Connect with us

dehali

ಮಹಿಳೆಯರ ರಕ್ಷಣೆಗೆ ಹೋದ ಉದ್ಯಮಿ ಮೇಲೆ ಭಿಕರ ಹಲ್ಲೆ: ದೆಹಲಿಯಲ್ಲಿ ಬೆಚ್ಚಿಬೀಳಿಸುವ ಘಟನೆ!

Published

on

ನವದೆಹಲಿ: ಮಹಿಳೆಯರನ್ನು ಚುಡಾಯಿಸುತ್ತಿದ್ದುದ್ದನ್ನು ವಿರೋಧಿಸಿದ 26 ವರ್ಷದ ಸಾರಿಗೆ ಉದ್ಯಮಿಯ ಮೇಲೆ ನಾಲ್ವರು ದುಷ್ಕರ್ಮಿಗಳು ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಈ ಘಟನೆ ದೆಹಲಿಯ ಮೆಹ್ರೌಲಿಯಲ್ಲಿ ಸಂಬಂಧಿಸಿದೆ. ಈ ರಕ್ತಸಿಕ್ತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಸಂಗಮ್ ವಿಹಾರ್ ನಿವಾಸಿ, ಮುಖೇಶ್ ಕುಮಾರ್(26) ಹಲ್ಲೆಗೊಳಗಾದ ಉದ್ಯಮಿ. ದಕ್ಷಿಣ ದೆಹಲಿಯ ಮೆಹ್ರೌಲಿಯ ಐಜಿಎನ್ಒಯು ರಸ್ತೆಯಲ್ಲಿರುವ ಟೀ ಅಂಗಡಿಯ ಬಳಿ ಫೆಬ್ರವರಿ 3ರಂದು ಮುಂಜಾನೆ ಸುಮಾರು 5:30ಕ್ಕೆ ಈ ಘಟನೆ ನಡೆದಿದೆ. ತೀವ್ರ ಗಾಯಗೊಂಡ ಮುಖೇಶ್‌ಗೆ ಏಮ್ಸ್ (AIIMS) ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಮದುವೆಯೊಂದರಿಂದ ಹಿಂದಿರುಗುತ್ತಿದ್ದ ಮುಖೇಶ್, ಟೀ ಕುಡಿಯಲು ನಿಂತಾಗ ಅಲ್ಲಿನ ನಾಲ್ವರು ಯುವಕರು ಮೂವರು ಮಹಿಳೆಯರಿಗೆ ಅಶ್ಲೀಲ ಕಮೆಂಟ್ ಮಾಡುತ್ತಾ ಕಿರುಕುಳ ನೀಡುತ್ತಿದ್ದುದನ್ನು ಗಮನಿಸಿದರು. ಇದನ್ನು ಪ್ರಶ್ನಿಸಿದಾಗ ಕುಪಿತಗೊಂಡ ದುಷ್ಕರ್ಮಿಗಳು ಅವರ ಮೇಲೆ ಮುಗಿಬಿದ್ದಿದ್ದಾರೆ. ಬಳಿಕ ಮುಖೇಶ್‌ನನ್ನು ನೆಲಕ್ಕೆ ತಳ್ಳಿ ಕಲ್ಲುಗಳಿಂದ ಹೊಡೆದಿದ್ದು, ಪ್ರಜ್ಞೆ ತಪ್ಪಿದ ನಂತರವೂ ಕಾಲಿನಿಂದ ಒದ್ದಿದ್ದಾರೆ. ವೈರಲ್‌ ಆದ ವೀಡಿಯೋದಲ್ಲಿ ಅವರ ಬಟ್ಟೆಯನ್ನು ಹರಿದು ಅಮಾನವೀಯವಾಗಿ ವರ್ತಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಅಧಿಕಾರಿಯ ಮನೆಯಲ್ಲೇ ಗುಪ್ತ ಕ್ಯಾಮರಾ ಅಳವಡಿಕೆ: ಖತರ್ನಾಕ್ ನಕಲಿ ಪತ್ರಕರ್ತರು ಅರೆಸ್ಟ್‌!

