Connect with us

LATEST NEWS

ಕಾಪು ಶ್ರೀ ಹೊಸ ಮಾರಿಗುಡಿ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಭೇಟಿ

Published

on

ಕಾಪು: ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ಕ್ಷೇತ್ರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಇಂದು (ಅ.19) ಭೇಟಿ ನೀಡಿದರು.


ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ದೇವಳದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿಯವರ ಸಮಕ್ಷಮದಲ್ಲಿ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಅವರನ್ನು ಗೌರವಿಸಲಾಯಿತು.

ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಐತಿಹ್ಯ ಇರುವಂತೆ ಹಿಂದೆ ವಿಜಯನಗರ ಸಾಮ್ರಾಜ್ಯದಲ್ಲಿ ಕೆಳದಿಯ ಅರಸರ ದಂಡನ್ನ ಆಶೀರ್ವದಿಸಿ ದಂಡಿನ ಮಾರಿಯಾಗಿ, ಸೈನ್ಯಕ್ಕೆ ರಕ್ಷಣೆಯನ್ನ ಮತ್ತು ಜಯವನ್ನು ಒದಗಿಸಿಕೊಟ್ಟ ತಾಯಿ ಕಾಪುವಿನಲ್ಲಿ ನೆಲೆಸಿ ಭಕ್ತರನ್ನ ಹರಸುತ್ತಾ ಬಂದಿದ್ದಾರೆ. ಸಮಿತಿಯವರು ದೇವಳವನ್ನು ಜೀರ್ಣೋದ್ಧಾರ ಮಾಡಿ ಆ ತಾಯಿಯ ಸೇವೆಯನ್ನು ಮಾಡ್ತಾ ಇದ್ದಾರೆ, ನಾನು ಈಗಾಗಲೇ ಬರಬೇಕಿತ್ತು ಕಾರ್ಯದ ಒತ್ತಡದಿಂದ ಸಾಧ್ಯವಾಗಿಲ್ಲ, ಇಂದು ತಾಯಿಯನ್ನು ಕಾಣುತ್ತಿರುವುದು ನನ್ನ ಪರಮ ಸೌಭಾಗ್ಯ, ಕುಟುಂಬದ ಜೊತೆ ಮತ್ತೊಮ್ಮೆ ತಾಯಿಯ ದರುಶನ ಮಾಡಿ ಆಶೀರ್ವಾದ ಪಡೆಯುತ್ತೇನೆ ಎಂದರು ಮತ್ತು ನಾಡಿನ ಸಮಸ್ತ ಜನತೆಗೂ ದೀಪಗಳ ಹಬ್ಬ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಜಿತೇಂದ್ರ ಶೆಟ್ಟಿ ಉದ್ಯಾವರ, ಅನಿಲ್ ಕುಮಾರ್ ಕಾಪು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

DAKSHINA KANNADA

ಕಾರು – ಆಟೋ ನಡುವೆ ಅಪ*ಘಾತ; ಮೂವರಿಗೆ ಗಂಭೀರ ಗಾ*ಯ

Published

on

ಪುತ್ತೂರು: ಕಾರು ಮತ್ತು ಆಟೋ ನಡುವೆ ಅಪ*ಘಾತ ಸಂಭವಿಸಿ ಮೂವರು ಗಾ*ಯಗೊಂಡಿರುವ ಘಟನೆ ಮಂಜಲ್ಪಡ್ಪು ಎಂಬಲ್ಲಿ ನಡೆದಿದೆ.

ಆಟೋ ಚಾಲಕ, ಬಂಟ್ವಾಳ ತಾಲೂಕಿನ ಮುಡಿಪು ಬಳಿಯ ಪಜೀರ್ ನಿವಾಸಿ, ಸುನಿಲ್ ಪಿಂಟೋ(37), ಪಜೀರ್ ನಿವಾಸಿಗಳಾದ ಉಸ್ಮಾನ್(57)  ಮತ್ತು ವಿದ್ಯಾರ್ಥಿನಿ ಫಾತಿಮತ್ ಮುರ್ಷಿದಾ(17) ಗಾ*ಯಾಳುಗಳು.

