Connect with us

LATEST NEWS

ಹಣೆಗೆ ಸಿಂದೂರ ಇಡುವಾಗ ವರನ ಯಡವಟ್ಟು; ಮದುವೆಯನ್ನೇ ರದ್ದು ಮಾಡಿದ ವಧು

Published

on

ಮಂಗಳೂರು/ಪಾಟ್ನಾ: ಮದುವೆ ಅಂದರೆ ಅಲ್ಲಿ ಸಂಭ್ರಮವಿರುತ್ತದೆ. ಹೆಣ್ಣಿನ ಪೋಷಕರು ತನ್ನ ಮಗಲ ಮದುವೆ ಯಾವುದೇ ತೊಂದರೆ ಇಲ್ಲದೆ ಆಗಲಿಯೆಂದು, ಯಾವ ಅಡೆ ತಡೆ ಇರದ ಹಾಗೆ ನೆರವೇರಿಸುತ್ತಾರೆ. ಆದರೆ ಇಲ್ಲೊಂದು ಮದುವೆ ಕ್ಷುಲಕ ಕಾರಣಕ್ಕೆ ಮುರಿದು ಬಿದ್ದ ಘಟನೆ ನಡೆದಿದೆ.


ಹೌದು, ಬಿಹಾರದ ಕೈಮೂರ್‌ನಲ್ಲಿ ಈ ಘಟನೆ ನಡೆದಿದ್ದು, ವಿವಾಹದ ಸಂಪ್ರದಾಯಗಳು ನಡೆಯುತ್ತಿದ್ದಾಗಲೇ ವಧು ಕ್ಷುಲಕ ಕಾರಣಕ್ಕೆ ಮದುವೆ ಬೇಡವೆಂದು ಮಂಟಪದಿಂದ ಕೆಳಗಿಳಿದಿದ್ದಾಳೆ. ಇದರಿಂದ ವರ ಮತ್ತು ಆತನ ಕುಟುಂಬ ಆಘಾತಕ್ಕೆ ಒಳಗಾಗಿದ್ದಾರೆ.

ಎರಡು ಕಡೆಯ ದಿಬ್ಬಣ ಬಹಳ ಅದ್ದೂರಿಯಿಂದಲೇ ಮಂಟಪಕ್ಕೆ ಬಂದಿತ್ತು. ಕುಟುಂಬಸ್ಥರೆಲ್ಲಾ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದರು. ಸಂಪ್ರದಾಯಗಳು ಶುರುವಾಗಿದ್ದವು. ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದರು.

ವಿವಾಹದ ಆಚರಣೆಯಲ್ಲಿರುವ ಸಂಪ್ರದಾಯವನ್ನು ಎರಡು ಕುಟುಂಬದ ಹಿರಿಯರು ಜತೆಯಾಗಿ ಮಾಡುತ್ತಿದ್ದರು. ಆದರೆ ವಧುವಿಗೆ ‘ಸಿಂದೂರ್ ದಾನ’ (ವಧುವಿನ ಹಣೆಯ ಮೇಲೆ ಸಿಂಧೂರ ಇಡುವುದು) ಸಮಯದಲ್ಲಿ ವಧು ಇದ್ದಕ್ಕಿದ್ದಂತೆ ಕೋಪಗೊಂಡು ತನಗೆ ಮದುವೆ ಬೇಡವೆಂದು ಹೇಳಿದ್ದಾಳೆ.

READ IN ENGLISH : https://www.nammakudlaenglish.com/bride-calls-off-wedding-over-grooms-slip-during-sindoor-ceremony/

ಇದನ್ನೂ ಓದಿ: ಮಕ್ಕಳಿದ್ರೂ ಪತ್ನಿಗೆ ಆಗಾಗ ಮನೆ ಬಿಟ್ಟು ಹೋಗುವ ಚಟ; ನೇ*ಣಿಗೆ ಶರಣಾದ ಪತಿ

ಅಷ್ಟಕ್ಕೂ, ವರ ಸಿಂಧೂರ ಹಣೆಗೆ ಇಡುವ ವೇಳೆ ಆತನ ಕೈ ನಡುಗಲು ಶುರುವಾಗಿದೆ. ಇದನ್ನು ನೋಡಿದ ವಧು ನನಗೆ ಈ ಮದುವೆ ಬೇಡವೆಂದು ಕೋಪದಿಂದಲೇ ಹೇಳಿದ್ದಾಳೆ. ಆ ಕೂಡಲೇ ಮಂಟಪದಿಂದ ಕೆಳಗೆ ಇಳಿದಿದ್ದಾಳೆ. ಈ ವೇಳೆ ಮನೆಯವರು ಎಲ್ಲರೂ ಸೇರಿ ವಧುವಿನ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ವಧು ಈತ (ವರ) ಹುಚ್ಚನೆಂದು ಆರೋಪ ಮಾಡಿದ್ದಾಳೆ.

