Connect with us

ಸಾಲದ ಸುಳಿಗೆ ಸಿಲುಕಿ ಉದ್ಯಮಿ- ಚಿತ್ರ ನಿರ್ಮಾಪಕ ಕಪಾಲಿ ಮೋಹನ್ ಆತ್ಮಹತ್ಯೆ..!

Published

on

ಸಾಲದ ಸುಳಿಗೆ ಸಿಲುಕಿ ಉದ್ಯಮಿ- ಚಿತ್ರ ನಿರ್ಮಾಪಕ ಕಪಾಲಿ ಮೋಹನ್ ಆತ್ಮಹತ್ಯೆ..!

ಬೆಂಗಳೂರು : ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಹಾಗೂ ‌ಉದ್ಯಮಿ ಕಪಾಲಿ ಮೋಹನ್ ಆತ್ಮಹತ್ಯೆಗೆ ಶರಣಾಗಿದ್ದಾರೆ‌. ಬೆಂಗಳೂರಿನ ಪೀಣ್ಯಾದ ಬಸವೇಶ್ವರ ನಿಲ್ದಾಣದ ಬಳಿ ಇರುವ ತನ್ನ ಖಾಸಾಗಿ ಹೋಟೆಲ್‌ ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ಡಾ. ರಾಜ್ ಕುಮಾರ್ ಕುಟುಂಬಕ್ಕೆ ತುಂಬಾ ಹತ್ತಿರವಾಗಿದ್ದ ಉದ್ಯಮಿ ಕಪಾಲಿ ಮೋಹನ್ ಮನೆ ಹಾಗೂ ಕಚೇರಿಗೆ ಈ ಹಿಂದೆ ಸಿಸಿಬಿಯಿಂದ ರೇಡ್ ಮಾಡಲಾಗಿತ್ತು.

ಅದಲ್ಲದೆ ಇತ್ತೀಚಿನ ದಿನಗಳಲ್ಲಿ ಹಣದ ಮುಂಗಟ್ಟು ಎದುರಿಸುತ್ತಿದ್ದ ಮೋಹನ್ ಮನೆ ಮೇಲೆ ಎರಡು ಬಾರಿ ಐಟಿ‌ ಅಧಿಕಾರಿಗಳು ದಾಳಿ‌ ನಡೆಸಿದ್ದರು.

ಆ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಅವರು ನಿನ್ನೆ ತಡ ರಾತ್ರಿ ಬೆಂಗಳೂರಿನ‌ ತಮ್ಮದೇ ಹೊಟೇಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕರಾವಳಿಯ ಕುಂದಾಪುರ ಮೂಲದ ವಿ‌ಕೆ ಬಾಲ್ಯದಿಂದಲೂ ಬೆಂಗಳೂರಿನಲ್ಲಿ ವಾಸವಾಗಿದ್ದರು. ಶ್ರಮ ಜೀವಿಯಾಗಿದ್ದ ಮೋಹನ್ ಫೈನಾನ್ಸ್ ವ್ಯಾವಹಾರದಲ್ಲಿ ತೊಡಗಿಸಿಕೊಂಡಿದ್ದರು,

ಬಳಿಕ ಸಿನಿಮಾ ರಂಗಕ್ಕೆ‌ಕಾಲಿಟ್ಟ ವಿ‌ಕೆ ಯಶಸ್ವಿ ಸಿನಿಮಾ ಪ್ರೋಡ್ಯೂಸರ್ ಆಗಿ ಬೆಳೆದಿದ್ದರು.

ರಾಜ್ ಕುಟುಂಬದೊಂದಿಗೆ ಅತ್ಮೀಯ ಸಂಭಂಧ ಇಟ್ಟುಕೊಂಡಿದ್ದರು.ಪುನೀತ್ ರಾಜ್ ಕುಮಾರ್ ಚಿತ್ರಗಳಲ್ಲಿ ನಟನೆ ಕೂಡಾ ಮಾಡಿದ್ದರು.

