೂರಾರು ಕಲಾವಿದರನ್ನು ಸೃಷ್ಟಿ ಸಿ ಬೆಳೆಸಿದ ರಂಗ ಸಾಧಕ…ತಾರುಣ್ಯ ದಲ್ಲಿ ಸ್ತ್ರೀ ವೇಷ ಧಾರಿ ಯಾಗಿ ಮರ್ಲೆದಿ, ಮಾಜಂದಿ ಬರವು, ಗಂಗಾರಾಮ್, ಬಯ್ಯ ಮಲ್ಲಿಗೆ, ಸರಸ್ವತಿ, ಮುತ್ತು ಮಾನಿಕ ಮೊದಲಾದ ನಾಟಕ ಗಳಲ್ಲಿ ಮನೋಜ್ಞ ಅಭಿನಯ ನೀಡುತಿದ್ದ ಅಗ್ರ ಪಂಕ್ತಿ ಯ ಕಲಾವಿದ….ಶೋಭಾ ಯಾತ್ರೆ ಗಳ, ಮಂಗಳಾದೇವಿ ರಥೋತ್ಸವ ದ ಟ್ಯಾಬ್ಲೋ ಗಳಲ್ಲಿ ಹಲವು ವರ್ಷ ಶ್ರದ್ದೆ, ಭಕ್ತಿ ಯಿಂದ ಪಾತ್ರ ನಿರ್ವಹಿಸಿದ್ದ ನಿಷ್ಠಾವಂತ ಕಲೋಪಾಸಕ…ರಾಘವ ಅತ್ತಾವರ ಅವರ ನಿರ್ದೇಶನ ದಲ್ಲಿ ನಾನು ಹಲವಾರು ಸಾಮಾಜಿಕ, ಚಾರಿತ್ರಿಕ, ಜಾನಪದ, ಪೌರಾಣಿಕ ನಾಟಕ ಗಳಲ್ಲಿ ಅಭಿನಯ ಮಾಡಿದ್ದೇನೆ.
ನಮ್ಮ ಕದ್ರಿ ಕಂಬಳ ಮಿತ್ರ ವೃಂದ, ಸೌರಭ ಕಲಾವಿದರು ಕದ್ರಿ, ಬಲ್ಮಠ ಟ್ರೈನಿಂಗ್ ಶಾಲೆ ಯ ಹಲವಾರು ನಾಟಕ ಗಳಲ್ಲಿ ಸುಮಾರು ಎರಡು ದಶಕ ಗಳ ಕಾಲ ಅವರು ಹಲವಾರು ನಾಟಕ ಗಳನ್ನು ನಿರ್ದೇಶಿ ಸಿದ್ದಾರೆ. ಚಿತ್ರ ನಿರ್ದೇಶಕರಾದ ಸಾಯಿ ಕೃಷ್ಣ, ಆರ್. ಎಸ್. ಸುರೇಶ, ಚಿತ್ರ ನಟರಾದ ಸುಂದರ ಹೆಗ್ಡೆ, ಸುಧೀರ್ ಬಲ್ಮಠ, ನಿರೂಪಕಿ ಸೌಜನ್ಯಹೆಗ್ಡೆ ಮೊದಲಾದ ಪ್ರತಿಭೆಗಳ ಆರಂಭದ ಗುರು ಅತ್ತಾವರ ಮಾಸ್ಟ್ರು.ನಾನು ರಚಿಸಿದ ಮೊದಲ ಹತ್ತು ನಾಟಕ ಗಳನ್ನು ಅತ್ತಾವರ ಅವರು ನಿರ್ದೇಶನ ಮಾಡಿದ್ದಾರೆ… ಮೂರು ದಶಕ ಗಳ ಹಿಂದೆ ರಚಿಸಿ, ಇಂದೂ ಪ್ರದರ್ಶನ ಕಾಣುತ್ತಿರುವ “ಕಾರ್ನಿಕದ ಶಿವ ಮಂತ್ರ ” ನಾಟಕ ದ ಮೊದಲ ಗುರು ಇವರೇ. ಸಾಮಾಜಿಕ ನಾಟಕ ಗಳಲ್ಲಿ ಅಭಿನಯ ಮಾಡುವಾಗ ಇಣುಕು ತಿದ್ದ ಯಕ್ಷಗಾನ ದ ಛಾಯೆ ಯನ್ನು ಬೈದು, ತಿದ್ದಿ ತೀಡಿ,ನೇರ್ಪು ಗೊಳಿಸಿದ್ದ ದಿನಗಳನ್ನು ಮರೆಯಲಾಗುವುದಿಲ್ಲ.
ಅವರ ನಿರ್ದೇಶನ ದ ನಾಟಕ ದ ಅಂಕ ದ ಪರದೆ ತೆರೆಯುವ ಹಾಗೂ ಹಾಕುವ ಕಾಯಕ ವನ್ನು ಸ್ವತಃ ಅವರೇ ಮಾಡುತಿದ್ದರು. ಚೌಕಿ ಪೂಜೆ ಮಾಡಿ, ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಮಾಡಿ ಅಂಕದ ಪರದೆ ಸರಿಸಿ ಬಿಡುತ್ತಿದ್ದ ರಾಘವ ಅತ್ತಾವರ ನನಗೆ ಇಂದೂ ನನ್ನ ನಾಟಕ ಪ್ರದರ್ಶನ ಕಾಲ ದಲ್ಲಿ ನೆನಪಾಗುತ್ತಾರೆ. ಸ್ವಾಭಿಮಾನಿ, ಮಿತ ಭಾಷಿ, ಛಲವಾದಿ, ಅಭ್ಯಾಸ ಕಾಲದಲ್ಲಿ ಶೀಘ್ರ ಕೋಪಿ… ರಂಗ ವೇದಿಕೆ ಯನ್ನು ಆರಾಧನಾ ಮಂದಿರದಂತೆ ಕಾಣುತಿದ್ದವರು… ನಾಟಕದ ಅಂಕದ ಪರದೆ ಯನ್ನು ನಾಟಕ ಮುಗಿದಾಗ ಅವರೇ ಎಳೆಯು ತಿದ್ದದ್ದು ಸ್ವಾಭಿಮಾನಿ ನಿರ್ದೇಶಕನಾಗಿ…ಅವರ ನಿಧನ ವಾರ್ತೆ ಯನ್ನು ಇಂದು ಅವರ ಮಮತೆಯ ಪುತ್ರಿ ತಿಳಿಸಿದಾಗ ನನಗೆ ಅನಿಸಿದ್ದು…”ಬದುಕಿನ ಅಂಕದ ಪರದೆ ಯನ್ನೂ ಅವರೇ ಎಳೆದು ಬಿಟ್ಟ ರಲ್ಲಾ… ಜೀವನ ನಾಟಕ ಸಹಜ ಮುಕ್ತಾಯ ಕಾಣುವ ಮುನ್ನ.!!”
ಬರಹ : ಕದ್ರಿ ನವನೀತ ಶೆಟ್ಟಿ