ಈ ಸಂಬಂಧ ಎರಡೂ ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ. ಪರಿಣಾಮ ಪೊಲೀಸರು ಸ್ಥಳಕ್ಕೆ ಧಾವಿಸಿ, ಎರಡೂ ಕಡೆಯವರನ್ನು ಠಾಣೆಗೆ ಕರೆದು, ವಿಷಯವನ್ನು ಮಾತಿನ ಮೂಲಕ ಪರಿಹಾರ ಮಾಡಿಕೊಳ್ಳಲು ಹೇಳಿದ್ದಾರೆ. ಆದರೆ ವಧು ಏನೇ ಆದರೂ ತನ್ನ ನಿರ್ಧಾರದಿಂದ ಹಿಂದೆ ಸರಿಲಿಲ್ಲ. ಪರಿಣಾಮ ಮದುವೆ ಮುರಿದುಬಿದ್ದಿದೆ.

Watch video

LATEST NEWS

ಯೆಮನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್

Published

on

ಮಂಗಳೂರು/ನವದೆಹಲಿ: ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ 37 ವರ್ಷದ ನರ್ಸ್ ನಿಮಿಷಾ ಪ್ರಿಯಾಗೆ ಸಹಾಯ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.


ನಿಮಿಷಾ ಪ್ರಿಯಾ ಮರಣದಂಡನೆಗೂ ಕೇವಲ 2 ದಿನಗಳ ಮೊದಲು ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ವಿಚಾರಣೆ ನಡೆಸಲಿದೆ. ಜುಲೈ 16ರಂದು ಯೆಮೆನ್​ನಲ್ಲಿ ನಿಮಿಷಾ ಗಲ್ಲಿಗೇರಲಿದ್ದಾರೆ. ಹೀಗಾಗಿ, ರಾಜತಾಂತ್ರಿಕ ಮಾರ್ಗಗಳನ್ನು ಆದಷ್ಟು ಬೇಗ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠವು ಜುಲೈ 14ರಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ಪ್ರಕರಣವನ್ನು ಜುಲೈ 14ರಂದು ವಿಚಾರಣೆಗೆ ನಿಗದಿಪಡಿಸಿದೆ. ನಿಮಿಷಾ ಅವರಿಗೆ 2017ರಲ್ಲಿ ತಮ್ಮ ಬ್ಯುಸಿನೆಸ್ ಪಾರ್ಟನರ್ ಅನ್ನು ಕೊಂದ ಆರೋಪದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಕೇರಳದ ಪಾಲಕ್ಕಾಡ್ ಜಿಲ್ಲೆಯ ನರ್ಸ್ ಆಗಿರುವ ನಿಮಿಷಾ ಪ್ರಿಯಾ (38) ಅವರು 2017ರಲ್ಲಿ ಯೆಮೆನ್​ಗೆ ಉದ್ಯೋಗಕ್ಕೆ ತೆರಳಿದ್ದರು. ಅವರಿಗೆ 2020ರಲ್ಲಿ ಮರಣದಂಡನೆ ವಿಧಿಸಲಾಯಿತು. ಅವರ ಅಂತಿಮ ಮೇಲ್ಮನವಿಯನ್ನು 2023ರಲ್ಲಿ ತಿರಸ್ಕರಿಸಲಾಗಿತ್ತು.

ಇದನ್ನೂ ಓದಿ: ಕೇರಳದ ನರ್ಸ್ ಗೆ ಯೆಮೆನ್ ನಲ್ಲಿ ಮರಣದಂಡನೆ; ಏನಿದು ಪ್ರಕರಣ ?

ನಿಮಿಷಾ ಪ್ರಿಯಾ ಪ್ರಸ್ತುತ ಯೆಮೆನ್‌ನ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿದ್ದಾರೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ನಿಮಿಷಾ ಪ್ರಿಯಾ ಅವರಿಗೆ ಸಹಾಯ ಮಾಡಲು ಕಾನೂನು ಬೆಂಬಲ ನೀಡುವ “ಸೇವ್ ನಿಮಿಷಾ ಪ್ರಿಯಾ – ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್” ಎಂಬ ಸಂಸ್ಥೆ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. ನಿಮಿಷಾ ಪ್ರಿಯಾಳ ಮರಣದಂಡನೆಗೆ ತಾತ್ಕಾಲಿಕ ದಿನಾಂಕವನ್ನು ಯೆಮೆನ್ ಆಡಳಿತವು ಜುಲೈ 16 ರಂದು ನಿಗದಿಪಡಿಸಿದೆ ಎಂದು ಹೇಳುವ ಮಾಧ್ಯಮ ವರದಿಯನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.

Continue Reading

LATEST NEWS

IND vs ENG: ಮೂರನೇ ಟೆಸ್ಟ್ ಪಂದ್ಯಕ್ಕೆ ಪ್ಲೆಯಿಂಗ್ 11 ಪ್ರಕಟ

Published

on

ಮಂಗಳೂರು/ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಲಂಡನ್​ನ ಲಾರ್ಡ್ಸ್​ ಮೈದಾನದಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಎರಡು ತಂಡಗಳು ಈಗಾಗಲೇ ಪ್ಲೇಯಿಂಗ್​ ಇಲೆವೆನ್ ಘೋಷಿಸಿದೆ.


ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಎರಡನೇ ಪಂದ್ಯದಲ್ಲಿ ವಿಶ್ರಾಂತಿಯಲ್ಲಿದ್ದ ವೇಗಿ ಬುಮ್ರಾ ತಂಡಕ್ಕೆ ವಾಪಸ್ಸಾಗಿದ್ದು, ಪ್ರಸಿದ್ದ್ ಕೃಷ್ಣ ಅವರು ಜಾಗ ಬಿಟ್ಟಿದ್ದಾರೆ. ಕನ್ನಡಿಗ ಕರುಣ್ ನಾಯರ್‌ಗೆ ಈ ಬಾರಿಯೂ ಅವಕಾಶ ದೊರೆತಿದ್ದು, ಸವಾಲಿನ ಪಿಚ್‌ನಲ್ಲಿ ರನ್‌ ಮಳೆ ಸುರಿಸಬೇಕಾದ ಒತ್ತಡದಲ್ಲಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಜೋಶ್ ಟಂಗ್ ಬದಲಿಗೆ ವೇಗಿ ಜೋಫ್ರಾ ಆರ್ಚರ್ ತಂಡಕ್ಕೆ ಆಗಮಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ತಂಡಗಳು
ಇಂಗ್ಲೆಂಡ್ : ಜಾಕ್ ಕ್ರಾಲಿ, ಬೆನ್ ಡಕೆಟ್, ಓಲೀ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್, ಕ್ರಿಸ್ ವೋಕ್ಸ್, ಡನ್ ಕಾರ್, ಜೋಫ್ರಾ ಆರ್ಚರ್, ಶೋಯಿಬ್ ಬಶೀರ್.

ಭಾರತ :ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಕರುಣ್ ನಾಯರ್, ಶುಭಮನ್ ಗಿಲ್ (ನಾಯಕ), ರಿಷಬ್ ಪಂತ್, ರವೀಂದ್ರ ಜಡೇಜ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.

Continue Reading

DAKSHINA KANNADA

‘ಎಲ್ಲಾ ಆದ ಮೇಲೆ ಶಾಂತಿಸಭೆ’: ಸಂಸದ ಕೋಟ

Published

on

ಉಡುಪಿ: ಚರ್ಚೆ, ವಾದ-ವಿವಾದ, ಪ್ರಕರಣಗಳು ಆದ ಬಳಿಕ ಶಾಂತಿ ಸಭೆ ಇಷ್ಟು ದಿನಗಳ ನಂತರವಾ.. ಎಂಬ ಚರ್ಚೆ ಸಮಾಜದಲ್ಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ನಿನ್ನೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇವತ್ತು ಎಲ್ಲಾ ಶಾಂತಿ ಸಭೆಗಳು, ಪೊಲೀಸ್ ಕ್ರಮಗಳು ಹಾಗೂ ಪೊಲೀಸ್ ಫೋರ್ಸ್‌ಗಳು ಎಲ್ಲವೂ ಕೂಡ ಈ ಸಮಾಜದ ಮುಖ್ಯ ವಾಹಿನಿಯಿಂದ ಬದುಕುತ್ತಿರುವಂತಹ ಹಿಂದೂಗಳ ಮೇಲೆ ಗಧಾ-ಪ್ರಹಾರ ಮಾಡಲು ರೂಪಿಸಿದ್ದಾರೆಯೇ ಎಂಬ ಭಾವನೆ ಮೂಡುತ್ತಿದೆ. ಇಂದು ಯಾವ ರೀತಿಯ ವಾತಾವರಣ ಇದೆ ಎಂದರೆ ಯಾರೇ ಒಬ್ಬ ಕಾರ್ಯಕರ್ತ ಅದು ಬಿಜೆಪಿ ಕಾರ್ಯಕರ್ತನೋ, ಹಿಂದೂತ್ವದ ಬಗ್ಗೆ ಮಾತನಾಡುವ ಸಾಮಾನ್ಯ ಕಾರ್ಯಕರ್ತ ಆಗಿರಬಹುದು, ಅವನ ಬದುಕಿನ ಹಕ್ಕನ್ನೇ ಮೊಟಕುಗೊಳಿಸುವಂತಹ ಪ್ರಯತ್ನಗಳು, ರೌಡಿಶೀಟರ್ ಹಾಕುವಂತಹ ಕೆಲಸಗಳು ನಡೆಯುತ್ತಿವೆ. ಪರಮೇಶ್ವರ್ ಅವರು ತಿಳುವಳಿಕೆ ಇರುವಂತಹ ಮಂತ್ರಿ. ಒಂದು ಸಮಾಜವನ್ನು ಒಡೆಯುವ, ಸಮಾಜದ ಮೇಲೆ ಗಧಾಪ್ರಹಾರ ಮಾಡುವ, ಸಮಾಜದ ಮೇಲೆ ದೌರ್ಜನ್ಯ ಮಾಡುವ ಕೆಲಸಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

WATCH VIDEO

Continue Reading
Advertisement

Trending

Copyright © 2025 Namma Kudla News

You cannot copy content of this page