ತನ್ನ‌ಹುಟ್ಟೂರಲ್ಲಿ ತನ್ನದೇ ಅಭಿಮಾನಿಗಳನ್ನು‌ ಹೊಂದಿರುವ ವಿ‌ಕೆ ,ಅಸಹಾಯಕರಿಗೆ ಸಹಾಯ ಹಸ್ತಗಳನ್ನು ಚಾಚುವ ಮೂಲಕ‌ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು.

ಆದರೆ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಉರ್ವ ಮಾರಿಯಮ್ಮ ಕ್ಷೇತ್ರ : ಡಿ.25 ಮತ್ತು 26 ರಂದು ನವಾಕ್ಷರಿ ಮಹಾಮಂತ್ರ ಯಾಗ

Published

on

ಮಂಗಳೂರು : ಉರ್ವ ಶ್ರೀಮಾರಿಯಮ್ಮ ದೇವಸ್ಥಾನದಲ್ಲಿ ಡಿಸೆಂಬರ್ 25 ರಿಂದ 26 ರ ವರೆಗೆ ನವಾಕ್ಷರಿ ಮಹಾಮಂತ್ರ ಯಾಗ ನಡೆಯಲಿದೆ.

ನಾಡಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಮಂಗಳೂರು ತಾಲೂಕಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಕೂಡ ಒಂದೆನಿಸಿರುತ್ತದೆ. ಈ ಕ್ಷೇತ್ರವು ಸಹಸ್ರಾರು ಸಂಖ್ಯೆಯ ಭಕ್ತರ ಆರಾಧನ ಸ್ಥಳವೆನಿಸಿದೆ. ವರ್ಷಂಪ್ರತಿ ಕುಂಭ ಮಾಸದ ಶುಕ್ಲ ಪಕ್ಷದಲ್ಲಿ ಅಂದರೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ನಡೆಯುವ ವರ್ಷಾವಧಿ ಮಹಾಪೂಜೆಯ ಸಂದರ್ಭ ಇಲ್ಲಿ ಸೇರುವ ಭಕ್ತ ಜನಸ್ತೋಮ ಈ ಕ್ಷೇತ್ರದ ಕಾರಣಿಕ ಹಾಗೂ ಪ್ರಸಿದ್ದಿಗೆ ಉದಾಹರಣೆಯಾಗಿದೆ ಎಂದು ಲಕ್ಷಣ ಅಮೀನ್ ಕೋಡಿಕಲ್ ಆಡಳಿತ ಮೊಕ್ತೇಸರರು ತಿಳಿಸಿದ್ದಾರೆ.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಉರ್ವ ಶ್ರೀಮಾರಿಯಮ್ಮ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಿಮಿತ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ವೈಭವದಿಂದ ಸಂಪನ್ನವಾಗಿದ್ದು, ಅದಕ್ಕೆ ಪೂರಕವಾಗಿ ಈ ಬಾರಿ ಗ್ರಾಮ ಕ್ಷೇಮ ಮತ್ತು ಲೋಕ ಕಲ್ಯಾಣರ್ಥವಾಗಿ ಹಾಗೂ ಸಾನ್ನಿಧ್ಯ ಶ್ರೇಯೋಭಿವೃದ್ಧಿಗಾಗಿ ‘ಶ್ರೀ ಮಾರಿಯಮ್ಮ ನವಾಕ್ಷರಿ ಮಹಾಮಂತ್ರ ಯಾಗ’ವನ್ನು ನೆರೆವೇರಿಸಲು ನಿಶ್ಚಯಿಸಲಾಗಿರುತ್ತದೆ‌ ಎಂದರು.

ಕ್ಷೇತ್ರದ ತಂತ್ರಿವರ್ಯರಾದ ಕೋಡಿಕಲ್ ಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದ ಪೌರೋಹಿತ್ವದಲ್ಲಿ ಡಿ. 25 ಹಾಗೂ 26 ರಂದು ಕ್ಷೇತ್ರದಲ್ಲಿ ಶ್ರೀ ಮಾರಿಯಮ್ಮ ನವಾಕ್ಷರಿ ಮಹಾಮಂತ್ರ ಯಾಗದ ವೈದಿಕ ವಿಧಿ-ವಿಧಾನಗಳು ನಡೆಯಲಿದ್ದು, ಈ ಮಹಾಮಂತ್ರ ಯಾಗವು ವಿಶಿಷ್ಠವಾದ ಯಾಗವಾಗಿದ್ದು, ಮಹಾದೇವಿಗೆ ತುಂಬಾ ಪ್ರಿಯವಾದ ಶ್ರೇಷ್ಠ ಯಾಗವೆನಿಸಿದೆ ಎಂದರು.

