Connect with us

DAKSHINA KANNADA

ಸುರತ್ಕಲ್‌ ಅನೈತಿಕ ಪೊಲೀಸ್‌ಗಿರಿ: ಕ್ಯಾಂಪಸ್ ಫ್ರಂಟ್‌ನಿಂದ ಠಾಣೆಗೆ ಮುತ್ತಿಗೆ

Published

on

ಮಂಗಳೂರು: ಸುರತ್ಕಲ್ ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣದಲ್ಲಿ ಪೊಲೀಸರ ನಡೆ ಖಂಡಿಸಿ ಸುರತ್ಕಲ್ ಠಾಣೆಗೆ ಕ್ಯಾಂಪಸ್ ಫ್ರಂಟ್ ಮಂಗಳೂರು ಮುತ್ತಿಗೆ ಹಾಕಿತು.


ಹಿಂದೂಗಳಿಗೊಂದು ಇತರರಿಗೆ ಬೇರೆ ಬೇರೆ ಕಾನೂನು ಮಾಡಬೇಡಿ, ಅಪರಾಧ ಮಾಡಿದರೆ ಎಲ್ಲರಿಗೂ ಶಿಕ್ಷೆ ಕೊಡಿಸಿ.

ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್ ದಕ್ಷ ಅಧಿಕಾರಿ. ಅವರ ಮೇಲೆ ಭರವಸೆ ಇಡುತ್ತಿದ್ದೇವೆ.

ಅರೋಪಿಗಳನ್ನು ಮರು ಬಂಧಿಸಿ ಅವರಿಗೆ ತಕ್ಕ ಶಿಕ್ಷೆ ನೀಡುವಂತೆ ಮುಖಂಡ ಅಶ್ರಫ್‌ ಒತ್ತಾಯಿಸಿದರು. ಇಂತಹ ಪ್ರಕರಣಗಳು ಮಂಗಳೂರಿನಲ್ಲಿ ಸಾಮಾನ್ಯವಾಗಿಬಿಟ್ಟಿವೆ. ಈ ಹಿಂದೆ ಇಂತಹದ್ದೇ ಹಲವಾರು ಘಟನೆಗಳು ನಡೆದರು ಪೊಲೀಸರ ಕರ್ತವ್ಯ ನಿಷ್ಠೆಯಲ್ಲಿನ ಕೊರತೆಯಿಂದಾಗಿ ಇಂದಿಗೂ ಇದು ಮುಂದುವರಿದಿದೆ.

ಪಬ್ ಗಳ ಮೇಲೆ, ಪಾರ್ಟಿ ಗಳ ಮೇಲೆ ನಡೆದ ದಾಳಿಗಳು ಈಗ ನೇರವಾಗಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವುದನ್ನು ನೋಡಿದರೆ ದಾಳಿ ನಡೆಸುವ ಸಂಘಪರಿವಾರದ ಗೂಂಡಾಗಳಿಗೆ ಯಾವ ಕಾನೂನಿನ ಭಯ ಇಲ್ಲವೆಂಬುದನ್ನು ಸ್ಪಷ್ಟವಾಗಿ ತಿಳಿದು ಬರುತ್ತದೆ ಮತ್ತು ಇದಕ್ಕೆ ಪೊಲೀಸರೇ ನೇರ ಹೊಣೆ ಎಂಬುವುದು ಅಲ್ಲಗಳೆಯಲಾರದ ಸತ್ಯವಾಗಿದೆ.

ಇಂತಹ ಘಟನೆಗಳು ನಡೆದಾಗ ಶಿಕ್ಷಣ ಸಂಸ್ಥೆಗಳ ಮೌನವು ವಿದ್ಯಾರ್ಥಿಗಳಲ್ಲಿ ಅಸುರಕ್ಷತೆಯ ಭಾವನೆಯನ್ನು ಹೆಚ್ಚುಸುತ್ತದೆ, ನಿರ್ಭಯವಾಗಿ ವಿದ್ಯಾರ್ಥಿಗಳು ಮಂಗಳೂರಿಗೆ ಬರಬೇಕಾದರೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.


ಪೊಲೀಸರ ಈ ಅಸಹಾಯಕತೆಯ ಧೋರಣೆಗಳಿಂದಾಗಿ ಮಂಗಳೂರಿನ ಪೊಲೀಸರ ಮೇಲೆ ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

ತಕ್ಷಣ ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ಇದರಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಶಾಮೀಲಾದ ಪೊಲೀಸರ ವಿರುದ್ಧ ಕ್ರಮ ವಹಿಸಬೇಕೆಂದು ಕ್ಯಾಂಪಸ್ ಫ್ರಂಟ್ ದ.ಕ ಆಗ್ರಹಿಸಿ ಮನವಿ ಸಲ್ಲಿಸಿತು.