ಸುನಿಲ್ ಮತ್ತು ಉಸ್ಮಾನ್ ಅವರ ಕಾಲುಗಳಿಗೆ ತೀವ್ರ ಏಟು ತಗುಲಿದ್ದು, ಮುರ್ಷಿದಾ ಅವರ ತಲೆಗೆ ಗಾ*ಯವಾಗಿದೆ. ಮೂವರಿಗೂ ಪುತ್ತೂರಿನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಪಜೀರ್‌ನಿಂದ ಆಟೋ ಬಾಡಿಗೆಗೆ ಗೊತ್ತು ಮಾಡಿಕೊಂಡು ಔಷಧಕ್ಕೆಂದು ಬಂದಿದ್ದ ಉಸ್ಮಾನ್ ಮರಳುವಾಗ ಪುತ್ತೂರು ಹೊರವಲಯದ ಕುಂಬ್ರದ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಿಯತ್ತಿರುವ ತನ್ನ ಮೊಮ್ಮಗಳು ಮುರ್ಷಿದಾಳನ್ನು ಕೂರಿಸಿಕೊಂಡು ಪಜೀರ್‌ನತ್ತ ಹೋಗುತ್ತಿದ್ದರು.

ಇದನ್ನೂ ಓದಿ : ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜಾನಾ? ಸುದೀಪ್ ಬಿಚ್ಚಿಟ್ರು ಅಸಲಿ ಸತ್ಯ!

ಮಂಜಲ್ಪಡ್ಪು ತಲುಪುವಾಗ ಎದುರಿನಿಂದ ಬರುತ್ತಿದ್ದ ಕಾರೊಂದು ಲಾರಿಯನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಆಟೋ ಮತ್ತು ಕಾರಿನ ನಡುವೆ ಮಖಾಮುಖಿ ಡಿ*ಕ್ಕಿ ಸಂಭವಿಸಿದೆ. ಘಟನೆಯಿಂದ ಕಾರು ಮತ್ತು ಆಟೋಗಳೆರಡೂ ಜಖಂಗೊಂಡಿದೆ. ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BIG BOSS

ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜಾನಾ? ಸುದೀಪ್ ಬಿಚ್ಚಿಟ್ರು ಅಸಲಿ ಸತ್ಯ!

Published

on

BBK 12 : ವಾರಾಂತ್ಯ ಬಂತೆಂದರೆ ಎಲ್ಲರೂ ಕಿಚ್ಚನ ಆಗಮನಕ್ಕಾಗಿ ಕಾಯುತ್ತಿರುತ್ತಾರೆ. ಈ ಬಾರಿ ಎಂದಿನಂತೆ ಕಿಚ್ಚ ವೀಕೆಂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರು ವಾರದ ಪಂಚಾಯಿತಿ ನಡೆಸಲು ಬರುತ್ತಿದ್ದಂತೆ ಗರಂ ಆಗಿದ್ದರು. ರಕ್ಷಿತಾ ಶೆಟ್ಟಿ ಕಲಾವಿದರಿಗೆ ಚಪ್ಪಲಿ ತೋರಿಸಿದ್ದಾರೆಂಬ ಅಶ್ವಿನಿ ಗೌಡ ಆರೋಪಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ.

ರಕ್ಷಿತಾ.. ನಾಟಕ ಅಂತ ಹೇಳಿಕೊಂಡು ನೀನು ಚಪ್ಪಲಿ ತೋರಿಸಿದ್ದೀಯಾ ಅಂದರೆ ಯಾರಿಗೆ ನೀನು ಅವಮಾನ ಮಾಡುತ್ತಾ ಇದ್ದೀಯಾ? ಎಂದು ಕಿಚ್ಚ ಸುದೀಪ್ ಮುಂದೆಯೇ ಅಶ್ವಿನಿ ಗೌಡ ಆರೋಪ ಮಾಡಿದ್ದಾರೆ.

ಆಗ ಸುದೀಪ್, ಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ? ನಾನು ತಪ್ಪು ಹೇಳಿಕೆ ಕೊಟ್ಟಾಗ ಏನಾಗುತ್ತೆ ಯಾರ್ ಯಾರೋ ಕಲಾವಿದರಿಗೆ ಹೇಳಿದ್ದರಂತೆ, ಕಲಾವಿದರಿಗೆ ಹೇಳಿದ್ದರಂತೆ ಅಂತಾರೆ. ಯಾಕೆ ಮೇಡಂ ವೇದಿಕೆ ಮೇಲೆ ನಿಂತಿರುವ ನಾನು ಒಬ್ಬ ಕಲಾವಿದ ಅಲ್ವಾ? ಕರ್ನಾಟದಲ್ಲಿ ಇರುವ ಪ್ರತಿಯೊಬ್ಬ ಕಲಾವಿದರಿಗೆ ನಾನು ಉತ್ತರ ಕೊಡಬೇಕಾಗಿತ್ತು. ಇದೊಂದು ತಪ್ಪು ಗ್ರಹಿಕೆ ಎಂದಿದ್ದಾರೆ.

ಅಸಲಿಗೆ ಆಗಿದ್ದೇನು?

ಕಳೆದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಜಗಳ ನಡೆದಿತ್ತು. ಈ  ವೇಳೆ ಅಶ್ವಿನಿ ಗೌಡ ರಕ್ಷಿತಾ ಮೇಲೆ ಗಂಭೀರ ಆರೋಪ ಮಾಡಿದ್ದರು. ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದರು. ನಾಲ್ಕೈದು ಬಾರಿ ಚಪ್ಪಲಿ ತೋರಿಸಿ ಮಾತನಾಡಿದ್ರು ಎಂದು ಆರೋಪಿಸಿದ್ದರು.

ಇದನ್ನೂ ಓದಿ : BBK12: ಗ್ರೂಪಿಸಂ ಮಾಡಿ ಗಿಲ್ಲಿಗೆ ಕಳಪೆ ಪಟ್ಟ; ಕಿಚ್ಚನ ಕ್ಲಾಸ್?

ಇದೀಗ ಇದೇ ವಿಚಾರವಾಗಿ ಸುದೀಪ್ ಅವರು ವಾರದ ಪಂಚಾಯಿತಿಯಲ್ಲಿ ಪ್ರಶ್ನಿಸಿದ್ದಾರೆ. ಇದೊಂದು ತಪ್ಪು ಗ್ರಹಿಕೆ ಎಂದು ರಕ್ಷಿತಾ ಮೇಲಿನ ಆರೋಪಕ್ಕೆ ತೆರೆ ಎಳೆದಿದ್ದಾರೆ.

Continue Reading

LATEST NEWS

ಗುರುವಾಯೂರು ದೇವಸ್ಥಾನದಲ್ಲಿ ನಿಯಮ ಉಲ್ಲಂಘಿಸಿದ ಜಸ್ನಾ ಸಲೀಂ ವಿರುದ್ದ ಮತ್ತೊಂದು ಕೇಸ್

Published

on

ತ್ರಿಶೂರ್: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಜಸ್ನಾ ಸಲೀಂ ವಿರುದ್ದ ಕೇರಳದ ಪುರಾಣ ಪ್ರಸಿದ್ದ ಗುರುವಾಯೂರು ದೇವಸ್ಥಾನದಲ್ಲಿ ರೀಲ್ ಚಿತ್ರೀಕರಣ ಮಾಡಿದ್ದಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇರಳ ಹೈಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಿ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ಪಶ್ಚಿಮ ನಾಡಾದ ವೀಡಿಯೋಗಳನ್ನು ಚಿತ್ರೀಕರಿಸಿ ಹಂಚಿಕೊಂಡಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ನೀಡಿದ ದೂರಿನನ್ವಯ ಪೊಲೀಸರು ಜಸ್ನಾ ಹಾಗೂ ಅವರ ಇನ್‌ಸ್ಟಾಗ್ರಾಮ್ ಖಾತೆ ನಿರ್ವಹಣೆ ಮಾಡುವ ವ್ಯಕ್ತಿ ವಿರುದ್ಧ ಬಿಎನ್‌ಎಸ್‌ ಕಾನೂನಿನಡಿ ಪ್ರಕರಣ ದಾಖಲಿಸಿದ್ದಾರೆ. ದೂರಿನ ಪ್ರಕಾರ, ಛಾಯಾಗ್ರಹಣ ಮತ್ತು ವಿಡಿಯೋಗ್ರಫಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುವ ಪಶ್ಚಿಮ ನಾಡದಲ್ಲಿ ಆಕೆ ರೀಲ್‌ಗಳನ್ನು ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಉಪರಾಷ್ಟ್ರಪತಿಯಾದ ಬಳಿಕ ಮೊದಲನೇ ಬಾರಿಗೆ ಸಿ.ಪಿ ರಾಧಾಕೃಷ್ಣನ್ ಇಂದು ಕರ್ನಾಟಕಕ್ಕೆ ಭೇಟಿ

ಏಪ್ರಿಲ್ ಆರಂಭದಲ್ಲಿ, ಫೋಟೋಗ್ರಫಿ ಮತ್ತು ಮಾಧ್ಯಮ ಪ್ರವೇಶದ ಮೇಲಿನ ನಿರ್ಬಂಧಗಳ ಹೊರತಾಗಿಯೂ ದೇವಾಲಯದ ಪೂರ್ವ ನಾಡದಲ್ಲಿ ವೀಡಿಯೊಗಳನ್ನು ಚಿತ್ರೀಕರಿಸಿದ ನಂತರ ಜಸ್ನಾ ವಿರುದ್ಧ ಇದೇ ರೀತಿಯ ಅಪರಾಧಕ್ಕಾಗಿ ಪ್ರಕರಣ ದಾಖಲಿಸಲಾಗಿತ್ತು.

Continue Reading
Advertisement

Trending

Copyright © 2025 Namma Kudla News

You cannot copy content of this page