ಈ ನವಾಕ್ಷರಿ ಯಾಗ ನಡೆಯಲಿರುವ ಎರಡು ದಿನಗಳಲ್ಲಿ ವಿವಿಧ ವೈದಿಕ ಆಚರಣೆಗಳು ಜರಗಲಿದ್ದು, ಮಹಾ ಅಭಿಷೇಕ, ಮಹಾರಂಗಪೂಜೆ, ಶ್ರೀ ದೇವಿಯ ದರ್ಶನ ಬಲಿ, ದೀಪೋತ್ಸವ, ರಥೋತ್ಸವ ಮತ್ತು ಮಹಾ ಅನ್ನಸಂತರ್ಪಣೆ ಕೂಡಾ ನೆರವೇರಲಿರುವುದು. ಇದೇ ಸಂದರ್ಭ ದ.ಕ. ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ, ಆಯ್ದ ಭಜನಾ ತಂಡಗಳಿಂದ ಹರಿನಾಮ ಸಂಕೀರ್ತನೆ, ಯಕ್ಷ ತೆಲಿಕೆ – ಹಾಸ್ಯ ವೈಭವ ಕಾರ್ಯಕ್ರಮ, ಚಾ ಪಠ್ಯ ಕಲಾವಿದರಿಂದ ತುಳು ನಾಟಕ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕಟೀಲು ಏಳೂ ಮೇಳಕ್ಕೆ ನಂದಿನಿಯ ಶೃಂಗದ ಸೇವೆ

ಸುದ್ದಿಗೋಷ್ಟಿಯಲ್ಲಿ  ಕರ್ನಾಟಕ ಪರ್ಶಿಯನ್ ಮೀನುಗಾರರ ಸಂಘದ ಅಧ್ಯಕ್ಷ ಅನೀಲ್ ಕುಮಾರ್ ಬೊಕ್ಕಪಟ್ಣ,  ಲೋಕೇಶ್ ಸುವರ್ಣ ಕುದ್ರೋಳಿ 3 (ಅಧ್ಯಕ್ಷ, ಮಂಗಳೂರು ಏಳು ಪಟ್ನ ಮೊಗವೀರ ಸಂಯುಕ್ತ ಸಭಾ), ಮೋಹನ್ ಬೆಂಗ್ರೆ, (ಉಪಾಧ್ಯಕ್ಷ, ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ), ಗೌತಮ್ ಸಾಲ್ಯಾನ್ ಕೋಡಿಕಲ್ (ಸಂಚಾಲಕರು, ಶ್ರೀ ಮಾರಿಯಮ್ಮ ನವಾಕ್ಷರಿ ಮಹಾಮಂತ್ರ ಯಾಗ ಸಮಿತಿ), ಜಗದೀಶ್ ಬಂಗೇರ ಬೋಳೂರು(ಪ್ರಧಾನ ಕಾರ್ಯದರ್ಶಿ, ಮಂಗಳೂರು ಏಳು ಪಟ್ನ ಮೊಗವೀರ ಸಂಯುಕ್ತ ಸಭಾ), ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

 

 

 

 

 

 

 

 

Continue Reading

FILM

20 ವರ್ಷದ ಯುವತಿ ವಿರುದ್ದ ಕೇಸ್ ದಾಖಲಿಸಿದ ಖ್ಯಾತ ನಟಿ ಅನುಪಮಾ ಪರಮೇಶ್ವರನ್‌; ಪೋಸ್ಟ್‌ನಲ್ಲೇನಿದೆ?

Published

on

ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಅವರು 20 ವರ್ಷದ ಯುವತಿ ವಿರುದ್ದ ಕೇರಳ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.