 

DAKSHINA KANNADA

ಜಪ್ಪಿನಮೊಗರು ನಾರಾಯಣಗುರು ಮಂದಿರದಲ್ಲಿ ಆರೋಗ್ಯ ತಪಾಸಣಾ ಶಿಬಿರ

Published

on

ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಎನ್.ಜಿ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಮತ್ತು ಗುರುಗಳ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಭಾನುವಾರ(ಫೆ.08) ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಆಯೋಜಿಸಲಾಗಿತ್ತು.

ಕಂಕನಾಡಿ ಗರೋಡಿಯ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದ ಮೊಕ್ತೇಸರ ಚಂದ್ರನಾಥ್ ಅತ್ತಾವರ  ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯವನ್ನು ದೇವರು ಕರುಣಿಸುತ್ತಾರೆ ಎಂಬುದು  ನಮ್ಮ ನಂಬಿಕೆ. ಆದರೆ ಆರೋಗ್ಯವನ್ನು ಕಾಪಾಡಿಕೊಂಡು ಬರುವಲ್ಲಿ ನಮ್ಮ ಪಾತ್ರವೂ ಇದೆ. ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ. ಹಾಗಿರುವಾಗ ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಜನರ ಆರೋಗ್ಯವನ್ನು ಕಾಪಾಡಿಕೊಂಡು ಬರಬೇಕೆಂಬ ಉದ್ದೇಶದಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಸಹಕಾರಿ ಸಂಘಗಳ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆಯ ಪ್ರಯೋಜನ ಲಭಿಸುತ್ತಿದ್ದು, ಅದರ ಪ್ರಯೋಜನ ಪಡೆಯಬೇಕೆಂದರು.  ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಮನೋಜ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ :WATCH VIDEO : ಉಡುಪಿ : ಕಬ್ಯಾಡಿಯಲ್ಲಿ ಕಾಂಪೌಂಡ್‌ನಲ್ಲಿ ಅಡ್ಡಾಡಿದ ಚಿರತೆ; ವೀಡಿಯೋ ವೈರಲ್!

ಕದ್ರಿಯ ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ಹಾಗೂ ಮುಕ್ಕ ಶ್ರೀನಿವಾಸ್ ಇನಿಸ್ಟಿಟ್ಯೂಟ್‌ ಆಫ್‌ ಡೆಂಟಲ್ ಸಾಯನ್ಸ್ ಇದರ ತಜ್ಞ ವೈದ್ಯರು ವೈದ್ಯಕೀಯ ತಪಾಸಣೆಯನ್ನು ನಡೆಡಿಕೊಟ್ಟರು.

Continue Reading

DAKSHINA KANNADA

ದೇಶದ ಆರ್ಥಿಕ ಪ್ರಗತಿಗೆ ಪೂರಕವಾಗಿದೆ ಕೇಂದ್ರ ಬಜೆಟ್ : ಎಸ್.ಎಸ್.ನಾಯಕ್

Published

on

ಮಂಗಳೂರು : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಈ ವರ್ಷದ ಬಜೆಟ್‌ ದೇಶದ ಆರ್ಥಿಕ ಪ್ರಗತಿಗೆ ಪೂರಕವಾದ ಬಜೆಟ್‌ ಆಗಿದೆ ಎಂದು ಹಿರಿಯ ಲೆಕ್ಕಪರಿಶೋಧಕ, ಆರ್ಥಿಕ ತಜ್ಞ ಎಸ್‌. ಎಸ್‌. ನಾಯಕ್‌  ಅಭಿಪ್ರಾಯ ಪಟ್ಟಿದ್ದಾರೆ. ಮಂಗಳೂರು ಪ್ರಾಡಕ್ಟಿವಿಟಿ ಕೌನ್ಸಿಲ್‌ ವತಿಯಿಂದ ಲೇಡಿಹಿಲ್‌ ನ ಸೀ ವ್ಯೂ ಹೊಟೇಲ್‌ ಸಭಾಂಗಣದಲ್ಲಿ ಶನಿವಾರ(ಫೆ.07)ಏರ್ಪಡಿಸಿದ್ದ ಡಿ ಕೋಡಿಂಗ್ ಯೂನಿಯನ್ ಬಜೆಟ್ 2026 ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಈ ಬಾರಿಯ ಬಜೆಟ್‌ನಲ್ಲಿ ವಿಶೇಷವಾಗಿ ಯಾವ ಕೊಡುಗೆಯನ್ನೂ ನೀಡಿಲ್ಲ ಎಂದು ಕೆಲವರು ಟೀಕೆ ಮಾಡುತ್ತಾರೆ. ಆದರೆ ಇಂತಹ ಆರೋಪದಲ್ಲಿ ಹುರುಳಿಲ್ಲ. ಏಕೆಂದರೆ ಬಜೆಟ್‌ನ್ನು ಪೂರ್ತಿಯಾಗಿ ಓದಿ ಆರ್ಥೈಸಿಕೊಳ್ಳದವರು ಮಾತ್ರ ಈ ರೀತಿಯಾಗಿ ಹೇಳಿಕೆ ನೀಡುತ್ತಾರೆ ಎಂದರು.