ಕಿರುಕುಳಕ್ಕೊಳಗಾದ ಮಹಿಳೆಯರೇ ಪೊಲೀಸರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಕೊಲೆ ಯತ್ನ (ಸೆಕ್ಷನ್ 110) ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

dehali

ಅಮೆರಿಕ, ಇಸ್ರೆಲ್- ಇರಾನ್ ನಡುವಣ ಸಂಘರ್ಷಮಯ ವಾತಾವರಣ; ಮಧ್ಯಪ್ರಾಚ್ಯ ದೇಶಕ್ಕೆ ವಿಮಾನ ಸೇವೆ ರದ್ದು

Published

on

ಹೊಸದಿಲ್ಲಿ: ಇರಾನ್ ಮೇಲೆ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಣ ಸಂಘರ್ಷಮಯ ಸನ್ನಿವೇಶದ ಹಿನ್ನೆಲೆಯಲ್ಲಿ ಭಾರತದಿಂದ ದುಬಾಯಿ ಸಹಿತ ಮಧ್ಯ ಪ್ರಾಚ್ಯ ದೇಶಗಳಿಗೆ ವೈಮಾನಿಕ ಸೇವೆಯನ್ನು ರದ್ದುಗೊಳಿಸಲಾಗಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಭಾರತೀಯರು ಅಧಿಕ ಸಂಖ್ಯೆಯಲ್ಲಿ ನಲೆಸಿದ್ದಾರೆ. ಹಾಗಾಗಿ ಭಾರತದಲ್ಲೂ ಆತಂಕದ ಪರಿಸ್ಥಿತಿ ಎದುರಾಗಿದೆ.


ಮಧ್ಯ ಪ್ರಾಚ್ಯಗಳ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಭಾರತದ ಏರ್ ಇಂಡಿಯಾ ಹಾಗೂ ಇಂಡಿಗೊ ಸಂಸ್ಥೆಗಳು ಮಧ್ಯಪ್ರಾಚ್ಯ ದೇಶಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ವಿಮಾನ ಸೇವೆಗಳನ್ನು ರದ್ದುಮಾಡಿವೆ. ಶನಿವಾರ ಮಂಗಳೂರಿನಿಂದ ದುಬೈಗೆ ಹೊರಟಿದ್ದ ವಿಮಾನ ಟೇಕಾಫ್ ಕೆಲವೇ ಸಮಯದಲ್ಲಿ ಮಂಗಳೂರು ಏರ್ ಪೋರ್ಟ್ ಗೆ ವಾಪಸಾಗಿದೆ. ಈ ವಿಮಾನದಲ್ಲಿ 174 ಪ್ರಯಾಣಿಕರು ಮತ್ತು 6 ಜನ ಸಿಬ್ಬಂದಿ ಇದ್ದರು.

ಹಾಗೇಯೇ ಮಂಗಳೂರು- ದೋಹಾ ವಿಮಾನವನ್ನು ಮುಂಬಯಿನಲ್ಲಿ ಇಳಿಸಲಾಗಿದೆ. ಮಂಗಳೂರು- ದುಬೈ ವಿಮಾನ ಸಂಪೂರ್ಣವಾಗಿ ರದ್ದು ಮಾಡಲಾಗಿತ್ತು. ದೋಹಾ- ಮಂಗಳೂರು ಮತ್ತು ದುಬೈ- ಮಂಗಳೂರು, ಮಂಗಳೂರು-ದಮ್ಮಾಮ್, ಮಂಗಳೂರು-ಕುವೈಟ್, ಮಂಗಳೂರು-ಅಬುಧಾಬಿ ವಿಮಾನ ಯಾನಗಳನ್ನು ರದ್ದು ಪಡಿಸಲಾಗಿತ್ತು. ವಿಮಾನ ಸೇವೆಯಲ್ಲಿ ಏಕಾಏಕಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಗೊಂದಲಕ್ಕೆ ಸಿಲುಕಿದರು.