ಹೌದು, ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಅವರ ಫೋಟೋವನ್ನು ಆಕ್ಷೇಪಾರ್ಹ ರೀತಿಯಲ್ಲಿ ಎಡಿಟ್ ಮಾಡಿ, ಸುಳ್ಳು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ನಟಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಅನುಪಮಾ ಪರಮೇಶ್ವರನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

“ಇತ್ತೀಚಿನ ದಿನಗಳಲ್ಲಿ ಒಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನನ್ನ ಫೋಟೋ ಬಳಸಿಕೊಂಡು, ತಪ್ಪು ಮಾಹಿತಿಯನ್ನು ಹಬ್ಬಿಸಲಾಗುತ್ತಿದೆ. ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ರೀತಿ ಬಳಸಿಕೊಂಡು ನನ್ನ ಪರಿಚಯದವರು ಹಾಗೂ ಕುಟುಂಬದವರನ್ನು ಟ್ಯಾಗ್ ಮಾಡಲಾಗುತ್ತಿತ್ತು. ಇದರಿಂದ ನನ್ನ ಮನಸ್ಸಿಗೆ ತೀವ್ರ ನೋವುಂಟಾಗಿದೆ” ಎಂದು ನಟಿ ಬರೆದುಕೊಂಡಿದ್ದಾರೆ.

“ಈ ಬಗ್ಗೆ ತನಿಖೆ ಮಾಡಿದಾಗ ಗೊತ್ತಾಗಿದ್ದು ಏನೆಂದರೆ, ನನ್ನ ಬಗ್ಗೆ ದ್ವೇಷ ಹರಡಲು ಮತ್ತು ನನ್ನ ಬಗ್ಗೆ ಕೆಟ್ಟ ಕಮೆಂಟ್ ಮಾಡಲು ಒಬ್ಬರೇ ವ್ಯಕ್ತಿ ಹಲವು ಫೇಕ್ ಅಕೌಂಟ್ ಮಾಡಿಕೊಂಡಿದ್ದಾರೆ. ಇದು ಗೊತ್ತಾದಾಗ ನಾನು ಕೇರಳ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ. ಈ ಕೃತ್ಯದ ಹಿಂದೆ ಇರುವ ವ್ಯಕ್ತಿ ಯಾರು ಎಂಬುದು ಪೊಲೀಸರ ಸಹಕಾರದಿಂದ ತಿಳಿಯಿತು” ಎಂದಿದ್ದಾರೆ ಅನುಪಮಾ ಪರಮೇಶ್ವರನ್.

ಇದನ್ನೂ ಓದಿ: ವಿಶ್ವಕಪ್ ಗೆದ್ದ ರಿಚಾ ಘೋಷ್‌ಗೆ ಪೊಲೀಸ್ ಹುದ್ದೆ; ನೇಮಕಾತಿ ಪತ್ರ ಹಸ್ತಾಂತರಿಸಿದ ಸಿಎಂ ಮಮತಾ ಬ್ಯಾನರ್ಜಿ

‘ನನಗೆ ಆಶ್ಚರ್ಯ ಆಗಿದ್ದು ಏನೆಂದರೆ, ಈ ಕೃತ್ಯ ಮಾಡಿರುವುದು ತಮಿಳುನಾಡಿನ 20 ವರ್ಷದ ಹುಡುಗಿ! ಆಕೆಯ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಅವಳ ಗುರುತನ್ನ ಬಹಿರಂಗ ಮಾಡುತ್ತಿಲ್ಲ. ಯಾಕೆಂದರೆ, ಆಕೆಯ ಭವಿಷ್ಯ ಮತ್ತು ಮನಶಾಂತಿಗೆ ತೊಂದರೆ ಆಗಬಾರದು’ ಎಂದು ಅನುಪಮಾ ಪರಮೇಶ್ವರನ್ ಅವರು ಹೇಳಿದ್ದಾರೆ. ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ನೋಡಿ, ಎಲ್ಲರಿಗೂ ಒಂದು ವಿಷಯ ಅರ್ಥವಾಗಬೇಕು.. ಮೊಬೈಲ್ ಫೋನ್ ಮತ್ತು ಸೋಷಿಯಲ್ ಮೀಡಿಯಾ ಇದೆ ಎಂದ ಮಾತ್ರಕ್ಕೆ ಬೇರೆಯವರ ಘನತೆಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ. ಆನ್‌ಲೈನ್‌ಲ್ಲಿ ನೀವು ಮಾಡುವ ಎಲ್ಲಾ ಕೆಲಸಕ್ಕೂ ಹೆಜ್ಜೆ ಗುರುತುಗಳು ಇರುತ್ತವೆ.. ಎಲ್ಲದಕ್ಕೂ ಉತ್ತರ ಕೊಡಬೇಕಾಗಿ ಬರುತ್ತದೆ. ನಾನು ಹಾಕಿರುವ ಕೇಸ್ ತನಿಖೆ ನಡೆಯುತ್ತಿದೆ. ಆಕೆಯೂ ಅಷ್ಟೇ, ತಾನು ಮಾಡಿದ ಕೆಟ್ಟ ಕೆಲಸಕ್ಕೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