ಈ ಬಜೆಟ್‌ನಲ್ಲಿ ಅನೇಕ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಯಾವುದೇ ಹೆಚ್ಚುವರಿ ತೆರಿಗೆಯನ್ನು ಹಾಕದೆ ಜನರಿಗೆ ಅನೇಕ ಪ್ರಯೋಜನಗಳನ್ನು ನೀಡಿದೆ. ಭಾರತವು ಜಗತ್ತಿನ ಅತಿ ವೇಗದ ಆರ್ಥಿಕ ಶಕ್ತಿಯಾಗಿ ಮೂಡಿಬರುತ್ತಿದ್ದು, ಅದಕ್ಕೆ ಪೂರಕವಾಗಿ ಈ ಬಜೆಟ್‌ ಬಂದಿದೆ.  ಬಂಡವಾಳ ವೆಚ್ಚದಲ್ಲಿ ಏರಿಕೆಯಾಗಿದ್ದು, 12.20 ಲಕ್ಷ ಕೋಟಿ ರೂಪಾಯಿ  ಮೀಸಲಿಡಲಾಗಿದೆ. ಇದು ಬಜೆಟ್‌ ಗಾತ್ರದ ಶೇಕಡಾ 22.80 ಆಗಿದ್ದು, ಆರ್ಥಿಕ ಪ್ರಗತಿಗೆ ಪೂರಕವಾಗಿದೆ. ಮುಂಬರುವ ದಿನಗಳಲ್ಲಿ ದೇಶದ ನಂ.1 ಆರ್ಥಿಕ ಶಕ್ತಿಯಾಗಿ ಮೂಡಿಬರಲು ಸಹಾಯಕವಾಗಿದೆ ಎಂದರು.

ಇದನ್ನೂ ಓದಿ : ಮಂಗಳೂರು : ಕೆಎಂಸಿ ಆಸ್ಪತ್ರೆಯಲ್ಲಿ ‘ಕ್ಯಾನ್ಸರ್ ತಪ್ಪಿಸೋಣ’ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

ಕೆನರಾ ಬ್ಯಾಂಕ್‌ ಮಂಗಳೂರು ವೃತ್ತ ಕಚೇರಿಯ ಜನರಲ್‌ ಮ್ಯಾನೇಜರ್‌ ಮತ್ತು ಮುಖ್ಯಸ್ಥ  ಮಂಜುನಾಥ್‌ ಬಿ. ಸಿಂಘೈ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಒಮಾನ್ ದೇಶದ ಸಿಬಿಎಫ್‌ಎಸ್‌- ಸೆಂಟರ್‌ ಫಾರ್‌ ಟ್ರೈನಿಂಗ್‌ ಇದರ ನಿರ್ದೇಶಕ ಡಾ.ಕೆ. ರಾಜೇಶ್‌ ನಾಯಕ್‌, ಮಂಗಳೂರು ಪ್ರಾಡಕ್ಟಿವಿಟಿ ಕೌನ್ಸಿಲ್‌ನ ಅಧ್ಯಕ್ಷ ಯು.ರಾಮರಾವ್‌ ಮತ್ತಿತರರು ಉಪಸ್ಥಿತರಿದ್ದರು.