ಇದನ್ನೂ ಓದಿ: ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ನವದಂಪತಿ ರಸ್ತೆ ಅಪಘಾತದಲ್ಲಿ ಸಾವು

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆಯ ಹಿನ್ನೆಲೆಯಲ್ಲಿ ಕುಳಿತುಕೊಳ್ಳಲು ಹೆಚ್ಚುವರಿ ಆಸನ ವ್ಯವಸ್ಥೆ ಮತ್ತು ಇತರ ಮೂಲಸೌಕರ್ಯಗಳನ್ನು ಕಲ್ಪಿಸಲಾಯಿತು. ಪ್ರಯಾಣಿಕರು ವಿಮಾನ ಯಾನದ ಪ್ರಸಕ್ತ ಸ್ಥಿತಿಗತಿಯನ್ನು ಪರಿಶೀಲಿಸಿ ಮುಂದುವರಿಯುವಂತೆ ಸೂಚನೆ ನೀಡಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

Continue Reading

dehali

ಚಲಿಸುವ ಬಸ್‌ನ ಬಾಗಿಲು ತೆರೆದು ಸ್ಟಂಟ್ ಮಾಡಿದ ಬೈಕ್ ಸವಾರನ ಬಂಧನ

Published

on

ನವದೆಹಲಿ: ಇತ್ತೀಚೆಗೆ ಬೈಕ್ ಸವಾರನೊಬ್ಬ ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ಚಲಿಸುತ್ತಿದ್ದ ಬಸ್ ಮತ್ತು ಕಾರುಗಳ ಬಾಗಿಲು ತೆರೆದು ಅಪಾಯಕಾರಿ ಸ್ಟಂಟ್ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಘಟನೆ ನವದೆಹಲಿಯ ಉಸ್ಮಾನ್‌ಪುರದಲ್ಲಿ ನಡೆದಿದೆ.


ಬಂಧಿತ ವ್ಯಕ್ತಿಯನ್ನು ಖಜೂರಿ ಖಾಸ್ ನಿವಾಸಿ, 22 ವರ್ಷದ ತುಷಾರ್ ಪುನಿಯಾ ಎಂದು ಗುರುತಿಸಲಾಗಿದೆ. ಈತ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಸಂಚರಿಸುತ್ತಾ, ಚಲಿಸುತ್ತಿದ್ದ ಡಿಟಿಸಿ ಬಸ್‌ಗಳು, ಅಟೋ ಮತ್ತು ಕಾರುಗಳ ಬಾಗಿಲನ್ನು ಹೊರಗಿನಿಂದ ಎಳೆದು ತೆರೆಯುವ ಮೂಲಕ ಪ್ರಯಾಣಿಕರ ಮತ್ತು ಇತರ ವಾಹನ ಸವಾರರ ಜೀವಕ್ಕೆ ಅಪಾಯ ತಂದೊಡ್ಡಿದ್ದಾನೆ.

ಇದನ್ನೂ ಓದಿ: ಶ್ರೀನಿವಾಸ್‌ ಗ್ರೂಪ್ಸ್‌ನ ಸ್ಥಾಪಕ ಡಾ. ಸಿಎ.ಎ ರಾಘವೇಂದ್ರ ರಾವ್‌ ನಿಧನ

ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಪ್ರಚಾರ ಪಡೆಯಲು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವೀಡಿಯೋ ವೈರಲ್ ಆದ ಬೆನ್ನಲ್ಲೇ ದೆಹಲಿ ಪೊಲೀಸರು ನವ ಉಸ್ಮಾನ್‌ಪುರ ಪೊಲೀಸ್ ಠಾಣೆಯಲ್ಲಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 281 ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ಬೈಕನ್ನು ವಶಪಡಿಸಿಕೊಂಡಿದ್ದಾರೆ.