Continue Reading

LATEST NEWS

ವಿಶ್ವಕಪ್ ಗೆದ್ದ ರಿಚಾ ಘೋಷ್‌ಗೆ ಪೊಲೀಸ್ ಹುದ್ದೆ; ನೇಮಕಾತಿ ಪತ್ರ ಹಸ್ತಾಂತರಿಸಿದ ಸಿಎಂ ಮಮತಾ ಬ್ಯಾನರ್ಜಿ

Published

on

ಕೋಲ್ಕತಾ: ಮಹಿಳಾ ವಿಶ್ವಕಪ್‌ನಲ್ಲಿ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿರುವ ರಿಚಾ ಘೋಷ್‌ಗೆ ಅವರ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಹುದ್ದೆ ನೀಡಿ ಗೌರವಿಸಲಾಗಿದೆ.


ಶನಿವಾರ (ನವೆಂಬರ್ 8) ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಿಚಾ ಘೋಷ್‌ರಿಗೆ ನೇಮಕಾತಿ ಪತ್ರ ಹಸ್ತಾಂತರಿಸಿದರು.ಇದೇ ವೇಳೆ ರಿಚಾಗೆ ಬಾಂಗ್ಲಾ ಭೂಷಣ್ ಪ್ರಶಸ್ತಿ ನೀಡಲಾಯಿತು.

ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ 34 ರನ್ ಬಾರಿಸಿದ್ದಕ್ಕಾಗಿ ಪ್ರತೀ ರನ್ನಿಗೆ ತಲಾ 1 ಲಕ್ಷ ರೂ.ನಂತೆ ಒಟ್ಟಾರೆ 34 ಲಕ್ಷ ರೂ. ನಗದು ಪುರಸ್ಕಾರ ನೀಡಿತು. ಹೆಚ್ಚುವರಿಯಾಗಿ, ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ಪರವಾಗಿ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದರು.

ಇದನ್ನೂ ಓದಿ: IND vs AUS: ಟಿ20I ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಅಭಿಷೇಕ್ ಶರ್ಮಾ

ಭಾರತದ ವಿಶ್ವಕಪ್ ಅಭಿಯಾನದುದ್ದಕ್ಕೂ ರಿಚಾ ಘೋಷ್ ಅತ್ಯುತ್ತಮ ಪ್ರದರ್ಶನ ನೀಡಿದ್ದು ಆಡಿರುವ ಎಂಟು ಪಂದ್ಯಗಳಲ್ಲಿ 39.16 ಸರಾಸರಿ ಮತ್ತು 133.52 ಪ್ರೈಕ್ ರೇಟ್‌ನಲ್ಲಿ 235 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ 94 ರನ್ ಗಳಿಸುವ ಮೂಲಕ ವೈಜಾಜ್ ಮೈದಾನದಲ್ಲಿದ್ದ ಪ್ರೇಕ್ಷಕರನ್ನು ರಂಜಿಸಿದರು. ನವಿ ಮುಂಬೈನಲ್ಲಿ ನಡೆದ ಪೈನಲ್ ಪಂದ್ಯದಲ್ಲಿಯೂ ನಿರ್ಣಾಯಕ 34 ರನ್ ಬಾರಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page