Continue Reading

DAKSHINA KANNADA

ಮಂಗಳೂರು : ಕೆಎಂಸಿ ಆಸ್ಪತ್ರೆಯಲ್ಲಿ ‘ಕ್ಯಾನ್ಸರ್ ತಪ್ಪಿಸೋಣ’ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

Published

on

ಮಂಗಳೂರು : ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ, ‘ಕ್ಯಾನ್ಸರ್ ತಪ್ಪಿಸೋಣ’ ಎಂಬ ಶೀರ್ಷಿಕೆಯ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಶನಿವಾರ(ಫೆ.7) ಆಯೋಜಿಸಲಾಗಿತ್ತು. ಈ  ಕಾರ್ಯಾಗಾರದಲ್ಲಿ  ವೈದ್ಯರು, ಹಿರಿಯ ನಾಗರಿಕರು, ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ತಜ್ಞ ವೈದ್ಯರು ಸ್ತನ, ಹೊಟ್ಟೆ, ಶ್ವಾಸಕೋಶ, ಕೊಲೊರೆಕ್ಟಲ್, ಪ್ರಾಸ್ಟೇಟ್ ಮತ್ತು ರಕ್ತ ಕ್ಯಾನ್ಸರ್ ಸೇರಿದಂತೆ ಪ್ರಮುಖ ಕ್ಯಾನ್ಸರ್‌ಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ನಿದ್ರೆಯ ಸಮಯದಲ್ಲಿ ಸ್ಮಾರ್ಟ್‌ಫೋನ್ ವಿಕಿರಣಕ್ಕೆ ಒಡ್ಡಿಕೊಳ್ಳುವುದು, ಮೈಕ್ರೋವೇವ್ ಆಹಾರದ ಬಳಕೆ, ನಾನ್-ಸ್ಟಿಕ್ ಕುಕ್‌ ವೇರ್ ಮತ್ತು ಏರ್ ಫ್ರೈಯರ್‌ಗಳು, ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಬಿಸಿ ಆಹಾರ ಸೇವನೆ, ನಿಷ್ಕ್ರಿಯ ಧೂಮಪಾನ ಮತ್ತು  ಹೆಚ್ಚುತ್ತಿರುವ ಸಂಸ್ಕರಿಸಿದ ಮತ್ತು ಜಂಕ್ ಫುಡ್‌ನ ಸೇವನೆ ಹೀಗೆ ಹಲವಾರು ಜೀವನಶೈಲಿಗೆ ಸಂಬಂಧಿಸಿದ ಅಪಾಯಕಾರಿ ಅಂಶಗಳ ಬಗ್ಗೆ ವೈದ್ಯರು ಚರ್ಚಿಸಿದರು. ಆರಂಭಿಕ ಹಂತದಲ್ಲಿ ಪತ್ತೆಯಾದರೆ ಅನೇಕ ಕ್ಯಾನ್ಸರ್‌ ಗಳನ್ನು ಗುಣಪಡಿಸಬಹುದು. ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ಸಾರ್ವಜನಿಕರಿಗೆ ತಿಳಿ ಹೇಳಿದರು.

ಇದನ್ನೂ ಓದಿ : WATCH VIDEO : ಉಡುಪಿ : ಕಬ್ಯಾಡಿಯಲ್ಲಿ ಕಾಂಪೌಂಡ್‌ನಲ್ಲಿ ಅಡ್ಡಾಡಿದ ಚಿರತೆ; ವೀಡಿಯೋ ವೈರಲ್!

ತಜ್ಞರ ಸಮಿತಿಯಲ್ಲಿ ಹೆಮಟಾಲಜಿ ಮತ್ತು ಜನರಲ್ ಮೆಡಿಸಿನ್ ಡಾ.ಪ್ರಶಾಂತ್ ಬಿ, ಪೀಡಿಯಾಟ್ರಿಕ್ ಹೆಮಟೊ ಆಂಕೊಲಾಜಿ ಡಾ. ಹರ್ಷ ಪ್ರಸಾದ್, ಸ್ತನ ಶಸ್ತ್ರಚಿಕಿತ್ಸೆ ತಜ್ಞ ಡಾ. ಬಾಸಿಲಾ ಅಮೀರ್ ಅಲಿ, ಸರ್ಜಿಕಲ್ ಆಂಕೊಲಾಜಿ ಡಾ. ಕಾರ್ತಿಕ್ ಕೆ.ಎಸ್ ಮತ್ತು ವೈದ್ಯಕೀಯ ಆಂಕೊಲಾಜಿ ಡಾ. ಸಾನ್ಯೊ ಪಿ ಡಿಸೋಜಾ ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page