Continue Reading

dehali

ಇಳಯರಾಜಾಗೆ ಬಿಗ್ ಶಾಕ್! 130 ಚಿತ್ರಗಳ ಹಾಡುಗಳ ಮೇಲೆ ಹಕ್ಕಿಲ್ಲ ಎಂದ ದೆಹಲಿ ಹೈಕೋರ್ಟ್

Published

on

ದೆಹಲಿ: ಸಂಗೀತ ಮಾಂತ್ರಿಕ ಇಳಯರಾಜಾ ಅವರಿಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ದೊಡ್ಡ ಆಘಾತ ನೀಡಿದ್ದು, ಸರಿಗಮ ಕಂಪನಿಯೊಂದಿಗಿನ ಕಾನೂನು ಹೋರಾಟದಲ್ಲಿ ಸುಮಾರು 134 ಚಿತ್ರಗಳ ಹಾಡುಗಳ ಮೇಲಿನ ಹಕ್ಕನ್ನು ಬಳಸದಂತೆ ಅವರಿಗೆ ನಿರ್ಬಂಧ ವಿಧಿಸಿದೆ.


ಸರಿಗಮ ಕಂಪನಿಯು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌, ಇಳಯರಾಜಾ ಅವರು 130ಕ್ಕೂ ಹೆಚ್ಚು ಚಿತ್ರಗಳ ಹಾಡುಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದನ್ನು ಮತ್ತು ಮಾರಾಟ ಮಾಡುವುದನ್ನು ತಡೆಯುವ ಮಧ್ಯಂತರ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ, ಯಾವುದೇ ಸಿನಿಮಾದ ಸಂಗೀತಕ್ಕೆ ಚಿತ್ರದ ನಿರ್ಮಾಪಕನೇ ಹಾಡುಗಳ ಮೊದಲ ಮಾಲೀಕನಾಗಿರುತ್ತಾನೆ. ಆತನಿಂದ ಹಕ್ಕು ಪಡೆದ ಸಂಗೀತ ಸಂಸ್ಥೆಗಳು ಸಹ ಹಕ್ಕುದಾರರಾಗಿರುತ್ತವೆ ಎಂದು ತಿಳಿಸಿದೆ.

ಇಳಯರಾಜಾ ಅವರು ಇತ್ತೀಚೆಗೆ ಕೆಲವು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಹಾಡುಗಳನ್ನು ಬಳಸಲು ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಖ್ಯಾತ ಸಂಗೀತ ಸಂಸ್ಥೆ ಸರಿಗಮ ನ್ಯಾಯಾಲಯದ ಮೊರೆ ಹೋಗಿತ್ತು. ಈ ಹಾಡುಗಳ ಹಕ್ಕುಗಳನ್ನು ಮೂಲ ನಿರ್ಮಾಪಕರಿಂದ ತಾನು ಖರೀದಿಸಿದ್ದೇನೆ ಎಂದು ಸರಿಗಮ ವಾದಿಸಿದೆ.

ಇದನ್ನೂ ಓದಿ: ನೇಮದ ವೇಳೆ ತನ್ನಿಂದ ತಾನೇ ತೂಗಿದ ದೈವದ ಉಯ್ಯಾಲೆ ! ವೈರಲ್ ಆಯ್ತು ವೀಡಿಯೋ

ಈ ಹಿಂದೆ ಹಲವು ಸಿನಿಮಾಗಳಿಗೆ ತಮ್ಮ ಹಾಡುಗಳನ್ನು ಬಳಸಿದ್ದಕ್ಕಾಗಿ ಕಾಪಿರೈಟ್ ನೋಟಿಸ್ ನೀಡುತ್ತಿದ್ದ ಇಳಯರಾಜಾ ಅವರಿಗೆ, ಈಗ ತಾವೇ ಸಂಗೀತ ನೀಡಿದ 130ಕ್ಕೂ ಹೆಚ್ಚು ಸಿನೆಮಾಗಳ ಹಾಡುಗಳ ಹಕ್ಕನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿರುವುದು ಸಿನಿಮಾ ರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page